ಹೈಪರ್‌ಓಎಸ್‌ನಲ್ಲಿ ಕಾರ್ಯನಿರ್ವಹಿಸಲಿದೆ ಈ ಸ್ಮಾರ್ಟ್‌ವಾಚ್! ಬರೋಬ್ಬರಿ 20 ದಿನಗಳ ಬ್ಯಾಟರಿ ಬ್ಯಾಕಪ್!
ರೆಡ್ಮಿ ಬ್ರ್ಯಾಂಡ್ ಟೆಕ್ ಲೋಕದಲ್ಲಿ ಕೇವಲ ಸ್ಮಾರ್ಟ್‌ಫೋನ್‌ಗಳಿಗೆ ಮಾತ್ರ ಸೀಮಿತವಾಗಿಲ್ಲ. ವಿಭಿನ್ನ ಶೈಲಿಯ ಸ್ಮಾರ್ಟ್‌ವಾಚ್‌ಗಳನ್ನು ಕೂಡ ಪರಿಚಯಿಸುತ್ತಾ ಬಂದಿದೆ. ಇದೀಗ ತನ್ನ ಹೊಸ ರೆಡ್ಮಿ ವಾಚ್ 4 ಅನ್ನು ಅನಾವರಣಗೊಳಿಸಿದೆ. ಈ ಸ್ಮಾರ್ಟ್‌ವಾಚ್ ಆಲ್‌ವೇಸ್ ಆನ್ ಡಿಸ್‌ಪ್ಲೇ ಬೆಂಬಲದೊಂದಿಗೆ ಎಂಟ್ರಿ ನೀಡಿದ್ದು, ಸ್ಟೈಲಿಶ್ ಲುಕ್‌ನಿಂದ ಗಮನಸೆಳೆದಿದೆ.
ಹೌದು, ರೆಡ್ಮಿ ವಾಚ್ 4 ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಸ್ಮಾರ್ಟ್‌ವಾಚ್ ಹೈಪರ್‌ಓಎಸ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 150 ಕ್ಕೂ ಹೆಚ್ಚು ಸ್ಪೋರ್ಟ್ಸ್‌ಮೋಡ್‌ಗಳಿಗೆ ಪ್ರವೇಶವನ್ನು ನೀಡಲಿದೆ. ಜೊತೆಗೆ 470mAh ಸಾಮರ್ಥ್ಯ ಬ್ಯಾಟರಿಯನ್ನು ಒಳಗೊಂಡಿದ್ದು, ಸಾಮಾನ್ಯ ಮೋಡ್‌ನಲ್ಲಿ 20 ದಿನಗಳವರೆಗೆ ಬ್ಯಾಟರಿ ಅವಧಿಯನ್ನು ನೀಡಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರೆಡ್ಮಿ ವಾಚ್ 4 ಫೀಚರ್ಸ್ ಹೇಗಿದೆ?
ರೆಡ್ಮಿ ವಾಚ್ 4 ಸ್ಮಾರ್ಟ್‌ವಾಚ್ 1.97 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 390x450 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇದು 600 ನೀಟ್ಸ್ ಗರಿಷ್ಠ ಬ್ರೈಟ್‌ನೆಸ್ ಲೆವೆಲ್ ಅನ್ನು ನೀಡಲಿದೆ. ಇದಲ್ಲದೆ ಸ್ಮಾರ್ಟ್‌ವಾಚ್ 150 ಕ್ಕೂ ಹೆಚ್ಚು ಪ್ರಿ-ಲೋಡ್ ಸ್ಪೋರ್ಟ್ಸ್ ಮೋಡ್‌ಗಳೊಂದಿಗೆ ಬರಲಿದೆ. ಇದಿಷ್ಟೇ ಅಲ್ಲ ಈ ಸ್ಮಾರ್ಟ್‌ವಾಚ್ 5ATM ನೀರು-ನಿರೋಧಕ ವ್ಯವಸ್ಥೆಯನ್ನು ಒಳಗೊಂಡಿದೆ.
ಇನ್ನು ರೆಡ್ಮಿ ವಾಚ್ 4 HyperOS ನಲ್ಲಿ ಕಾರ್ಯನಿರ್ವಹಿಸಲಿದೆ. ಇದುವೇ ಈ ಸ್ಮಾರ್ಟ್‌ವಾಚ್‌ನ ಮೇನ್ ಹೈಲೈಟ್ ಆಗಿದ್ದು, ಎಲ್ಲರ ಗಮನಸೆಳೆಯುವಂತೆ ಮಾಡಿದೆ. ಇದಲ್ಲದೆ ಸ್ಮಾರ್ಟ್‌ವಾಚ್ ಬಳಕೆದಾರರ ಆರೋಗ್ಯ ಮಟ್ಟವನ್ನು ಅಳೆಯುವ ಹಲವು ಫೀಚರ್ಸ್‌ಗಳನ್ನು ಸಹ ಒಳಗೊಂಡಿದೆ. ಇದರಲ್ಲಿ ಪ್ರಮುಖವಾಗಿ ದೈನಂದಿನ ಚಟುವಟಿಕೆ ಟ್ರ್ಯಾಕಿಂಗ್, ಸ್ತ್ರೀ ಋತುಚಕ್ರದ ಜ್ಞಾಪನೆ, ಒತ್ತಡದ ಮೇಲ್ವಿಚಾರಣೆ, ಉಸಿರಾಟದ ತರಬೇತಿ, ನಿದ್ರೆ, ರಕ್ತದ ಆಮ್ಲಜನಕ ಮತ್ತು ಹೃದಯ ಬಡಿತದ ಮೇಲ್ವಿಚಾರಣೆ ಫೀಚರ್ಸ್‌ಗಳು ಸೇರಿವೆ.

ಇದಲ್ಲದೆ ಸ್ಮಾರ್ಟ್‌ವಾಚ್ ಆಕ್ಸಿಲೆರೋಮೀಟರ್, ಗೈರೊ, ಜಿಯೋಮ್ಯಾಗ್ನೆಟಿಕ್, ಆಂಬಿಯೆಂಟ್ ಲೈಟ್ ಮತ್ತು ಆಪ್ಟಿಕಲ್ ಹಾರ್ಟ್‌ಬೀಟ್ ಸೆನ್ಸಾರ್, ರಕ್ತದ ಆಮ್ಲಜನಕ ಟ್ರ್ಯಾಕರ್ ಅನ್ನು ಒಳಗೊಂಡಿದೆ. ಇನ್ನು ಸ್ಮಾರ್ಟ್‌ವಾಚ್ ಧರಿಸುವವರಿಗೆ ತರಬೇತಿ ನೀಡಲು ಬಳಸಬಹುದಾದ ಧ್ವನಿ ತರಬೇತುದಾರರನ್ನು ಸಹ ಹೊಂದಿದೆ. ಈ ವಾಚ್‌ನಲ್ಲಿ 470mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಲಾಗಿದೆ. ಇದು ಸಾಮಾನ್ಯ ಮೋಡ್‌ನಲ್ಲಿ 20 ದಿನಗಳವರೆಗೆ ಬ್ಯಾಟರಿ ಅವಧಿಯನ್ನು ನೀಡಲಿದ್ದು, ಆಲ್‌ವೇಸ್ ಆನ್ ಡಿಸ್‌ಪ್ಲೇ ಮೋಡ್‌ನಲ್ಲಿ 10 ದಿನಗಳ ಬಾಳಿಕೆಯನ್ನು ನೀಡಲಿದೆ. ಇದು GPS, ಗೆಲಿಲಿಯೋ, ಗ್ಲೋನಾಸ್, ಬೀಡೌ, QZSS, ಬ್ಲೂಟೂತ್ 5.3 ಮತ್ತು NFC ಸಂಪರ್ಕವನ್ನು ಸಹ ಬೆಂಬಲಿಸುತ್ತದೆ.

ರೆಡ್ಮಿ ವಾಚ್ 4 ಬೆಲೆ ಮತ್ತು ಲಭ್ಯತೆ
ರೆಡ್ಮಿ ವಾಚ್ 4 ಪ್ರಸ್ತುತ ಚೀನಾದಲ್ಲಿ ಮಾತ್ರ ಬಿಡುಗಡೆ ಆಗಿದೆ. ಆದರಿಂದ ಇದರ ಬೆಲೆ ಚೀನಾದಲ್ಲಿ CNY 499 (ಅಂದಾಜು 5,957ರೂ)ಆಗಿದೆ. ಇದನ್ನು ಕಪ್ಪು ಮತ್ತು ಸಿಲ್ವರ್ ಸ್ನೋ ವೈಟ್ ಬಣ್ಣಗಳಲ್ಲಿ ನೀಡಲಾಗುತ್ತದೆ. ಇದು ಮೆಟಾಲಿಕ್, ಲೆದರ್ ಅಥವಾ ನೈಲಾನ್ ಸ್ಟ್ರಾಪ್ ಸೇರಿದಂತೆ ವಿವಿಧ ಸ್ಟ್ರಾಪ್ ಆಯ್ಕೆಗಳೊಂದಿಗೆ ಬರಲಿದೆ. ಈ ವಾಚ್ ಭಾರತಕ್ಕೆ ಎಂಟ್ರಿ ನೀಡುವುದರ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.
ಇನ್ನು ಇದೇ ಸಮಯದಲ್ಲಿ ರೆಡ್ಮಿ K70E ಸ್ಮಾರ್ಟ್‌ಫೋನ್ ಕೂಡ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ಫೋನ್ ಸಖತ್ ಸ್ಟೈಲಿಶ್ ಲುಕ್‌ನೊಂದಿಗೆ ಎಂಟ್ರಿ ನೀಡಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 8300 ಅಲ್ಟ್ರಾ SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿದೆ. ಇದಲ್ಲದೆ 90W ವೇಗದ ಚಾರ್ಜಿಂಗ್ ಬೆಂಬಲಿಸುವ 5500mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.


Click it and Unblock the Notifications








