Home
ಸುದ್ದಿಜಾಲ

ಬಂದೇ ಬಿಡ್ತು ಹೊಸ Redmi ವಾಚ್‌: ಅತೀ ಕಡಿಮೆ ಬೆಲೆ.. ಒಮ್ಮೆ ಚಾರ್ಜ್ ಮಾಡಿದ್ರೆ, 18 ದಿನ ಕಿರಿಕಿರಿ ಇರಲ್ಲ!

ಸ್ಮಾರ್ಟ್‌ವಾಚ್‌ ಪ್ರಿಯರಿಗೆ ಇಲ್ಲಿದೆ ಸಿಹಿ ಸುದ್ದಿ. ಸದ್ದಿಲ್ಲದೇ, ಅತೀ ಕಡಿಮೆ ಬೆಲೆಗೆ ಹೊಸ ವಾಚ್‌ ಬಿಡುಗಡೆಯಾಗಿದೆ. ಹೌದು, ರೆಡ್ಮಿ ವಾಚ್ 5 ಆಕ್ಟಿವ್ (Redmi Watch 5 Active) ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಗಡಿಯಾರವು 18 ದಿನಗಳ ಬ್ಯಾಟರಿ ಬಾಳಿಕೆಯೊಂದಿಗೆ ಬರುತ್ತದೆ. ಜೊತೆಗೆ, ಇದು IPX8 ರೇಟಿಂಗ್ ಅನ್ನು ಸಹ ಪಡೆದುಕೊಂಡಿದೆ. ಇದರಲ್ಲಿ ನಿಮಗೆ Xiaomi HyperOS ಅನ್ನು ನೀಡಲಾಗಿದೆ. ಮತ್ತು ಇದು ಅಂತರ್ನಿರ್ಮಿತ ಅಲೆಕ್ಸಾದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು ಕೇವಲ 3,000 ರೂ.ಗಿಂತ ಕಡಿಮೆ ಬೆಲೆಗೆ ಲಭ್ಯವಿದೆ.

ನೀವು ಉತ್ತಮ ಸ್ಮಾರ್ಟ್‌ವಾಚ್ ಖರೀದಿಸಲು ಬಯಸಿದರೆ, ರೆಡ್ಮಿ ವಾಚ್ 5 ಆಕ್ಟಿವ್ (Redmi Watch 5 Active) ಅನ್ನು ಖರೀದಿಸಬಹುದು. ಇದು ಹಲವು ವಿಭಿನ್ನ ವೈಶಿಷ್ಟ್ಯಗಳೊಂದಿಗೆ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದು 2 ಇಂಚಿನ ಡಿಸ್ಲ್ಪೇಯನ್ನು ಹೊಂದಿದೆ. 470mAh ಬ್ಯಾಟರಿಯನ್ನು ಒಳಗೊಂಡಿದೆ. ಆರೋಗ್ಯ ಟ್ರ್ಯಾಕಿಂಗ್ ವಿಷಯದಲ್ಲಿ, ಇದು ಹೃದಯ ಬಡಿತ ಸಂವೇದಕ, ಅಕ್ಸೆಲೆರೊಮೀಟರ್ ಮತ್ತು SpO2 ಸಂವೇದಕದೊಂದಿಗೆ ಬರುತ್ತದೆ. ಈ ವಾಚ್‌ನ ಬೆಲೆ ಮತ್ತು ಲಭ್ಯತೆ ಬಗ್ಗೆ ತಿಳಿಯೋಣ ಬನ್ನಿ.

ಬಂದೇ ಬಿಡ್ತು ಹೊಸ Redmi ವಾಚ್‌: ಅತೀ ಕಡಿಮೆ ಬೆಲೆ.. 18 ದಿನ ಬ್ಯಾಟರಿ ಬಾಳಿಕೆ

ರೆಡ್ಮಿ ವಾಚ್ 5 ಆಕ್ಟಿವ್ ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ರೆಡ್ಮಿ ವಾಚ್ 5 ಆಕ್ಟಿವ್ ಅನ್ನು 2,799 ರೂ. ಬೆಲೆಗೆ ಬಿಡುಗಡೆ ಮಾಡಲಾಗಿದೆ. ಇದು ಮ್ಯಾಟ್ ಸಿಲ್ವರ್ ಮತ್ತು ಮಿಡ್‌ನೈಟ್ ಬ್ಲಾಕ್ (ಕಪ್ಪು) ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಸೆಪ್ಟೆಂಬರ್ 3 ರಿಂದ ಅಮೇಜಾನ್ (Amazon), ಫ್ಲಿಪ್‌ಕಾರ್ಟ್ (Flipkart) ಮತ್ತು ಶಿಯೋಮಿಯ (Xiaomi) ಅಧಿಕೃತ ವೆಬ್‌ಸೈಟ್‌ನಲ್ಲಿ ರೆಡ್ಮಿ ವಾಚ್ 5 ಆಕ್ಟಿವ್ ಸ್ಮಾರ್ಟ್‌ವಾಚ್‌ನ ಮೊದಲ ಮಾರಾಟವು ಪ್ರಾರಂಭವಾಗುತ್ತದೆ.

ರೆಡ್ಮಿ ವಾಚ್ 5 ಆಕ್ಟಿವ್ ಸ್ಮಾರ್ಟ್‌ವಾಚ್‌ನ ವೈಶಿಷ್ಟ್ಯಗಳು

ರೆಡ್ಮಿ ವಾಚ್ 5 ಆಕ್ಟಿವ್ ಇಂಚಿನ LCD ಡಿಸ್ಲ್ಪೇಯನ್ನು ಹೊಂದಿದೆ. ಇದು 500 ನಿಟ್ಸ್‌ ವರೆಗಿನ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್‌ನ ಪಟ್ಟಿಯನ್ನು TPU ವಸ್ತುವಿನಿಂದ ಮಾಡಲಾಗಿದ್ದು, ಬಾಡಿಯಲ್ಲಿ ಸತು ಮಿಶ್ರಲೋಹವನ್ನು ಬಳಸಲಾಗಿದೆ. ಈ ಸ್ಮಾರ್ಟ್‌ವಾಚ್‌ HyperOS ಸಾಫ್ಟ್‌ವೇರ್ ಅನ್ನು ಆಧರಿಸಿದೆ. ಇದು 200+ ಕ್ಲೌಡ್ ವಾಚ್ ಫೇಸ್‌ಗಳು, ಹಿಂದಿ ಭಾಷೆಯ ಬೆಂಬಲ, ಎಮೋಜಿ ಬೆಂಬಲ ಮತ್ತು ಗ್ರಾಹಕೀಯಗೊಳಿಸಬಹುದಾದ ರಿಂಗ್‌ಟೋನ್‌ಗಳಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ರೆಡ್ಮಿ ವಾಚ್ 5 ಆಕ್ಟಿವ್ Mi Fitness App (Xiaomi Wear) ನೊಂದಿಗೆ ಏಕೀಕರಣವನ್ನು ಬೆಂಬಲಿಸುತ್ತದೆ. (ಸ್ಟ್ರಾವಾ) Strava ಮತ್ತು ಆಪಲ್‌ ಹೆಲ್ತ್‌ (Apple Health) ನೊಂದಿಗೆ ಸಹ ಹೊಂದಿಕೊಳ್ಳುತ್ತದೆ. ಇದು IPX8 ರೇಟಿಂಗ್‌ನೊಂದಿಗೆ ಬರುತ್ತದೆ. ಮತ್ತು 140+ ಕ್ರೀಡಾ ವಿಧಾನಗಳನ್ನು ಹೊಂದಿದೆ. ಸ್ಪಷ್ಟ ಕರೆಗಾಗಿ, ಇದು ಮೂರು ಮೈಕ್‌ಗಳೊಂದಿಗೆ ENC ಸೆಟಪ್ ಅನ್ನು ಹೊಂದಿದೆ.

ರೆಡ್ಮಿ ವಾಚ್ 5 ಆಕ್ಟಿವ್: ಆರೋಗ್ಯ ಟ್ರ್ಯಾಕಿಂಗ್ ವೈಶಿಷ್ಟ್ಯ

ರೆಡ್ಮಿ ವಾಚ್ 5 ಆಕ್ಟಿವ್ ವಾಚ್‌ 470mAh ಬ್ಯಾಟರಿಯನ್ನು ಹೊಂದಿದೆ, ಇದು ಮ್ಯಾಗ್ನೆಟಿಕ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಮತ್ತು 18 ದಿನಗಳ ಬ್ಯಾಟರಿ ಬಾಳಿಕೆಯನ್ನು ಒದಗಿಸುತ್ತದೆ. ಸಂವೇದಕಗಳು ಮತ್ತು ಆರೋಗ್ಯ ಟ್ರ್ಯಾಕಿಂಗ್ ವಿಷಯದಲ್ಲಿ ಇದು, ಹೃದಯ ಬಡಿತ ಸಂವೇದಕ, ಅಕ್ಸೆಲೆರೊಮೀಟರ್ ಮತ್ತು SpO2 ಸಂವೇದಕದೊಂದಿಗೆ ಬರುತ್ತದೆ.

ಆರೋಗ್ಯ ಮೇಲ್ವಿಚಾರಣೆಗಾಗಿ, ಇದು ನಿದ್ರೆಯ ಟ್ರ್ಯಾಕಿಂಗ್, ಹೃದಯ ಬಡಿತ, SpO2 ಮತ್ತು ಒತ್ತಡ ನಿರ್ವಹಣೆ ಒಳನೋಟಗಳು, ಸ್ತ್ರೀ ಆರೋಗ್ಯ ಟ್ರ್ಯಾಕಿಂಗ್, ಸ್ಟೆಪ್ಸ್ ಕೌಂಟರ್ ಮತ್ತು ಇನ್ನೂ ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ. ನೀವು ಕಡಿಮೆ ಬೆಲೆಯಲ್ಲಿ ಉತ್ತಮ ಸ್ಮಾರ್ಟ್‌ವಾಚ್ ಖರೀದಿಸಲು ಇಷ್ಟಪಟ್ಟರೆ, ರೆಡ್ಮಿ ವಾಚ್ 5 ಆಕ್ಟಿವ್ ನಿಮಗೆ ಸೂಕ್ತ ಆಯ್ಕೆಯಾಗಿರಲಿದೆ.

Best Mobiles in India

English summary
Redmi Watch 5 Active with Bluetooth calling, up to 18 days battery life launched in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+