Home
ಸುದ್ದಿಜಾಲ

ಮುಂದುವರೆದ ಚೀನಾ ಕಂಪನಿಗಳ ಪ್ರಾಬಲ್ಯ: ಭಾರತದಲ್ಲಿ ಅತೀ ಹೆಚ್ಚು ಮಾರಾಟವಾದ ಫೋನ್ 'ರೆಡ್‌ಮಿ ನೋಟ್ 4'

ಸದ್ಯ ದೊರೆತಿರುವ ಮಾಹಿತಿಯ ಪ್ರಕಾರ ಶಿಯೋಮಿ, ವಿವೋ ಮತ್ತು ಒಪ್ಪೊ ಕಂಪನಿಗಳು ಅತೀ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿವೆ.

By Srinidhi

ಸದ್ಯ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಚೀನಾ ಮೂಲದ ಕಂಪನಿಗಳ ಪಾರುಪತ್ಯ ಹೆಚ್ಚಾಗಿದ್ದು, ಅದು ಈ ವರ್ಷವು ಮುಂದುವರೆಯಲಿದೆ ಎಂದರೆ ತಪ್ಪಾಗುವುದಿಲ್ಲ. ಸದ್ಯ ದೊರೆತಿರುವ ಮಾಹಿತಿಯ ಪ್ರಕಾರ ಶಿಯೋಮಿ, ವಿವೋ ಮತ್ತು ಒಪ್ಪೊ ಕಂಪನಿಗಳು ಅತೀ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿವೆ.

ಭಾರತದಲ್ಲಿ ಅತೀ ಹೆಚ್ಚು ಮಾರಾಟವಾದ ಫೋನ್ 'ರೆಡ್‌ಮಿ ನೋಟ್ 4'

ಇದೇ ಮಾದರಿಯಲ್ಲಿ ತಿಂಗಳ ಹಿಂದೆಯಷ್ಟೆ ಬಿಡುಗಡೆಯಾಗಿದ್ದ 'ಶಿಯೋಮಿ ರೆಡ್‌ಮಿ ನೋಟ್ 4' ಈ ವರ್ಷದ ಮೊದಲ ತ್ರೈಮಾಸಿಕ ಅವಧಿಕಯಲ್ಲಿ ಅತೀ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ರೆಡ್‌ಮಿ ನೋಟ್ 4;

ರೆಡ್‌ಮಿ ನೋಟ್ 4;

ಕಡಿಮೆ ಬೆಲೆಗೆ ಉತ್ತಮ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬಿಡುವ ಮೂಲಕ ಜನರ ಮನಸ್ಸು ಗೆದ್ದಿರುವ ಚೀನಾ ಮೂಲದ ಶಿಯೋಮಿ, ಇತ್ತಿಚೇಗೆ ಬಿಡುಗೆಡೆ ಮಾಡಿದ್ದ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿತ್ತು. ಮೊದಲಿಗೆ ಆನ್‌ಲೈನ್ ಮಾರುಕಟ್ಟೆಲ್ಲಿ ಮಾರಾಟವಾದ ಈ ಪೋನ್ ಫ್ಲಾಸ್ ಸೇಲ್‌ನಲ್ಲಿ ಕ್ಷಣ ಮಾತ್ರದಲ್ಲಿ ಮಾರಾಟವಾಗಿ ದಾಖಲೆಯನ್ನು ನಿರ್ಮಿಸಿತ್ತು.

ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್;

ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್;

ಸದ್ಯ ‘ಇಂಟರ್‌ನ್ಯಾಷನಲ್ ಡೇಟಾ ಕಾರ್ಪೊರೇಷನ್ (ಐಡಿಸಿ)' ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್ ‘ಶಿಯೋಮಿ ರೆಡ್ ಮಿ ನೋಟ್ 4' ಆಗಿದ್ದು, ಗ್ರಾಹಕರು ಈ ಫೋನ್ ಖರೀದಿಸಲು ಮುಗಿ ಬೀಳುತ್ತಿದ್ದಾರೆ ಎನ್ನಲಾಗಿದೆ.

ಚೀನಾ ಕಂಪನಿಗಳ ಪಾಲು 51%

ಚೀನಾ ಕಂಪನಿಗಳ ಪಾಲು 51%

ಕಳೆದ ವರ್ಷಕ್ಕಿಂತ ಈ ವರ್ಷ ಸ್ಮಾರ್ಟ್‌ಫೋನ್ ಮಾರುಕಟ್ಟೆ ವೇಗವಾಗಿ ಬೆಳವಣಿಗೆಯನ್ನು ಸಾಧಿಸುತ್ತಿದ್ದು, ಈಗಾಗಲೇ ಭಾರತದಲ್ಲಿ 2.7 ಕೋಟಿ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿವೆ ಎಂದು ಐಡಿಸಿ ವರದಿಯಲ್ಲಿ ತಿಳಿದು ಬಂದಿದೆ. ಇದರಲ್ಲಿ ಚೀನಾ ಮೂಲದ ಕಂಪನಿಗಳ ಪಾಲು 51% ಇದೆ.

ಶೇಕಡ 14.8ರಷ್ಟು ಬೆಳವಣಿಗೆ:

ಶೇಕಡ 14.8ರಷ್ಟು ಬೆಳವಣಿಗೆ:

ಈ ಬಾರಿ ಸ್ಮಾರ್ಟ್‌ಫೊನ್ ಮಾರುಕಟ್ಟೆಯ ವಹಿವಾಟು ಶೇಕಡ 14.8ರಷ್ಟು ಬೆಳವಣಿಗೆ ಸಾಧಿಸಿದ್ದು, ಕಳೆದ ಬಾರಿ ಈ ಮಟ್ಟದ ಬೆಳವಣಿಗೆಯೂ ಕಂಡುಬಂದಿರಲಿಲ್ಲ ಎನ್ನಲಾಗಿದೆ. ಈ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಸ್ಯಾಮ್ ಸಂಗ್ ಕಂಪನಿಯ ಸ್ಮಾರ್ಟ್ ಫೋನ್‌ಗಳು ಹೆಚ್ಚು ಮಾರಾಟವಾಗುತ್ತಿದ್ದವು ಆದರೆ ಈ ಭಾರಿ ಶಿಯೋಮಿ ಆ ಜಾಗವನ್ನು ಅಲಂಕರಿಸಿದೆ ಎಂಬುದು ವರದಿಯಿಂದ ತಿಳಿದುಬಂದಿದೆ.

Best Mobiles in India

English summary
Chinese smartphone vendors like Xiaomi, vivo, Oppo continued to dominate the Indian smartphone market in the first quarter of 2017. to know more visit kannada.gizot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+