ರೆಡ್‌ಮಿ ನೋಟ್ 7 ಪ್ರೊ ಬಳಕೆದಾರರು ಫೋನ್ ಅಪ್‌ಡೇಟ್ ಮಾಡಿ ನೋಡಿ!

|

ಭಾರತದಲ್ಲಿ ಭರ್ಜರಿ ಮಾರಾಟ ಕಂಡಿರುವ ಶಿಯೋಮಿಯ ಮಿಡ್-ರೇಂಜ್ ಸ್ಮಾರ್ಟ್‌ಫೋನ್ ರೆಡ್‌ಮಿ ನೋಟ್ 7 ಪ್ರೊ ಬಳಕೆದಾರರಿಗೆ ಇದು ಸಿಹಿಸುದ್ದಿ. ಏಕೆಂದರೆ, ಶಿಯೋಮಿ ರೆಡ್‌ಮಿ ನೋಟ್ 7 ಪ್ರೊ ಬಳಕೆದಾರರು ಇದೀಗ MIUI 11 ನವೀಕರಣವನ್ನು ಸ್ವೀಕರಿಸಲು ಪ್ರಾರಂಭಿಸಿದ್ದಾರೆ. MIUI 11 ನವೀಕರಣವು ಇನ್ನೂ ಎಲ್ಲರಿಗೂ ಅಧಿಕೃತವಾಗಿ ದೊರೆತಿಲ್ಲವಾದರೂ, ಕೆಲವು ಬಳಕೆದಾರರು MIUI 11 ಅಪ್‌ಡೇಟ್ ಸ್ವೀಕರಿಸುವ ಸ್ಕ್ರೀನ್‌ಶಾಟ್‌ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಹಾಗಾಗಿ, ನೀವು ಕೂಡ ನಿಮ್ಮ ಫೋನನ್ನು ಒಮ್ಮೆ ಅಪ್‌ಡೇಟ್ ಮಾಡಿ ನೋಡಿ.!

MIUI 11 ಅಪ್‌ಡೇಟ್‌

ಹೌದು, MIUI 11 ಅಪ್‌ಡೇಟ್‌ನ್ನು ರೆಡ್‌ಮಿ ನೋಟ್ 7 ಪ್ರೊಗೆ ತರಲಾಗಿದ್ದು, ಇದು ಇಂಟರ್ಫೇಸ್ ಬದಲಾವಣೆಗಳ ಜೊತೆಗೆ, ಅಕ್ಟೋಬರ್ 2019ರ ಗೂಗಲ್‌ನ ಭದ್ರತಾ ಪ್ಯಾಚ್‌ನೊಂದಿಗೆ ಬಂದಿದೆ. ಇವುಗಳಲ್ಲಿ ವಿನ್ಯಾಸದ ಮಾದರಿಗಳು, ಡೈನಾಮಿಕ್ ಸೌಂಡ್ ಮತ್ತು ಫಾಂಟ್, ಹೊಸ ಫೈಲ್ ಮ್ಯಾನೇಜರ್, ಫ್ಲೋಟಿಂಗ್ ಕ್ಯಾಲ್ಕುಲೇಟರ್, ಲಾಕ್ ಪರದೆಯಲ್ಲಿ ಹೊಸ ಅಧಿಸೂಚನೆ, ವಾಲ್‌ಪೇಪರ್ ಮತ್ತು ಅಂತಹ ಹೆಚ್ಚಿನ ಇಂಟರ್ಫೇಸ್ ಟ್ವೀಕ್‌ಗಳು ಸೇರಿವೆ. ಸಿಸ್ಟಮ್-ವೈಡ್ ಡಾರ್ಕ್ ಮೋಡ್ ಅನ್ನು ಸಹ ಹೆಚ್ಚು ಪರಿಷ್ಕೃತವಾಗಿ ಕಾಣುವಂತೆ ಸುಧಾರಿಸಲಾಗಿದೆ.

ಆಂಡ್ರಾಯ್ಡ್ 9 ಆಧಾರಿತ

ಹೊಸ MIUI 11 ಅಪ್‌ಡೇಟ್‌ ಗೂಗಲ್‌ನ ಕಾರ್ಯಾಚರಣ ವ್ಯವಸ್ಥೆ ಆಂಡ್ರಾಯ್ಡ್ 9 ಆಧಾರಿತ ಆಪರೇಟಿಂಗ್ ಸಿಸ್ಟಂ ಸಾಫ್ಟ್‌ವೇರ್ ಇದಾಗಿದೆ. ಇದು ಬಳಕೆದಾರರಿಗೆ ಹೊಸ ಅನುಭವ ನೀಡುವ ಫೋನ್ ಕಾರ್ಯಾಚರಣೆ ಸುಧಾರಣೆ ಜತೆಗೆ, ವೇಗ ವರ್ಧನೆಯನ್ನು ಕೂಡ ಹೊಸ MIUI 11 ಓಎಸ್ ಮಾಡಲಿದ್ದು, ರೆಡ್ಮಿ ಮತ್ತು ಶಿವೋಮಿ ಫೋನ್‌ಗಳಿಗೆ ದೊರೆಯಲಿದೆ.ಸಾಫ್ಟ್‌ ಐಕಾನ್, ಡಾರ್ಕ್ ಮೋಡ್, ಹೊಸ ಫಾಂಟ್, ಡಿಸ್‌ಪ್ಲೇ ಆನ್ ಫಂಕ್ಷನ್ ಸೇರಿದಂತೆ ಆಕರ್ಷಕ ಅನಿಮೇಶನ್, ಥೀಮ್‌, ವಾಲ್‌ಪೇಪರ್‌, ಸ್ಕ್ರೀನ್ ಸೇವರ್ ಫೀಚರ್ಸ್ ದೊರೆಯಲಿದೆ.

ಎಂಐಯುಐ 11 ಅಪ್‌ಡೇಟ್

ಮರುವಿನ್ಯಾಸಗೊಳಿಸಲಾದ ಎಂಐಯುಐ 11 ಅಪ್‌ಡೇಟ್ ಅನ್ನು ಹಲವು ಹಂತಗಳಲ್ಲಿ ನೀಡಲು ಶಿಯೋಮಿ ಸಮಯ ನಿಗದಿಪಡಿಸಲಾಗಿದ್ದು, ಮೊದಲ ಹಂತದ ಎಲ್ಲಾ ನವೀಕರಣಗಳನ್ನು ಅಕ್ಟೋಬರ್ 22 ಮತ್ತು 31ರ ನಡುವೆ ನೀಡಲಾಗುತ್ತಿದೆ ಎಂದು ತಿಳಿಸಿದೆ. ಈ ಪಟ್ಟಿಯಲ್ಲಿ ರೆಡ್ಮಿ 7, ರೆಡ್ಮಿ ವೈ 3, ರೆಡ್ಮಿ ನೋಟ್ 7, ರೆಡ್ಮಿ ನೋಟ್ 7 ಸೆ, ರೆಡ್ಮಿ ನೋಟ್ 7 ಪ್ರೊ, ರೆಡ್ಮಿ ಕೆ 20 ಮತ್ತು ಪೊಕೊ ಎಫ್ 1 ಫೋನ್‌ಗಳು ಅಪ್‌ಡೇಟ್ ಪಡೆದುಕೊಳ್ಳುತ್ತಿವೆ. ಈ ಸಮಯದಲ್ಲಿ ಹೆಚ್ಚಿನ ಶಿಯೋಮಿ ಫೋನ್ ಬಳಕೆದಾರರು ಅಪ್‌ಡೇಟ್ ಪಡೆಯಲಿದ್ದಾರೆ ಎಂದು ಕಂಪೆನಿ ಹೇಳಿದೆ.

 ನವೆಂಬರ್ 4

ಇನ್ನು ಎರಡನೇ ಹಂತದ ಎಂಐಯುಐ 11 ನವೀಕರಣಗಳು ನವೆಂಬರ್ 4 ಮತ್ತು 12 ರ ನಡುವೆ ಬಿಡುಗಡೆಯಾಗಲಿವೆ. ಈ ಪಟ್ಟಿಯಲ್ಲಿರು ರೆಡ್ಮಿ ಕೆ 20 ಪ್ರೊ, ರೆಡ್ಮಿ 4, ರೆಡ್ಮಿ 5/5 ಎ, ರೆಡ್ಮಿ 6/6 ಎ / 6 ಪ್ರೊ, ರೆಡ್ಮಿ ನೋಟ್ 4, ರೆಡ್ಮಿ ನೋಟ್ 5 / 5 ಪ್ರೊ, ರೆಡ್ಮಿ ವೈ 1 / ವೈ 1 ಲೈಟ್, ಮಿ ಮಿಕ್ಸ್ 2 ಮತ್ತು ಮಿ ಮ್ಯಾಕ್ಸ್ 2 ಸ್ಮಾರ್ಟ್‌ಫೋನ್‌ಗಳು ಅಪ್‌ಡೇಟ್ ಪಡೆದುಕೊಳ್ಳುತ್ತಿದ್ದರೆ, ವೆಂಬರ್ 13 ರಿಂದ 29 ರವರೆಗಿನ ಮೂರನೇ ಹಂತವುದಲ್ಲಿ ರೆಡ್‌ಮಿ 7 ಎ, ರೆಡ್‌ಮಿ 8/8 ಎ, ರೆಡ್‌ಮಿ ನೋಟ್ 6 ಪ್ರೊ ಮತ್ತು ರೆಡ್‌ಮಿ ನೋಟ್ 8 ಅಪ್‌ಡೇಟ್ ಪಡೆಯುತ್ತಿವೆ.

Best Mobiles in India

English summary
Redmi Note 7 Pro users have now started receiving the MIUI 11 update.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X