Home
ಸುದ್ದಿಜಾಲ

ಶಿಯೋಮಿ ಕಂಪೆನಿಯ ರೆಡ್‌ಮಿ ಸ್ಮಾರ್ಟ್ ಡಿಸ್‌ಪ್ಲೇ 8 ಬಿಡುಗಡೆ!

ಚೀನಾ ಮೂಲದ ಶಿಯೋಮಿ ಕಂಪೆನಿ ಭಿನ್ನ ಮಾದರಿಯ ಸ್ಮಾರ್ಟಫೋನ್‌ಗಳ ಜೊತೆಗೆ ಇತರೆ ಎಲೆಕ್ಟ್ರಾನಿಕ್ಸ್‌ ಪ್ರಾಡಕ್ಟ್‌ಗಳನ್ನ ಸಹ ಮಾರುಕಟ್ಟೆಗೆ ಪರಿಚಯಿಸಿದೆ. ಈಗಾಗಲೇ ಹಲವು ಮಾದರಿಯ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿರುವ ಶಿಯೋಮಿ ಸ್ಮಾರ್ಟ್‌ ಡಿಸ್‌ಪ್ಲೇ ಮಾರುಕಟ್ಟೆಯಲ್ಲೂ ಸಹ ತನ್ನ ಪ್ರಾಬಲ್ಯವನ್ನ ಸಾಧಿಸಿದೆ. ಇನ್ನು ನಿಮಗೆಲ್ಲಾ ಗೊತ್ತಿರುವ ಹಾಗೇ ಶಿಯೋಮಿ ತನ್ನ ರೆಡ್‌ಮಿ ಬ್ರ್ಯಾಂಡ್‌ ನ ಅಡಿಯಲ್ಲಿ ಹಲವು ಉತ್ಪನ್ನಗಳನ್ನ ಪರಿಚಯಿಸಿದ್ದು, ಇದೀಗ ಮತ್ತೊಂದು ಸ್ಮಾರ್ಟ್‌ ಡಿಸ್‌ಪ್ಲೇಯನ್ನ ಬಿಡುಗಡೆ ಮಾಡಿದೆ.

ಶಿಯೋಮಿ

ಹೌದು, ಶಿಯೋಮಿ ಕಂಪೆನಿ ತನ್ನ ರೆಡ್‌ಮಿ ಬ್ರ್ಯಾಂಡ್‌ನ ಅಡಿಯಲ್ಲಿ ಹೊಸ ಸ್ಮಾಟ್‌ಡಿಸ್‌ಪ್ಲೇ ಅನ್ನು ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದನ್ನು ರೆಡ್‌ಮಿ ಸ್ಮಾರ್ಟ್‌ ಡಿಸ್‌ಪ್ಲೇ 8 ಎಂದು ಹೆಸರಿಸಲಾಗಿದ್ದು, ಇದು ಹೆಚ್‌ಡಿ ಕ್ಯಾಮೆರಾವನ್ನು ಒಳಗೊಂಡಿರುವ ಡಿಸ್‌ಪ್ಲೇ ಆಗಿದೆ. ಇನ್ನು ಈ ಸ್ಮಾರ್ಟ್ ಡಿಸ್‌ಪ್ಲೇ 8 ಇಂಚಿನ ಡಿಸ್ಪ್ಲೇಯನ್ನು ಹೊಂದಿದ್ದು, ಶಿಯೋಮಿಯ ಶಿಯಾವೊAI ಟಚ್‌ಸ್ಕ್ರೀನ್ ಸ್ಪೀಕರ್ ಪ್ರೊ 8 ಗೆ ಹೋಲುತ್ತದೆ, ಜೊತೆಗೆ ಈ ಸ್ಮಾರ್ಟ್‌ಡಿಸ್‌ಪ್ಲೇ ಮೂರನೇ ತಲೆಮಾರಿನ ಶಿಯೋಮಿಯ ಶಿಯಾವೊ AI ಸಹಾಯಕ ಬೆಂಬಲವನ್ನು ಒಳಗೊಮಡಿದೆ. ಇನ್ನು ಇದರ ವಿನ್ಯಾಸ ಹಾಗೂ ವಿಶೇಷತೆಯನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ.

ರೆಡ್‌ಮಿ

ಇನ್ನು ರೆಡ್‌ಮಿ ಸ್ಮಾರ್ಟ್ ಡಿಸ್‌ಪ್ಲೇ 8 ವಿನ್ಯಾಸದ ದೃಷ್ಟಿಯಿಂದ, 2019 ರಲ್ಲಿ ಬಿಡುಗಡೆಯಾದ ಶಿಯೋಮಿ ಶಿಯಾವೊಎಐ ಟಚ್‌ಸ್ಕ್ರೀನ್ ಸ್ಪೀಕರ್ ಪ್ರೊ 8 ನ ವಿನ್ಯಾಸವನ್ನೇ ಒಳಗೊಂಡಿದೆ. ಅಲ್ಲದೆ ಈ ಸ್ಮಾರ್ಟ್‌ ಡಿಸ್‌ಪ್ಲೇ ಶಿಯೋಮಿ ಸ್ಮಾರ್ಟ್ ಸ್ಪೀಕರ್‌ನಂತೆಯೇ, ಕಾರ್ಯನಿರ್ವಹಿಸುತ್ತದೆ. ಜೊತೆಗೆ ಇದು ಕೂಡ ವಾಯ್ಸ್‌ ಹಾಗೂ ಟಚ್‌ ಕಂಟ್ರೋಲ್‌ ಅನ್ನು ಬೆಂಬಲಿಸುತ್ತದೆ. ಇದಲ್ಲದೆ ಈ ಡಿವೈಸ್‌ 8-ಇಂಚಿನ ಡಿಸ್‌ಪ್ಲೇ ಒಳಗೊಂಡಿದ್ದು, ಈ ಡಿಸ್‌ಪ್ಲೇ 178-ಡಿಗ್ರಿ ಅಗಲ-ವೀಕ್ಷಣಾ ಕೋನವನ್ನು ಒಳಗೊಂಡಿದೆ. ಹಾಗೂ ವಿಶೇಷ ಲ್ಯಾಮಿನೇಶನ್ ಅನ್ನು ಒಳಗೊಂಡಿರುತ್ತದೆ, ಇದು ರಿಫ್ಲೆಕ್ಟ್‌ ಅನ್ನು ಕಡಿಮೆ ಮಾಡಲಿದೆ.

ಸ್ಮಾರ್ಟ್

ಇದಲ್ಲದೆ ರೆಡ್ಮಿ ಸ್ಮಾರ್ಟ್ ಡಿಸ್‌ಪ್ಲೇ 8 ರಲ್ಲಿ AI ಮ್ಯೂಸಿಕ್‌, ವಿಡಿಯೋ, ಅಲಾರಂ ಟೈಂ ಕಂಟ್ರೋಲ್‌ ಮಾಡಲು ಸನ್ನೆಗಳನ್ನು ಸಹ ಬೆಂಬಲಿಸುತ್ತದೆ. ಜೊತೆಗೆ ಇದರಿಂದ ವಿವಿಧ ಸ್ಮಾರ್ಟ್ ಡಿವೈಸ್‌ಗಳನ್ನ ಕಂಟ್ರೋಲ್‌ ಮಾಡಬಹುದಾಗಿದ್ದು, ಇದೊಂದು ಡಿವೈಸ್‌ ಹಬ್‌ ಆಗಿ ಕಾರ್ಯನಿರ್ವಹಿಸುತ್ತದೆ. ಇನ್ನು ಈ ಸ್ಮಾರ್ಟ್ ಡಿಸ್‌ಪ್ಲೇಯ ಸ್ಪೀಕರ್‌ನ ಮುಂಭಾಗದಲ್ಲಿ ಮಲ್ಟಿ-ಡಿವೈಸ್ ಕರೆಗಳಿಗೆ ಬೆಂಬಲಲಿಸುವ ಹಾಗೂ ವೀಡಿಯೊ ಕರೆಗಳಿಗೆ ಉತ್ತಮ ಅನುಭವ ನೀಡುವ ಹೆಚ್‌ಡಿ ಕ್ಯಾಮೆರಾವನ್ನು ನೀಡಲಾಗಿದೆ.

ವೀಡಿಯೊ

ಅಲ್ಲದೆ ರೆಡ್‌ಮಿ ಸ್ಮಾರ್ಟ್‌ಡಿಸ್‌ಪ್ಲೇ 8 ಚೀನಾದಲ್ಲಿ ಜನಪ್ರಿಯ ವೀಡಿಯೊ ಪ್ಲಾಟ್‌ಫಾರ್ಮ್‌ಗಳನ್ನು ಸಹ ಬೆಂಬಲಿಸಲಿದ್ದು, ಕಸ್ಟಮ್ ಚೈಲ್ಡ್‌ ಮೋಡ್ ಹೊಂದಿದೆ. ಈ ಮೋಡ್ ಮಕ್ಕಳ ಕೇಂದ್ರಿತ ವಿಷಯವನ್ನು ಒಳಗೊಂಡಿದ್ದು, ಮಕ್ಕಳನ್ನು ಮನೆಯಲ್ಲಿ ಗುರುತು ಮಾಡಲಿದೆ. ಜೊತೆಗೆ ಈ ಡಿಸ್‌ಪ್ಲೇ ಇಂಟರ್‌ಬಿಲ್ಟ್‌ ಬ್ಲೂಟೂತ್ ಗೇಟ್‌ವೇಯೊಂದಿಗೆ ಬರುತ್ತದೆ, ಇದು ಬ್ಲೂಟೂತ್-ಹೊಂದಿದ ಡಿವೈಸ್‌ಗಳನ್ನು ಸಿಂಗಲ್‌ ಟಚ್‌ನಲ್ಲಿ ಕನೆಕ್ಟಿವಿಟಿ ಮಾಡುವುದಕ್ಕೆ ಅವಕಾಶ ಕಲ್ಪಿಸುತ್ತದೆ. ಜೊತೆಗೆ ಇದರಲ್ಲಿ ನೀಲಿ-ಬೆಳಕಿನ ಫಿಲ್ಟರ್ ಅನ್ನು ಸಹ ಒಳಗೊಂಡಿದ್ದು, ಉತ್ತಮ ಅನುಭವ ನೀಡಲಿದೆ.

ಹೊಂದಿದ್ದು

ಇನ್ನು ರೆಡ್ಮಿ ಸ್ಮಾರ್ಟ್ ಡಿಸ್‌ಪ್ಲೇ 8 CNY349 (ಸುಮಾರು 3,800 ರೂ.) ಬೆಲೆಯನ್ನು ಹೊಂದಿದ್ದು, ಇದೇ ಮಾರ್ಚ್ 27 ರಿಂದ ಅಧಿಕೃತ ಮಾರಾಟ ಮಳಿಗೆಗಳ ಮೂಲಕ ಚೀನಾ ದೇಶದಲ್ಲಿ ಖರಿದೀಸಬಹುದಾಗಿದೆ.

Best Mobiles in India

English summary
Redmi Smart Display 8 With HD Camera, Third-Generation Xiao AI Assistant Launched.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+