ಗೌರಿ ಹಬ್ಬದ ಪ್ರಯುಕ್ತ ಟಿವಿ ಖರೀದಿಸೋರಿಗೆ ಹೊಸ ಆಯ್ಕೆ ನೀಡಿದ ರೆಡ್ಮಿ! ಬೆಲೆ ಕೇವಲ 26,999ರೂ ಮಾತ್ರ!
ಗೌರಿ ಗಣೇಶ ಹಬ್ಬದ ಸಂಭ್ರಮಕ್ಕೆ ಎರಡು ದಿನಗಳಷ್ಟೇ ಬಾಕಿ ಇದೆ. ಇದೇ ಸಮಯದಲ್ಲಿ ಹಲವು ಜನಪ್ರಿಯ ಟೆಕ್ ಬ್ರ್ಯಾಂಡ್‌ಗಳು ತಮ್ಮ ವಿಭಿನ್ನ ಪ್ರಾಡಕ್ಟ್‌ಗಳನ್ನು ಪರಿಚಯಿಸುವುದು ಸಾಮಾನ್ಯವಾಗಿದೆ. ಇದೀಗ ರೆಡ್ಮಿ ಬ್ರ್ಯಾಂಡ್ ಕೂಡ ತನ್ನ ಹೊಸ ರೆಡ್ಮಿ ಸ್ಮಾರ್ಟ್ ಫೈರ್ ಟಿವಿ 4K ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಟಿವಿ 60Hz ರಿಫ್ರೆಶ್ ರೇಟ್ ಬೆಂಬಲಿಸಲಿದೆ.
ಹೌದು, ರೆಡ್ಮಿ ಸ್ಮಾರ್ಟ್ ಫೈರ್ ಟಿವಿ 4K ಭಾರತಕ್ಕೆ ಎಂಟ್ರಿ ನೀಡಿದೆ. ಗೌರಿ ಗಣೇಶ ಹಬ್ಬಕ್ಕೆ ಹೊಸ ಸ್ಮಾರ್ಟ್‌ಟಿವಿ ಖರೀದಿಸಬೇಕೆಂದುಕೊಂಡವರಿಗೆ ಹೊಸ ಆಯ್ಕೆ ನೀಡಿದೆ. ಇನ್ನು ಈ ಸ್ಮಾರ್ಟ್‌ಟಿವಿ ಮಾಲಿ G52 MC1 GPU ಜೊತೆಗೆ ಕ್ವಾಡ್-ಕೋರ್ A55 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಬ್ಲೂಟೂತ್ 5.0, ವೈ-ಫೈ, ಏರ್‌ಪ್ಲೇ 2 ಮತ್ತು ಮಿರಾಕಾಸ್ಟ್ ಕನೆಕ್ಟಿವಿಟಿ ಆಯ್ಕೆಗಳನ್ನು ನೀಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರೆಡ್ಮಿ ಸ್ಮಾರ್ಟ್ ಫೈರ್ ಟಿವಿ 4K ಫೀಚರ್ಸ್ ಹೇಗಿದೆ?
ರೆಡ್ಮಿ ಸ್ಮಾರ್ಟ್ ಫೈರ್ ಟಿವಿ 4K 32 ಇಂಚಿನ ಬೆಜೆಲ್ ಲೆಸ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 3,840 x 2,160 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇದು ಕಂಪನಿಯ ವಿವಿಡ್ ಪಿಕ್ಚರ್ ಎಂಜಿನ್ ಅನ್ನು ಹೊಂದಿದ್ದು, ಡಾಲ್ಬಿ ಆಡಿಯೊ ಜೊತೆಗೆ 24W ಸ್ಟೀರಿಯೋ ಸ್ಪೀಕರ್‌ಗಳನ್ನು ಮತ್ತು DTS:X ಟೆಕ್ನಾಲಜಿಯನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಟಿವಿ ಕ್ವಾಡ್-ಕೋರ್ A55 ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಮಾಲಿ G52 MC1 GPU ಸಪೋರ್ಟ್ ಪಡೆದಿದ್ದು, ಫೈರ್ ಓಎಸ್‌ನಲ್ಲಿ ಕಾರ್ಯನಿರ್ವಹಿಸಲಿದೆ.
ರೆಡ್ಮಿ ಸ್ಮಾರ್ಟ್ ಫೈರ್ ಟಿವಿ 4K ಸ್ಮಾರ್ಟ್‌ಟಿವಿ ವಿವಿಡ್ ಪಿಕ್ಚರ್ ಎಂಜಿನ್ ಟೆಕ್ನಾಲಜಿಯನ್ನು ಒಳಗೊಂಡಿದೆ. ಇದು ನಯವಾದ ಮತ್ತು ಸೊಗಸಾದ ನೋಟವನ್ನು ಹೊಂದಿದ್ದು, ತಲ್ಲೀನಗೊಳಿಸುವ ಮನರಂಜನಾ ಅನುಭವದ ಭರವಸೆ ನೀಡುತ್ತದೆ. ಇದಲ್ಲದೆ ಸ್ಮಾರ್ಟ್‌ಟಿವಿ Amazon ಜೊತೆಗಿನ ಪಾಲುದಾರಿಕೆಯನ್ನು ಹೊಂದಿರುವುದರಿಂದ ಇನ್‌ಬಿಲ್ಟ್ ಅಲೆಕ್ಸಾ ಬೆಂಬಲದೊಂದಿಗೆ ಬರಲಿದೆ. ಇನ್ನು ಸ್ಮಾರ್ಟ್‌ಟಿವಿ ಬ್ಲೂಟೂತ್ 5.0 ಕನೆಕ್ಟಿವಿಟಿಯೊಂದಿಗೆ ಡ್ಯುಯಲ್-ಬ್ಯಾಂಡ್ ವೈಫೈ ಅನ್ನು ಬೆಂಬಲಿಸುತ್ತದೆ.
ಇನ್ನು ಸ್ಮಾರ್ಟ್‌ಟಿವಿಯು ಪಿಕ್ಚರ್-ಇನ್-ಪಿಕ್ಚರ್ ಟೆಕ್ನಾಲಜಿಯನ್ನು ಬೆಂಬಲಿಸಲಿದೆ. ಇದು ನಿಮ್ಮ ಟಿವಿ ವೀಕ್ಷಣೆಯ ಅನುಭವಕ್ಕೆ ಅಡ್ಡಿಯಾಗದಂತೆ ಮಲ್ಟಿ ಫಂಕ್ಷನ್‌ಗಳನ್ನು ನಿರ್ವಹಿಸಲು ಅನುಮತಿಸಲಿದೆ. ರೆಡ್ಮಿ ಸ್ಮಾರ್ಟ್ ಫೈರ್ TV 4K 2GB RAM ಮತ್ತು 8GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಇದು ಅಮೆಜಾನ್ ಪ್ರೈಮ್ ಸೇರಿದಂತೆ 12,000 ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳೊಂದಿಗೆ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಿಗೆ ಪ್ರವೇಶವನ್ನು ನೀಡಲಿದೆ. ಇವುಗಳಲ್ಲಿ ಅಮೆಜಾನ್ ಪ್ರೈಮ್ ವೀಡಿಯೊ, ನೆಟ್‌ಫ್ಲಿಕ್ಸ್, ಡಿಸ್ನಿ+ ಹಾಟ್‌ಸ್ಟಾರ್, ಜಿಯೋ ಸಿನಿಮಾ ಮತ್ತು ಝೀ5 ಪ್ರಮುಖ ವಾಗಿವೆ.
ಇದಲ್ಲದೆ ಸ್ಮಾರ್ಟ್‌ಟಿವಿಯಲ್ಲಿ ಹೆಚ್ಚುವರಿಯಾಗಿ ಮಲ್ಟಿ ಪ್ರೊಫೈಲ್‌ಗಳು, ಪೋಷಕರ ನಿಯಂತ್ರಣ, ಅಲೆಕ್ಸಾ ಧ್ವನಿ ಸಹಾಯಕ ಮತ್ತು ಅಮೆಜಾನ್ ಫೈರ್ ಟಿವಿಗೆ ಬೆಂಬಲ ನೀಡುವ ಫೀಚರ್ಸ್‌ಗಳನ್ನು ಸಹ ಕಾಣಬಹುದಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ 802.11 ಎಸಿ ಮತ್ತು ಬ್ಲೂಟೂತ್ 5.0, ಮೂರು HDMI ಪೋರ್ಟ್‌ಗಳು, ಎರಡು USB ಪೋರ್ಟ್‌ಗಳು ಮತ್ತು AV ಮತ್ತು 3.5mm ಆಡಿಯೊ ಜ್ಯಾಕ್ ಅನ್ನು ಒಳಗೊಂಡಿದೆ.
ಭಾರತದಲ್ಲಿ ರೆಡ್ಮಿ ಸ್ಮಾರ್ಟ್ ಫೈರ್ ಟಿವಿ 4K ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ರೆಡ್ಮಿ ಸ್ಮಾರ್ಟ್ ಫೈರ್ ಟಿವಿ 4K ಬೆಲೆ ಕೇವಲ 26,999ರೂ.ಆಗಿದೆ. ಈ ಸ್ಮಾರ್ಟ್ ಟಿವಿ Mi.com ಮತ್ತು Amazon ಮೂಲಕ ಮಾರಾಟವಾಗಲಿದೆ. ಹೆಚ್ಚುವರಿಯಾಗಿ, ಕಂಪನಿಯು ಸ್ಮಾರ್ಟ್ ಟಿವಿಯಲ್ಲಿ ಉಚಿತವಾಗಿ 1-ವರ್ಷದ ವಿಸ್ತೃತ ವಾರಂಟಿಯನ್ನು ನೀಡುತ್ತಿದೆ.


Click it and Unblock the Notifications