Subscribe to Gizbot

ಶಾಕಿಂಗ್ ನ್ಯೂಸ್!!..ವಿಶ್ವಕ್ಕೆ ತಿಳಿಯದಂತೆ ಭಾರತದಲ್ಲಿಯೇ ತಯಾರಾಗಿದೆ 'ರೆಡ್ ಮಿ ನೋಟ್ 5'!!

Written By:

ಭಾರತದಲ್ಲಿ ಮೊದಲು ಬಿಡುಗಡೆಯಾಗಿ ವಿಶ್ವದಲ್ಲಿಯೇ ಅಚ್ಚರಿಗೆ ದೂಡಿದ ಶಿಯೋಮಿ ರೆಡ್ ಮಿ ನೋಟ್ 5, ನೋಟ್ 5 ಪ್ರೊ ಸ್ಮಾರ್ಟ್‌ಫೋನ್‌ಗಳ ಉತ್ಪಾದನೆಯನ್ನು ಸಂಪೂರ್ಣವಾಗಿ ಭಾರತದಲ್ಲೇ ಮಾಡಲಾಗಿದೆ ಎಂದು ಶಿಯೋಮಿ ಸಂಸ್ಥೆ ತಿಳಿಸಿದೆ.! ಎರಡೂ ಸ್ಮಾರ್ಟ್‌ಪೋನ್‌ಗಳನ್ನು ಶೇ. 100ರಷ್ಟು ಭಾರತದಲ್ಲಿಯೇ ತಯಾರಿಸಲಾಗುತ್ತದೆ.!!

ಹೌದು, ಮೊಬೈಲ್ ಪ್ರಪಂಚಕ್ಕೆ ಸ್ವಲ್ಪವೂ ಗುಟ್ಟುಬಿಡದಹಾಗೆ ಆಂಧ್ರಪ್ರದೇಶದ ಶ್ರೀ ಸಿಟಿಯಲ್ಲಿನ ಎರಡು ಯುನಿಟ್ ಗಲ್ಲಿ ಶಿಯೋಮಿ ರೆಡ್ ಮಿ ನೋಟ್ 5, ನೋಟ್ 5 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸಲಾಗಿದೆ. ನೆನ್ನೆ ಈ ಎರಡೂ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆಮಾಡಿದ ನಂತರ ಶಿಯೋಮಿ ಕಂಪೆನಿ ಮಾಹಿತಿಯನ್ನು ಹೊರಹಾಕಿದೆ.!!

ವಿಶ್ವಕ್ಕೆ ತಿಳಿಯದಂತೆ ಭಾರತದಲ್ಲಿಯೇ ತಯಾರಾಗಿದೆ 'ರೆಡ್ ಮಿ ನೋಟ್ 5'!!

ಈ ಸುದ್ದಿ ಇದೀಗ ಮೊಬೈಲ್ ಮಾರುಕಟ್ಟೆಗೆ ಶಾಕ್ ನೀಡಿದ್ದು, ಹಾಗಾದರೆ, ಶಿಯೋಮಿ ಕಂಪೆನಿ ಭಾರತದಲ್ಲಿಯೇ ರೆಡ್ ಮಿ ನೋಟ್ 5 ತಯಾರಿಸಲು ಕಾರಣವೇನು? ವಿಶ್ವ ಮಾರುಕಟ್ಟೆ ಬಿಟ್ಟು ಭಾರತದಲ್ಲಿ ಮೊದಲು ರೆಡ್‌ಮಿ ನೋಟ್ 5"ಲಾಂಚ್ ಮಾಡಿದ್ದೇಕೆ? ಎಂಬ ಕುತೋಹಲ ಅಂಶಗಳನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಇಲ್ಲಿಯವರೆಗೂ ಗುಟ್ಟಾಗಿಯೇ ಇತು!!

ಇಲ್ಲಿಯವರೆಗೂ ಗುಟ್ಟಾಗಿಯೇ ಇತು!!

ಯಾವುದೇ ಮೊಬೈಲ್ ಕಂಪೆನಿಯ ಗುಟ್ಟು ಹೆಚ್ಚು ದಿನ ಉಳಿಯುವುದಿಲ್ಲ.! ಆದರೆ, ಶಿಯೋಮಿ ರೆಡ್ ಮಿ ನೋಟ್ 5 ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತದೆ ಎನ್ನುವ ಗುಟ್ಟು ಮಾತ್ರ ಹೊರಬಿದ್ದಿದ್ದರೆ, ಶಿಯೋಮಿ ರೆಡ್ ಮಿ ನೋಟ್ 5 ಸ್ಮಾರ್ಟ್‌ಫೋನ್ ಭಾರತದಲ್ಲಿಯೇ ತಯಾರಾಗುತ್ತಿದೆ ಎಂಬುದು ಇಲ್ಲಿಯವರೆಗೂ ಗುಟ್ಟಾಗಿಯೇ ಇತು!!

ಭಾರತಕ್ಕೆ ತಲೆಬಾಗಿದೆ ಶಿಯೋಮಿ!!

ಭಾರತಕ್ಕೆ ತಲೆಬಾಗಿದೆ ಶಿಯೋಮಿ!!

ವಿಶ್ವದ ಎಲ್ಲಾ ಮೊಬೈಲ್ ಕಂಪೆನಿಗಳು ಮೊದಲು ಚೀನಾ ಅಥವಾ ಅಮೆರಿಕಾದಲ್ಲಿ ಮೊಬೈಲ್ ಲಾಂಚ್ ಮಾಡಿ ಗಮನ ಸೆಳೆಯುತ್ತಿದ್ದವು. ಅಲ್ಲಿ ಲಾಂಚ್ ಆದ ಎಷ್ಟೋ ದಿನಗಳ ನಂತರ ಆ ಫೋನ್‌ಗಳು ಭಾರತಕ್ಕೆ ಬರುತ್ತಿದ್ದವು.! ಆದರೆ, ಶಿಯೋಮಿ ಭಾರತೀಯರಿಗೆ ತಲೆಬಾಗಿ ಮೊದಲು ಭಾರತದಲ್ಲಿ ಫೋನ್ ರಿಲೀಸ್ ಮಾಡಿದೆ.!!

ರೆಡ್‌ಮಿ ನೋಟ್ 4 ಯಶಸ್ಸು!!

ರೆಡ್‌ಮಿ ನೋಟ್ 4 ಯಶಸ್ಸು!!

ಇಡೀ ವಿಶ್ವಕ್ಕೆ ಹೋಲಿಸಿದರೆ ರೆಡ್ ಮಿ ನೋಟ್ 4 ಸ್ಮಾರ್ಟ್‌ಫೋನ್ ಮಾರಾಟ ಭಾರತದಲ್ಲಿಯೇ ಹೆಚ್ಚಾಗಿದೆ. ಭಾರತದಲ್ಲಿಯೇ ಅತಿ ಹೆಚ್ಚು ಸೇಲ್ ಆದ ಸ್ಮಾರ್ಟ್‌ಪೋನ್ ಎಂಬ ಹೆಗ್ಗಳಿಕೆ ಹೊಂದಿರುವ ಶಿಯೋಮಿ ರೆಡ್ ಮಿ ನೋಟ್ 4 ಯಶಸ್ಸನ್ನು ಪಡೆಯಲು ಶಿಯೋಮಿ ಕಂಪೆನಿ ಮುಂದಾಗಿದೆ.!!

ನಂ.1 ಮೊಬೈಲ್ ಬ್ರ್ಯಾಂಡ್!!

ನಂ.1 ಮೊಬೈಲ್ ಬ್ರ್ಯಾಂಡ್!!

ಭಾರತದ ನಂಬರ್ ಒನ್ ಮೊಬೈಲ್ ಬ್ರ್ಯಾಂಡ್ ಎಂಬ ಪಟ್ಟವೇರಿರುವ ಶಿಯೋಮಿ ಭಾರತದ ಮಾರುಕಟ್ಟೆಯನ್ನೇ ಕೇಂದ್ರೀಕರಿಸಿದ್ದು, ಚೀನಾ ಮತ್ತು ವಿಶ್ವ ಮಾರುಕಟ್ಟೆಗಿಂತಲೂ ಹೆಚ್ಚು ಮಾರುಕಟ್ಟೆಯನ್ನು ಭಾರತದಲ್ಲಿ ಹೊಂದಿದೆ. ಹಾಗಾಗಿ, ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಮೊದಲು ಪರಿಚಯಿಸಿದೆ.!

ಶಿಯೋಮಿ ಆನ್‌ಲೈನ್ ಸೇಲ್!!

ಶಿಯೋಮಿ ಆನ್‌ಲೈನ್ ಸೇಲ್!!

ಇತರೆ ಎಲ್ಲಾ ಮೊಬೈಲ್ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳಿಗಿಂತ ಹೆಚ್ಚು ಶಿಯೋಮಿ ಸ್ಮಾರ್ಟ್‌ಫೋನ್‌ಗಳು ಆನ್‌ಲೈನಿನಲ್ಲಿ ಮಾರಾಟವಾಗುತ್ತಿವೆ. ಆನ್‌ಲೈನಿನಲ್ಲಿ ಮಾರಾಟವಾಗುವ 10 ಫೋನ್‌ಗಳಲ್ಲಿ 6 ಶಿಯೋಮಿ ಫೋನುಗಳೇ ಇರುವುದರಿಂದ ಶಿಯೋಮಿ ಕಂಪೆನಿ ಭಾರತೀಯರ ಹಿಂದೆ ಬಿದ್ದಿದೆ.!!

'ಮೇಕ್ ಇನ್ ಇಂಡಿಯಾ'

'ಮೇಕ್ ಇನ್ ಇಂಡಿಯಾ'

ದೇಶದಲ್ಲಿ ಇನ್ನು ಹೆಚ್ಚಿನ ಉತ್ಪಾದನೆ ಯೂನಿಟ್‌ಗಳನ್ನು ಪ್ರಾರಂಭಿಸುವ ಮೂಲಕ 'ಮೇಕ್ ಇನ್ ಇಂಡಿಯಾ' ಯೋಜನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಿದ್ದೇವೆ ಎಂದು ಶಿಯೋಮಿ ಇಂಡಿಯಾದ ಮುಖ್ಯಸ್ಥ ಮನುಕುಮಾರ್ ಜೈನ್ ತಿಳಿಸಿದ್ದಾರೆ.! ಹಾಗಾಗಿ, ಭವಿಷ್ಯದಲ್ಲಿ ಶಿಯೋಮಿ ಭಾರತವನ್ನು ಮಾತ್ರ ಕೇಂದ್ರೀಕರಿಸಿದೆ.!!

ಓದಿರಿ:ಶಿಯೋಮಿ 'ರೆಡ್‌ ಮಿ ನೋಟ್ 5' ಮಾರಾಟದ ದಿನಾಂಕ ಫಿಕ್ಸ್!!..ಖರೀದಿಗೆ ಬಂಪರ್ ಆಫರ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Xiaomi Redmi Note 5 and Note 5 Pro -- at its two manufacturing units in Sri City, Andhra Pradesh, Xiaomi India said on Wednesday. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot