ಬರಲಿದೆ ಶಿಯೋಮಿಯ ರೆಡ್‌ಮಿ ಸೌಂಡ್‌ಬಾರ್‌ 2.0!

|

ಟೆಕ್‌ ವಲಯದಲ್ಲಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ವಿಸ್ತಾರವಾದಂತೆ ಇತರೆ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ಮಾರುಕಟ್ಟೆ ಕೂಡ ವಿಸ್ತಾರವಾಗಿದೆ. ಇವುಗಳಲ್ಲಿ ಸ್ಪೀಕರ್‌ ಮಾರುಕಟ್ಟೆ ಕೂಡ ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆಯನ್ನ ಪಡೆದುಕೊಂಡಿದೆ. ಈಗಾಗ್ಲೆ ಹಲವು ಕಂಪೆನಿಗಳ ಸ್ಪೀಕರ್‌ಗಳು ಮಾರುಕಟ್ಟೆಯಲ್ಲಿಲಭ್ಯವಿವೆ. ಇವುಗಳಲ್ಲಿ ಶಿಯೋಮಿ ಕಂಪೆನಿ ಕೂಡ ಒಂದಾಗಿದ್ದು, ಶಿಯೋಮಿ ಇದೀಗ ತನ್ನ ರೆಡ್ಮಿ ಸೌಂಡ್‌ಬಾರ್‌ 2.0 ಬ್ಲೂಟೂತ್‌ 5.0 ಅನ್ನು ಬಿಡುಗಡೆ ಮಾಡಲಿದೆ ಎಂದು ಹೇಳಲಾಗ್ತಿದೆ.

ಹೌದು

ಹೌದು, ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಕಂಪೆನಿ ಶಿಯೋಮಿ ತನ್ನ ರೆಡ್ಮಿ ಸೌಂಡ್‌ಬಾರ್‌ 2.0 ಅನ್ನುಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ. ಕಳೆದ ವರ್ಷವಷ್ಟೇ ಚೀನಾ ಮತ್ತು ಏಷ್ಯಾ ರಾಷ್ಟ್ರಗಳಲ್ಲಿ ಮಿ ಸೌಂಡ್‌ಬಾರ್ ಅನ್ನು ಬಿಡುಗಡೆ ಮಾಡಿ ಸಂಚಷಲನ ಸೃಷ್ಟಿಸಿತ್ತು. ಇದೀಗ ಅದರ ಮುಂದುವರೆದ ಆವೃತ್ತಿಯನ್ನ ಪರಿಚಯಿಸಲು ಪ್ಲ್ಯಾನ್‌ ರೂಪಿಸಿಕೊಂಡಿದೆ. ಈ ಮೂಲಕ ಪೋರ್ಟಬಲ್ ಸ್ಪೀಕರ್, ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಸಾಧಿಸಲು ಪ್ರಯತ್ನಿಸುತ್ತಿದೆ.

ಇದೀಗ

ಇನ್ನು ಇದೀಗ ಬಿಡುಗಡೆ ಸಿದ್ದವಿರುವ ರೆಡ್‌ಮಿ ಸೌಂಡ್‌ಬಾರ್‌ 2.0 ಈಗಾಗ್ಲೆ ಬ್ಲೂಟೂತ್ ಎಸ್‌ಐಜಿಯಿಂದ ಪ್ರಮಾಣೀಕರವನ್ನ ಪಡೆದುಕೊಮಡಿದ್ದು, MDC-34-DA ಅನ್ನುವ ಅಧಿಕೃತ ಮಾದರಿ ಸಂಖ್ಯೆಯನ್ನು ಹೊಂದಿದೆ. ಅಲ್ಲದೆ ಮಿ ಸೌಂಡ್‌ಬಾರ್‌ನಲ್ಲಿ ಬ್ಲೂಟೂತ್ 4.2 ಕ್ಕೆ ಹೋಲಿಸಿದರೆ ರೆಡ್‌ಮಿ ಸೌಂಡ್‌ಬಾರ್ 2.0 ಬ್ಲೂಟೂತ್ 5.0 ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.ಜೊತೆಗೆ ಈ ಹೊಸ ಸೌಂಡ್‌ಬಾರ್ ಸುಧಾರಿತ ಆಡಿಯೊ ಕಾರ್ಯದಕ್ಷತೆಯನ್ನು ಹೊಂದಿರುತ್ತದೆ ಎಂದು ಅಂದಾಜಿಸಲಾಗಿದೆ.

ಸ್ಪೀಕರ್

ಈ ಸೌಂಡ್‌ಬಾರ್‌ ಸ್ಪೀಕರ್ ಆಪ್ಟಿಕಲ್, SPDIF ಮತ್ತು ಆಕ್ಸ್ ಮೋಡ್‌ನಂತಹ ಹಲವಾರು ಕನೆಕ್ಟಿವಿಟಿ ಫೀಚರ್ಸ್‌ಗಳನ್ನ ಹೊಂದಿರಲಿದೆ ಎನ್ನಲಾಗಿದೆ. ಅಲ್ಲದೆ ಉತ್ತಮ ಸೌಂಡ್‌ ಸಿಸ್ಟಂ ಅನ್ನು ಹೊ0ದಿರಲಿದೆ. ಗ್ರಾಹಕರಿಗೆ ಉತ್ತಮ ಆಡಿಯೋ ಅನುಭವವನ್ನು ನೀಡಲಿದೆ ಎನ್ನಲಾಗಿದೆ. ಅಲ್ಲದೆ ಪಾರ್ಟಿ, ಸಭೆ ಸಮಾರಂಭಗಳಲ್ಲಿ ಕೂಡ ಬಳಸಬಹುದಾದ ಸೌಂಡ್‌ಬಾರ್‌ ಇದಾಗಿರಲಿದೆ ಎಂದು ಅಂದಾಜಿಸಲಾಗಿದೆ.

ಬಜೆಟ್

ಇನ್ನು ಈ ಸೌಂಡ್‌ಬಾರ್‌ ಬಜೆಟ್ ಬೆಲೆಯಲ್ಲಿ ಲಭ್ಯವಾಗುವ ಸಾಧ್ಯತೆ ಇದೆ. ಈ ಹಿಂದೆ ಬಿಡುಗಡೆ ಮಾಡಿರುವ ಮಿ ಸೌಂಡ್‌ಬಾರ್‌ ಕೇವಲ 4,999 ರೂ ಬೆಲೆಯನ್ನ ಹೊಂದಿದ್ದರಿಂದ ಇದು ಕೂಡ ಅದೇ ಮಾದರಿಯ ಬೆಲೆಯನ್ನ ಹೊಂದಿರಲಿದೆ ಎಂದು ಹೇಳಲಾಗ್ತಿದೆ. ಆದರಿಂದ ಶಿಯೋಮಿ ಮಿ ಸೌಂಡ್‌ಬಾರ್‌ನ ಟ್ಯಾಗ್‌ಗಿಂತ ರೆಡ್‌ಮಿ ಸೌಂಡ್‌ಬಾರ್‌ ಕಡಿಮೆ ಬೆಲೆ ಹೊಂದಿರುವ ಸಾಧ್ಯತೆ ಇದೆ.ಸದ್ಯ ಈ ಸೌಂಡ್‌ಬಾರ್‌ ಬಿಡುಗಡೆಗೆ ಸಿದ್ದವಾಗಿದ್ದು, ಯಾವಾಗ ಬಿಡುಗಡೆ ಆಗಲಿದೆ ಎಂಬುದು ಖಚಿತವಾಗಿಲ್ಲ.

ಹಾಗೇ

ಹಾಗೇ ನೋಡುವುದಾದರೆ ಕೆಲ ದಿನಗಳ ಹಿಂದೆಯಷ್ಟೆ ಶಿಯೋಮಿ ತನ್ನ 10,000mAh ಸಾಮರ್ಥ್ಯದ ಮೀ ವಾಯರ್‌ಲೆಸ್‌ ಚಾರ್ಜಿಂಗ್‌ ಪವರ್‌ ಬ್ಯಾಂಕ್‌ ಅನ್ನು ಪರಿಚಯಿಸಿತ್ತು. ಡ್ಯುಯೆಲ್‌ ಪೋರ್ಟ್‌ ಚಾರ್ಜಿಂಗ್‌ ಸಾಮರ್ಥ್ಯ ಹೊಂದಿರುವ ಈ ಪವರ್‌ ಬ್ಯಾಂಕ್‌ 18W ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಒಳಗೊಂಡಿದೆ. ಅಲ್ಲದೆ 18w ಔಟ್‌ಪುಟ್‌ ಪೋರ್ಟ್‌ ಅನ್ನು ಸಹ ಹೊಂದಿತ್ತು. ಇನ್ನು ಈ ಪವರ್ ಬ್ಯಾಂಕ್ ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಸಹ ಬೆಂಬಲಿಸಲಿದೆ.

Best Mobiles in India

English summary
Redmi Soundbar 2.0 gets Bluetooth certification, could launch soon.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X