Home
ಸುದ್ದಿಜಾಲ

ಇಂದು ಶಿಯೋಮಿ 'ರೆಡ್‌ಮಿ ನೋಟ್ 5' ಮತ್ತು 'ಶಿಯೋಮಿ ಟಿವಿ' ಲಾಂಚ್!..ಬೆಚ್ಚಿಬೀಳಲಿದೆ ಮಾರುಕಟ್ಟೆ!

ಪ್ರೇಮಿಗಳ ದಿನಕ್ಕೆ ಬಾರಿ ಕೊಡುಗೆ ನೀಡಲು ಶಿಯೋಮಿ ಮುಂದಾಗಿದ್ದು, ಒಂದೇ ದಿನದಲ್ಲಿ ತನ್ನ ಎರಡು ಅತ್ಯುತ್ತಮ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿರುವುದು ಫೈನಲ್ ಆಗಿದೆ.!!

By Bhaskar N J

ಭಾರತದ ನಂಬರ್ ಒನ್ ಮೊಬೈಲ್ ಬ್ರ್ಯಾಂಡ್ 'ಶಿಯೋಮಿ' ಕಂಪೆನಿಯ ಈ ವರ್ಷದ ಮೊದಲ ಉತ್ಪನ್ನ ಬಿಡುಗಡೆಗೆ ಕ್ಷಣಗಣನೆ ಶುರುವಾಗುತ್ತಿದೆ.! ಪ್ರೇಮಿಗಳ ದಿನಕ್ಕೆ ಬಾರಿ ಕೊಡುಗೆ ನೀಡಲು ಶಿಯೋಮಿ ಮುಂದಾಗಿದ್ದು, ಒಂದೇ ದಿನದಲ್ಲಿ ತನ್ನ ಎರಡು ಅತ್ಯುತ್ತಮ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿರುವುದು ಫೈನಲ್ ಆಗಿದೆ.!!

ಇಂದು 12 ಗಂಟೆಗೆ ನವದೆಹಲಿಯಲ್ಲಿ ಶಿಯೋಮಿ ಆಯೋಜನೆ ಮಾಡಿರುವ ಸಮಾರಂಭದಲ್ಲಿ ಶಿಯೋಮಿ ರೆಡ್‌ ಮಿ ನೋಟ್ 5 ಮತ್ತು ಶಿಯೋಮಿ ಎಂಐ 4 ಟಿವಿಗಳೆರಡು ಇಂದು ಭಾರತದ ಗ್ಯಾಜೆಟ್ ಮಾರುಕಟ್ಟೆಯನ್ನು ನಡುಗಿಸಲು ಬರುತ್ತಿವೆ.! ಈಗಾಗಲೇ ಎರಡೂ ಗ್ಯಾಜೆಟ್‌ಗಳ ಫೀಚರ್ಸ್ ಲೀಕ್ ಆಗಿ ವೈರಲ್ ಆಗಿದೆ.!

ಇಂದು ಶಿಯೋಮಿ 'ರೆಡ್‌ಮಿ ನೋಟ್ 5' ಮತ್ತು 'ಶಿಯೋಮಿ ಟಿವಿ' ಲಾಂಚ್!!

ರೆಡ್‌ಮಿ ನೋಟ್ 4 ನಂತರ ಭಾರಿ ಕುತೋಹಲ ಮೂಡಿಸಿರುವ ರೆಡ್‌ಮಿ ನೋಟ್ 5 ಭಾರತೀಯರಿಗೆ ಮೊದಲು ಸಿಗುತ್ತಿರುವುದರಿಂದ ಶಿಯೋಮಿ ಭಾರತದ ಮಾರುಕಟ್ಟೆಯ ಮೇಲೆ ಒಲವನ್ನು ಹೊಂದಿದೆ ಎನ್ನಬಹುದು.! ಹಾಗಾದರೆ, ಈ ಎರಡೂ ಗ್ಯಾಜೆಟ್‌ಗಳ ವಿಶೇಷತೆಗಳೇನು? ಬಿಡುಗಡೆಯಿಂದ ಭಾರತದ ಮಾರುಕಟ್ಟೆಗೆ ಭಯವೇಕೆ? ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಶಿಯೋಮಿ ರೆಡ್‌ಮಿ ನೋಟ್ 5!!

ಶಿಯೋಮಿ ರೆಡ್‌ಮಿ ನೋಟ್ 5!!

ಮೊದಲೇ ಹೇಳಿದಂತೆ ಶಿಯೋಮಿ ಭಾರತದ ಮಾರುಕಟ್ಟೆಯ ಮೇಲೆ ಒಲವನ್ನು ಹೊಂದಿದೆ. ಹಾಗಾಗಿ, ಶಿಯೋಮಿ ರೆಡ್‌ಮಿ ನೋಟ್ 5 ಭಾರತದಲ್ಲಿ ಮೊದಲು ಬಿಡುಗಡೆಯಾಗುತ್ತಿದೆ ಎನ್ನಲಾಗಿದೆ.! ರೆಡ್‌ಮಿ ನೋಟ್ 5 ಬಿಡುಗಡೆಯಾಗುತ್ತಿದೆ ಎನ್ನುವ ಸುದ್ದಿ ಕೇಳಿಯೇ ಭಾರತದ ಮೊಬೈಲ್ ಮಾರುಕಟ್ಟೆ ಹೆದರಿ ನಿಂತಿದೆ.!!

ಡಿಸ್‌ಪ್ಲೇ ಮತ್ತು ವಿನ್ಯಾಸ!!

ಡಿಸ್‌ಪ್ಲೇ ಮತ್ತು ವಿನ್ಯಾಸ!!

ರೆಡ್‌ಮಿ ನೋಟ್ 4 ಫೋನ್ ವಿನ್ಯಾಸದಲ್ಲಿ ಹೆಚ್ಚು ಬದಲಾವಣೆಯಾಗಿದ್ದು, ವಿಬೊ ನೀಡಿರುವ ಮಾಹಿತಿಯಂತೆ ರೆಡ್‌ಮಿ ನೋಟ್ 1080 x 2160 ಪಿಕ್ಸೆಲ್ ರೆಸಲ್ಯೂಶನ್ ಹೈ ಹೆಚ್‌ಡಿ 5.5 ಇಂಚ್ ಡಿಸ್‌ಪ್ಲೇ ಹೊಂದಿರಲಿದೆ. 18:9 ರೆಷ್ಯೂ ಸ್ಕ್ರೀನ್ ಮೂಲಕ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಕಾಲಿಡಲಿದೆ.!!

ಕ್ಯಾಮೆರಾಗೆ ಹೆಚ್ಚು ಒತ್ತು!!

ಕ್ಯಾಮೆರಾಗೆ ಹೆಚ್ಚು ಒತ್ತು!!

ರೆಡ್‌ಮಿ ನೋಟ್ 5 ಕ್ಯಾಮೆರಾದಲ್ಲಿ ಭಾರಿ ಬದಲಾವಣೆಯಾಗಿದ್ದು, 16 MP ಡ್ಯುಯಲ್ ರಿಯರ್ ಕ್ಯಾಮೆರಾ ಹಾಗೂ 13 MP ಸೆಲ್ಫಿ ಕ್ಯಾಮೆರಾಗಳು ಇರಲಿವೆ.!! ಇದು ರೆಡ್‌ಮಿ ನೋಟ್ 4ನಲ್ಲಿದ ನೂನ್ಯತೆಗಳನ್ನು ಸರಿಪಡಿಸಲಿದೆ ಎಂದು ವಿಬೊ ವೆಬ್‌ಸೈಟ್ ಅಭಿಪ್ರಾಯ ವ್ಯಕ್ತಪಡಿಸಿದೆ!!

ಸ್ನ್ಯಾಪ್‌ಡ್ರಾಗನ್ 630 ಪ್ರೋಸೆಸರ್!!

ಸ್ನ್ಯಾಪ್‌ಡ್ರಾಗನ್ 630 ಪ್ರೋಸೆಸರ್!!

ರೆಡ್‌ಮಿ ನೋಟ್ 5 ಕಾರ್ಯಚರಣೆಗಾಗಿ ರೆಡ್‌ಮಿ ನೋಟ್ 4ನಲ್ಲಿ ನೀಡಿದ್ದ 64 ಬಿಟ್ ಸ್ನ್ಯಾಪ್‌ಡ್ರಾಗನ್ 630 ಪ್ರೋಸೆಸರ್ ಅನ್ನೇ ತರಲಾಗಿದೆ. ಇದರೊಂದಿಗೆ ಆಡ್ರಿನೋ 508 GPU ಸಹ ಇರಲಿದ್ದು, ಗ್ರಾಫಿಕ್ಸ್ ಗೇಮ್ ಅನುಭವ ಮತ್ತಷ್ಟು ಹೆಚ್ಚಲಿದೆ ಎನ್ನುತ್ತಿದೆ ವರದಿ.!!

ಆಂಡ್ರಾಯ್ಡ್ 7.1.1 ಮತ್ತು MIUI 9 ಇರಲಿದೆ.!!

ಆಂಡ್ರಾಯ್ಡ್ 7.1.1 ಮತ್ತು MIUI 9 ಇರಲಿದೆ.!!

ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 7.1.1 ಮತ್ತು MIUI 9ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಇದು ಟಾಪ್ ಆಂಡ್ರಾಯ್ಡ್ ಮತ್ತು MIUI ಆವೃತ್ತಿಯಾಗಿದೆ. ಬಳಕೆದಾರಿಗೆ ಹೊಸ ಅನುಭವನ್ನು ನೀಡುವುದರ ಜೊತೆಗೆ ಆಂಡ್ರಾಯ್ಡ್ ಓರಿಯೋಗೆ ಅಪ್‌ಡೇಟ್ ಹೊಂದಬಹುದು ಎಂದು ಹೇಳಲಾಗಿದೆ.

ಬೇರೆ ಏನೆಲ್ಲಾ ಫೀಚರ್ಸ್?

ಬೇರೆ ಏನೆಲ್ಲಾ ಫೀಚರ್ಸ್?

ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನಿನಲ್ಲಿ ರೆಡ್‌ಮಿ ನೋಟ್ 4ನಲ್ಲಿ ನೀಡಿದ್ದ ಫೀಚರ್‌ಗಳೇ ಇರಲಿದೆ. ಕ್ಯಾಮೆರಾ ಮತ್ತು ವಿನ್ಯಾಸ ಬದಲಾಗಿರಬಹುದಾಗಿದ್ದು, ಕ್ವಿಕ್ ಚಾರ್ಜರ್ 4.0, 4G VoLTE ಹಾಗೂ USB 3.1, ಫಿಂಗರ್‌ಪ್ರಿಂಟ್ ಫೀಚರ್ ಎಲ್ಲವೂ ನೋಟ್ 5ನಲ್ಲಿ ಲಭ್ಯವಿರಲಿವೆ.!!

ಫೋನ್ ಬೆಲೆ ಎಷ್ಟಿರಬಹುದು?

ಫೋನ್ ಬೆಲೆ ಎಷ್ಟಿರಬಹುದು?

ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ ಯಶಸ್ಸನ್ನು ರೆಡ್‌ಮಿ ನೋಟ್ 5 ಮೂಲಕವೂ ಉಳಿಸಿಕೊಳ್ಳುವ ಅಗತ್ಯತೆಯನ್ನು ಹೊಂದಿರುವ ಶಿಯೋಮಿ ಕಂಪೆನಿ ಕಡಿಮೆ ಬೆಲೆಗೆ ಈ ಪೋನ್ ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಈಗ ಸಿಕ್ಕಿರುವ ಮಾಹಿತಿಗಳ ಪ್ರಕಾರ ಕೇವಲ 15,000ಕ್ಕೆ ಡ್ಯುಯಲ್ ಕ್ಯಾಮೆರಾ ಫೋನ್ ನಿಮ್ಮದಾಗಲಿದೆ.!!

ಶಿಯೋಮಿ ಎಂಐ TV 4!!

ಶಿಯೋಮಿ ಎಂಐ TV 4!!

ಇಂದು ರೆಡ್‌ಮಿ ನೋಟ್ 5 ಜತೆಗೆ ಶಿಯೋಮಿ ಎಂಐ TV 4 ಟಿವಿ ಕೂಡ ಲಾಂಚ್ ಆಗುತ್ತಿದೆ. ಎಂಐ TV 4 ಆಂಡ್ರಾಯ್ಡ್ ಟಿವಿಯಾಗಿದ್ದು, 49mm, 55mm ಮತ್ತು 65mm ಮೂರು ಮಾದರಿಯಲ್ಲಿ ಭಾರತದಲ್ಲಿ ಬಿಡುಗಡೆಯಾಗುತ್ತಿದೆ ಎನ್ನಲಾಗಿದೆ. ಈಗಾಗಲೇ ಚೀನಾ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್ ಟಿವಿ ಭಾರಿ ಸದ್ದು ಮಾಡಿದೆ.

Best Mobiles in India

English summary
Xiaomi Redmi Note 5, the anticipated successor to the popular Redmi Note 4, is expected to be launched in the country on Wednesday at an event in New Delhi. to know more to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+