Redmi Turbo 4 ಬಿಡುಗಡೆಗೆ ಮುಹೂರ್ತ ಫಿಕ್ಸ್; 6500mAh ಬಿಗ್ ಬ್ಯಾಟರಿ.. 20MP ಸೆಲ್ಫಿ ಕ್ಯಾಮೆರಾ.. ಬೆಲೆ ಎಷ್ಟು?
ರೆಡ್ಮಿ ಹೊಸ ಮೊಬೈಲ್ ಬಿಡುಗಡೆ ಮಾಡಲು ಸಜ್ಜಾಗಿದೆ. ಅದುವೇ ರೆಡ್ಮಿ ಟರ್ಬೊ 4 (Redmi Turbo 4) ಸ್ಮಾರ್ಟ್‌ಫೋನ್ ಆಗಿದೆ. ಈ ಫೋನಿನ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಸಲಾಗಿದೆ. ಹೌದು, ಕಂಪನಿಯು ಹೊಸ ಟೀಸರ್‌ನಲ್ಲಿ ಫೋನಿನ ಡಿಸೈನ್ ಮತ್ತು ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದೆ. ಈ ಮೊಬೈಲ್ ಮೀಡಿಯಾಟೆಕ್ ಡೈಮೆನ್ಸಿಟಿ 8400 ಅಲ್ಟ್ರಾ ಪ್ರೊಸೆಸರ್ ಹೊಂದಿದೆ. ಇದು ಭಾರತದಲ್ಲಿ ಪೊಕೊ X7 ಪ್ರೊ (POCO X7 Pro) ಹೆಸರಿನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಬನ್ನಿ, ಈ ಫೋನಿನ ಬಿಡುಗಡೆ ದಿನಾಂಕ ಮತ್ತು ವಿಶೇಷತೆಗಳನ್ನು ತಿಳಿಯೋಣ.
ರೆಡ್ಮಿ ಟರ್ಬೊ 4 ಫೋನ್ ಜನವರಿ 2 ರಂದು ಬಿಡುಗಡೆಯಾಗಲಿದೆ. ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್ ಮೂಲಕ ದಿನಾಂಕವನ್ನು ಪ್ರಕಟಿಸಿದೆ. ಈಗಾಗಲೇ ಮುಂಗಡ ಬುಕಿಂಗ್‌ಗೆ ಈ ಫೋನ್ ಲಭ್ಯವಿದೆ. ಈ ಮೊಬೈಲ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 20 ಮೆಗಾಪಿಕ್ಸೆಲ್ ಸೆಲ್ಪಿ ಕ್ಯಾಮೆರಾ ಹೊಂದಿದೆ. ಫೋನಿನಲ್ಲಿ 120Hz ರಿಫ್ರೆಶ್ ದರದೊಂದಿಗೆ 6.67 ಇಂಚಿನ ಡಿಸ್ಪ್ಲೇ ಲಭ್ಯವಿದೆ. ಇದು 6500mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಮತ್ತು 90W ಚಾರ್ಜಿಂಗ್ ಒಳಗೊಂಡಿದೆ. ಈ ಫೋನಿ ಡಿಸೈನ್ ಮತ್ತು ಇನ್ನಿತರ ಫೀಚರ್ಸ್ ತಿಳಿಯಲು ಮುಂದೆ ಓದಿ.

ರೆಡ್ಮಿ ಟರ್ಬೊ 4 ಡಿಸೈನ್ ಮತ್ತು ಕಲರ್
ರೆಡ್ಮಿ ಟರ್ಬೊ 3 (Redmi Turbo 3) ಫೋನಿನಂತೆಯೇ ರೆಡ್ಮಿ ಟರ್ಬೊ 4 ಸಹ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಆದರೆ, ಕ್ಯಾಮೆರಾ ಸೆಟಪ್ ವಿನ್ಯಾಸ ಹೊಸದು ಮತ್ತು ವಿಭಿನ್ನವಾಗಿದೆ. ಟರ್ಬೊ 4 ಕ್ಯಾಮೆರಾ ಆಯತಾಕಾರದ ಚೌಕಟ್ಟಿನಲ್ಲಿದೆ. ಬ್ಯಾಟರಿ ಲೈಟ್ ಮಾಡ್ಯೂಲ್‌ನ ಹೊರಗಿದೆ. ಈ ಫೋನಿನ ಬಣ್ಣವು ಆಫ್ ವೈಟ್ ಆಗಿದೆ. ಹಿಂಭಾಗದಲ್ಲಿ ಕೆಂಪು ಬಣ್ಣದ ಗೆರೆಯನ್ನು ಇದೆ. ಒಟ್ಟಾರೆಯಾಗಿ, ಈ ಹೊಸ ಮೊಬೈಲ್ ಯುವಕರನ್ನು ಆಕರ್ಷಿಸುತ್ತದೆ. ಈ ಫೋನ್ ಕಪ್ಪು ಮತ್ತು ಸಯಾನ್ ಸೇರಿದಂತೆ ಇತರೆ ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ.
ರೆಡ್ಮಿ ಟರ್ಬೊ 4 ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ರೆಡ್ಮಿ ಟರ್ಬೊ 4 ಸ್ಮಾರ್ಟ್‌ಫೋನ್ 6.67 ಇಂಚಿನ ಡಿಸ್ಪ್ಲೇಯನ್ನು ಹೊಂದಿರುತ್ತದೆ. ಇದು 1.5K ರೆಸಲ್ಯೂಶನ್ ಫ್ಲಾಟ್ LTPS ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರದ ಬೆಂಬಲ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಮುಂಬರುವ ರೆಡ್ಮಿ ಟರ್ಬೊ 4 ಮೊಬೈಲ್ ಮೀಡಿಯಾಟೆಕ್ ಡೈಮೆನ್ಸಿಟಿ 8400 ಅಲ್ಟ್ರಾ ಪ್ರೊಸೆಸರ್ ಹೊಂದಿರಲಿದೆ. ಈ ಪ್ರೊಸೆಸರ್ ಹೊಂದಿರುವ ಮೊದಲ ಫೋನ್ ಡೈಮೆನ್ಸಿಟಿ 8400 ಅಲ್ಟ್ರಾ ಆಗಿದೆ. 8400 ಅಲ್ಟ್ರಾವು 3.25GHz ನಲ್ಲಿ ಪ್ರೈಮ್ ಕೋರ್ ಹೊಂದಿದೆ.

ಕ್ಯಾಮೆರಾ ಸೆಟಪ್
ರೆಡ್ಮಿ ಟರ್ಬೊ 4 ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿರಲಿದೆ. ಹಾಗೆಯೇ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಇರಲಿದೆ. ಸೆಲ್ಪಿ ಮತ್ತು ವಿಡಿಯೋ ಕೆರೆಗಾಗಿ, ಈ ಮೊಬೈಲ್ 20 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿರುತ್ತದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಕಂಪನಿಯು ರೆಡ್ಮಿ ಟರ್ಬೊ 4 ಸ್ಮಾರ್ಟ್‌ಫೋನ್ ಅನ್ನು 6500mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಲಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 90W ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುತ್ತದೆ.
ಇತರೆ ವೈಶಿಷ್ಟ್ಯಗಳು
ರೆಡ್ಮಿ ಟರ್ಬೊ 4 ಮೊಬೈಲ್ ಪ್ಲಾಸ್ಟಿಕ್ ಬ್ಯಾಕ್ ಮತ್ತು ಶಾರ್ಟ್ ಫೋಕಸ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹೊಂದಿರುವ ಸಾಧ್ಯತೆಯಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ಡ್ಯುಯಲ್ 4G VoLTE, ವೈ-ಫೈ, ಬ್ಲೂಟೂತ್, ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ.


Click it and Unblock the Notifications








