ಮಂಡ್ಯದಲ್ಲಿ ಮತ್ತೊಂದು ರೆಡ್‌ಮಿ ಮೊಬೈಲ್ ಬ್ಲಾಸ್ಟ್!..ಅಂಗಡಿ ಮಾಲಿಕ ಆಸ್ಪತ್ರೆಗೆ!
ಶಿಯೋಮಿ ಮೊಬೈಲ್ ಒಡೆತನದ ರೆಡ್‌ಮಿ ಸ್ಪೋಟದ ಹಾವಳಿನಿಂತಿತು ಎನ್ನುವಷ್ಟರಲ್ಲೇ ಮಂಡ್ಯದ ಶ್ರೀರಂಗಪಟ್ಟಣದ ರೆಡ್‌ಮಿ ಸ್ಮಾರ್ಟ್‌ಫೋನ್ ಒಂದು ಸ್ಪೋಟಗೊಂಡಿರುವ ಘಟನೆ ನಡೆದಿದೆ. ಶ್ರೀರಂಗಪಟ್ಟಣದ ಶ್ರೀ ಲಕ್ಷ್ಮೀ ಕಾಲಭೈರವೇಶ್ವರ ಮೊಬೈಲ್ಸ್ ಅಂಗಡಿಯಲ್ಲಿ ಗ್ರಾಹಕರೊಬ್ಬರ ರೆಡ್ಮಿ ಫೋನ್ ಸ್ಪೋಟಗೊಂಡಿದ್ದು, ಅಂಗಡಿ ಮಾಲಿಕ ದೊಡ್ಡ ಅನಾಹುತದಿಂದ ಪಾರಾಗಿದ್ದಾರೆ.
ಕಳೆದ ವಾರ ಇದೇ ಅಂಗಡಿಯಿಂದ ವ್ಯಕ್ತಿಯೋರ್ವರು ರೆಡ್‌ಮಿ ಬ್ರ್ಯಾಂಡ್‌ನ ಫೋನ್ ಖರೀದಿಸಿದ್ದರು. ಆದರೆ, ಇಂದು ಮೊಬೈಲ್‌ನಲ್ಲಿ ದೋಷ ಕಂಡು ಬಂದಿದ್ದು, ಫೋನ್ ಆನ್ ಆಗುತ್ತಿರಲಿಲ್ಲ ಎನ್ನಲಾಗಿದೆ. ಈ ಕಾರಣಕ್ಕೆ ಕಾರಣಕ್ಕೆ ಮೊಬೈಲ್ ಅನ್ನು ಪರಿಶೀಲನೆ ನೀಡಲಾಗಿತ್ತು. ಇದನ್ನು ಚೆಕ್ ಮಾಡುವ ವೇಳೆ ಮೊಬೈಲ್ ಸ್ಫೋಟಗೊಂಡಿರುವುದಾಗಿ ಅಂಗಡಿ ಮಾಲಿಕ ಹೇಳಿದ್ದಾನೆ.

ಅಂಗಡಿ ಮಾಲಿಕ ಮೊಬೈಲ್ ಪರಿಶೀಲನೆ ಮಾಡುತ್ತಿರುವ ವೇಳೆ ಮೊಬೈಲ್ ಸ್ಫೋಟಗೊಂಡಿದ್ದು, ಮೊಬೈಲ್ ಸ್ಪೋಟದ ಶಬ್ದ ಮತ್ತು ಹೊಗೆಯನ್ನು ಕಂಡ ಅಂಗಡಿಯಲ್ಲಿದ್ದ ಜನರು ಹೆದರಿ ಹೊರ ಓಡಿಹೋಗಿದ್ದಾರೆ. ಈ ವೇಳೆ ಅಂಗಡಿ ಮಾಲೀಕನ ಕೈಗೆ ಸುಟ್ಟ ಗಾಯಾಗಳಾಗಿದ್ದು ಆಸ್ಪತ್ರೆ ಸೇರಿದ್ದಾರೆ, ಅಲ್ಲಿದ್ದ ಸ್ಥಳೀಯರು ಅಂಗಡಿ ಮಾಲೀಕನಿಗೆ ನೆರವಾಗಿ ಅಪಾಯವನ್ನು ತಪ್ಪಿಸಿದ್ದಾರೆ.
ಈ ಹಿಂದೆಯೂ ಸಹ ಮಂಡ್ಯದ ಮೊಬೈಲ್ ಅಂಗಡಿಯಲ್ಲಿ ಇದೇ ರೀತಿಯಲ್ಲಿ ತಾಂತ್ರಿಕ ದೋಷದಿಂದ ರೆಡ್ಮಿ ನೋಟ್ 4 ಮೊಬೈಲ್ ಸ್ಫೋಟಗೊಂಡಿದ್ದು, ಇದೀಗ ಮತ್ತದೇ ಬ್ರ್ಯಾಂಡ್‌ನ ಮತ್ತೊಂದು ಫೋನ್ ಸ್ಪೋಟಗೊಂಡಿರುವುದಕ್ಕೆ ಅಲ್ಲಿನ ಜನರು ಭಯಗೊಂಡಿದ್ದಾರೆ. ರೆಡ್ಮಿ ಫೋನ್ಗಳಲ್ಲಿ ದೋಷಗಳು ಕಂಡು ಬರುವುದರಿಂದ ಹೀಗಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಇನ್ನು ಶಿಯೋಮಿ ಕಳೆದ ಹಲವು ದಿನಗಳ ಹಿಂದೆ ಹೇಳಿಕೊಂಡಂತೆ, ರೆಡ್‌ಮಿ ಫೋನ್‌ಗಳು ಬ್ಲಾಸ್ಟ್ ಆಗಲು ಗ್ರಾಹಕರು ಸರಿಯಾಗಿ ಮೊಬೈಲ್ ಅನ್ನು ನಿರ್ವಹಣೆ ಮಾಡದೇ ಇರುವುದೇ ಕಾರಣ ಎಂದಿದೆ. ಕಳಪೆ ಚಾರ್ಜರ್ ಬಳಸಿದರೂ ಹೀಗಾಗುತ್ತದೆ ಎಂದು ಹೇಳಿಕೊಂಡಿದೆ. ಆದರೆ, ಒಂದೇ ವಾರದಲ್ಲಿ ಖರಿದಿಸಿದ ಮೊಬೈಲ್‌ನಲ್ಲಿ ದೋಷ ಕಂಡು ಬಂದಿದ್ದು ಏಕೆ ಎಂಬುದು ಪ್ರಶ್ನೆಯಾಗಿದೆ.


Click it and Unblock the Notifications