ಮಾರುಕಟ್ಟೆಗೆ ಬಂತು ಕೊರೊನಾ ವೈರಸ್‌ ಕುರಿತ ಕೊರೋನಾ ಸ್ಟ್ರೈಕರ್‌ ಗೇಮ್‌!

|

ಕೊರೋನಾ ವೈರಸ್‌ ಇಡೀ ಜಗತ್ತನೇ ಬಾಧಿಸುತ್ತಿದೆ. ಇಂತಹ ಸಂದರ್ಭದಲ್ಲಿ ಸರಿಯಾದ ಮಾರ್ಗಸೂಚಿಗಳೇ ಇದಕ್ಕೆ ಪರಿಹಾರವಾಗಿದೆ. ಈ ಕಾರಣಕ್ಕಾಗಿ ಭಾರತವೂ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳು ಲಾಕ್‌ಡೌನ್‌ ಆದೇಶವನ್ನ ಘೋಷಿಸಿವೆ. ಸದ್ಯ ಭಾರತದಲ್ಲಿ ಮೇ 3 ರವೆರೆಗೆ ಮತ್ತೆ ಲಾಕ್‌ಡೌನ್‌ ಮುಂದುವರೆಯಲಿದೆ. ಸದ್ಯ ಲಾಕ್‌ಡೌನ್‌ ಇರೊದ್ರಿಂದ ಮನೆ ಮಂದಿಯೆಲ್ಲಾ ಮನೆಯಲ್ಲಿಯೇ ಕಾಲಕಳೆಯುತ್ತಿದ್ದಾರೆ. ತಮ್ಮ ಸಮಯವನ್ನ ಕಳೆಯುವುದಕ್ಕೆ ಗೇಮ್‌, ಆನಿಮೇಷನ್‌, ಮನಂರಜನಾ ಕ್ಷೇತ್ರ ಹೀಗೆ ತಮಗಿಷ್ಟದ ವಲಯಗಳನ್ನ ಆಯ್ಕೆ ಮಾಡಿಕೊಂಡು ಕಾಲಕಳೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಗೇಮಿಂಗ್‌ ಕಡೆಗೆ ಹೆಚ್ಚಿನ ಜನರು ಗಮನ ನೀಡುತ್ತಿದ್ದು, ಸದ್ಯ ಇದೀಗ ಮತ್ತೊಂದು ಹೊಸ ಗೇಮ್‌ ಮಾರುಕಟ್ಟೆಗೆ ಎಂಟ್ರಿ ಆಗಿದೆ.

ಕೊರೋನಾ

ಹೌದು, ಕೊರೋನಾ ವೈರಸ್‌ ತಡೆಗಟ್ಟುವುದು ಹೇಗೆ ಅನ್ನೊ ಚಿಂತನೆಯಲ್ಲಿ ಇಡೀ ಜಗತ್ತು ಪರಿತಪಿಸುತ್ತಿದೆ. ಇದರ ನಡುವೆ ಕೊರೋನಾ ವೈರಸ್‌ ಕುರಿತ ಗೇಮ್‌ ಒಂದು ಮಾರುಕಟ್ಟೆಗೆ ಲಾಂಚ್‌ ಆಗಿದೆ. ಕೊರೋನಾ ವಿರುದ್ದ ಹೋರಾಡುವುದು ಹೇಗೆ,? ಅದರ ವಿರುದ್ದ ನಡೆದುಕೊಳ್ಳುವುದು ಹೇಗೆ ಅನ್ನೊ ವಿಶಿಷ್ಟ ರೀತಿಯನ್ನ ವಿಭಿನ್ನವಾಗಿ ಪರಿಚಯಿಸುವ ಹಾಗೂ ಆಟದ ಮೂಲಕವೇ ಸಮಾಜಿಕ ಸಂದೇಶ ಸಾರುವ ಗೇಮ್‌ ಇದಾಗಿದೆ ಎಂದು ಹೇಳಲಾಗ್ತಿದೆ. ಸದ್ಯ ಈ ಮಾದರಿಯ ಗೇಮ್‌ ಅನ್ನು ರಿಲಾಯನ್ಸ್‌ ಬೆಂಬಲಿತ ಫಿಂಡ್‌ ಕಂಪೆನಿ ಕ್ರಿಯೆಟ್‌ ಮಾಡಿದ್ದು, ಇದಕ್ಕೆ ಕೊರೋನಾ ಸ್ಟ್ರೈಕರ್‌ ಎಂದು ಹೆಸರಿಸಲಾಗಿದೆ.

ಕರೋನಾವೈರಸ್

ಸದ್ಯ ಕರೋನಾವೈರಸ್ (ಕೋವಿಡ್ -19) ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಫಿಂಡ್‌ ಸಂಸ್ಥೆ ಕೊರೋನಾ ಸ್ಟ್ರೈಕರ್‌ ಗೇಮ್‌ ಅನ್ನು ಪರಿಚಯಿಸಿದೆ. ಈ ಗೇಮ್‌ ಅನ್ನು ತನ್ನ "ಸೇವ್ ದಿ ವರ್ಲ್ಡ್" ಸಾಮಾಜಿಕ ಉಪಕ್ರಮದ ಭಾಗವಾಗಿ ಲಾಂಚ್‌ ಮಾಡಿದ್ದು ಇದು ಹೈಪರ್-ಕ್ಯಾಶುಯಲ್ ಗೇಮ್‌ ಆಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಇನ್ನು ಈ ಗೇಮ್‌ನಲ್ಲಿ ಕೊರೋನಾ ಸೊಂಕಿತನಿಂದ ಸೋಂಕು ಪ್ರಪಂಚವನ್ನು ಹರಡಿಕೊಳ್ಳದಂತೆ ತಡೆಯಲು ಆಟಗಾರನು ವೈರಸ್ ದೈತ್ಯಾಕಾರದ ಜೊತೆ ಹೋರಾಡುವ ವಿನ್ಯಾಸವನ್ನ ರೂಪಿಸಲಾಗಿದೆ. ಕೊರೊನಾ ಸೊಂಕಿತನನ್ನು ಹೇಗೆ ತಡೆಯಬೇಕು, ವೈರಸ್‌ ಹರಡದಂತೆ ಹೇಗೆ ಹೋರಾಡಬೇಕು ಅನ್ನೊದನ್ನ ಈ ಗೇಮ್‌ನಲ್ಲಿ ತಿಳಿಸುವ ಪ್ರಯತ್ನವನ್ನ ಮಾಡಲಾಗಿದೆ.

ಗೇಮ್‌ನಲ್ಲಿ

ಇನ್ನು ಈ ಗೇಮ್‌ನಲ್ಲಿ ಆರೋಗ್ಯಕರ ಸ್ವ-ಆರೈಕೆ ಅಭ್ಯಾಸಗಳನ್ನು ತಿಳಿಸುವ ಹಾಗೂ COVID-19 ಸಾಮಾಜಿಕ ಜಾಗೃತಿ ಸಂದೇಶಗಳನ್ನು ಗೇಮ್‌ನ ಉದ್ದಕ್ಕೂ ತಿಳಿಸಿಕೊಡುವ ಪ್ರಯತ್ನವನ್ನ ಮಾಡಿಕೊಡಲಾಗಿದೆ. ಜೊತೆಗೆ "ಕರೋನಾ ಸ್ಟ್ರೈಕರ್‌ನೊಂದಿಗೆ, ಸಾಮಾಜಿಕ ದೂರವನ್ನು ಅಭ್ಯಾಸ ಮಾಡಲು ಮತ್ತು ಸುರಕ್ಷಿತ ಮತ್ತು ಆರೋಗ್ಯವಾಗಿರಲು ಹೆಚ್ಚಿನ ಜನರನ್ನು ಪ್ರೋತ್ಸಾಹಿಸಲು ನಾವು ಸಾಮಾಜಿಕವಾಗಿ ಸಂಬಂಧಿಸಿದ ಮಾಹಿತಿಯನ್ನು ಮನಮುಟ್ಟುವ ಚೌಕಟ್ಟಿನಲ್ಲಿ ಹಂಚಿಕೊಳ್ಳುತ್ತಿದ್ದೇವೆ" ಎಂದು ಫಿಂಡ್‌ನ ಸಹ-ಸಂಸ್ಥಾಪಕ ಫಾರೂಕ್ ಆಡಮ್ ಹೇಳಿಕೊಂಡಿದ್ದಾರೆ.

ಪ್ರಕಾರ

ಇದಲ್ಲದೆ ಕಂಪನಿಯ ಪ್ರಕಾರ, ಈ ಗೇಮ್‌ ಸಂಪೂರ್ಣವಾಗಿ ಜಾಹೀರಾತು ಮುಕ್ತವಾಗಿದೆ. ಫಿಂಡ್‌ನಲ್ಲಿರುವ ಅಪ್ಲೈಡ್ ಮೆಷಿನ್ ಲರ್ನಿಂಗ್ (ಎಎಂಎಲ್) ತಂಡವು ಕರೋನಾ ಸ್ಟ್ರೈಕರ್ ಪರಿಕಲ್ಪನೆಯನ್ನ ತಂದಿದೆ. ಇದಕ್ಕಾಗಿ ಎಐ ಆಧಾರಿತ ವ್ಯವಸ್ಥೆಗಳನ್ನು ನಿರ್ಮಿಸುವ ಕೆಲಸ ಮಾಡುತ್ತದೆ ಮತ್ತು ರೋಗ ತಡೆಗಟ್ಟುವ ಸಂವಹನಕ್ಕೆ ಸ್ಪಂದಿಸಬೇಕು" ಎಂದು ಫಿಂಡ್‌ನ ಪ್ರದೀಪ್ ತಿವಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಲ್ಲದೆ ಜನರು ಸಕಾರಾತ್ಮಕ ಅನುಭವವನ್ನು ಹೊಂದಬೇಕೆಂದು ನಾವು ಬಯಸುತ್ತೇವೆ ಮತ್ತು ರೋಗ ತಡೆಗಟ್ಟುವ ಸಂವಹನಕ್ಕೆ ಸ್ಪಂದಿಸಬೇಕು ಎಂದು ಸಂಸ್ಥೆ ಹೇಳಿಕೊಂಡಿದೆ.

Most Read Articles
Best Mobiles in India

English summary
Retail tech platform Fynd has announced a new, hyper-casual game called Corona Striker as part of its “Save the World” social initiative to spread awareness about coronavirus.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more