Redmi Note 14S: 200MP ಕ್ಯಾಮೆರಾ.. 5000mAh ಬ್ಯಾಟರಿ.. ಬೆಲೆಯೂ ಲೀಕ್! ಲಾಂಚ್ ಯಾವಾಗ?
ರೆಡ್ಮಿ ಪ್ರಿಯರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್! 200 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿರುವ ಹೊಸ ಮೊಬೈಲ್ ಭಾರತದಲ್ಲಿ ಬಿಡುಗಡೆಯಾಗಲಿದೆ. ಹೌದು, ಕಳೆದ ವಾರವಷ್ಟೇ, ರೆಡ್ಮಿ ಸಂಸ್ಥೆಯು ತನ್ನ ರೆಡ್ಮಿ 'Note 14' ಸರಣಿಯಲ್ಲಿ ಹೊಸ ಫೋನ್ ಪರಿಚಯಿಸುವ ಸುದ್ದಿ ಹೊರ ಬಿದ್ದಿತ್ತು. ಇದು ರೆಡ್ಮಿ ನೋಟ್ 14S (Redmi Note 14S) ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈ ಮೊಬೈಲ್ ದುಬೈನ ಪ್ರಮಾಣೀಕರಣ ಸೈಟ್ TDRA ನಲ್ಲಿ 2502FRA65G ಮಾದರಿ ಸಂಖ್ಯೆಯೊಂದಿಗೆ ಕಾಣಿಸಿಕೊಂಡಿದೆ. ಈ ಮಧ್ಯೆಯೇ, ಮುಂಬರುವ ರೆಡ್ಮಿ ಫೋನಿನ ಪ್ರಮುಖ ವಿಶೇಷತೆಗಳು ಮತ್ತು ಬೆಲೆಯನ್ನು ಬಹಿರಂಗಪಡಿಸಲಾಗಿದೆ.
ರೆಡ್ಮಿ ನೋಟ್ 14S ಮೊಬೈಲ್ 18 ಸಾವಿರ ರೂ. ಬಜೆಟ್‌ನಲ್ಲಿ ಖರೀದಿಗೆ ಲಭ್ಯವಿರುತ್ತದೆ. ಈ ಫೋನಿನ ವಿಶೇಷತೆಗಳನ್ನು ನೋಡುವುದಾದರೆ, ಈ ಫೋನಿನಲ್ಲಿ 200 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿರುತ್ತದೆ. ಇದು ಮೀಡಿಯಾಟೆಕ್ ಹೆಲಿಯೊ G99 ಅಲ್ಟ್ರಾ ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಮೊಬೈಲ್ 6.67 ಇಂಚಿನ ಡಿಸ್ಪ್ಲೇ ಹೊಂದಿದೆ. ಇದರೊಂದಿಗೆ 5000mAh ಬ್ಯಾಟರಿ ಮತ್ತು 67W ವೇಗದ ಚಾರ್ಜಿಂಗ್, 8GB RAM + 256GB ಸ್ಟೋರೇಜ್ ಸೇರಿದಂತೆ ಹಲವು ಅತ್ಯುತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ರೆಡ್ಮಿ ನೋಟ್ 14S ಬೆಲೆ (ನಿರೀಕ್ಷೆ)
ರೆಡ್ಮಿ ನೋಟ್ 14S ಫೋನ್ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಭಾರತೀಯ ಗ್ರಾಹಕರು ಸಹ ಈ ಫೋನಿನ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ವರದಿಯ ಪ್ರಕಾರ, ಈ ರೆಡ್ಮಿ ಫೋನ್ ಭಾರತ ಮತ್ತು ಯುರೋಪಿಯನ್ ದೇಶಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಈ ಫೋನಿನ ಜಾಗತಿಕ ಬೆಲೆ 22 ಸಾವಿರ ರೂ. (240 ಯುರೋಗಳು) ಆಗಿದೆ ಎಂದು ಹೇಳಲಾಗಿದೆ. ಆದರೆ, ಕಂಪನಿಯು ರೆಡ್ಮಿ ನೋಟ್ 14S ಅನ್ನು ಭಾರತದಲ್ಲಿ ಸುಮಾರು 18 ಸಾವಿರ ರೂ.ನಲ್ಲಿ ಪರಿಚಯಿಸುವ ಸಾಧ್ಯತೆಯಿದೆ.
ರೆಡ್ಮಿ ನೋಟ್ 14S ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ರೆಡ್ಮಿ ನೋಟ್ 14S ಸ್ಮಾರ್ಟ್‌ಫೋನ್ 6.67 ಇಂಚಿನ ದೊಡ್ಡ ಅಮೋಲೆಡ್ ಡಿಸ್ಪ್ಲೇಯೊಂದಿಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದು ಪಂಚ್ ಹೋಲ್ ಶೈಲಿಯ ಡಿಸ್ಪ್ಲೇ ಆಗಿದೆ. ಪೂರ್ಣ ಎಚ್‌ಡಿ ಪ್ಲಸ್ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಇದು 120Hz ರಿಫ್ರೆಶ್ ದರದ ಬೆಂಬಲ ಹೊಂದಿರುತ್ತದೆ. ಈ ಮೊಬೈಲ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ತಂತ್ರಜ್ಞಾನ ಸಹ ಹೊಂದಿರಲಿದೆ.
ಪ್ರೊಸೆಸರ್ ಸಾಮರ್ಥ್ಯ
ಮುಂಬರುವ ರೆಡ್ಮಿ ನೋಟ್ 14S ಮೊಬೈಲ್ ಹೆಲಿಯೊ G99 ಅಲ್ಟ್ರಾ ಆಕ್ಟಾ ಕೋರ್ ಪ್ರೊಸೆಸರ್ ಹೊಂದಿರುತ್ತದೆ. ಇದನ್ನು 6 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಆಧಾರದ ಮೇಲೆ ತಯಾರಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಆಧಾರಿತ ಹೈಪರ್ ಓಎಸ್ 2.0 ಯುಐ (HyperOS 2.0 UI) ಜೊತೆಗೆ ಕೆಲಸ ನಿರ್ವಹಿಸುತ್ತದೆ. ವರದಿಯ ಪ್ರಕಾರ, ಈ ರೆಡ್ಮಿ ಫೋನ್ 8GB RAM ನೊಂದಿಗೆ ಬಿಡುಗಡೆಯಾಗಲಿದೆ.
ಕ್ಯಾಮೆರಾ ಸೆಟಪ್
ರೆಡ್ಮಿ ನೋಟ್ 14S ಫೋನಿನ ವಿಶೇಷತೆಯೆಂದರೆ, ಇದರ ಕ್ಯಾಮೆರಾ. ಈ ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ. ಈ ಫೋನಿನಲ್ಲಿ 200 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿರುತ್ತದೆ. ಇದರೊಂದಿಗೆ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ರೆಡ್‌ಮಿ ಫೋನಿನಲ್ಲಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಇರುತ್ತದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ರೆಡ್ಮಿ ನೋಟ್ 14S ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 67W ವೇಗದ ಚಾರ್ಜಿಂಗ್ ತಂತ್ರಜ್ಞಾನ ಒದಗಿಸಲಾಗುವುದು.


Click it and Unblock the Notifications








