Subscribe to Gizbot

ಇಂದು ಮಧ್ಯಾಹ್ನ 2 ಗಂಟೆಗೆ ''ರೆಡ್‌ ಮಿ ನೋಟ್ 5 '' ಸೇಲ್!!

Written By:

ಭಾರತೀಯ ಮೊಬೈಲ್ ಮಾರುಕಟ್ಟೆಯನ್ನು ಬೆಚ್ಚಿಬೀಳಿಸಿರುವ ಶಿಯೋಮಿ ರೆಡ್‌ ಮಿ ನೋಟ್ 5 ಮತ್ತು ಶಿಯೋಮಿ ರೆಡ್ ನೋಟ್ 5 ಪ್ರೊ ಸ್ಮಾರ್ಟ್‌ಫೋನ್‌ಗಳ ಮೊದಲ ಮಾರಾಟ ಇಂದಿನಿಂದ ಶುರುವಾಗಿದೆ.!! ಪ್ರೇಮಿಗಳ ದಿನದಂದು ಬಿಡುಗಡೆಯಾಗಿದ್ದ ಸ್ಮಾರ್ಟ್‌ಫೋನ್‌ಗಳನ್ನು ಇಂದಿನ ಶಿಯೋಮಿ ಫಸ್ಟ್ ಸೇಲ್‌ನಲ್ಲಿ ಶಿಯೋಮಿ ಮಾರಾಟಕ್ಕಿಟ್ಟಿದೆ.!!

Xiaomi Redmi Note 5 Pro ಮಾರಾಟದ ದಿನಾಂಕ ಫಿಕ್ಸ್!! ಫುಲ್ ಡೀಟೆಲ್ಸ್!!

ವಿಶ್ವದಲ್ಲಿಯೇ ಮೊಟ್ಟಮೊದಲ ಬಾರಿ ಭಾರತದ ಮೊಬೈಲ್ ಮಾರುಕಟ್ಟೆಗೆ ಲಾಂಚ್ ಆದ ಮೊಬೈಲ್‌ಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಶಿಯೋಮಿ ರೆಡ್‌ ಮಿ ನೋಟ್ 5 ಮತ್ತು ರೆಡ್ ನೋಟ್ 5 ಪ್ರೊ ಸ್ಮಾರ್ಟ್‌ಫೋನ್‌ಗಳು ಎಲ್ಲರ ಕಣ್ಣುಕುಕ್ಕುತ್ತಿದ್ದು, ಇದರ ಜತೆ ಜಿಯೋ ಬಂಪರ್ ಆಫರ್ ಕೂಡ ಗ್ರಾಹಕರನ್ನು ಸೆಳೆಯುತ್ತಿದೆ.!!

ಇಂದು ಮಧ್ಯಾಹ್ನ 2 ಗಂಟೆಗೆ ''ರೆಡ್‌ ಮಿ ನೋಟ್ 5 '' ಸೇಲ್!!

ಹಾಗಾದರೆ, ಶಿಯೋಮಿ ರೆಡ್‌ ಮಿ ನೋಟ್ 5 ಮತ್ತು ಶಿಯೋಮಿ ರೆಡ್ ನೋಟ್ 5 ಪ್ರೊ ಸ್ಮಾರ್ಟ್‌ಫೋನ್‌ಗಳ ಬೆಲೆ ಎಷ್ಟು? ಎಷ್ಟು ಗಂಟೆಗೆ ಮಾರಾಟ ಶುರು? ಖರೀದಿಸಲು ಏನೆಲ್ಲಾ ಆಫರ್ ಲಭ್ಯ? ಎಲೆಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶಿಯೋಮಿ ರೆಡ್‌ ಮಿ ನೋಟ್ 5!!

ಶಿಯೋಮಿ ರೆಡ್‌ ಮಿ ನೋಟ್ 5!!

5.99 ಇಂಚ್ ಫುಲ್‌ ಹೆಚ್‌ಡಿ ಡಿಸ್‌ಪ್ಲೇ, ಸ್ನ್ಯಾಪ್‌ಡ್ರಾಗನ್ 625 ಪ್ರೊಸೆಸರ್ , 4000mAh ಬ್ಯಾಟರಿ, 3GB RAM ಹಾಗೂ 12 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾದಂತಹ ಫೀಚರ್ಸ್ ಹೊಂದಿರುವ ಶಿಯೋಮಿ ರೆಡ್‌ ಮಿ ನೋಟ್ 5 ಸ್ಮಾರ್ಟ್‌ಫೋನ್ ಬೆಲೆ ಕೇವಲ 9,999 ರೂಗೆ. ಬಿಡುಗಡೆಯಾಗಿದೆ. 4GB/64GB ವೆರಿಯಂಟ್ ಫೋನ್ ಬೆಲೆ ಕೇವಲ 11,999 ರೂ.ಗಳಾಗಿವೆ!!

ಶಿಯೋಮಿ ರೆಡ್ ನೋಟ್ 5 ಪ್ರೊ!!

ಶಿಯೋಮಿ ರೆಡ್ ನೋಟ್ 5 ಪ್ರೊ!!

5.99 ಇಂಚ್ ಫುಲ್‌ ಹೆಚ್‌ಡಿ ಡಿಸ್‌ಪ್ಲೇ, ಸ್ನಾಪ್‌ಡ್ರಾಗನ್ 636 ಪ್ರೋಸೆಸರ್, 6GB RAM, ಡ್ಯುಯಲ್ ಕ್ಯಾಮೆರಾ, ಫೇಸ್‌ಅನ್ ಲಾಕ್ ನಂತಹ ಹೈ ಎಂಡ್ ಫೀಚರ್ಸ್ ಹೊಂದಿರುವ ಶಿಯೋಮಿ ರೆಡ್‌ ಮಿ ನೋಟ್ 5 ಪ್ರೊ ಸ್ಮಾರ್ಟ್‌ಫೋನ್ ಕೇವಲ 16,999ರೂ.ಗಳಿಗೆ ಬಿಡುಗಡೆಯಾಗಿದೆ. 4GB/64GB ಆವೃತ್ತಿ ಫೋನ್ 13,999 ರೂಪಾಯಿಗಳಿಗೆ ಲಭ್ಯವಿದೆ.!!

ಖರೀದಿಸಲು ಏನೆಲ್ಲಾ ಆಫರ್?

ಖರೀದಿಸಲು ಏನೆಲ್ಲಾ ಆಫರ್?

ಶಿಯೋಮಿ ತನ್ನ ಶಿಯೋಮಿ ರೆಡ್‌ ಮಿ ನೋಟ್ 5, ಶಿಯೋಮಿ ರೆಡ್ ನೋಟ್ 5 ಪ್ರೊ ಸ್ಮಾರ್ಟ್‌ಫೋನ್‌ಗಳ ಮೇಲೆ ಜಿಯೋ ಬಿಗ್ ಆಫರ್ ಅನ್ನು ಘೋಷಿಸಿದೆ. 2200 ರೂಪಾಯಿಗಳವರೆಗೂ ಕ್ಯಾಶ್‌ಬ್ಯಾಕ್ ಹಾಗೂ 100% ಅಡಿಷನಲ್ 4G ಜಿಯೋ ಡೇಟಾಪಡೆಯಬಹುದಾದ ಈ ಆಫರ್ ಎರಡೂ ಸ್ಮಾರ್ಟ್‌ಫೋನ್‌ಗಳಿಗೆ ಲಭ್ಯವಿದೆ.!!

ಮಾರಾಟ ಎಲ್ಲೆಲ್ಲಿ?

ಮಾರಾಟ ಎಲ್ಲೆಲ್ಲಿ?

ಫ್ಲಿಪ್‌ಕಾರ್ಟ್.ಕಾಮ್ ಹಾಗೂ ಮೈ.ಕಾಮ್‌ಗಳಲ್ಲಿ ಶಿಯೋಮಿ ರೆಡ್‌ ಮಿ ನೋಟ್ 5, ಶಿಯೋಮಿ ರೆಡ್ ನೋಟ್ 5 ಪ್ರೊ ಸ್ಮಾರ್ಟ್‌ಫೋನ್‌ಗಳೂ ಮಾರಾಟಕ್ಕಿವೆ. ಆಫ್ ಲೈನ್ ಮಿ ಹೋಮ್ ಮಳಿಗೆಗಳಲ್ಲಿಯೂ ಬಹುಬೇಗ ಮಾರಾಟವನ್ನು ತರಲಾಗುವುದು ಎಂದು ಶಿಯೋಮಿ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.!!

ಎಷ್ಟು ಗಂಟೆಗೆ ಸೇಲ್!!

ಎಷ್ಟು ಗಂಟೆಗೆ ಸೇಲ್!!

ಇಂದು ಮಧ್ಯಾಹ್ನ 2 ಗಂಟೆಗೆ ಫ್ಲಿಪ್‌ಕಾರ್ಟ್.ಕಾಮ್ ಹಾಗೂ ಮೈ.ಕಾಮ್‌ಗಳಲ್ಲಿ ಶಿಯೋಮಿ ರೆಡ್‌ ಮಿ ನೋಟ್ 5, ಶಿಯೋಮಿ ರೆಡ್ ನೋಟ್ 5 ಪ್ರೊ ಸ್ಮಾರ್ಟ್‌ಫೋನ್‌ಗಳ ಮಾರಾಟ ಶುರುವಾಗಲಿದೆ. ರೆಡ್‌ ಮಿ ನೋಟ್ 5 ಸ್ಮಾರ್ಟ್‌ಫೋನ್‌ ಮೂಲಕ ಈ ಬಾರಿಯೂ ದಾಖಲೆ ಸೃಷ್ಟಿಸುವ ತವಕದಲ್ಲಿ ಶಿಯೋಮಿ ಕಂಪೆನಿ ಇದೆ.!!

ಓದಿರಿ:ನಿಮಗೆ ದೃಷ್ಟಿಭ್ರಮೆ ಉಂಟುಮಾಡುವ ಅತ್ಯದ್ಬುತ 10 ಚಿತ್ರಗಳಿವು!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Redmi Note 5 and Redmi Note 5 Pro are all set to go on sale in India for the first time. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot