Redmi Watch 3 Active: ಎಂಟ್ರಿಯಲ್ಲೇ ಸಖತ್ ಸೌಂಡ್ ಮಾಡ್ತಿದೆ ಈ ಸ್ಮಾರ್ಟ್‌ವಾಚ್!
ಭಾರತದ ಮಾರುಕಟ್ಟೆಯಲ್ಲಿ ಶಿಯೋಮಿ ಕಂಪೆನಿ ರೆಡ್ಮಿ ಬ್ರ್ಯಾಂಡ್‌ನಲ್ಲಿ ಹೊಸ ಸ್ಮಾರ್ಟ್‌ವಾಚ್ ಅನ್ನು ಪರಿಚಯಿಸಿದೆ. ಇದನ್ನು ರೆಡ್ಮಿ ವಾಚ್ 3 ಆ್ಯಕ್ಟಿವ್ ಎಂದು ಹೆಸರಿಸಲಾಗಿದೆ. ಇನ್ನು ಈ ಸ್ಮಾರ್ಟ್‌ವಾಚ್ 200 ಕಸ್ಟಮೈಸ್ಡ್ ವಾಚ್‌ಫೇಸ್‌ಗಳನ್ನು ಬೆಂಬಲಿಸಲಿದೆ. ಜೊತೆಗೆ 289mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.
ಹೌದು, ರೆಡ್ಮಿ ವಾಚ್ 3 ಆ್ಯಕ್ಟಿವ್ ಭಾರತದಲ್ಲಿ ಅನಾವರಣಗೊಂಡಿದೆ. ಈ ಸ್ಮಾರ್ಟ್‌ವಾಚ್ ತನ್ನ ವಿಭಿನ್ನ ಡಿಸೈನ್ ಹಾಗೂ ಹೆಲ್ತ್ ಫೀಚರ್ಸ್‌ಗಳಿಂದ ಗಮನಸೆಳೆದಿದೆ. ಇದು ಬ್ಲೂಟೂತ್ ಕಾಲಿಂಗ್ ಅನ್ನು ಕೂಡ ಬೆಂಬಲಿಸಲಿದ್ದು, ಇನ್‌ಬಿಲ್ಟ್ ಮೈಕ್ರೊಫೋನ್ ಅನ್ನು ಅಳವಡಿಸಲಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರೆಡ್ಮಿ ವಾಚ್ 3 ಆ್ಯಕ್ಟಿವ್ ವಿಶೇಷತೆ ಏನು?
ರೆಡ್ಮಿ ವಾಚ್ 3 ಆ್ಯಕ್ಟಿವ್ ಸ್ಮಾರ್ಟ್ ವಾಚ್ 1.83 ಇಂಚಿನ LCD ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 240×280 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇದು 450 ನೀಟ್ಸ್ ಬ್ರೈಟ್‌ನೆಸ್ ಅನ್ನು ಒಳಗೊಂಡಿದೆ. ಇನ್ನು ಸ್ಮಾರ್ಟ್‌ವಾಚ್ ಬ್ಲೂಟೂತ್ 5.3 ಕನೆಕ್ಟಿವಿಟಿಯನ್ನು ಬೆಂಬಲಿಸಲಿದೆ. ಇದರಿಂದ ನೀವು ಸ್ಮಾರ್ಟ್‌ವಾಚ್ ಮೂಲಕವೇ ಬ್ಲೂಟೂತ್ ಕರೆಯನ್ನು ಮಾಡುವುದಕ್ಕೆ ಸಾದ್ಯವಾಗಲಿದೆ. ಇದಕ್ಕಾಗಿ ಇನ್‌ಬಿಲ್ಟ್ ಮೈಕ್ರೊಫೋನ್ ಮತ್ತು ಧ್ವನಿವರ್ಧಕಗಳನ್ನು ಕೂಡ ಅಳವಡಿಸಲಾಗಿದೆ.
ಇನ್ನು ಈ ಸ್ಮಾರ್ಟ್‌ವಾಚ್ ಹೆಲ್ತ್ ಫೀಚರ್ಸ್‌ಗಳನ್ನು ಸಹ ಹೇರಳವಾಗಿ ಹೊಂದಿದೆ. ಇದು ನಿಮ್ಮ ರಕ್ತದ ಆಮ್ಲಜನಕ ಮಟ್ಟವನ್ನು ಟ್ರ್ಯಾಕ್ ಮಾಡುವುದಲ್ಲೆ, ಹೃದಯ ಬಡಿತವನ್ನು ಸಹ ಮಾನಿಟರ್ ಮಾಡಲಿದೆ. ಇನ್ನು ಸ್ಲಿಪಿಂಗ್ ಮಾನಿಟರ್ ಅನ್ನು ಸಹ ಒಳಗೊಂಡಿದ್ದು, ನಿಮ್ಮ ನಿದ್ರೆಯ ಮಾದರಿಗಳನ್ನು ಟ್ರ್ಯಾಕ್ ಮಾಡಲಿದೆ. ಜೊತೆಗೆ ಈ ಸ್ಮಾರ್ಟ್‌ವಾಚ್ Mi ಫಿಟ್‌ನೆಸ್ ಅಪ್ಲಿಕೇಶನ್ ಅನ್ನು ಬೆಂಬಲಿಸಲಿದೆ. ಈ ಅಪ್ಲಿಕೇಶನ್‌ನಲ್ಲಿ 10 ಕಂಟ್ಯಾಕ್ಟ್‌ಗಳನ್ನು ಸೇವ್ ಮಾಡಬಹುದಾಗಿದೆ.
ರೆಡ್ಮಿ ವಾಚ್ 3 ಆ್ಯಕ್ಟಿವ್ ಸ್ಮಾರ್ಟ್‌ವಾಚ್ 100ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್‌ಗಳಿಗೆ ಬೆಂಬಲಿಸಲಿದೆ. ಇದು 200 ಕಸ್ಟಮೈಸ್ ಮಾಡಬಹುದಾದ ವಾಚ್ ಫೇಸ್‌ಗಳನ್ನು ಬೆಂಬಲಿಸುತ್ತದೆ. ಇನ್ನು ಈ ಸ್ಮಾರ್ಟ್ ವಾಚ್ 289mAh ಸಾಮರ್ಥ್ಯದ ಬ್ಯಾಟರಿಯನ್ನು ಬೆಂಬಲಿಸಲಿದೆ. ಇದು ಸಾಮಾನ್ಯ ಬಳಕೆಯಲ್ಲಿ 12 ದಿನಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಅಲ್ಲದೆ ಭಾರೀ ಬಳಕೆಯೊಂದಿಗೆ ಎಂಟು ದಿನಗಳ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ ಎಂದು ಹೇಳಲಾಗಿದೆ. ಈ ಸ್ಮಾರ್ಟ್‌ವಾಚ್ ಮ್ಯಾಗ್ನೆಟಿಕ್ ಚಾರ್ಜರ್ ಅನ್ನು ಬೆಂಬಲಿಸಲಿದೆ.
ಇದಲ್ಲದೆ, ಈ ಸ್ಮಾರ್ಟ್ ವಾಚ್ 5ATM ನೀರಿನ ಪ್ರತಿರೋಧವನ್ನು ನೀಡುತ್ತದೆ ಎಂದು ಕಂಪೆನಿ ಹೇಳಿದೆ. ಈ ಸ್ಮಾರ್ಟ್‌ವಾಚ್ ಆಂಡ್ರಾಯ್ಡ್6.0 ಅಥವಾ iOS 12 ಅಥವಾ ಅದಕ್ಕಿಂತ ಹೆಚ್ಚಿನ ಮೊಬೈಲ್ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ರನ್ ಆಗುವ ಡಿವೈಸ್‌ಗಳಿಗೆ ಹೊಂದಿಕೊಳ್ಳಲಿದೆ. ಇನ್ನು ಈ ಸ್ಮಾರ್ಟ್‌ವಾಚ್ ಸುಮಾರು 41.67g ತೂಕವನ್ನು ಹೊಂದಿದ್ದು, ಸಾಕಷ್ಟು ಹಗುರವಾಗಿದೆ.
ರೆಡ್ಮಿ ವಾಚ್ 3 ಆ್ಯಕ್ಟಿವ್ ಸ್ಮಾರ್ಟ್‌ವಾಚ್ ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ರೆಡ್ಮಿ ವಾಚ್ 3 ಆ್ಯಕ್ಟಿವ್ ಸ್ಮಾರ್ಟ್‌ವಾಚ್ 2,999ರೂ. ಬೆಲೆಯನ್ನು ಹೊಂದಿದೆ. ಇನ್ನು ಸ್ಮಾರ್ಟ್‌ವಾಚ್ ಪ್ಲಾಟಿನಂ ಗ್ರೇ ಮತ್ತು ಚಾರ್ಕೋಲ್ ಬ್ಲ್ಯಾಕ್ ಕಲರ್ ಆಯ್ಕೆಗಳಲ್ಲಿ ಬರಲಿದೆ. ಇದನ್ನು ಆಗಸ್ಟ್ 3 ರಿಂದ Mi.com ಮತ್ತು Xiaomi ರಿಟೇಲ್ ಸ್ಟೋರ್‌ಗಳ ಮೂಲಕ ಖರೀದಿಸಬಹುದಾಗಿದೆ.
ಇನ್ನು ಇದೇ ಸಂದರ್ಭದಲ್ಲಿ ರೆಡ್ಮಿ 12 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ 6.79 ಇಂಚಿನ FHD ಡಿಸ್‌ಪ್ಲೇ ಹೊಂದಿದೆ. ಇದು ಸ್ನಾಪ್‌ಡ್ರಾಗನ್ 4 ಜನ್ 2 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, ಅದರಲ್ಲಿ ಪ್ರಮುಖವಾಗಿ 50 ಮೆಗಾಪಿಕ್ಸೆಲ್ ಪ್ರೈಮರಿ ಶೂಟರ್, 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಆಯ್ಕೆ ಪಡೆದುಕೊಂಡಿದೆ. ಜೊತೆಗೆ 5,000 mAh ಸಾಮರ್ಥ್ಯದ ಬೃಹತ್ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, ಇದು 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಕಾಣಿಸಿಕೊಂಡಿದೆ.


Click it and Unblock the Notifications








