Home
ಸುದ್ದಿಜಾಲ

ಭಾರತದಲ್ಲಿ ರೆಡ್ಮಿ ನೋಟ್ 13 ಸರಣಿ ಬೆಲೆ ಬಹಿರಂಗ: ಫೀಚರ್ಸ್‌ ನಿರೀಕ್ಷೆ ಏನು?

ಶಿಯೋಮಿ ರೆಡ್ಮಿ ನೋಟ್ 13 ಸರಣಿ ಭಾರತಕ್ಕೆ ಎಂಟ್ರಿ ನೀಡಲು ತುದಿಗಾಲಿನಲ್ಲಿ ನಿಂತಿದೆ. ಹೊಸ ವರ್ಷದ ಮೊದಲ ವಾರದಲ್ಲಿಯೇ ಈ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಅಬ್ಬರಿಸೋದು ಪಕ್ಕಾ ಆಗಿದೆ. ಇದೀಗ ಈ ಸ್ಮಾರ್ಟ್‌ಫೋನ್‌ ಸರಣಿ ಬಿಡುಗಡೆಗೂ ಮುನ್ನವೇ ಫೀಚರ್ಸ್‌ ಮೂಲಕ ಸದ್ದು ಮಾಡುತ್ತಿದೆ. ಅದರಂತೆ ಈ ಸರಣಿಯಲ್ಲಿ ಮೂರು ಫೋನ್‌ಗಳು ಬಿಡುಗಡೆ ಆಗಲಿದೆ ಎನ್ನಲಾಗಿದೆ.

ಹೌದು, ರೆಡ್ಮಿ ನೋಟ್ 13 ಸರಣಿ ಫೀಚರ್ಸ್‌ ಬಹಿರಂಗವಾಗಿದೆ. ಈ ಸರಣಿಯಲ್ಲಿ ರೆಡ್ಮಿ ನೋಟ್‌ 13 5G, ರೆಡ್ಮಿ ನೋಟ್‌ 13 ಪ್ರೊ 5G ಮತ್ತು ರೆಡ್ಮಿ ನೋಟ್‌ 13 ಪ್ರೊ ಪ್ಲಸ್‌ 5G ಸ್ಮಾರ್ಟ್‌ಫೋನ್‌ಗಳು ಬರಲಿವೆ. ಇನ್ನು ಈ ಸರಣಿಯ ಸ್ಮಾರ್ಟ್‌ಫೋನ್‌ಗಳು ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಅದ್ದೂರಿತನದಿಂದ ಬರಲಿವೆ ಎನ್ನಲಾಗಿದೆ. ಇದರಲ್ಲಿ ಶಿಯೋಮಿ ರೆಡ್ಮಿ ನೋಟ್‌ 13 Pro 5G ಫೀಚರ್ಸ್‌ಗಳು ಸಾಕಷ್ಟು ಗಮನಸೆಳೆದಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್‌ ಫೀಚರ್ಸ್‌ ನಿರೀಕ್ಷೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತದಲ್ಲಿ ರೆಡ್ಮಿ ನೋಟ್ 13 ಸರಣಿ ಬೆಲೆ ಬಹಿರಂಗ: ಫೀಚರ್ಸ್‌ ನಿರೀಕ್ಷೆ ಏನು?

ಶಿಯೋಮಿ ನೋಟ್‌ 13 Pro 5G ಫೀಚರ್ಸ್‌ ಹೇಗಿರಲಿದೆ?
ಶಿಯೋಮಿ ರೆಡ್ಮಿ ನೋಟ್‌ 13 Pro 5G ಸ್ಮಾರ್ಟ್‌ಫೋನ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಈ ಡಿಸ್‌ಪ್ಲೇಯು 1220 x 2712 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿದೆ. ಜೊತೆಗೆ ಡಿಸ್‌ಪ್ಲೇ 1920Hz ಹೈ ಫ್ರೀಕ್ವೆನ್ಸಿ PWM ಡಿಮ್ಮಿಂಗ್‌, DCI-P3 100% ಅಗಲದ ಬಣ್ಣದ ಹರವು, ಐ ಪ್ರೊಟೆಕ್ಷನ್‌ ಮೋಡ್‌ ಅನ್ನು ಸಹ ಹೊಂದಿರಲಿದೆ ಎಂದು ವರದಿಯಾಗಿದೆ. ಇದಲ್ಲದೆ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್‌ನಲ್ಲಿರಲಿದೆ.

ರೆಡ್ಮಿ ನೋಟ್‌ 13 Pro 5G ಪ್ರೊಸೆಸರ್‌ ನಿರೀಕ್ಷೆ?
ರೆಡ್ಮಿ ನೋಟ್‌ 13 Pro 5G ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 7s Gen 2 ಚಿಪ್‌ಸೆಟ್ ಹೊಂದಿದೆ. ಇದು ಆಂಡ್ರಾಯ್ಡ್ v13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8 GB RAM ಮತ್ತು 128 GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿರಲಿದೆ ಎನ್ನಲಾಗಿದೆ. ಈ ಫೋನ್‌ ಮೆಮೊರಿ ಕಾರ್ಡ್‌ ಬೆಂಬಲಿಸುವುದರ ಬಗ್ಗೆ ಯಾವುದೇ ಮಾಹಿತಿಯಲ್ಲ.

ಭಾರತದಲ್ಲಿ ರೆಡ್ಮಿ ನೋಟ್ 13 ಸರಣಿ ಬೆಲೆ ಬಹಿರಂಗ: ಫೀಚರ್ಸ್‌ ನಿರೀಕ್ಷೆ ಏನು?

ರೆಡ್ಮಿ ನೋಟ್‌ 13 Pro 5G ಕ್ಯಾಮೆರಾ ಸೆಟಪ್‌
ರೆಡ್ಮಿ ನೋಟ್‌ 13 Pro 5G ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 200 MP ಸೆನ್ಸಾರ್‌ ಸಾಮರ್ಥ್ಯದಲ್ಲಿರಲ್ಲಿದೆ. ಎರಡನೇ ಕ್ಯಾಮೆರಾ 8 MP ಸೆನ್ಸಾರ್‌ ಇರಬಹುದು ಎನ್ನಲಾಗಿದ್ದು, ಮೂರನೇ ಕ್ಯಾಮೆರಾ 2 MP ಸೆನ್ಸಾರ್‌ ಇರಲಿದೆ ಎಂದು ವರದಿಯಾಗಿದೆ. ಇದಲ್ಲದೆ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿರಲಿದೆ ಎನ್ನಲಾಗಿದೆ.

ರೆಡ್ಮಿ ನೋಟ್‌ 13 Pro 5G ಬ್ಯಾಟರಿ ಮತ್ತು ಇತರೆ
ರೆಡ್ಮಿ ನೋಟ್‌ 13 Pro 5G ಸ್ಮಾರ್ಟ್‌ಫೋನ್‌ 5100 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇದು 67W ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ ಎಂದು ಹೇಳಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G, 5G, VoLTE, ಬ್ಲೂಟೂತ್ v5.2, ವೈಫೈ, NFC, USB-C v2.0 ಬೆಂಬಲಿಸಲಿದೆ. ಇದಲ್ಲದೆ ಪ್ರಾಕ್ಸಿಮಿಟಿ ಸೆನ್ಸಾರ್‌, ಅಕ್ಸಿಲೆರೋಮೀಟರ್‌ ಅನ್ನು ಒಳಗೊಂಡಿರಲಿದೆ ಎನ್ನಲಾಗಿದೆ.

ಭಾರತದಲ್ಲಿ ರೆಡ್ಮಿ ನೋಟ್ 13 ಸರಣಿ ಬೆಲೆ ಬಹಿರಂಗ: ಫೀಚರ್ಸ್‌ ನಿರೀಕ್ಷೆ ಏನು?

ರೆಡ್ಮಿ ನೋಟ್‌ 13 Pro 5G ಬೆಲೆ ಮತ್ತು ಲಭ್ಯತೆ
ರೆಡ್ಮಿ ನೋಟ್‌ 13 Pro 5G ಸ್ಮಾರ್ಟ್‌ಫೋನ್‌ 8GB RAM ಮತ್ತು 128GB ರೂಪಾಂತರದ ಆಯ್ಕೆಗೆ 28,999 ರೂಗಳಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ. ಇದರ 12GB RAM ಮತ್ತು 256GB ಆವೃತ್ತಿಗೆ 32,999ರೂ. ಬೆಲೆಯಲ್ಲಿ ನಿರೀಕ್ಷಿಸಲಾಗಿದೆ. ಇದರಲ್ಲಿ ಆರ್ಕ್ಟಿಕ್ ವೈಟ್, ಕೋರಲ್ ಪರ್ಪಲ್ ಮತ್ತು ಮಿಡ್ನೈಟ್ ಬ್ಲಾಕ್ ಸೇರಿವೆ.

Best Mobiles in India

English summary
Redmi Note 13 series Indian pricing leak out ahead of launch
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+