4G VoLET ಸಪೋರ್ಟ್ ಮಾಡುವ ಜಿಯೋ ಫೀಚರ್ ಫೋನ್
ಕಡಿಮೆ ಬೆಲೆಗೆ 4G VoLET ಸಪೋರ್ಟ್ ಮಾಡುವ ಫೀಚರ್ ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ತಿಳಿಸಿತ್ತು. ಈಗಾಗಲೇ ಈ ಫೋನಿನ ಕುರಿತು ಸಾಕಷ್ಟು ರೂಮರ್ ಗಳು ಹರಿದಾಡುತ್ತಿದೆ.
ಜಿಯೋ 4G ಸೇವೆಯನ್ನು ದೇಶದಲ್ಲಿ ಆರಂಭಿಸಿ ಹೊಸ ಮಾದರಿಯ ಕ್ರಾಂತಿಯನ್ನು ಹುಟ್ಟಿಹಾಕಿತು. ಸದ್ಯ ಇದೇ ಮಾದರಿಯಲ್ಲಿ ಕಡಿಮೆ ಬೆಲೆಗೆ 4G VoLET ಸಪೋರ್ಟ್ ಮಾಡುವ ಫೀಚರ್ ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ತಿಳಿಸಿತ್ತು. ಈಗಾಗಲೇ ಈ ಫೋನಿನ ಕುರಿತು ಸಾಕಷ್ಟು ರೂಮರ್ ಗಳು ಹರಿದಾಡುತ್ತಿದೆ.

ಸದ್ಯದ ಹಾಟ್ ಟಾಪಿಕ್ ಎಂದರೆ ಜಿಯೋ 4G VoLET ಸಪೋರ್ಟ್ ಮಾಡುವ ಫೀಚರ್ ಫೋನ್ ಕೇವಲ ರೂ.500 ದೊರೆಯಲಿದೆ ಎಂಬುದು ಎಲ್ಲೆಡೆಯಲ್ಲಿ ಕೇಳಿ ಬರುತ್ತಿರುವ ಸುದ್ದಿಯಾಗಿದೆ ಈ ಹಿನ್ನಲೆಯಲ್ಲಿ ಈ ಫೋನ್ ಹೇಗಿದೆ ಎಂಬ ಪರಿಚಯವನ್ನು ಮಾಡಿಕೊಡುವ ಪ್ರಯತ್ನ ಇದಾಗಿದೆ.

ಈ ತಿಂಗಳಿನ ಲಭ್ಯ:
ಮೂಲಗಳ ಪ್ರಕಾರ ಜುಲೈ 21 ರಂದು ಜಿಯೋ ವಾಷಿಯ ಸಮಾವೇಶ ನಡೆಯಲಿದ್ದು, ಅಲ್ಲಿ ಜಿಯೋ 4G VoLET ಸಪೋರ್ಟ್ ಮಾಡುವ ಫೀಚರ್ ಫೋನ್ ಬಿಡುಗಡೆ ಮಾಡಲಾಗುವುದು ಎನ್ನಲಾಗಿದೆ ಆದರೆ ಗ್ರಾಹಕರ ಕೈಗೆ ಸೇರಲು ಇನ್ನು ಕೆಲವು ದಿನಗಳು ಹಿಡಿಯಲಿದೆ ಎನ್ನಲಾಗಿದೆ. ಈಗಾಗಲೇ 20 ಮಿಲಿಯನ್ ಫೋನ್ ಗಳಿಗೆ ಆರ್ಡರ್ ನೀಡಲಾಗಿದೆ.

LYF ಬ್ರಾಂಡಿನ ಫೋನ್:
4G VoLET ಸಪೋರ್ಟ್ ಮಾಡುವ ಫೀಚರ್ ಫೋನ್ ರಿಲಯನ್ಸ್ ಮಾಲೀಕತ್ವದ LYF ಬ್ರಾಂಡಿನಲ್ಲಿಯೇ ಬಿಡುಗಡೆಯಾಗಲಿದೆ. ಒಟ್ಟು ಎರಡು ಮಾದರಿಯಲ್ಲಿ ಲಭ್ಯವಿದ್ದು, ಹೈಯರ್ ವರ್ಷನ್ ಬೆಲೆ ರೂ.1500 ಆಗಲಿದೆ.

ಹೇಗಿದೆ ಫೋನ್:
ಜಿಯೋ 4G VoLET ಸಪೋರ್ಟ್ ಮಾಡುವ ಫೀಚರ್ ಫೋನ್ ನಲ್ಲಿ 2.4 ಇಂಚಿನ ಡಿಸ್ ಪ್ಲೇಯನ್ನು ಕಾಣಬಹುದಾಗಿದೆ. ಅಲ್ಲದೇ 512 MB RAM ಮತ್ತು 4GB ಆಂತರಿಕ ಮೆಮೊರಿಯನ್ನು ಕಾಣಬಹುದಾಗಿದೆ. ಅಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಅವಕಾಶವು ಇದೆ. ಅಲ್ಲದೇ ಈ ಫೋನಿನಲ್ಲಿ 2000 mAh ಬ್ಯಾಟರಿಯನ್ನು ನೀಡಲಾಗಿದೆ.


Click it and Unblock the Notifications








