ಇಂದು ರೆಡ್‌ಮಿ ನೋಟ್ 5 ಪ್ರೊ ಮತ್ತು ಮಿ ಟಿವಿಗಳ ಫ್ಲಾಶ್‌ಸೇಲ್!..ಖರೀದಿಸಲು ಬಂಪರ್ ಆಫರ್!!
ಭಾರತೀಯರ ಪ್ರಿಮಿಯಂ ಸ್ಮಾರ್ಟ್‌ಫೋನ್ ಎಂದೇ ಹೆಸರಾಗಿರುವ ರೆಡ್ಮಿ ನೋಟ್ 5 ಪ್ರೋ ಮತ್ತು ಶಿಯೋಮಿ ಮಿ ಟಿವಿ 4 ಹಾಗೂ ಮಿ ಟಿವಿ 4ಎ ಟಿವಿಗಳನ್ನು ಇಂದು 12 ಗಂಟೆಗೆ ಫ್ಲಾಶ್ ಸೇಲ್ ಮಾರಾಟಕ್ಕೆ ಇಡಲಾಗಿದೆ. ಫ್ಲಿಪ್‌ಕಾರ್ಟ್ ಮತ್ತು ಮಿ.ಕಾಮ್‌ನಲ್ಲಿ ಇಂದು 12 ಗಂಟೆಗೆ ನಡೆಯಲಿರುವ ಫ್ಲಾಶ್‌ಸೇಲ್‌ನಲ್ಲಿ ಸೀಮಿತ ಪ್ರಮಾಣದಲ್ಲಿ ಎರಡೂ ಸಾಧನಗಳನ್ನು ಖರೀದಿಸಬಹುದಾಗಿದೆ.
ರೆಡ್ಮಿ ನೋಟ್ 5 ಪ್ರೋ ಸ್ಮಾರ್ಟ್‌ಪೋನ್ ಖರೀದಿಗೆ ಕೇವಲ 499 ರೂ.ಗಳಿಂದ ಇಎಂಐ ಪ್ರಾರಂಭವಾಗಿದ್ದು, ಶಿಯೋಮಿಯ ಎಲ್ಲಾ ಟಿವಿಗಳ ಮೇಲೆ ಇಎಂಐ ಖರೀದಿಗೆ ಫ್ಲಿಪ್‌ಕಾರ್ಟ್ ಅವಕಾಶ ನೀಡಿದೆ. ಜೊತೆಗೆ ಭಾರತದಲ್ಲಿ ವೇಗದ ಡೇಟಾ ಸೇವೆ ಒದಗಿಸುತ್ತಿರುವ ಆಕ್ಟ್ ಪೈಬರ್ ನೆಟ್ ಕಂಪೆನಿಯಿಂದ ಮೂರು ತಿಂಗಳ ಅವಧಿಗೆ ಉಚಿತ ಚಂದಾದಾರಿಕೆಯನ್ನು ನೀಡಲಾಗಿದೆ.

ಇನ್ನು ಮಿ.ಕಾಮ್‌ನಲ್ಲಿ 'ರೆಡ್ ಮಿ 5ಎ' ಸ್ಮಾರ್ಟ್‌ಫೋನ್ ಅನ್ನು ಪ್ರೀ ಬುಕ್ ಮಾಡಬಹುದಾಗಿದ್ದು,'ರೆಡ್ ಮಿ 5ಎ' ಸ್ಮಾರ್ಟ್‌ಫೋನ್ ಪ್ರೀ ಬುಕ್ ಮಾಡಿದರೆ, 5 ದಿನಗಳಲ್ಲಿ ಫೋನ್ ಅನ್ನು ಗ್ರಾಹಕರಿಗೆ ತಲುಪಿಸಲಾಗುತ್ತದೆ. ಹಾಗಾದರೆ, ರೆಡ್ಮಿ ನೋಟ್ 5 ಪ್ರೋ ಮತ್ತು ಶಿಯೋಮಿ ಮಿ ಟಿವಿ 4 ಟಿವಿಗಳ ಫೀಚರ್ಸ್ ಯಾವುವು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

''ರೆಡ್‌ಮಿ ನೋಟ್ 5 ಪ್ರೊ'' ರಿವ್ಯೂವ್!
ಕಡಿಮೆ ಬೆಲೆಗೆ ಅತ್ಯಂತ ಹೆಚ್ಚು ಫೀಚರ್ಸ್ ಹೊಂದಿರುವ ರೆಡ್‌ಮಿ ನೋಟ್ 5 ಪ್ರೊ ಈಗಾಗಲೇ ಗ್ರಾಹಕರ ಮನಸ್ಸನ್ನು ಗೆದ್ದಿದೆ. ಹಾಗಾದರೆ, ರೆಡ್ಮಿ ನೋಟ್ 5 ಪ್ರೊ ಸ್ಮಾರ್ಟ್‌ಫೋನ್ ಹೇಗಿದೆ? ಖರೀದಸಲು ಇರುವ ಕಾರಣಗಳೇನು? ಭಾರತದಲ್ಲಿಯೇ ಬೆಸ್ಟ್ ಬಜೆಟ್ ಫೋನ್ ಇದಾಗಬಹುದೇ? ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!

ರೆಡ್‌ಮಿ ನೋಟ್ 5 ಪ್ರೊ ವಿನ್ಯಾಸ!
ರೆಡ್‌ಮಿ ನೋಟ್ 5 ಪ್ರೊ ಪ್ರಿಮಿಯಮ್ ಡಿಸೈನ್ ಹೊಂದಿದ್ದು, ಹಿಂಭಾಗದಲ್ಲಿ ಐಫೋನ್ X ಮಾದರಿಯಲ್ಲಿ ಕಾಣಿಸುವ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದಾಗಿದೆ. 18:9 ಅನುಪಾತದಲ್ಲಿರುವ 5.99 ಇಂಚ್ ಡಿಸ್‌ಪ್ಲೇ ಮಲ್ಟಿಮೀಡಿಯಾ ಮತ್ತು ಗೇಮಿಂಗಾಗಿ ಸ್ಮಾರ್ಟ್‌ಫೋನ್ ಹೇಳಿ ಮಾಡಿಸಿದಂತಿದೆ.! ಸ್ಕ್ರೀನ್ ದೊಡ್ಡದಾಗಿರುವ ಕಾರಣ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹಿಂಬಾಗದಲ್ಲಿ ನೀಡಲಾಗಿದೆ.!

ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 636!
ಅತ್ಯಂತ ಕಡಿಮೆ ಬೆಲೆಯಲ್ಲಿ ಕ್ವಾಡ್ ಕೋರ್ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 636 cpu ಪ್ರೋಸೆಸರ್, ಕರಿಯೋ 260 CPU ವಿಶೇಷತೆಗಳನ್ನು ಒಳಗೊಂಡಿರುವ ಮೊದಲ ಸ್ಮಾರ್ಟ್‌ಫೋನ್ ಇದಾಗಿದೆ.! ಅತ್ಯಂತ ವೇಗದ ಕಾರ್ಯಚರಣೆಯನ್ನು ಹೊಂದಿರುವ ಈ ಫೋನ್ ಒಂದೇ ಸಮಯದಲ್ಲಿ ಮಲ್ಟಿ ಟಾಸ್ಕ್ಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.!

RAM ಮತ್ತು ಮೆಮೊರಿ!
4GB ಮತ್ತು 6GB RAM ಇರುವ ಎರಡು ವೆರಿಯಂಟ್‌ಗಲ್ಲಿ ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಪೋನ್ ಬಿಡುಗಡೆಯಾಗಿದೆ. ಎರಡೂ ವೆರಿಯಂಟ್‌ಗಳ ಸ್ಮಾರ್ಟ್‌ಫೋನ್‌ಗಳಲ್ಲಿಯೂ 64GB ಆಂತರಿಕ ಮೆಮೊರಿ ಯನ್ನು ನೀಡಲಾಗಿದೆ. ಎಸ್‌ಡಿ ಕಾರ್ಡ್ ಮೂಲಕ 128GB ವರೆಗೆ ಮೆಮೊರಿ ವಿಸ್ತರಣೆ ಮಾಡಿಕೊಳ್ಳಬಹುದಾ ಆಯ್ಕೆ ಎರಡೂ ಫೋನಿನಲ್ಲಿದೆ.!

20MP ಸೆಲ್ಫಿ ಕ್ಯಾಮೆರಾ!
ಭಾರತೀಯರ ಸೆಲ್ಫಿ ಪ್ರೀತಿಯನ್ನು ನೋಡಿ ಶಿಯೋಮಿ 20MP ಸೆಲ್ಫಿ ಕ್ಯಾಮೆರಾವನ್ನು ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಪೋನಿನಲ್ಲಿ ನೀಡಿದೆ. ಕೃತಕ ಬುದ್ದಿ ಮತ್ತೆಯ ಮೂಲಕ ಕಾರ್ಯನಿರ್ವಹಿಸಲಿರುವ ಈ ಸೆಲ್ಫಿ ಕ್ಯಾಮೆರಾ ಬ್ಯೂಟಿಫೈ 4.0 ಮೂಡ್ ಆಯ್ಕೆಯನ್ನು ಸಹ ಹೊಂದಿರುವುದರಿಂದ ಅತ್ಯುತ್ತಮ ಸೆಲ್ಫಿ ಚಿತ್ರಗಳಿಗೆ ಹೇಳಿಮಾಡಿಸಿದಂತಿದೆ.!

ಬೆಸ್ಟ್ ಡ್ಯುಯಲ್ ರಿಯರ್ ಕ್ಯಾಮೆರಾ!
12MP +5MP ಹಾರಿಜಂಟಲ್ ಕ್ಯಾಮೆರಾ ಸೆಟಪ್ ಅನ್ನು ರೆಡ್‌ಮಿ ನೋಟ್ 5 ಪ್ರೊ ಫೋನಿನಲ್ಲಿ ಕಾಣಹುದಾಗಿದೆ. AI (ಕೃತಕ ಬುದ್ದಿಮತ್ತೆ) ಮತ್ತು EIS ಟೆಕ್ನಾಲಜಿ ಸಹಾಯದಿಂದ ಕಾರ್ಯನಿರ್ವಹಿಸುವ ಈ ಫೋನಿನ ಕ್ಯಾಮೆರಾಗಳಿಂದ ಅತ್ಯುತ್ತಮ ಬೊಕ್ಕೆ ಚಿತ್ರಗಳನ್ನು ಸೆರೆಹಿಡಿಯುವ ವಿಶೇಷತಗಳಿವೆ ಎಂದು ಹೇಳಬಹುದು.!

ಸ್ಮಾರ್ಟ್‌ಫೋನ್ ಮಿತಿಗಳೇನು?
ರೆಡ್‌ಮಿ ನೋಟ್ 5 ಪ್ರೊ ಒಮ್ಮೊಮ್ಮೆ ಹಳೆಯ ಪುನರಾವರ್ತಿತ ವಿನ್ಯಾಸವನ್ನೇ ಹೊಂದಿದೆ ಎನಿಸುತ್ತದೆ. ಜತೆಗೆ ಮೀಸಲಾದ ಮೈಕ್ರೊ ಕಾರ್ಡ್ ಸ್ಲಾಟ್ ಇಲ್ಲ. ಇವೆಲ್ಲವಕ್ಕಿಂತ ಮುಖ್ಯವಾಗಿ ಆಂಡ್ರಾಯ್ಡ್ ಓರಿಯೊ ಅಪ್‌ಡೇಟ್ ಇಲ್ಲದೆ ರೆಡ್‌ಮಿ ನೋಟ್ 5 ಪ್ರೊ ಮಾರುಕಟ್ಟೆಗೆ ಬಿಡುಗಡೆಯಾಗಿರುವುದು ಸ್ಮಾರ್ಟ್‌ಫೋನಿನ ಮಿತಿಯಾಗಿದೆ.! ಆದರೂ. ಬಜೆಟ್ ಫೋನ್‌ಗಳಲ್ಲಿ ಇದು ಭಾರತದ ನಂಬರ್ ಒನ್ ಫೋನ್ ಎನ್ನಬಹುದು.!

ಶಿಯೋಮಿ ಸ್ಮಾರ್ಟ್ TV: ವಿಶೇಷತೆ, ಬೆಲೆ ಕೇಳಿದರೆ ಆಡ್ವಾನ್ಸ್ ಬುಕ್ಕಿಂಗ್ ಖಂಡಿತ..!
ಸ್ಮಾರ್ಟ್ ಫೋನ್ ತಯಾರಿಕೆಯಲ್ಲಿ ಖ್ಯಾತಿಯನ್ನು ಗಳಿಸಿಕೊಂಡಿರುವ ಶಿಯೋಮಿ ಕಂಪನಿಯೂ ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಿಕೆಯ ಕಡೆಗೂ ಹೆಚ್ಚನ ಗಮನವನ್ನು ಹರಿಸಿದ್ದು, ಇದೇ ಮಾದರಿಯಲ್ಲಿ ಈ ಬಾರಿ ಸ್ಮಾರ್ಟ್ ಟಿವಿಯೊಂದನ್ನು ಲಾಂಚ್ ಮಾಡಿದೆ. ಅದುವೇ ಚೀನಾದಲ್ಲಿ.
ಈ ಸ್ಮಾರ್ಟ್‌ಟಿವಿಯನ್ನು ಶೀಘ್ರವೇ ಭಾರತೀಯ ಮಾರುಕಟ್ಟೆಗೂ ಪರಿಚಯಿಸಲಿದ್ದು, ಮಾರುಕಟ್ಟೆಗೆ ಬಂದಲ್ಲಿ ಈ ಟಿವಿ ಬೇರೆಲ್ಲಾ ಕಂಪನಿಗಳ ಟಿವಿಗಳನ್ನು ಹಿಂದಕ್ಕೆ ಹಾಕಲಿದೆ ಎನ್ನಲಾಗಿದೆ. ಸ್ಮಾರ್ಟ್‌ಫೋನ್ ಮಾದರಿಯಲ್ಲಿ ಈ ಟಿವಿ ಸಹ ಕೆಡಿಮೆ ಬೆಲೆಗೆ ದೊರೆಯಲಿದೆ ಎನ್ನಲಾಗಿದೆ.

Mi TV 4C ಸರಣಿ ಟಿವಿ:
ಈ ಹಿಂದೆ ಶಿಯೋಮಿ ಬಿಡುಗಡೆ ಮಾಡಿದ್ದ Mi TV 4A ಸರಣಿಯ ಮುಂದುವರೆದ ಭಾಗ ಇದಾಗಿದೆ ಎನ್ನಲಾಗಿದೆ, ಒಟ್ಟು ಎರಡು ಆವೃತ್ತಿಯಲ್ಲಿ Mi TV 4C ಲಾಂಚ್ ಆಗಿದೆ ಎನ್ನಲಾಗಿದೆ.

43 ಇಂಚಿನ Mi TV 4C :
43 ಇಂಚಿನ Mi TV 4Cಯಲ್ಲಿ 1GB RAM ನೀಡಲಾಗಿದ್ದು, ಇದರೊಂದಿಗೆ 8GB ಇಂಟರನಲ್ ಮೆಮೊರಿಯನ್ನು ಸಹ ಕಾಣಬಹುದಾಗಿದೆ. ಇದರ ಬೆಲೆ ರೂ. 18,000 ಆಗಲಿದೆ.

55 ಇಂಚಿನ Mi TV 4C :
55 ಇಂಚಿನ Mi TV 4C ಯಲ್ಲಿ 2GB RAM ಕಾಣಬಹುದಾಗಿದ್ದು, ಇದರೊಂದಿಗೆ 8GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಇದರ ಬೆಲೆ ರೂ.26,000ದ ಅಸುಪಾಸಿನಲ್ಲಿರಲಿದೆ.

ವಿಭಿನ್ನ ಸ್ಕ್ರಿನ್ ರೆಸಲ್ಯೂಸನ್:
43 ಇಂಚಿನ Mi TV 4C ಟಿವಿಯೂ FHD ಗುಣಮಟ್ಟ ಸ್ಕ್ರಿನ್ ರೆಸಲ್ಯೂಸನ್ ಒಳಗೊಂಡಿದೆ. ಇದೆ ಮಾದರಿಯಲ್ಲಿ 55 ಇಂಚಿನ Mi TV 4C ಟಿವಿಯೂ 4K HDR ಗುಣಮಟ್ಟದ ಸ್ಕ್ರಿನ್ ರೆಸಲ್ಯೂಸನ್ ನಿಂದ ಕೂಡಿದೆ.

ಕ್ವಾಡ್ ಕೋರ್ ಪ್ರೋಸೆಸರ್:
ಈ ಟಿವಿಗಳಲ್ಲಿ ಕ್ವಾಡ್ ಕೋರ್ ಅಮೆಲೊಂಜಿಕ್ T962 64 ಬಿಟ್ ಪ್ರೋಸೆಸರ್ ಅನ್ನು ನಿಡಲಾಗಿದೆ. WiFi ಸಫೋರ್ಟ್ ಮಾಡಿದ್ದು, ಬ್ಲೂಟೂಟ್ 4.2 ಇದರಲ್ಲಿದೆ. ಜೊತೆಗೆ ಡಾಲ್ಬಿ ಆಡಿಯೋ ಸಪೋರ್ಟ್ ಮಾಡಲಿದೆ.

ಬ್ಲೂಟೂತ್ ರಿಮೋಟ್ ಕಂಟ್ರೋಲ್:
ಈ ಟಿವಿಯೊಂದಿಗೆ ಬ್ಲೂಟೂತ್ ರಿಮೋಟ್ ಕಂಟ್ರೋಲ್ ದೊರೆಯಲಿದ್ದು, ಆದರೆ ಇದನ್ನು ರೂ.1000 ನೀಡಿ ಖರೀದಿಸ ಬೇಕಾಗಿದೆ. ಇದು ಬ್ಲೂಟೂತ್ ನಿಂದ ಕಾರ್ಯನಿರ್ವಹಿಸಲಿದ್ದು, ಅನೇಕ ವಿಶೇಷತೆಗಳನ್ನು ಒಳಗೊಂಡಿದೆ.

ವಾಯ್ಸ್ ಕಂಟ್ರೋಲ್:
ಈ ರಿಫೋಟ್ ಕಂಟ್ರೋಲ್ ನೊಂದಿಗೆ ಮಿ ವಾಯ್ಸ್ ಕಂಟ್ರೋಲ್ ಆಯ್ಕೆಯನ್ನು ನೀಡುತ್ತಿದೆ. ಅಲ್ಲದೇ ಇನ್ಫಾರೆಡ್ ಆಯ್ಕೆಯೂ ಇದರಲ್ಲಿದೆ. ಜೊತೆಗೆ ಮಿ ಟಾರ್ಚ್ ಸಹ ಈ ರಿಮೋಟ್ ನಲ್ಲಿ ಕಾಣಬಹುದಾಗಿದೆ.


Click it and Unblock the Notifications








