Redmi: ಮಾರುಕಟ್ಟೆಗೆ ಎಂಟ್ರಿ ಕೊಟ್ಟ ರೆಡ್ಮಿ ನೋಟ್ 13 4G ಸ್ಮಾರ್ಟ್‌ಫೋನ್! 108MP ಕ್ಯಾಮೆರಾ ವಿಶೇಷ!
ಶಿಯೋಮಿ ರೆಡ್ಮಿ ನೋಟ್ 13 ಸರಣಿ ಈಗಾಗಲೇ ಭಾರತದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಇದೀಗ ಗ್ಲೋಬಲ್ ಮಾರುಕಟ್ಟೆಯಲ್ಲಿ ರೆಡ್ಮಿ ನೋಟ್ 13 ಸರಣಿಯ 4G ರೂಪಾಂತರವನ್ನು ಬಿಡುಗಡೆ ಮಾಡಲಾಗಿದೆ. ಈ ಸರಣಿಯಲ್ಲಿ ರೆಡ್ಮಿ ನೋಟ್ 4G ಸ್ಮಾರ್ಟ್‌ಫೋನ್ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಇದರ ಪ್ರೊ ರೂಪಾಂತರವೂ ಕೂಡ ಬಿಡುಗಡೆ ಆಗಿದೆ.
ಹೌದು, ಶಿಯೋಮಿ ರೆಡ್ಮಿ ನೋಟ್ 13 4G (Redmi Note 13 4G)ಸ್ಮಾರ್ಟ್‌ಫೋನ್ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 685SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಟ್ರಿಪಲ್ ರಿಯರ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದೆ. ಹಾಗಾದ್ರೆ ರೆಡ್ಮಿ ನೋಟ್ 13 4G ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರೆಡ್ಮಿ ನೋಟ್ 13 4G ಡಿಸ್‌ಪ್ಲೇ ರಚನೆ
ರೆಡ್ಮಿ ನೋಟ್ 13 4G ಸ್ಮಾರ್ಟ್‌ಫೋನ್ 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಇನ್ನು ಡಿಸ್‌ಪ್ಲೇ 2400 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿದೆ. ಇದು 120Hz ರಿಫ್ರೆಶ್ ರೇಟ್‌ನೊಂದಿಗೆ ಬರಲಿದ್ದು, 1800 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಲೆವೆಲ್ ಅನ್ನು ನೀಡಲಿದೆ. ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್ ಪಡೆದುಕೊಂಡಿದೆ.
ರೆಡ್ಮಿ ನೋಟ್ 13 4G ಪ್ರೊಸೆಸರ್
ರೆಡ್ಮಿ ನೋಟ್ 13 4G ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 685SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 13 ಅನ್ನು ಆಧರಿಸಿ MIUI 14 ಬೆಂಬಲದೊಂದಿಗೆ ರನ್ ಆಗಲಿದೆ. ಹಾಗೇಯೆ 8GB RAM + 256GB ಇಂಟರ್ ಸ್ಟೋರೇಜ್ ಸಾಮರ್ಥ್ಯದ ಅಯ್ಕೆಯಲ್ಲಿ ಬರಲಿದೆ. ಇದು ಮೆಮೊರಿ ಕಾರ್ಡ್ ಬೆಂಬಲಿಸುವುದರ ಬಗ್ಗೆ ಮಾಹಿತಿಯಿಲ್ಲ.

ರೆಡ್ಮಿ ನೋಟ್ 13 4G ಕ್ಯಾಮೆರಾ ಸೆಟಪ್
ರೆಡ್ಮಿ ನೋಟ್ 13 4G ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108MP ಸೆನ್ಸಾರ್ ಪಡೆದಿದೆ. ಎರಡನೇ ಕ್ಯಾಮೆರಾ 8MP ಅಲ್ಟ್ರಾವೈಡ್ ಲೆನ್ಸ್, ಮೂರನೇ ಕ್ಯಾಮೆರಾ 2MP ಮ್ಯಾಕ್ರೋ ಸ್ನ್ಯಾಪರ್ ಅನ್ನು ಒಳಗೊಂಡಿದೆ. ಇದಲ್ಲದೆ 16MP ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿದೆ.
ರೆಡ್ಮಿ ನೋಟ್ 13 4G ಬ್ಯಾಟರಿ ಮತ್ತು ಇತರೆ
ರೆಡ್ಮಿ ನೋಟ್ 13 4G ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 33W ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 3.5mm ಹೆಡ್‌ಫೋನ್ ಜ್ಯಾಕ್, ಡಾಲ್ಬಿ ಅಟ್ಮಾಸ್-ಬೆಂಬಲಿತ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು, ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು IP54 ರೇಟಿಂಗ್‌ನೊಂದಿಗೆ ಬರುತ್ತವೆ. ಇದಲ್ಲದೆ ಪ್ರಾಕ್ಸಿಮಿಟಿ ಸೆನ್ಸಾರ್, ಅಕ್ಸಿಲೆರೊಮೀಟರ್, ಕಂಪಾಸ್ ಅನ್ನು ಸಹ ನಿಡಲಾಗಿದೆ.
ರೆಡ್ಮಿ ನೋಟ್ 13 4G ಬೆಲೆ ಮತ್ತು ಲಭ್ಯತೆ
ರೆಡ್ಮಿ ನೋಟ್ 13 4G ಸ್ಮಾರ್ಟ್‌ಫೋನ್ ಬೇಸ್ ಮಾಡೆಲ್ 6GB + 128GB ಮೆಮೊರಿ ಕಾನ್ಫಿಗರೇಶನ್ ಆಯ್ಕೆಗೆ $179 (ಅಂದಾಜು 14,824ರೂ) ಬೆಲೆಯನ್ನು ಹೊಂದಿದೆ. ಇದರ 8GB + 128GB ಮತ್ತು 8GB + 256GB ರೂಪಾಂತರದ ಆಯ್ಕೆಗಳ ಬೆಲೆ ವಿವರಗಳು ಬಹಿರಂಗವಾಗಿಲ್ಲ. ಇನ್ನು ಸ್ಮಾರ್ಟ್‌ಫೋನ್ ಅನ್ನು ಮಿಡ್ನೈಟ್ ಬ್ಲ್ಯಾಕ್, ಮಿಂಟ್ ಗ್ರೀನ್, ಐಸ್ ಬ್ಲೂ ಅಥವಾ ಓಷನ್ ಸನ್ಸೆಟ್ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ.


Click it and Unblock the Notifications