Home
ಸುದ್ದಿಜಾಲ

ಶೀಘ್ರದಲ್ಲೇ Redmi Note 14 ಸರಣಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ! Qualcomm Snapdragon 7s Gen 3 SoC ನಿರೀಕ್ಷೆ

ಶಿಯೋಮಿ ಸಂಸ್ಥೆಯ ಸ್ಮಾರ್ಟ್‌ಫೋನ್‌ಗಳಿಗೆ ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಇದೆ. ಈ ನಡುವೆ ಸಂಸ್ಥೆ ಕೂಡ ತನ್ನ ಅತ್ಯಾಕರ್ಷಕ ಫೀಚರ್ಸ್‌ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಈ ಸಂಸ್ಥೆೆಯ ಸ್ಮಾರ್ಟ್‌ಫೋನ್‌ಗಳು (Smartphones) ಯಶಸ್ವಿಯಾಗಿದೆ. ಆಗಾಗ ನೂತನ ಸರಣಿಯ ಮೊಬೈಲ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಬೇರೆ ಬೇರೆ ಉನ್ನತ ಮಟ್ಟದ ಬ್ರ್ಯಾಂಡ್‌ಗಳಿಗೆ ಪೈಪೋಟಿ ನೀಡುವಲ್ಲಿಯೂ ಇವು ಯಶಸ್ವಿಯಾಗಿವೆ. ಇದೀಗ ಶಿಯೋಮಿ (Xiaomi) ಸಂಸ್ಥೆ Redmi Note 14 ಸರಣಿಯ ಸ್ಮಾರ್ಟ್‌ಫೋನ್‌ ಬಿಡುಗಡೆಗೆ ತಯಾರಿ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.

ಮುಂಬರುವ Redmi Note 14 ಸರಣಿಯು ಮುಂದಿನ ದಿನಗಳಲ್ಲಿ ಪಾದಾರ್ಪಣೆ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ. ಮುಂಬರುವ ಸರಣಿಯು Redmi Note 13, Note 13 Pro ಮತ್ತು Note 13 Pro+ ನ ಮುಂದುವರೆದ ಜನರೇಷನ್ ಆಗಲಿದೆ ಎಂದು ಹೇಳಲಾಗಿದೆ. Note 13 ಸರಣಿಯನ್ನು ಚೀನಾದಲ್ಲಿ ಸೆಪ್ಟೆಂಬರ್ 2023 ರಲ್ಲಿ ಪ್ರಾರಂಭ ಮಾಡಲಾಗಿದೆ ಮತ್ತು ಇದೇ ವರ್ಷದ ಜನವರಿಯಲ್ಲಿ ಭಾರತೀಯ ಮಾರುಕಟ್ಟೆಗೆ ಬಂದಿತ್ತು. ಇತ್ತೀಚಿನ ವರದಿಗಳು (ಗ್ಯಾಜೆಟ್‌ 360 ಮೂಲಕ) ಮುಂಬರುವ Redmi Note 14 ಹ್ಯಾಂಡ್‌ಸೆಟ್‌ಗಳನ್ನು IMEI ಡೇಟಾಬೇಸ್‌ನಲ್ಲಿ ಪಟ್ಟಿ ಮಾಡಲಾಗಿದೆ ಎಂದು ಹೇಳಲಾಗಿದೆ.

ಶೀಘ್ರದಲ್ಲೇ Redmi Note 14 ಸರಣಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ!

Redmi Note 14 ಸರಣಿಯ ನಿರೀಕ್ಷಿತ ಲಾಂಚ್:
XiaomiTime ನ ವರದಿಯ ಪ್ರಕಾರ, Redmi Note 14 ಸರಣಿಯು ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಆರಂಭದಲ್ಲಿ ಭಾರತ ಸೇರಿದಂತೆ ಇತರ ಜಾಗತಿಕ ಮಾರುಕಟ್ಟೆಗಳಲ್ಲಿ ಲಾಂಚ್ ಮಾಡುವ ಮೊದಲು ಚೀನಾದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. IMEI ಡೇಟಾಬೇಸ್‌ನಲ್ಲಿ ಗುರುತಿಸಿರುವಂತೆ Redmi Note 14, Note 14 Pro, ಮತ್ತು Note 14 Pro+ ಅನ್ನು ಒಳಗೊಂಡಿರುವ ಸರಣಿಯನ್ನು ನಿರೀಕ್ಷಿಸಲಾಗಿದೆ.

ವರದಿಯ ಪ್ರಕಾರ ಮುಂಬರುವ Note 14 ಸರಣಿಯ ಮಾದರಿ ಸಂಖ್ಯೆಗಳು 24115RA8EG, 24115RA8EI, ಮತ್ತು 24115RA8EC ಮೂಲಕ ಗುರುತಿಸಲಾಗಿದೆ. ಪ್ರೊ ಆವೃತ್ತಿಯು ಮಾದರಿ ಸಂಖ್ಯೆಗಳು 24094RAD4G, 24094RAD4I, ಮತ್ತು 24094RAD4C ನೊಂದಿಗೆ ಕಾಣಿಸಿಕೊಂಡಿವೆ. ಉನ್ನತ ಶ್ರೇಣಿಯ Pro+ ಮಾದರಿಯು 24090RA29G, 24090RA29I, ಮತ್ತು 24090RA29C ಮಾದರಿ ಸಂಖ್ಯೆಗಳಿಗೆ ಲಿಂಕ್ ಆಗಿದೆ. 'C' ಅಕ್ಷರವು ಚೀನಾದಲ್ಲಿ ಬಿಡುಗಡೆಗೆ ಉದ್ದೇಶಿಸಲಾದ ರೂಪಾಂತರವನ್ನು ಸೂಚಿಸುತ್ತದೆ. ಆದರೆ 'G' ಮತ್ತು 'I' ಅನ್ನು ಕ್ರಮವಾಗಿ ಜಾಗತಿಕ ಮತ್ತು ಭಾರತೀಯ ಆವೃತ್ತಿಗಳಿಗೆ ಬಳಸಲಾಗುತ್ತದೆ.

Redmi Note 14 Pro+ ಅನ್ನು ಆಂತರಿಕವಾಗಿ O16U ಎಂದು 'ಅಮೆಥಿಸ್ಟ್' ಎಂಬ ಸಂಕೇತದ ಜೊತಗೆ ಗುರುತಿಸಲಾಗಿದೆ. ಈ ಮಾದರಿಯು ಸ್ಟ್ಯಾಂಡರ್ಡ್ ಮತ್ತು ಪ್ರೊ ಆವೃತ್ತಿಗಳೊಂದಿಗೆ ಬಾಕ್ಸ್‌ನಿಂದಲೇ ಆಂಡ್ರಾಯ್ಡ್ 14 ಆಧಾರಿತ ಹೈಪರ್‌ ಓಎಸ್‌ನಲ್ಲಿ ರನ್ ಆಗುವ ನಿರೀಕ್ಷೆಯಿದೆ.

ಇತ್ತೀಚಿನ ಸೋರಿಕೆಗಳ ಪ್ರಕಾರ Redmi Note 14 ಸರಣಿಯು ಹೆಚ್ಚಿನ ರಿಫ್ರೆಶ್ ರೇಟ್ ಜೊತೆಗೆ 1.5K ಅಮೋಲ್ಡ್‌ ಡಿಸ್‌ಪ್ಲೇಗಳನ್ನು ಹೊಂದಿರಬಹುದು ಎಂದು ಸೂಚಿಸುತ್ತದೆ. ಇದು Redmi Note 13 Pro ಮತ್ತು Note 13 Pro+ ಗೆ ಅನುಗುಣವಾಗಿದೆ. ಇದು 120Hz ರಿಫ್ರೆಶ್ ರೇಟ್‌ ಜೊತೆಗೆ 1.5K ಅಮೋಲ್ಡ್‌ ಸ್ಕ್ರೀನ್‌ ಅನ್ನು ಹೊಂದಿದೆ.

Redmi Note 14 ನ Pro ರೂಪಾಂತರವು Qualcomm Snapdragon 7s Gen 3 SoC ನಿಂದ ರನ್‌ ಆಗಲಿದೆ ಎಂದು ವದಂತಿಗಳಿವೆ, ಇದು Redmi Note 13 Pro ನಲ್ಲಿ ಕಂಡುಬರುವ Snapdragon 7s Gen 2 ಚಿಪ್‌ಸೆಟ್‌ನಿಂದ ಅಪ್‌ಗ್ರೇಡ್ ಅನ್ನು ಪ್ರತಿನಿಧಿಸುತ್ತದೆ. ಈ ಅಪ್‌ಗ್ರೇಡ್ ಹೊರತಾಗಿಯೂ Redmi Note 14 Pro 5,000mAh ಬ್ಯಾಟರಿಯೊಂದಿಗೆ ಬರುವ ಸಾಧ್ಯತೆಯಿದೆ.

Best Mobiles in India

English summary
The Redmi Note 14 series is expected to debut in the near future. The upcoming series is said to be the next generation of Redmi Note 13, Note 13 Pro and Note 13 Pro+.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+