ಭಾರತದಲ್ಲಿ ರೆಡ್ಮಿ ಪ್ಯಾಡ್ ಟ್ಯಾಬ್ ಬಿಡುಗಡೆ! ಬೆಲೆ ಎಷ್ಟು?
ಶಿಯೋಮಿ ಕಂಪೆನಿ ಭಾರತದ ಮಾರುಕಟ್ಟೆಯಲ್ಲಿ ವೈವಿಧ್ಯಮಯ ಗ್ಯಾಜೆಟ್ಸ್‌ಗಳಿಗೆ ಪ್ರಸಿದ್ಧಿ ಪಡೆದುಕೊಂಡಿದೆ. ತನ್ನ ರೆಡ್ಮಿ ಬ್ರ್ಯಾಂಡ್‌ನಲ್ಲಿಯೂ ಬಿನ್ನ ಶ್ರೇಣಿಯ ಡಿವೈಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ಭಾರತದಲ್ಲಿ ಹೊಸ ರೆಡ್ಮಿ ಪ್ಯಾಡ್ ಟ್ಯಾಬ್ಲೆಟ್ ಅನ್ನು ಪರಿಚಯಿಸಿದೆ. ಈ ಟ್ಯಾಬ್ಲೆಟ್ ಆಕರ್ಷಕ ವಿನ್ಯಾಸವನ್ನು ಹೊಂದಿದ್ದು, ಆಪಲ್ ಐಪ್ಯಾಡ್ ಏರ್‌ನಂತೆಯೇ ಹಗುರವಾಗಿದೆ. ಇದಲ್ಲದೆ ರಿಯರ್ ಪ್ಯಾನಲ್ ಮೆಟಲ್ ಯುನಿಬಾಡಿ ವಿನ್ಯಾಸವನ್ನು ಪಡೆದುಕೊಂಡಿದೆ.

ಹೌದು, ರೆಡ್ಮಿ ಪ್ಯಾಡ್ ಟ್ಯಾಬ್ಲೆಟ್ ಭಾರತಕ್ಕೆ ಎಂಟ್ರಿ ನೀಡಿದೆ. ಇದು 400 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ನೀಡುವ 10.6 ಇಂಚಿನ IPS LCD ಡಿಸ್‌ಪ್ಲೇ ಹೊಂದಿದೆ. ಇದನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ಖರೀದಿಸುವವರನ್ನು ಗುರಿಯಾಗಿಸಿಕೊಂಡು ಪರಿಚಯಿಸಲಾಗಿದೆ. ಈ ಟ್ಯಾಬ್ ಎರಡು ಮೈಕ್ರೊಫೋನ್‌ಗಳನ್ನು ಕೂಡ ಒಳಗೊಂಡಿದೆ. ಇದಲ್ಲದೆ ಈ ಟ್ಯಾಬ್‌ನ ಕ್ಯಾಮೆರಾ ಅಪ್ಲಿಕೇಶನ್ ಇಂಟರ್ ಡಾಕ್ಯುಮೆಂಟ್ ಸ್ಕ್ಯಾನರ್ ಅನ್ನು ಹೊಂದಿದೆ. ಇನ್ನುಳಿದಂತೆ ಈ ಹೊಸ ಟ್ಯಾಬ್ ಯಾವೆಲ್ಲಾ ವಿಶೇಷತೆ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ರೆಡ್ಮಿ ಪ್ಯಾಡ್ ಟ್ಯಾಬ್ 10.6 ಇಂಚಿನ IPS LCD ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2000 x 1200 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು 400 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಒಳಗೊಂಡಿದ್ದು, 1 ಬಿಲಿಯನ್ ಬಣ್ಣಗಳನ್ನು ಪ್ರದರ್ಶಿಸುತ್ತದೆ. ಇನ್ನು ಡಿಸ್‌ಪ್ಲೇ ಅಡಾಪ್ಟಿವ್ ಸಿಂಕ್ 90Hz ರಿಫ್ರೆಶ್ ರೇಟ್ ಬೆಂಬಲಿಸಲಿದೆ.

ಪ್ರೊಸೆಸರ್ ಕಾರ್ಯವೈಖರಿ ಹೇಗಿದೆ?
ರೆಡ್ಮಿ ಪ್ಯಾಡ್ ಟ್ಯಾಬ್ 6nm ಆಧಾರಿತ ಮೀಡಿಯಾಟೆಕ್ ಹೆಲಿಯೋ G99 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್ 12 OSನಲ್ಲಿ ರನ್ ಆಗಲಿದೆ. ಹಾಗೆಯೇ 6GB RAM ಮತ್ತು 128GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಮೈಕ್ರೊ SD ಕಾರ್ಡ್ ಸ್ಲಾಟ್ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ಸೆಟ್‌ಅಪ್ ಏನಿದೆ?
ರೆಡ್ಮಿ ಪ್ಯಾಡ್ ಟ್ಯಾಬ್ಲೆಟ್ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸಿಂಗಲ್ ರಿಯರ್ ಕ್ಯಾಮೆರಾವನ್ನು ಹೊಂದಿದೆ. ಇದರ ಕ್ಯಾಮೆರಾ ಅಪ್ಲಿಕೇಶನ್ ಇಂಟರ್‌ಬಿಲ್ಟ್ ಡಾಕ್ಯುಮೆಂಟ್ ಸ್ಕ್ಯಾನರ್ ಅನ್ನು ಒಳಗೊಂಡಿದೆ. ಇದಲ್ಲದೆ ಈ ಟ್ಯಾಬ್‌ನಲ್ಲಿ ಸೆಲ್ಫಿಗಾಗಿ 8 ಮೆಗಾಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾವನ್ನು ಕೂಡ ನೀಡಲಾಗಿದೆ. ಇದು 105 FOV ಅನ್ನು ಹೊಂದಿದ್ದು, ಆಡಿಯೋಗಾಗಿ ಡಾಲ್ಬಿ ಅಟ್ಮಾಸ್ ಅನ್ನು ಸಹ ಬೆಂಬಲಿಸುತ್ತದೆ.

ಬ್ಯಾಟರಿ ಮತ್ತು ಇತರೆ
ರೆಡ್ಮಿ ಪ್ಯಾಡ್ ಟ್ಯಾಬ್ಲೆಟ್ 18W ವೇಗದ ಚಾರ್ಜಿಂಗ್ ಬೆಂಬಲಿಸುವ 8,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 21 ಗಂಟೆಗಳ ವೀಡಿಯೊ ಪ್ಲೇಬ್ಯಾಕ್ ಟೈಂ ಮತ್ತು ಎಂಟು ದಿನಗಳ ಮ್ಯೂಸಿಕ್ ಪ್ಲೇಬ್ಯಾಕ್ ಟೈಂ ಅನ್ನು ನೀಡಲಿದೆ. ಕನೆಕ್ಟಿವಿಟಿಗಾಗಿ ಡ್ಯುಯಲ್-ಬ್ಯಾಂಡ್ ವೈ-ಫೈ ಮತ್ತು ಬ್ಲೂಟೂತ್ 5.3 ಅನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ
ರೆಡ್ಮಿ ಪ್ಯಾಡ್ ಟ್ಯಾಬ್ ಬೇಸ್ ಮಾಡೆಲ್ 3GB + 64GB ಸ್ಟೋರೇಜ್ ಆಯ್ಕೆಗೆ 14,999ರೂ. ಬೆಲೆ ಹೊಂದಿದೆ. ಇದರ 4GB + 128GB ಸ್ಟೋರೇಜ್ ಆಯ್ಕೆಯು 17,999ರೂ.ಬೆಲೆಯಲ್ಲಿ ದೊರೆಯಲಿದೆ. ಹಾಗೆಯೇ 6GB + 128GB ಸ್ಟೋರೇಜ್ ಆಯ್ಕೆಯು 19,999ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ.

ಆಫರ್ ಏನಿದೆ?
ಶಿಯೋಮಿ ರೆಡ್ಮಿ ಪ್ಯಾಡ್ ಟ್ಯಾಬ್ ಮೇಲೆ ಲಾಂಚ್ ಆಫರ್ ಕೂಡ ನೀಡಲಾಗ್ತಿದೆ. ಅದರಂತೆ 3GB + 64GB ರೂಪಾಂತರದ ಬೆಲೆ 12,999ರೂ.ಆಗಿದೆ. ಇನ್ನು 4GB + 128GB ಆವೃತ್ತಿಯು 14,999ರೂ. ಬೆಲೆ ಹೊಂದಿದೆ. ಜೊತೆಗೆ 6GB + 128GB ರೂಪಾಂತರವು 17,999ರೂ. ಬೆಲೆಯಲ್ಲಿ ಲಭ್ಯವಾಗಲಿದೆ.


Click it and Unblock the Notifications








