ಮಾರ್ಚ್‌23ಕ್ಕೆ ಲಾಂಚ್‌ ಆಗಲಿದೆ ರೆಡ್‌ಮಿ ನೋಟ್ 9s ಸ್ಮಾರ್ಟ್‌ಫೋನ್‌!

|

ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಸಾಕಷ್ಟು ವಿಶಾಲವಾಗಿದೆ. ಇಲ್ಲಿ ಪ್ರತಿನಿತ್ಯವು ಹೊಸತನದ ಸಾರ್ಟ್‌ಫೋನ್‌ಗಳ ಬಿಡುಗಡೆ ಆಗುತ್ತಲೇ ಇರುತ್ತೆ. ಇನ್ನು ಈಗಾಗ್ಲೆ ಹಲವಾರು ಕಂಪೆನಿಗಳು ತಮ್ಮ ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿವೆ. ಇವುಗಳಲ್ಲಿ ಶಿಯೋಮಿ ಕಂಪೆನಿ ಕೂಡ ಒಂದಾಗಿದೆ. ಅಷ್ಟೇ ಅಲ್ಲ ತನ್ನ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಂದ ಮಾರುಕಟ್ಟೆಯಲ್ಲಿ ಬ್ರ್ಯಾಂಡ್‌ ಕ್ರಿಯೆಟ್‌ ಮಾಡಿದ್ದು, ಇದೀಗ ತನ್ನ ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಸಿದ್ಧತೆ ನಡೆಸಿದೆ.

ಹೌದು

ಹೌದು, ಚೀನಾ ಮೂಲದ ಶಿಯೋಮಿ ತನ್ನ ರೆಡ್‌ಮಿ ನೋಟ್‌9s ಅನ್ನು ಇದೇ ಮಾರ್ಚ್‌ 23ರಂದು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ. ರೆಡ್‌ಮಿ ನೋಟ್‌ 9ಪ್ರೊ, 9ಪ್ರೊ ಮ್ಯಾಕ್ಸ್‌ ಬಿಡುಗಡೆ ಮಾಡಿ ಸಂಚಲನ ಮೂಡಿಸಿರುವ ರೆಡ್‌ಮಿ, ಇದೀಗ ರೆಡ್‌ಮಿ ನೋಟ್‌9s ಮೂಲಕ ತನ್ನ ಜನಪ್ರಿಯ ನೋಟ್‌9 ಸರಣಿಯನ್ನ ಮುಂದುವರೆಸುತ್ತಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಪಂಚ್‌ಹೋಲ್‌ ಡಿಸ್‌ಪ್ಲೇ ಮಾದರಿಯನ್ನ ಹೊಂದಿರಲಿದ್ದು, ಬಜೆಟ್‌ ಬೆಲೆಗೆ ಬಿಡುಗಡೆ ಆಗಲಿದೆ ಎಂದು ಹೇಳಲಾಗ್ತಿದೆ.

ಸ್ಮಾರ್ಟ್‌ಫೋನ್‌

ಇನ್ನು ಈ ಸ್ಮಾರ್ಟ್‌ಫೋನ್‌ 6.67 ಇಂಚಿಗಿಂತ ಕಡಿಮೆ ಇರುವ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಯನ್ನು ಹೊಂದಿರುವ ಸಾಧ್ಯತೆ ಇದೆ. ಇದು ಪಂಚ್‌ಹೋಲ್‌ ಡಿಸ್‌ಪ್ಲೇ ಮಾದರಿಯನ್ನ ಹೊಂದಿದ್ದು, ವಿಡಿಯೋ ವೀಕ್ಷಣೆಯಲ್ಲಿ ಉತ್ತಮ ಮಾದರಿಯನ್ನ ಹೊಂದಿರಲಿದೆ ಎಂದು ಹೇಳಲಾಗ್ತಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ ರೆಡ್‌ಮಿ ನೋಟ್‌‌ ಪ್ರೊ ಮಾದರಿಯನ್ನೆ ಹೊಂದಿರಲಿದೆ ಎನ್ನಲಾಗಿದೆ. ಹಾಗೇ ನೋಡಿದ್ರೆ ನೋಟ್‌ 9 ಪ್ರೊ 6.67ಇಂಚಿನ ಡಿಸ್‌ಪ್ಲೇಯನ್ನ ಹೊಂದಿತ್ತು. ಅಲ್ಲದೆ ವಿಡಿಯೊ ವೀಕ್ಷಣೆ ಹಾಗೂ ಗೇಮಿಂಗ್‌ನಲ್ಲಿ ಉತ್ತಮ ಅನುಭವ ನೀಡಲಿದೆ ಎಂದು ಹೇಳಲಾಗ್ತಿದೆ.

ಅಲ್ಲದೆ

ಅಲ್ಲದೆ ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 720G SOC ಪ್ರೊಸೆಸರ್‌ ವೇಗವನ್ನು ಪಡೆದುಕೊಂಡಿದ್ದು, ಅಂಡ್ರಾಯ್ಡ್‌ ಪೈ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಅಲ್ಲದೆ ಇದು 4GB ಮತ್ತು 64GB ಆಂತರಿಕ ಸಂಗ್ರಹ ಸಾಮರ್ಥ್ಯ ಹಾಗೂ 6GB RAM ಮತ್ತು 128GB ಶೇಖರಣಾ ಸಾಮರ್ಥ್ಯದ ವೇರಿಯೆಂಟ್‌ ಆಯ್ಕೆಯಲ್ಲಿ ಬರಲಿದೆ.

ನೋಟ್

ಇನ್ನು ರೆಡ್ಮಿ ನೋಟ್ 9s ಸ್ಮಾರ್ಟ್‌ಫೋನ್‌ 5,020mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದ್ದು, 18W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ ಎಂದು ಹೇಳಲಾಗ್ತಿದೆ. ಹಾಗೇ ನೋಡಿದ್ರೆ ರೆಡ್ಮಿ ನೋಟ್ 9 ಪ್ರೊ ಮತ್ತು ರೆಡ್ಮಿ ನೋಟ್ 9 ಪ್ರೊ ಮ್ಯಾಕ್ಸ್ ಎರಡು ಫೋನ್‌ಗಳು ರಿಯರ್‌ ಕ್ವಾಡ್ ಕ್ಯಾಮೆರಾ ಸೆಟ್‌ಅಪ್‌ ಹೊಂದಿವೆ. ಅದರಂತೆ ಈ ಸ್ಮಾರ್ಟ್‌ಫೋನ್‌ನ ಕೂಡ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟ್ಅಪ್‌ ಹೊಂದಿರಲಿದೆ ಎಂದು ಹೇಳಲಾಗ್ತಿದೆ.

ರೆಡ್ಮಿ

ರೆಡ್ಮಿ ನೋಟ್ 9 ಪ್ರೊ ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, 48 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 9 ಮೆಗಾಪಿಕ್ಸೆಲ್ ವೈಡ್ ಆಂಗಲ್ ಲೆನ್ಸ್, 5 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಮತ್ತು 2 ಮೆಪಿಕ್ಸೆಲ್ ಡೆಪ್ತ್‌ಸೆನ್ಸಾರ್‌ ಕ್ಯಾಮೆರಾವನ್ನ ಹೊಂದಿದೆ. ಅಲ್ಲದೆ 16 ಮೆಗಾಪಿಕ್ಸೆಲ್ ಹೊಂದಿರುವ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಹಾಗೇಯೇ ರೆಡ್ಮಿ ನೋಟ್ 9 ಪ್ರೊ ಮ್ಯಾಕ್ಸ್ ನಲ್ಲಿ ಪ್ರಾಥಮಿಕ ಕ್ಯಾಮೆರಾ 64 ಮೆಗಾಪಿಕ್ಸೆಲ್ ಮುಖ್ಯ, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ವೈಡ್-ಆಂಗಲ್ ಲೆನ್ಸ್, ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್‌ ಸೆನ್ಸಾರ್‌ ಅನ್ನು ಹೊಂದಿದೆ. ಜೊತೆಗೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿರುವ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ಮ್ಯಾಕ್ಸ್

ಇನ್ನು ರೆಡ್ಮಿ ನೋಟ್ 9 ಪ್ರೊ ಬೆಲೆ 12,999.ರೂ, ಆಗಿದ್ದರೆ, ರೆಡ್‌ಮಿ ನೋಟ್ 9 ಪ್ರೊ ಮ್ಯಾಕ್ಸ್ ಬೆಲೆ 14,999.ರೂ ಆಗಿದೆ. ಆದರೆ ಇದೇ ಮಾರ್ಚ್‌ 23ರಂದು ಬಿಡುಗಡೆ ಆಗಲಿರುವ ರೆಡ್ಮಿ ನೋಟ್ 9s ಬಜೆಟ್‌ ಬೆಲೆಯಲ್ಲಿ ಲಬ್ಯವಾಗಲಿದೆ ಎಂದು ಹೇಳಲಾಗ್ತಿದೆ. ಭಾರತದಲ್ಲಿ,ಬಿಡುಗಡೆ ಯಾವಾಗ ಎಂಬುದು ಅನ್ನೊದು ಮಾತ್ರ ಇನ್ನು ತಿಳಿದುಬಂದಿಲ್ಲ.

Most Read Articles
Best Mobiles in India

English summary
Redmi Note 9S With Quad Camera Setup, Hole-Punch Display to Launch on March 23, Xiaomi Confirms.to know more visit to kannada.gizbot.comre

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X