Redmi: ರೆಡ್ಮಿ ಸಂಸ್ಥೆಯ ಈ ಫೋನ್ ಮೇಲೆ 37% ಡಿಸ್ಕೌಂಟ್ ಆಫರ್! ಟ್ರಿಪಲ್ ಕ್ಯಾಮೆರಾ..33W ಫಾಸ್ಟ್ ಚಾರ್ಜಿಂಗ್ !
ಈ ವರ್ಷ ಅತಿ ಹೆಚ್ಚು ಸದ್ದು ಸ್ಮಾರ್ಟ್‌ಫೋನ್‌ಗಳಲ್ಲಿ ರೆಡ್ಮಿ ನೋಟ್ 12 4G ಕೂಡ ಒಂದು. ತನ್ನ ಸ್ಟೈಲಿಶ್ ಲುಕ್, ರಿಯರ್ ಪ್ಯಾನಲ್ ಡಿಸೈನ್‌ನಿಂದ ಯುವಜನರ ದಿಲ್ ಗೆದ್ದ ಫೋನ್ ಇದಾಗಿದೆ. ಜೊತೆಗೆ ಅತ್ಯಾಕರ್ಷಕ ಕ್ಯಾಮೆರಾ ಸೆಟ್‌ಅಪ್ ಕೂಡ ಎಲ್ಲರನ್ನು ಆಕರ್ಷಿಸಿತ್ತು. ಇದೀಗ ಈ ಸ್ಮಾರ್ಟ್‌ಫೋನ್ ಅಮೆಜಾನ್‌ನಲ್ಲಿ ಭರ್ಜರಿ ಡಿಸ್ಕೌಂಟ್ ಪಡೆದುಕೊಂಡಿದೆ.
ಹೌದು, ಅಮೆಜಾನ್ ತಾಣದಲ್ಲಿ ಜನಪ್ರಿಯ ಸ್ಮಾರ್ಟ್‌ಫೋನ್ ರೆಡ್ಮಿ ನೋಟ್ 12 ಅತ್ಯುತ್ತಮ ರಿಯಾಯಿತಿಯನ್ನು ಪಡೆದುಕೊಂಡಿದೆ. ಹೊಸ ವರ್ಷಕ್ಕೂ ಮುನ್ನ ಹೊಸ ಫೋನ್ ಖರೀದಿಸಬೇಕೆಂದು ಕೊಂಡವರಿಗೆ ಬೆಸ್ಟ್ ಆಯ್ಕೆ ಎನಿಸಿಕೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 685 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗಾದ್ರೆ ಅಮೆಜಾನ್‌ನಲ್ಲಿ ರೆಡ್ಮಿ ನೋಟ್ 12 ಮೇಲೆ ಲಭ್ಯವಾಗುತ್ತಿರುವ ಡಿಸ್ಕೌಂಟ್ ಎಷ್ಟು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಮೆಜಾನ್‌ನಲ್ಲಿ ಸಿಗ್ತಾ ಇದೆ ಭರ್ಜರಿ ಆಫರ್
ರೆಡ್ಮಿ ನೋಟ್ 12 4G ಸ್ಮಾರ್ಟ್‌ಫೋನ್ ಅಮೆಜಾನ್‌ನಲ್ಲಿ 18,999ರೂ ಬೆಲೆಗೆ ಪಟ್ಟಿ ಮಾಡಲಾಗಿದೆ. ಆದರೆ ಇದರ ಮೇಲೆ ಬರೋಬ್ಬರಿ 37% ಡಿಸ್ಕೌಂಟ್ ನೀಡಲಾಗ್ತಿದೆ. ಆದರಿಂದ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರಿ ಇಳಿಕೆಯಾಗಿದ್ದು ಇದನ್ನು ಕೇವಲ 11,999ರೂ ಬೆಲೆಗೆ ಖರೀದಿಸಬಹುದಾಗಿದೆ. ಇದು 12 6GB RAM ಮತ್ತು 64GB ಸ್ಟೋರೇಜ್ ಆಯ್ಕೆಗೆ ಅನ್ವಯವಾಗಲಿದೆ. ಇದಲ್ಲದೆ ಸ್ಮಾರ್ಟ್‌ಫೋನ್ ಮೇಲೆ ವಿವಿಧ ಬ್ಯಾಂಕ್ ಆಫರ್‌ಗಳು ಕೂಡ ದೊರೆಯುತ್ತಿದೆ. ಇದರಿಂದ ಫೋನ್‌ನ ಬೆಲೆ ಇನ್ನಷ್ಟು ಕಡಿಮೆ ಆಗಲಿದೆ. ಈ ಸ್ಮಾರ್ಟ್‌ಫೋನ್ ಐಸ್ ಬ್ಲೂ ಕಲರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ.
ರೆಡ್ಮಿ ನೋಟ್ 12 ಫೀಚರ್ಸ್ ಹೇಗಿದೆ?
ರೆಡ್ಮಿ ನೋಟ್ 12 ಸ್ಮಾರ್ಟ್‌ಫೋನ್ 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಬರಲಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಬೆಂಬಲವನ್ನು ಹೊಂದಿದ್ದು, 240Hz ಟಚ್ ಸ್ಯಾಂಪ್ಲಿಂಗ್ ರೇಟ್ ನೀಡಲಿದೆ. ಇದಲ್ಲದೆ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಲೇಯರ್ ಪ್ರೊಟೆಕ್ಷನ್ ಅನ್ನು ಒಳಗೊಂಡಿದೆ.

ರೆಡ್ಮಿ ನೋಟ್ 12 ಪ್ರೊಸೆಸರ್ ಕಾರ್ಯವೈಖರಿ ಹೇಗಿದೆ?
ರೆಡ್ಮಿ ನೋಟ್ 12 ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 685 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್ 13 ಬೆಂಬಲದೊಂದಿಗೆ ರನ್ ಆಗಲಿದೆ. ಇನ್ನು ಸ್ಮಾರ್ಟ್‌ಫೋನ್ 6GB RAM + 64GB ಮತ್ತು 6GB RAM + 128GB ಸ್ಟೋರೇಜ್ ವೇರಿಯೆಂಟ್ ಆಯ್ಕೆಗಳಲ್ಲಿ ಲಭ್ಯವಿದೆ. ಸದ್ಯ 6GB RAM + 64GB ಆಯ್ಕೆಯ ಮೇಲೆ ನಿಮಗೆ ಆಫರ್ ದೊರೆಯುತ್ತಿದೆ.
ರೆಡ್ಮಿ ನೋಟ್ 12 ಕ್ಯಾಮೆರಾ ರಚನೆ
ರೆಡ್ಮಿ ನೋಟ್ 12 ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಹಾಗೂ ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಪಡೆದುಕೊಂಡಿದೆ. ಇದಲ್ಲದೆ ಸ್ಮಾರ್ಟ್‌ಫೋನ್ 13 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ರೆಡ್ಮಿ ನೋಟ್ 12 ಬ್ಯಾಟರಿ ಮತ್ತು ಇತರೆ ಸೌಲಭ್ಯ
ರೆಡ್ಮಿ ನೋಟ್ 12 ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ, ಯುಎಸ್‌ಬಿ ಸಿ ಪೋರ್ಟ್, ಹೆಡ್‌ಫೋನ್ ಜ್ಯಾಕ್ ಬೆಂಬಲದೊಂದಿಗೆ ಬರಲಿದೆ. ಇದಲ್ಲದೆ ಅಕ್ಸಿಲೆರೊಮೀಟರ್, ಗೈರೊ ಸೆನ್ಸಾರ್, ಪ್ರಾಕ್ಸಿಮಿಟಿ ಸೆನ್ಸಾರ್, ಕಂಪಾಸ್ ಅನ್ನು ಹೊಂದಿರಲಿದೆ.


Click it and Unblock the Notifications








