3 ರಗಡ್ ಫೋನ್ ಬಿಡುಗಡೆಗೆ Redmi ಸಿದ್ಧ; 6200mAh ಬ್ಯಾಟರಿ.. 512GB ಸ್ಟೋರೇಜ್ ಖಚಿತ! ಯಾವಾಗ?
ಶಿಯೋಮಿ (Xiaomi) ತನ್ನ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಒಂದನ್ನು ನೀಡಿದೆ. ಶೀಘ್ರದಲ್ಲೇ ಮೂರು ಹೊಸ ಮೊಬೈಲ್‌ಗಳು ಗ್ರಾಹಕರ ಕೈ ಸೇರುವುದು ಖಚಿತವಾಗಿದೆ. ಹೌದು, ಕಂಪನಿಯು ರೆಡ್ಮಿ ನೋಟ್ 14 ಸರಣಿಯ (Redmi Note 14 Series) ಭಾರತದ ಬಿಡುಗಡೆಯನ್ನು ಅಧಿಕೃತವಾಗಿ ಘೋಷಿಸಿದೆ. ಇದರಲ್ಲಿ Redmi Note 14, Redmi Note 14 Pro ಮತ್ತು Redmi Note 14 Pro+ ಮೊಬೈಲ್‌ಗಳು ಮಾರುಕ್ಟೆಗೆ ಎಂಟ್ರಿ ಕೊಡಲಿವೆ. ಬನ್ನಿ, ಈ ಹೊಸ ಫೋನ್‌ಗಳು ಯಾವೆಲ್ಲಾ ವಿಶೇಷತೆಗಳನ್ನು ಹೊಂದಿವೆ ಎನ್ನುವುದನ್ನು ತಿಳಿಯೋಣ.
ಕಂಪನಿಯು ಈಗಾಗಲೇ ರೆಡ್ಮಿ ನೋಟ್ 14 ಸರಣಿಯನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ಭಾರತೀಯ ಮೊಬೈಲ್ ಪ್ರಿಯರು ನೂತನ ಫೋನ್‌ಗಳಿಗಾಗಿ ಕಾಯುತ್ತಿದ್ದಾರೆ. ಅದರಂತೆ, ಮುಂದಿನ ತಿಂಗಳು (ಡಿಸೆಂಬರ್) ಈ ಹೊಸ ಸರಣಿ ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಮೊಬೈಲ್‌ಗಳು ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರಲಿವೆ. 20 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, 6.67 ಇಂಚಿನ ಡಿಸ್ಪ್ಲೇ, 5500mAh ಬ್ಯಾಟರಿ ಮತ್ತು 90W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಗೆ ಸಜ್ಜಾಗಿವೆ.

ರೆಡ್ಮಿ ನೋಟ್ 14 ಸರಣಿಯ ಬಿಡುಗಡೆ ಯಾವಾಗ?
ಶೀಯೋಮಿ ಕಂಪನಿಯು ತನ್ನ ಅಧಿಕೃತ ಎಕ್ಸ್ ಖಾತೆಯ ಮೂಲಕ ರೆಡ್ಮಿ ನೋಟ್ 14 ಸರಣಿಯ ಭಾರತದ ಬಿಡುಗಡೆಯನ್ನು ಖಚಿತಪಡಿಸಿದೆ. ಕಂಪನಿಯು, ಹಂಚಿಕೊಂಡಿರುವ ಪೋಸ್ಟ್‌ನಲ್ಲಿ 'ರೆಡಿ ಫಾರ್ ಎ ನೋಟ್ ವರ್ತಿ ರಿವೀಲ್' ಎಂಬ ಅಡಿಬರಹವನ್ನು ನೀಡಿದೆ. ಈ ಫೋಟೋದಲ್ಲಿ, ಮುಂಬರುವ ಫೋನ್‌ಗಳ ಕ್ಯಾಮೆರಾ ವಿನ್ಯಾಸವನ್ನು ಕಾಣಬಹುದು. ಇದರೊಂದಿಗೆ 'ಕಮಿಂಗ್ ಸೂನ್' ಎಂದು ಬರೆಯಲಾಗಿದೆ. ಈ ಮೂಲಕ ಕಂಪನಿಯು, ಶೀಘ್ರದಲ್ಲೇ ರೆಡ್ಮಿ ನೋಟ್ 14 ಸರಣಿಯನ್ನು ಭಾರತದಲ್ಲಿ ಅನಾವರಣಗೊಳಿಸಲಾಗುತ್ತದೆ ಎಂಬ ಸುಳಿವು ನೀಡಿದೆ.
ರೆಡ್ಮಿ ನೋಟ್ 14 ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ರೆಡ್ಮಿ ನೋಟ್ 14 ಮೊಬೈಲ್ 6.67 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು 1080 × 2400 ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 2100 ನಿಟ್ಸ್ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಡಿಸ್ಪ್ಲೇಯು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಕಂಪನಿಯು ರೆಡ್ಮಿ ನೋಟ್ 14 ಫೋನನ್ನು ಮೀಡಿಯಾ ಟೆಕ್ ಡೈಮೆನ್ಸಿಟಿ 7025 ಅಲ್ಟ್ರಾ ಆಕ್ಟಾ ಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಲಿದೆ. ಇದು ಆಂಡ್ರಾಯ್ಡ್ 14 ಆಧಾರಿತ ಹೈಪರ್ ಓಎಸ್‌ನಲ್ಲಿ ಕೆಲಸ ಮಾಡುತ್ತದೆ. ಈ ಮೊಬೈಲ್ 12GB RAM + 256GB ಸ್ಟೋರೇಜ್ ಆಯ್ಕೆ ಹೊಂದಿದೆ.
ಕ್ಯಾಮೆರಾ ಸೆಟಪ್
ರೆಡ್ಮಿ ನೋಟ್ 14 ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಮುಂಬರುವ ರೆಡ್ಮಿ ನೋಟ್ 14 ಸ್ಮಾರ್ಟ್‌ಫೋನ್ 5110mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 45W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುತ್ತದೆ.

ರೆಡ್ಮಿ ನೋಟ್ 14 ಪ್ರೊ ಮತ್ತು ನೋಟ್ 14 ಪ್ರೊ ಪ್ಲಸ್ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ರೆಡ್ಮಿ ನೋಟ್ 14 ಪ್ರೊ ಮತ್ತು ರೆಡ್ಮಿ ನೋಟ್ 14 ಪ್ರೊ ಪ್ಲಸ್ ಮೊಬೈಲ್‌ಗಳು 6.67 ಇಂಚಿನ ಡಿಸ್ಪ್ಲೇಯನ್ನು ಹೊಂದಿವೆ. ಇದು 1.5K ಕರ್ವ್ ಒಎಲ್‌ಇಡಿ ಪ್ಯಾನೆಲ್ ಆಗಿದೆ. ಡಿಸ್ಪ್ಲೇಯು 120Hz ರಿಫ್ರೆಶ್ ದರ, ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆ ಪಡೆದಿದೆ. ರೆಡ್ಮಿ ನೋಟ್ 14 ಪ್ರೊ ಮೊಬೈಲ್ 2100 ನಿಟ್ಸ್ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ರೆಡ್ಮಿ ನೋಟ್ 14 ಪ್ರೊ ಪ್ಲಸ್ ಮೊಬೈಲ್ 3000 ನಿಟ್ಸ್ ಬ್ರೈಟ್‌ನೆಸ್ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ರೆಡ್ಮಿ ನೋಟ್ 14 ಪ್ರೊ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಅಲ್ಟ್ರಾ ಪ್ರೊಸೆಸರ್ ಹೊಂದಿದೆ. ರೆಡ್ಮಿ ನೋಟ್ 14 ಪ್ರೊ ಪ್ಲಸ್ ಮೊಬೈಲ್ ಸ್ನಾಪ್‌ಡ್ರಾಗನ್ 7s ಜೆನ್ 3 ಆಕ್ಟಾ ಕೋರ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಎರಡೂ ಮೊಬೈಲ್‌ಗಳು ಆಂಡ್ರಾಯ್ಡ್ 14 ಆಧಾರಿತ ಹೈಪರ್ ಓಎಸ್‌ನಲ್ಲಿ ಕಾರ್ಯ ನಿರ್ವಹಿಸುತ್ತವೆ.
ಕ್ಯಾಮೆರಾ ಸೆಟಪ್
ರೆಡ್ಮಿ ನೋಟ್ 14 ಪ್ರೊ ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಜೊತೆಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಲಭ್ಯವಿದೆ. ರೆಡ್ಮಿ ನೋಟ್ 14 ಪ್ರೊ ಪ್ಲಸ್ ಮೊಬೈಲ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಎರಡೂ ಫೋನ್‌ಗಳಲ್ಲಿ 20 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ರೆಡ್ಮಿ ನೋಟ್ 14 ಪ್ರೊ ಸ್ಮಾರ್ಟ್‌ಫೋನ್ 5500mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದು 45W ವೇಗದ ಚಾರ್ಜಿಂಗ್ ಸೌಲಭ್ಯ ಪಡೆದಿದೆ. ರೆಡ್ಮಿ ನೋಟ್ 14 ಪ್ರೊ ಪ್ಲಸ್ ಮೊಬೈಲ್ 6200mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 90W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.


Click it and Unblock the Notifications








