ಅಮೆಜಾನ್‌ನಲ್ಲಿ ರೆಡ್ಮಿ ಸಂಸ್ಥೆಯ ಈ ಸ್ಮಾರ್ಟ್‌ಟಿವಿಗೆ ಸಿಗ್ತಾ ಇದೆ 54% ಡಿಸ್ಕೌಂಟ್!
ಅಮೆಜಾನ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸ್ಮಾರ್ಟ್‌ಟಿವಿಗಳಿಗೆ ಬಾರಿ ರಿಯಾಯಿತಿಯನ್ನು ನೀಡುತ್ತಿದೆ. ಇದರಲ್ಲಿ ಹಲವು ಜನಪ್ರಿಯ ಬ್ರ್ಯಾಂಡ್‌ಗಳ ಟಿವಿಗಳು ಕೂಡ ಸೇರ್ಪಡೆಯಾಗಿವೆ. ಸದ್ಯ ಇದೀಗ ಶಿಯೋಮಿಯ ರೆಡ್ಮಿ ಸ್ಮಾರ್ಟ್ ಫೈರ್ ಟಿವಿ ಭರ್ಜರಿ ಡಿಸ್ಕೌಂಟ್ ಪಡೆದುಕೊಂಡಿದೆ. ಬರೋಬ್ಬರಿ 54% ಡಿಸ್ಕೌಂಟ್ ಪಡೆದುಕೊಳ್ಳುವ ಮೂಲಕ ಕೈಗೆಟಕುವ ಬೆಲೆಗೆ ಉತ್ತಮ ಟಿವಿ ಖರೀದಿಸುವ ಅವಕಾಶ ನೀಡಿದೆ.
ಹೌದು, ಅಮೆಜಾನ್ ತಾಣದಲ್ಲಿ ರೆಡ್ಮಿ (Redmi ) ಸ್ಮಾರ್ಟ್ ಫೈರ್ ಟಿವಿ ಬಿಗ್ ಆಫರ್ ಪಡೆದುಕೊಂಡಿದೆ. ಇದನ್ನು ನೀವು ಮೂಲಬೆಲೆಗಿಂತ ಅರ್ಧದಷ್ಟು ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿ ನೆಟ್‌ಫ್ಲಿಕ್ಸ್, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್, ಅಮೆಜಾನ್ ಪ್ರೈಮ್ ವೀಡಿಯೊದಂತಹ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ನೀಡಲಿದೆ. ಹಾಗಾದ್ರೆ ರೆಡ್ಮಿ ಸ್ಮಾರ್ಟ್ ಫೈರ್ ಟಿವಿ ಬೆಲೆ ಎಷ್ಟಿದೆ? ಡಿಸ್ಕೌಂಟ್ ನಂತರದ ಬೆಲೆ ಎಷ್ಟಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್ಕೌಂಟ್ ನಂತರದ ಬೆಲೆ ಎಷ್ಟು?
ರೆಡ್ಮಿ ಸ್ಮಾರ್ಟ್ ಫೈರ್ ಟಿವಿಯನ್ನು ಅಮೆಜಾನ್ ತಾಣದಲ್ಲಿ 24,999ರೂ ಬೆಲೆಗೆ ಪಟ್ಟಿ ಮಾಡಲಾಗಿದೆ. ಇದೀಗ 54% ಡಿಸ್ಕೌಂಟ್ ಪಡೆದುಕೊಂಡಿರುವುದರಿಂದ ಇದನ್ನು ನೀವು ಕೇವಲ 11,499ರೂ ಬೆಲೆಗೆ ಖರೀದಿಸಬಹುದಾಗಿದೆ. ಇದರೊಂದಿಗೆ ಸ್ಮಾರ್ಟ್‌ಟಿವಿ ಮೇಲೆ ವಿವಿಧ ಬ್ಯಾಂಕ್ ಆಫರ್‌ಗಳು ಕೂಡ ದೊರೆಯುತ್ತಿದೆ. ಇದರಿಂದ ಸ್ಮಾರ್ಟ್‌ಟಿವಿಯನ್ನು ಇನ್ನಷ್ಟು ಕಡಿಮೆ ಬೆಲೆಗೆ ಖರೀದಿಸುವುದಕ್ಕೆ ಅವಕಾಶ ಲಭ್ಯವಾಗಲಿದೆ.
ರೆಡ್ಮಿ ಸ್ಮಾರ್ಟ್ ಫೈರ್ ಟಿವಿ ಫೀಚರ್ಸ್ ಹೇಗಿದೆ?
ರೆಡ್ಮಿ ಸ್ಮಾರ್ಟ್ ಫೈರ್ ಟಿವಿ 32 ಇಂಚಿನ ಹೆಚ್‌ಡಿ ರೆಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು 1366x768 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಅಲ್ಲದೆ ಬೆಜೆಲ್ ಲೆಸ್ ಮೆಟಾಲಿಕ್ ವಿನ್ಯಾಸವನ್ನು ಹೊಂದಿದೆ. ಇನ್ನು ಸ್ಮಾರ್ಟ್‌ಟಿವಿ ಆಟೋ ಲೋ ಲೇಟೆನ್ಸಿ ಮೋಡ್ ಫೀಚರ್ಸ್ ಹೊಂದಿದ್ದು, 96.9% ಸ್ಕ್ರೀನ್ ಟು ಬಾಡಿ ಅನುಪಾತವನ್ನು ನೀಡುತ್ತದೆ.

ಈ ಸ್ಮಾರ್ಟ್‌ಟಿವಿ 1.5GHz ಕ್ವಾಡ್-ಕೋರ್ ಕಾರ್ಟೆಕ್ಸ್ A53 ಪ್ರೊಸೆಸರ್ ವೇಗವನ್ನು ಹೊಂದಿದ್ದು, ಫೈರ್ ಓಎಸ್ 7ನಲ್ಲಿ ರನ್ ಆಗಲಿದೆ. ಹಾಗೆಯೇ 1GB RAM ಹಾಗೂ 8GB ಇಂಟರ್ ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ. ಇದಲ್ಲದೆ ಬಳಕೆದಾರರು ಈ ಟಿವಿಯಲ್ಲಿ ಫೈರ್‌ಟಿವಿ ಆಪ್ ಸ್ಟೋರ್ ಮೂಲಕ ಬರೋಬ್ಬರಿ 12,000 ಆಪ್‌ಗಳನ್ನು ಇನ್‌ಸ್ಟಾಲ್ ಮಾಡಬಹುದಾಗಿದೆ.
ಇದು ಅಲೆಕ್ಸಾ ಬೆಂಬಲಿತ ರಿಮೋಟ್ ಅನ್ನು ಬೆಂಬಲಿಸಲಿದ್ದು, ಎಲ್ಲಾ ರೀತಿಯ ಸ್ಮಾರ್ಟ್‌ಟಿವಿ ಕಾರ್ಯಗಳನ್ನು ನಿಯಂತ್ರಣ ಮಾಡಲಿದೆ. ಅಂದರೆ ಟಿವಿ ಗೈಡ್, ಪ್ಲೇಬ್ಯಾಕ್ ಕಂಟ್ರೋಲ್, ಚಾನೆಲ್ ಅಪ್/ಡೌನ್, ಮ್ಯೂಟ್ ಮಾಡಲು ಸುಲಭವಾದ ಬಟನ್‌ಗಳನ್ನು ಹೊಂದಿದ್ದು, ಇದರೊಂದಿಗೆ ಜನಪ್ರಿಯ ಆಪ್‌ಗಳಿಗಾಗಿ ಶಾರ್ಟ್‌ಕಟ್ ಬಟನ್‌ಗಳು ನೀಡಲಾಗಿದೆ. ಇನ್ನು ಈ ಟಿವಿಯ ವಿಶೇಷತೆ ಆಗಿರುವ ಅಲೆಕ್ಸಾ ಬಟನ್ ಅನ್ನು ಒತ್ತಿ ಹಿಡಿದರೆ ವಾಯ್ಸ್ ಕಂಟ್ರೋಲ್ ಮೂಲಕ ಸಹ ಚಾನಲ್‌ಗಳನ್ನು ಬದಲಾಯಿಸಬಹುದು.
ಇನ್ನು ಈ ಸ್ಮಾರ್ಟ್‌ಟಿವಿಯ ಡಿಸ್‌ಪ್ಲೇ ಮೂಲಕವೇ ಡಿಟಿಹೆಚ್ ಸೆಟ್ ಟಾಪ್ ಬಾಕ್ಸ್ ಹಾಗೂ ಡಿಟಿಹೆಚ್ ಟಿವಿ ಚಾನೆಲ್‌ಗಳು ಮತ್ತು ಓಟಿಟಿ ಅಪ್ಲಿಕೇಶನ್‌ಗಳನ್ನು ಮನಬಂದಂತೆ ಬದಲು ಮಾಡಲು ಅವಕಾಶ ನಡಲಿದ್ದು, ಇದಕ್ಕಾಗಿ ಬಳಕೆದಾರರು ಇನ್‌ಪುಟ್ ಅನ್ನು ಬದಲಾವಣೆ ಮಾಡುವ ಅನಿವಾರ್ಯತೆ ಇರುವುದಿಲ್ಲ. ಇದಿಷ್ಟೆ ಅಲ್ಲದೆ, ಆಪಲ್ ಮತ್ತು ಆಂಡ್ರಾಯ್ಡ್ ಫೋನ್‌ಗಳಿಂದ ಮಿರರಿಂಗ್ ಸೌಲಭ್ಯ ಪಡೆಯಲು ಸಹ ಸುಲಭವಾಗಿ ಅನುವು ಮಾಡಿಕೊಡುತ್ತದೆ.

ಸದ್ಯ ಅತಿ ಕಡಿಮೆ ಬೆಲೆಯಲ್ಲಿ ಒಂದೊಳ್ಳೆ ಸ್ಮಾರ್ಟ್‌ಟಿವಿ ಖರೀದಿಸಬೇಕು ಎಂದುಕೊಂಡವರಿಗೆ ಇದು ಅತ್ಯುತ್ತಮವಾದ ಆಯ್ಕೆಯಾಗಿದೆ. ಅಮೆಜಾನ್ ತಾಣದಲ್ಲಿ ಸ್ಮಾರ್ಟ್‌ಟಿವಿ ಖರೀದಿಸುವುದಕ್ಕೆ ಬಯಸುವವರು ಈ ಸ್ಮಾರ್ಟ್‌ಟಿವಿಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.


Click it and Unblock the Notifications








