ಶಿಯೋಮಿ ಸಂಸ್ಥೆಯಿಂದ ರೆಡ್ಮಿ ಸೋನಿಕ್ ಬಾಸ್ ಇಯರ್‌ಫೋನ್ ಲಾಂಚ್!
ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ಶಿಯೋಮಿ ಕಂಪೆನಿ ತನ್ನ ಗುಣಮಟ್ಟದ ಇಯರ್‌ಫೋನ್‌ಗಳಿಗೂ ಹೆಸರುವಾಸಿಯಾಗಿದೆ. ಈಗಾಗಲೇ ತನ್ನ ರೆಡ್ಮಿ ಇಯರ್‌ಫೋನ್‌ಗಳ ಮೂಲಕ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಶಿಯೋಮಿ ರೆಡ್ಮಿ ಸೋನಿಕ್ ಬಾಸ್ ವಾಯರ್‌ಲೆಸ್ ಇಯರ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಇಯರ್‌ಫೋನ್ ನೆಕ್‌ಬ್ಯಾಂಡ್ ಶೈಲಿಯನ್ನು ಹೊಂದಿದ್ದು, ಸಿಂಗಲ್ ಚಾರ್ಜ್‌ನಲ್ಲಿ 12 ಗಂಟೆಗಳ ಪ್ಲೇಟೈಮ್, ಸ್ಪ್ಲಾಶ್ ಮತ್ತು ಬೆವರು ನಿರೋಧಕ ವ್ಯವಸ್ಥೆಯನ್ನ ಹೊಂದಿದೆ.

ಹೌದು, ಶಿಯೋಮಿ ತನ್ನ ಹೊಸ ರೆಡ್ಮಿ ಸೋನಿಕ್‌ಬಾಸ್ ವಾಯರ್‌ಲೆಸ್ ಇಯರ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಇದು ನೆಕ್‌ಬ್ಯಾಂಡ್ ಶೈಲಿಯ ಹೆಡ್‌ಫೋನ್ ಆಗಿದ್ದು, ಎರಡು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿವೆ. ಇದಲ್ಲದೆ ಶಿಯೋಮಿ ತನ್ನ ಮಿ ಬ್ರಾಂಡ್ ಅಡಿಯಲ್ಲಿ ನೆಕ್‌ಬ್ಯಾಂಡ್ ಶೈಲಿಯ ಬ್ಲೂಟೂತ್ ಹೆಡ್‌ಫೋನ್ ಅನ್ನು ಸಹ ನೀಡಲಿದೆ. ಇನ್ನುಳಿದಂತೆ ಈ ರೆಡ್‌ಮಿ ಸೋನಿಕ್‌ಬಾಸ್ ವಾಯರ್‌ಲೆಸ್ ಇಯರ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ರೆಡ್ಮಿ ಸೋನಿಕ್‌ಬಾಸ್ ವಾಯರ್‌ಲೆಸ್ ಇಯರಫೋನ್ ನೆಕ್‌ಬ್ಯಾಂಡ್ ಶೈಲಿಯ ಹೆಡ್‌ಫೋನ್ ಆಗಿದ್ದು ಹೊಸ ವಿನ್ಯಾಸವನ್ನ ಹೊಂದಿದೆ. ಅಲ್ಲದೆ ಈ ಇಯರ್‌ಫೋನ್‌ಗಳು ಐಪಿಎಕ್ಸ್ 4-ರೇಟೆಡ್ ಸ್ಪ್ಲಾಶ್ ಮತ್ತು ಬೆವರು ನಿರೋಧಕತೆಯನ್ ಹೊಂದಿವೆ. ಜೊತೆಗೆ ಬ್ಲೂಟೂತ್ 5.0 ಮೂಲಕ ನಿಮ್ಮ ಆಂಡ್ರಾಯ್ಡ್ ಅಥವಾ ಐಒಎಸ್ ಡಿವೈಸ್‌ಗೆ ಕನೆಕ್ಟಿವಿಟಿಯನ್ನು ನೀಡಲಿದೆ. ಇದಲ್ಲದೆ ಈ ಇಯರ್‌ಫೋನ್ ವಾಯ್ಸ್ ಆಜ್ಞೆಗಳಿಗೆ ಬೆಂಬಲವನ್ನು ನೀಡುತ್ತವೆ, ಆದರೆ ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಕಂಪನಿಯು ನಿರ್ದಿಷ್ಟಪಡಿಸಿಲ್ಲ.

ಇನ್ನು ಈ ಇಯರ್‌ಬಡ್‌ಗಳು ಬಳಕೆದಾರರ ಕಿವಿ ಶೈಲಿಗೆ ತಕ್ಕಂತೆ ಹೊಂದಿಕೊಳ್ಳಲಿದೆ. ಈ ನೆಕ್‌ಬ್ಯಾಂಡ್ ಉತ್ತಮವಾದ ಫ್ಲಾಟ್ ಕೇಬಲ್ ಹೊಂದಿದ್ದು, ಉತ್ತಮ ಅನುಭವ ನೀಡಲಿದೆ. ಅಲ್ಲದೆ ಈ ಹೊಸ ಹೆಡ್‌ಫೋನ್ ಮಿ ನೆಕ್‌ಬ್ಯಾಂಡ್ ಬ್ಲೂಟೂತ್ ಇಯರ್‌ಫೋನ್‌ಗಳಂತೆಯೇ ವಿನ್ಯಾಸವನ್ನು ಹೊಂದಿದ್ದು ಅದು ಬ್ಲೂಟೂತ್ 5.0 ಸಂಪರ್ಕವನ್ನು ನೀಡುತ್ತದೆ. ಮಿ ನೆಕ್‌ಬ್ಯಾಂಡ್ ಬ್ಲೂಟೂತ್ ಇಯರ್‌ಫೋನ್‌ಗಳು ಎಂಟು ಗಂಟೆಗಳ ಜಾಹೀರಾತು ಸಮಯವನ್ನು ಹೊಂದಿದ್ದರೆ, ರೆಡ್ಮಿ ಸೋನಿಕ್‌ಬಾಸ್ ವಾಯರ್‌ಲೆಸ್ ಇಯರ್‌ಫೋನ್‌ಗಳು 12 ಗಂಟೆಗಳ ಸಮಯವನ್ನು ನೀಡಲಿದೆ.

ಸದ್ಯ ರೆಡ್‌ಮಿ ಸೋನಿಕ್‌ಬಾಸ್ ವಾಯರ್‌ಲೆಸ್ ಇಯರ್‌ಫೋನ್‌ಗಳ ಬೆಲೆ NPR 2,099 (ಸುಮಾರು 1,300 ರೂ.) ಆಗಿದೆ. ಇನ್ನು ಈ ಇಯರ್‌ಫೋನ್ ಕಪ್ಪು ಮತ್ತು ನೀಲಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಮಿ ಆಫ್‌ಲೈನ್ ಮಳಿಗೆಗಳು ಮತ್ತು ಆನ್‌ಲೈನ್ ಪಾಲುದಾರರ ಮೂಲಕ ಮಾರಾಟವಾಗಲಿದೆ ಎಂದು ಹೇಳಲಾಗಿದೆ.


Click it and Unblock the Notifications