Home
ಸುದ್ದಿಜಾಲ

ರೆಡ್ಮಿಯಿಂದ ಮತ್ತೊಂದು ಫೋನ್‌ ಲಾಂಚ್‌! ಮೊಬೈಲ್‌ ಪ್ರಿಯರ ನಿದ್ದೆ ಕದಿಯೋದು ಗ್ಯಾರಂಟಿ!

ಸ್ಮಾರ್ಟ್‌ಫೋನ್‌ ಪ್ರಿಯರ ನೆಚ್ಚಿನ ಬ್ರ್ಯಾಂಡ್‌ಗಳಲ್ಲಿ ರೆಡ್ಮಿ ಕೂಡ ಒಂದಾಗಿದೆ. ತನ್ನ ವಿಭಿನ್ನ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ರೆಡ್ಮಿ ಕಂಪೆನಿ ಎಲ್ಲರಿಂದ ಸೈ ಎನಿಸಿಕೊಂಡಿದೆ. ಅದರ ಮುಂದುವರೆದ ಭಾಗವಾಗಿ ಇದೀಗ ರೆಡ್ಮಿ ನೋಟ್‌ 13R ಪ್ರೊ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಇದು ಮೀಡಿಯಾಟೆಕ್‌ ಡೈಮೆನ್ಸಿಟಿ 6080 SoC ಪ್ರೊಸೆಸರ್‌ ಹೊಂದಿದೆ.

ಹೌದು, ರೆಡ್ಮಿ ನೋಟ್‌ 13R ಪ್ರೊ ಸ್ಮಾರ್ಟ್‌ಫೋನ್‌ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು, 33W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ನೊಂದಿಗೆ ಬರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರೆಡ್ಮಿಯಿಂದ ಮತ್ತೊಂದು ಫೋನ್‌ ಲಾಂಚ್‌!ಮೊಬೈಲ್‌ ಪ್ರಿಯರ ನಿದ್ದೆಕದಿಯೋದು ಗ್ಯಾರಂಟಿ

ರೆಡ್ಮಿ ನೋಟ್‌ 13R ಪ್ರೊ ಫೀಚರ್ಸ್‌ ಹೇಗಿದೆ?
ರೆಡ್ಮಿ ನೋಟ್‌ 13R ಪ್ರೊ ಸ್ಮಾರ್ಟ್‌ಫೋನ್‌ 6.67 ಇಂಚಿನ OLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2400 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇ 120Hz ವರೆಗೆ ರಿಫ್ರೆಶ್ ರೇಟ್ ಮತ್ತು 1,000 ನೀಟ್ಸ್‌ ವರೆಗಿನ ಬ್ರೈಟ್‌ನೆಸ್‌ ಅನ್ನು ನೀಡಲಿದೆ. ಜೊತೆಗೆ 5,000,000:1 ರ ಕಾಂಟ್ರಾಸ್ಟ್ ಅನುಪಾತ, 2160Hz ಟಚ್‌ ಸ್ಯಾಪ್ಲಿಂಗ್‌ ರೇಟ್‌ ಹಾಗೂ 1920Hz PWM ಡಿಮ್ಮಿಂಗ್‌ ಅನ್ನು ಹೊಂದಿದೆ.

ರೆಡ್ಮಿ ನೋಟ್‌ 13R ಪ್ರೊ ಪ್ರೊಸೆಸರ್‌ ವೈಖರಿ ಏನು?
ರೆಡ್ಮಿ ನೋಟ್‌ 13R ಪ್ರೊ ಸ್ಮಾರ್ಟ್‌ಫೋನ್‌ ಮಿಡಿಯಾಟೆಕ್‌ ಡೈಮೆನ್ಸಿಟಿ 6080 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದೊಂದಿಗೆ ಬರಲಿದೆ. ಈ ಸ್ಮಾರ್ಟ್‌ಫೋನ್‌ ಮೆಮೊರಿ ಕಾರ್ಡ್‌ ಬೆಂಬಲಿಸುವುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ರೆಡ್ಮಿಯಿಂದ ಮತ್ತೊಂದು ಫೋನ್‌ ಲಾಂಚ್‌!ಮೊಬೈಲ್‌ ಪ್ರಿಯರ ನಿದ್ದೆಕದಿಯೋದು ಗ್ಯಾರಂಟಿ

ರೆಡ್ಮಿ ನೋಟ್‌ 13R ಪ್ರೊ ಕ್ಯಾಮೆರಾ ಸೆಟ್‌ಅಪ್‌
ರೆಡ್ಮಿ ನೋಟ್‌ 13R ಪ್ರೊ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದೆ. ಇದರ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿದ್ದು,3x ಇನ್-ಸೆನ್ಸರ್ ಜೂಮ್ ನೀಡಲಿದೆ. ಎರಡನೇ ಕ್ಯಾಮೆರಾ 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ.

ರೆಡ್ಮಿ ನೋಟ್‌ 13R ಪ್ರೊ ಬ್ಯಾಟರಿ ಮತ್ತು ಇತರೆ
ರೆಡ್ಮಿ ನೋಟ್‌ 13R ಪ್ರೊ ಸ್ಮಾರ್ಟ್‌ಫೋನ್‌ 33W ಚಾರ್ಜಿಂಗ್‌ ಬೆಂಬಲಿಸುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಯುಎಸ್‌ಬಿ-ಸಿ ಪೋರ್ಟ್, 3.5 ಎಂಎಂ ಆಡಿಯೊ ಜ್ಯಾಕ್, 5 ಜಿ ಬೆಂಬಲದೊಂದಿಗೆ ಡ್ಯುಯಲ್ ಸಿಮ್, ಜಿಪಿಎಸ್, ವೈ-ಫೈ 5 ಮತ್ತು ಬ್ಲೂಟೂತ್ 5.3 ಅನ್ನು ಒಳಗೊಂಡಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ ಸೈಡ್-ಫೇಸಿಂಗ್ ಫಿಂಗರ್‌ಪ್ರಿಂಟ್ ಸೆನ್ಸರ್, ಐಆರ್ ಬ್ಲಾಸ್ಟರ್ ಅನ್ನು ಹೊಂದಿದೆ.

ರೆಡ್ಮಿಯಿಂದ ಮತ್ತೊಂದು ಫೋನ್‌ ಲಾಂಚ್‌!ಮೊಬೈಲ್‌ ಪ್ರಿಯರ ನಿದ್ದೆಕದಿಯೋದು ಗ್ಯಾರಂಟಿ

ರೆಡ್ಮಿ ನೋಟ್‌ 13R ಪ್ರೊ ಬೆಲೆ ಮತ್ತು ಲಭ್ಯತೆ
ರೆಡ್ಮಿ ನೋಟ್‌ 13R ಪ್ರೊ ಸ್ಮಾರ್ಟ್‌ಫೋನ್‌ ಪ್ರಸ್ತುತ ಚೀನಾ ಮಾರುಕಟ್ಟೆಯಲ್ಲಿ ಅನಾವರಣಗೊಂಡಿದೆ. ಆದರಿಂದ ಚೀನಾದಲ್ಲಿ ಇದರ ಬೆಲೆಯನ್ನು 1,999 ಯುವಾನ್ (ಅಂದಾಜು 23,193ರೂ)ಬೆಲೆಗೆ ನಿಗದಿಪಡಿಸಲಾಗಿದೆ. ಇದು ಮಿಡ್ನೈಟ್ ಬ್ಲ್ಯಾಕ್, ಟೈಮ್ ಬ್ಲೂ ಮತ್ತು ಮಾರ್ನಿಂಗ್ ಲೈಟ್ ಗೋಲ್ಡ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್‌ ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಇದನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ಬಗ್ಗೆ ವದಂತಿಗಳು ಹರಡಿವೆ.

Best Mobiles in India

English summary
Redmi Note 13R Pro with 108MP dual cameras launched:Specs details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+