ನಾಳೆ ದೇಶಿ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ರೆಡ್‌ಮಿ ಬುಕ್‌ ಲ್ಯಾಪ್‌ಟಾಪ್‌!

|

ಚೀನಾ ಮೂಲದ ಶಿಯೋಮಿ ಕಂಪೆನಿ ಒಡೆತನದ ರೆಡ್‌ಮಿ ಕಂಪೆನಿ ತನ್ನ ಹೊಸ ಆವೃತ್ತಿಯ ರೆಡ್‌ಮಿ ಬುಕ್‌ ಲ್ಯಾಪ್‌ಟಾಪ್‌ ಅನ್ನು ಬಿಡುಗಡೆ ಮಾಡಲು ಮುಂದಾಗಿದೆ. ಈಗಾಗ್ಲೆ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿ ಸಂಚಲನ ಮೂಡಿಸಿದ್ದ ರೆಡ್‌ಮಿ ಬುಕ್‌ ನಾಳೆ ಭಾರತೀಯ ಮಾರುಕಟ್ಟೆಯನ್ನ ಪ್ರವೇಶಿಸಲಿದೆ. ಸದ್ಯ ಟೆಕ್‌ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ ಲ್ಯಾಪ್‌ಟಾಪ್‌ಗಳಿಗೆ ಭಾರಿ ಬೇಡಿಕೆ ಇದ್ದು, ರೆಡ್‌ಮಿ ಬುಕ್‌ ಲ್ಯಾಪ್‌ಟಾಪ್‌ ಸೌಂಡ್‌ ಮಾಡುವ ಸೂಚನೆಯನ್ನು ನೀಡಿದೆ.

ಹೌದು

ಹೌದು, ಶಿಯೋಮಿಯ ರೆಡ್‌ಮಿ ಬುಕ್‌ ಲ್ಯಾಪ್‌ಟಾಪ್‌ ನಾಳೆ ಭಾರತದಲ್ಲಿ ಬಿಡುಗಡೆಯಾಗಲಿದೆ. ಇದು ಹೊಸ ಆವೃತ್ತಿಯ ವೈವಿಧ್ಯ ಬಗೆಯ ಫೀಚರ್ಸ್‌ಗಳನ್ನ ಒಳಗೊಂಡಿರುವ ಲ್ಯಾಪ್‌ಟಾಪ್‌ ಆಗಿದೆ. ಸದ್ಯ ರೆಡ್‌ಮಿ ಬುಕ್‌ ಲ್ಯಾಪ್‌ಟಾಪ್‌ ನಾಳೆ ಬಿಡುಗಡೆಯಾಗಲಿದೆ ಎಂದು ಟ್ವಿಟ್ಟರ್‌ನಲ್ಲಿ ವಿಡಿಯೋ ಫೋಸ್ಟ್‌ ಮಾಡಿರುವ ಶಿಯೋಮಿ ಲ್ಯಾಪ್‌ಟಾಪ್‌ನ ಅಂಚು ಹೇಗಿರಲಿದೆ ಅನ್ನೊದರ ಸೂಚನೆಯನ್ನ ಟೀಸರ್‌ನಲ್ಲಿ ನೀಡಿದೆ. ಈಗಾಗ್ಲೆ ಮಾರುಕಟ್ಟೆಯಲ್ಲಿ ಲೆನೊವೊ, ಡೆಲ್, ಎಚ್‌ಪಿ ಲ್ಯಾಪ್‌ಟಾಪ್‌ಗಳು ಪ್ರಾಬಲ್ಯ ಸಾಧಿಸಿದ್ದು ಅವುಗಳ ವಿರುದ್ದ ಹೇಗೆ ರೆಡ್‌ಮಿಬುಕ್‌ ಲ್ಯಾಪ್‌ಟಾಪ್‌ ಬೆಲೆ ನಿಗದಿ ಮಾಡಲಿದೆ ಅನ್ನೊ ಕುತೂಹಲ ಟೆಕ್‌ ವಲಯದಲ್ಲಿ ಕೇಳಿ ಬಂದಿದೆ.

ರೆಡ್‌ಮಿ ಬುಕ್‌ ಲ್ಯಾಪ್‌ಟಾಪ್‌ ವಿಶೇಷತೆ

ರೆಡ್‌ಮಿ ಬುಕ್‌ ಲ್ಯಾಪ್‌ಟಾಪ್‌ ವಿಶೇಷತೆ

ಶಿಯೋಮಿ ಈಗಾಗ್ಲೆ ಚೀನಾ ಮಾರುಕಟ್ಟೆಯಲ್ಲಿ ತನ್ನ ಲ್ಯಾಪ್‌ಟಾಪ್‌ಗಳನ್ನ ಪರಿಚಯಿಸಿದೆ. ಆದರೆ ಭಾರತದಲ್ಲಿ ಮಾತ್ರ ತನ್ನ ಲ್ಯಾಪ್‌ಟಾಪ್‌ಗಳನ್ನ ಪರಿಚಯಿಸಿರಲಿಲ್ಲ. ಇನ್ನು ರೆಡ್‌ಮಿ ನೋಟ್‌ಬುಕ್ ಸರಣಿಯ ಲ್ಯಾಪ್‌ಟಾಪ್‌ಗಳು ಪ್ರೀಮಿಯಂ ಶ್ರೇಣಿಯ ಲ್ಯಾಪ್‌ಟಾಪ್‌ಗಳಾಗಿದ್ದು ಚೀನಾದಲ್ಲಿ ಸಂಚಲನ ಮೂಡಿಸವೆ. ಆದರೆ ಭಾರತದಲ್ಲಿ ಬಿಡುಗಡೆಯಾಗುವ ರೆಡ್‌ಮಿಬುಕ್,ಲ್ಯಾಪ್‌ಟಾಪ್‌ ಹೇಗಿರಲಿದೆ ಅನ್ನೊದರ ಮಾಹಿತಿ ಇನ್ನು ಲಭ್ಯವಾಗಿಲ್ಲ, ಆದರೂ ಇದು ಡಿಸೆಂಬರ್ 2019 ರಲ್ಲಿ ಬಿಡುಗಡೆಯಾದ ರೆಡ್‌ಮಿಬುಕ್ 13 ಆಗಿದೆ ಎಂದು ಹೇಳಲಾಗ್ತಿದೆ.

ರೆಡ್‌ಮಿ ಬುಕ್‌ ಫೀಚರ್ಸ್‌

ರೆಡ್‌ಮಿ ಬುಕ್‌ ಫೀಚರ್ಸ್‌

ಇನ್ನು ನಾಳೆ ಭಾರತದಲ್ಲಿ ಬಿಡುಗಡೆಯಾಗಲಿರುವ ರೆಡ್‌ಮಿಬುಕ್‌ ಲ್ಯಾಪ್‌ಟಾಪ್‌ 13.3-ಇಂಚಿನ ಫುಲ್‌ಎಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು 10th gen ಇಂಟೆಲ್ ಕೋರ್ ಐ 5 ಮತ್ತು ಕೋರ್ ಐ 7 ಪ್ರೊಸೆಸರ್‌ಗಳನ್ನ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಇದಲ್ಲದೆ ಈ ಲ್ಯಾಪ್‌ಟಾಪ್‌ 8GB RAM ಮತ್ತು 512GB ssd ಕಾರ್ಡ್ ಸ್ಟೋರೇಜ್‌ ಅನ್ನು ಒಳಗೊಂಡಿರಲಿದೆ. ಅಲ್ಲದೆ ಇದುNVIDIA MX250 ಗ್ರಾಫಿಕ್ಸ್ ಕಾರ್ಡ್ ಅನ್ನು ಸಹ ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ.

ರೆಡ್‌ಮಿ ಬುಕ್‌ ವಿನ್ಯಾಸ

ರೆಡ್‌ಮಿ ಬುಕ್‌ ವಿನ್ಯಾಸ

ರೆಡ್‌ಮಿಬುಕ್ ಲ್ಯಾಪ್‌ಟಾಪ್‌ ಇತ್ತೀಚಿನ ವಿಂಡೋಸ್ 10 ಅನ್ನು ಹೊಂದಿರಲಿದ್ದು, 89% ಡಿಸ್‌ಪ್ಲೇ ರೆಶೀಯೋ, ಕಸ್ಟಮ್ ಫ್ಯಾನ್ ಡಿಸೈನ್‌, ಯುಎಸ್‌ಬಿ-ಎ ಪೋರ್ಟ್‌, ದೊಡ್ಡ ಟ್ರ್ಯಾಕ್‌ಪ್ಯಾಡ್ ಗಳನ್ನು ಹೊಂದಿದ್ದು, ಮಧ್ಯ ಶ್ರೇಣಿಯ ಡಿಸ್ಕ್ರೀಟ್ ಗ್ರಾಫಿಕ್ಸ್ ಚಿಪ್ ಅನ್ನು ಒಳಗೊಂಡಿರಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ರೆಡ್‌ಮಿಬುಕ್ ಇಂಟೆಲ್ ಕೋರ್ ಐ 5 ಪ್ರೊಸೆಸರ್ ಮತ್ತು ಕೋರ್ ಐ 7 ಪ್ರೊಸೆಸರ್ ಎರಡು ವೆರಿಯೆಂಟ್‌ ಆಯ್ಕೆಗಳಲ್ಲಿ ಲಭ್ಯವಾಗಲಿದ್ದು. ಇಂಟೆಲ್ ಕೋರ್ ಐ 5 ಪ್ರೊಸೆಸರ್‌ ಒಳಗೊಂಡ ಲ್ಯಾಪ್‌ಟಾಪ್‌ 8GB RAM ಮತ್ತು 512 GB ಎಸ್‌ಎಸ್‌ಡಿ ಕಾರ್ಡ್‌ ಹೊಂದಿದ್ದರೆ, ಕೋರ್ ಐ 7 ಪ್ರೊಸೆಸರ್ ಕೂಡ 8 8GB RAM ಮತ್ತು 512 GB ಎಸ್‌ಎಸ್‌ಡಿ ಕಾರ್ಡ್‌ ನೊಂದಿಗೆ ಬರಲಿದೆ.

ಇತರೆ

ಇತರೆ

ಇನ್ನು ಶಿಯೋಮಿ ಕಂಪೆನಿ ಇತ್ತೀಚಿನ ವರ್ಷಗಳಲ್ಲಿ ಸ್ಮಾರ್ಟ್‌ಫೋನ್ ಅಲ್ಲದೆ ಇತರೆ ವಿವಿಧ ಸ್ಮಾರ್ಟ್‌ ಡಿವೈಸ್‌ಗಳ ಮಾರುಕಟ್ಟೆಯನ್ನ ವಿಸ್ತಾರ ಮಾಡುತ್ತಿದ್ದು. ಇದಕ್ಕಾಗಿ ತನ್ನ ಸಬ್‌ಬ್ರ್ಯಾಂಡ್‌ ಪೊಕೊ ಸ್ಮಾರ್ಟ್‌ಫೋನ್‌ ಅನ್ನ ಪ್ರತ್ಯೇಕ ಮಾಡಿದೆ. ಈ ಮೂಲಕ ಸ್ಮಾರ್ಟ್‌ಫೋನ್‌ ವಲಯದಲ್ಲಿ ಪರಿಣಾಮಕಾರಿಯಾಘಿ ಬೆಳೆಯಲು ಮುಂದಾಗಿದೆ. ಅದೇ ರೀತಿ ಲ್ಯಾಪ್‌ಟಾಪ್‌ ವಲಯದಲ್ಲೂ ತನ್ನ ಪ್ರಾಬಲ್ಯ ಸಾಧಿಸಲು ಮುಂದಾಗಿದೆ. ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಶಿಯೋಮಿ ಜನಪ್ರಿಯತೆ ಪಡೆದುಕೊಂಡಿದೆ ನಿಜ ಆದರೆ ಲ್ಯಾಪ್‌ಟಾಪ್ ಮಾರುಕಟ್ಟೆ ಸ್ಮಾರ್ಟ್‌ಫೋನ್ ವಿಭಾಗಕ್ಕಿಂತ ಬಹಳ ಭಿನ್ನವಾಗಿದ್ದು, ಇಲ್ಲಿಯೂ ಯಶಸ್ವಿ ಸಾಧ್ಯವಾಗುತ್ತಾ ಅನ್ನೊದನ್ನ ಕಾದು ನೋಡಬೇಕಿದೆ.

Best Mobiles in India

English summary
RedmiBook May Launch In India On February 11th, New Teaser Video Suggests.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X