Home
ಸುದ್ದಿಜಾಲ

Redmi: ಭಾರತಕ್ಕೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟ ರೆಡ್ಮಿ ನೋಟ್‌ 13 5G ಸರಣಿ: ಬೆಲೆ ಎಷ್ಟಿದೆ?

ಭಾರತದ ಮೊಬೈಲ್‌ ವಲಯದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ರೆಡ್ಮಿ ನೋಟ್‌ 13 5G ಸರಣಿ ಅಧಿಕೃತವಾಗಿ ಲಾಂಚ್‌ ಆಗಿದೆ. ಈ ಸರಣಿಯಲ್ಲಿ ರೆಡ್ಮಿ ನೋಟ್‌ 13 5G, ರೆಡ್ಮಿ ನೋಟ್‌ 13 ಪ್ರೊ 5G ಮತ್ತು ರೆಡ್ಮಿ ನೋಟ್‌ 13 ಪ್ರೊ ಪ್ಲಸ್‌ 5G ಫೋನ್‌ಗಳನ್ನು ಪರಿಚಯಿಸಲಾಗಿದೆ. ಈ ಎಲ್ಲಾ ಮಾದರಿಗಳು ಕೂಡ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಹೊಂದಿವೆ.

ಹೌದು, ರೆಡ್ಮಿ ನೋಟ್‌ 13 5G ಸರಣಿ ಭಾರತದಲ್ಲಿ ಅನಾವರಣಗೊಂಡಿದೆ. ಈ ಸ್ಮಾರ್ಟ್‌ಫೋನ್‌ಗಳು 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿವೆ. ಇನ್ನು ಸರಣಿಯ ಟಾಪ್-ಆಫ್-ಲೈನ್ Redmi Note 13 Pro+ 5G ಮೀಡಿಯಾ ಟೆಕ್‌ನ ಡೈಮೆನ್ಸಿಟಿ 7200-ಅಲ್ಟ್ರಾ ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಹಾಗಾದ್ರೆ ರೆಡ್ಮಿ ನೋಟ್‌ 13 5G ಸರಣಿಯ ವಿಶೇಷತೆ ಏನು? ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತಕ್ಕೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟ ರೆಡ್ಮಿ ನೋಟ್‌ 13 5G ಸರಣಿ: ಬೆಲೆ ಎಷ್ಟಿದೆ

ರೆಡ್ಮಿ ನೋಟ್‌ 13 5G ಫೀಚರ್ಸ್‌ ಹೇಗಿದೆ?
ರೆಡ್ಮಿ ನೋಟ್‌ 13 5G ಸ್ಮಾರ್ಟ್‌ಫೋನ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,080x2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿದೆ. ಇನ್ನು ಡಿಸ್‌ಪ್ಲೇ 1,000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಮತ್ತು ಕಾರ್ನಿಂಗ್ ಗೊರಿಲ್ಲಾ 5 ಪ್ರೊಟೆಕ್ಷನ್‌ ನೀಡಲಿದೆ. ಇದು 6nm ಮೀಡಿಯಾಟೆಕ್‌ ಡೈಮೆನ್ಸಿಟಿ 6080 SoC ಪ್ರೊಸೆಸರ್‌ ವೇಗವನ್ನು ಹೊಂದಿದ್ದು, ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ.

ರೆಡ್ಮಿ ನೋಟ್‌ 13 5G ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಒಳಗೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 33W ನಲ್ಲಿ ಚಾರ್ಜ್ ಮಾಡಬಹುದಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ಡ್ಯುಯಲ್ ಬ್ಯಾಂಡ್ Wi-Fi, ಬ್ಲೂಟೂತ್ 5.3, GPS, 3.5mm ಹೆಡ್‌ಫೋನ್ ಜ್ಯಾಕ್ ಮತ್ತು USB ಟೈಪ್-C ಪೋರ್ಟ್ ಸೇರಿವೆ.

ಭಾರತಕ್ಕೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟ ರೆಡ್ಮಿ ನೋಟ್‌ 13 5G ಸರಣಿ: ಬೆಲೆ ಎಷ್ಟಿದೆ

ರೆಡ್ಮಿ ನೋಟ್‌ 13 ಪ್ರೊ 5G ಮತ್ತು ರೆಡ್ಮಿ ನೋಟ್‌ 13 Pro+ 5G ವಿಶೇಷತೆ ಏನು?
Redmi Note 13 Pro 5G ಮತ್ತು Note 13 Pro+ 5G ಎರಡೂ ಸ್ಮಾರ್ಟ್‌ಫೋನ್‌ಗಳು 6.67-ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿವೆ. ಈ ಡಿಸ್‌ಪ್ಲೇಯು 1,220x2,712 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿದೆ. ಇನ್ನು ಡಿಸ್‌ಪ್ಲೇ 1,800 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ನೀಡಲಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್‌ ಹೊಂದಿದೆ. ಇದರಲ್ಲಿ ರೆಡ್ಮಿ ನೋಟ್‌ 13 ಪ್ರೊ 5G ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 7s Gen 2 ಚಿಪ್‌ನಿಂದ ಚಾಲಿತವಾಗಿದ್ದರೆ, ರೆಡ್ಮ ನೋಟ್‌ 13 Pro+ ಸ್ಮಾರ್ಟ್‌ಫೋನ್‌ ಡೈಮೆನ್ಸಿಟಿ 7200-Ultra SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಇನ್ನು ಈ ಎರಡೂ ಫೋನ್‌ಗಳು 12GB RAM ಅನ್ನು ಹೊಂದಿವೆ. ಇದರಲ್ಲಿ ರೆಡ್ಮಿ ನೋಟ್‌ 13 ಪ್ರೊ 5G ಸ್ಮಾರ್ಟ್‌ಫೋನ್‌ 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ಆಯ್ಕೆಯನ್ನು ಹೊಂದಿದ್ದರೆ, ರೆಡ್ಮಿ ನೋಟ್‌ 13 ಪ್ರೊ ಪ್ಲಸ್‌ 5G ಫೋನ್‌ ಆಯ್ಕೆಯು 512GB ಇಂಟರ್‌ ಸ್ಟೋರೇಜ್‌ ಆಯ್ಕೆಯನ್ನು ಹೊಂದಿದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು ಕೂಡ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿವೆ. ಇದರಲ್ಲಿ ಮುಖ್ಯ ಕ್ಯಾಮೆರಾ 200 ಮೆಗಾಪಿಕ್ಸೆಲ್ ಸೆನ್ಸಾರ್‌ಹೊಂದಿದ್ದು, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್‌ನಲ್ಲಿದೆ. ಇನ್ನು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಜೊತೆಗೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿವೆ.

ರೆಡ್ಮಿ ನೋಟ್‌ 13 Pro 5G ಸ್ಮಾರ್ಟ್‌ಫೋನ್‌ 5,100mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 67W ಚಾರ್ಜಿಂಗ್‌ಗೆ ಬೆಂಬಲವನ್ನು ನೀಡಲಿದೆ. ಆದರೆ ರೆಡ್ಮಿ ನೋಟ್‌ 13 Pro+ ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 120W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ.

ಭಾರತಕ್ಕೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟ ರೆಡ್ಮಿ ನೋಟ್‌ 13 5G ಸರಣಿ: ಬೆಲೆ ಎಷ್ಟಿದೆ

ಭಾರತದಲ್ಲಿ Redmi Note 13 5G ಸರಣಿ ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ರೆಡ್ಮಿ ನೋಟ್‌ 13 5G ಸ್ಮಾರ್ಟ್‌ಫೋನ್‌ 6GB RAM +128GB ಆಯ್ಕೆಗೆ 17,999 ರೂ. ಬೆಲೆಯನ್ನು ಹೊಂದಿದೆ. ಇದರ 8GB+256GB ಸ್ಟೋರೇಜ್‌ ಆಯ್ಕೆಯು 19,999ರೂ ಬೆಲೆಯಲ್ಲಿ ಲಭ್ಯವಾಗಲಿದೆ. ಹಾಗೂ 12GB+256GB ಸ್ಟೋರೇಜ್‌ ಆಯ್ಕೆಯು 21,999ರೂ ಬೆಲೆಯನ್ನು ಪಡೆದಿದೆ. ಈ ಸ್ಮಾರ್ಟ್‌ಫೋನ್ ಆರ್ಕ್ಟಿಕ್ ವೈಟ್, ಪ್ರಿಸ್ಮ್ ಗೋಲ್ಡ್ ಮತ್ತು ಸ್ಟೆಲ್ತ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ.

ಇನ್ನು ರೆಡ್ಮಿ ನೋಟ್‌ 13 Pro 5G ಸ್ಮಾರ್ಟ್‌ಫೋನ್‌ 8GB+128GB ಸ್ಟೋರೇಜ್‌ ಆಯ್ಕೆಯು 25,999ರೂ ಬೆಲೆಯನ್ನು ಹೊಂದಿದೆ. ಇದರ 8GB+256GB ಸ್ಟೋರೇಜ್‌ ಆಯ್ಕೆಯು 27,999ರೂ ಬೆಲೆಯಲ್ಲಿ ದೊರೆಯಲಿದೆ. ಆದರೆ 12GB+256GB ಮಾದರಿಯ ಬೆಲೆ 29,999ರೂ ಆಗಿದೆ. ಇದು ಆರ್ಕ್ಟಿಕ್ ವೈಟ್, ಕೋರಲ್ ಪರ್ಪಲ್ ಮತ್ತು ಮಿಡ್ನೈಟ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಮಾರಾಟವಾಗಲಿದೆ.

ಇದಲ್ಲದೆ ರೆಡ್ಮಿ ನೋಟ್‌ 13 Pro+ ಸ್ಮಾರ್ಟ್‌ಫೋನ್‌ 8GB+256GB ಸ್ಟೋರೇಜ್ ಮಾದರಿಗೆ 31,999ರೂ ಬೆಲೆಯನ್ನು ಹೊಂದಿದೆ. ಇದರ 12GB+256GB ಸ್ಟೋರೇಜ್‌ ಆಯ್ಕೆಯು 33,999ರೂ ಬೆಲೆಯಲ್ಲಿ ಬರಲಿದೆ. ಇದರ 12GB+512GB ಸ್ಟೋರೇಜ್‌ ಆಯ್ಕೆಯು 35,999ರೂ.ಬೆಲೆಗೆ ಮಾರಾಟವಾಗಲಿದೆ. ಇದನ್ನು ಫ್ಯೂಷನ್ ಬ್ಲ್ಯಾಕ್, ಫ್ಯೂಷನ್ ಪರ್ಪಲ್ ಮತ್ತು ಫ್ಯೂಷನ್ ವೈಟ್ ಬಣ್ಣಗಳಲ್ಲಿ ಖರೀದಿಸಬಹುದು. ಈ ಎಲ್ಲಾ ಮಾದರಿಗಳು ಜನವರಿ 10 ರಂದು Mi.com, Flipkart ಮತ್ತು ರಿಟೇಲ್ ಔಟ್‌ಲೆಟ್‌ಗಳ ಮೂಲಕ ಖರೀದಿಗೆ ಲಭ್ಯವಿರುತ್ತವೆ.

Best Mobiles in India

English summary
Redmi Note 13 5G Series With 6.67-inch Screens Launched in India: Price Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+