ಇತಿಹಾಸದಲ್ಲಿಯೇ ಯಾರು ನೀಡದ 'ರಿಲಯನ್ಸ್ ಬಿಗ್' ಭರ್ಜರಿ ಆಫರ್!!..'ಕೇಬಲ್ ಟಿವಿ' ಮುಳುಗಡೆ!!

  ರಿಲಯನ್ಸ್ ಜಿಯೋ ಡಿಟಿಹೆಚ್ ಮಾರುಕಟ್ಟೆಗೆ ಬರಲಿದೆ ಎನ್ನುವ ಸುದ್ದಿಯ ಬೆನ್ನಲ್ಲೆ ರಿಲಯನ್ಸ್ ಬಿಗ್ ಟಿವಿ ಇತಿಹಾಸದಲ್ಲಿಯೇ ಯಾರು ನೀಡದಂತಹ ಭರ್ಜರಿ ಕೊಡುಗೆಯನ್ನು ಪ್ರಕಟಿಸಿದೆ.!! ಹೆಚ್‌ಡಿ ಗುಣಮಟ್ಟದ ಮನರಂಜನಾ ವಾಹಿನಿಗಳನ್ನು ಸಂಪೂರ್ಣ ಉಚಿತವಾಗಿ ನೀಡುವುದಾಗಿ ರಿಲಯನ್ಸ್ ಬಿಗ್ ಟಿವಿ ಘೋಷಿಸಿದೆ.!!

  ಹೌದು, ಮನೋರಂಜನೆ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ತನ್ನ HD HEVC ಸೆಟ್‌ ಟಾಪ್‌ ಬಾಕ್ಸನ್ನು ಸಂಪೂರ್ಣ ಉಚಿತವಾಗಿ ನೀಡುವ ಮೂಲಕ ಟಿವಿ ಜಗತ್ತಿನಲ್ಲಿ ಡಿಜಿಟಲ್ ಕ್ರಾಂತಿಯನ್ನು ಪರಿಣಾಮಕಾರಿಯಾಗಿ ಹೊರತರಲು ರಿಲಯನ್ಸ್ ಬಿಗ್ ಟಿವಿಯು ಎಲ್ಲಾ ರೀತಿಯಲ್ಲೂ ಸಜ್ಜಾಗಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದೆ.!!

  ಇತಿಹಾಸದಲ್ಲಿಯೇ ಯಾರು ನೀಡದ 'ರಿಲಯನ್ಸ್ ಬಿಗ್' ಭರ್ಜರಿ ಆಫರ್!!

  500 ವಾಹಿನಿಗಳನ್ನು 5 ವರ್ಷಗಳವರೆಗೆ ಹಾಗೂ ಶುಲ್ಕ ಸಹಿತ ವಾಹಿನಿ ವಾಹಿನಿಗಳನ್ನು ಒಂದು ವರ್ಷಗಳ ಕಾಲದವರೆಗೂ ದೇಶಾದ್ಯಂತ ಗ್ರಾಹಕರಿಗೆ ಉಚಿತವಾಗಿ ನೀಡುವುದಾಗಿ ಬಿಗ್ ಟಿವಿ ಹೇಳಿಕೊಂಡಿದೆ.!! ಹಾಗಾದರೆ, ರಿಲಯನ್ಸ್ ಬಿಗ್ ಟಿವಿ ಪ್ರಕಟಿಸಿರುವ ಎಲ್ಲಾ ಆಫರ್‌ಗಳು ಯಾವುವು? ಗ್ರಾಹಕರಿಗೆ ಏನೆಲ್ಲಾ ಲಾಭಗಳಿವೆ ಎಂಬುದನ್ನು ಮುಂದೆ ತಿಳಿಯಿರಿ.!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಸೆಟ್‌ಟಾಪ್‌ ಬಾಕ್ಸ್ ಸಂಪೂರ್ಣ ಉಚಿತ!!

  ಇತಹಾಸದಲ್ಲಿಯೇ ಮೊದಲ ಬಾರಿಗೆ ರಿಲಯನ್ಸ್ ಬಿಗ್ ಟಿವಿ ಮನೋರಂಜನೆ ಕ್ಷೇತ್ರದಲ್ಲಿ ತನ್ನ HD HEVC ಸೆಟ್‌ಟಾಪ್‌ ಬಾಕ್ಸನ್ನು ಸಂಪೂರ್ಣ ಉಚಿತವಾಗಿ ನೀಡಿದೆ. ಡಿಜಿಟಲ್ ಕ್ರಾಂತಿಯನ್ನು ಪರಿಣಾಮಕಾರಿಯಾಗಿ ಹೊರತರಲು ರಿಲಯನ್ಸ್ ಬಿಗ್ ಟಿವಿಯು ಎಲ್ಲಾ ರೀತಿಯಲ್ಲೂ ಸಜ್ಜಾಗಿದೆ.!!

  ಒಂದು ವರ್ಷ ಉಚಿತ ಸೇವೆ!!

  ರಿಲಯನ್ಸ್ ಟಿವಿಯು ಶುಲ್ಕ ರಹಿತವಾದ 500 ವಾಹಿನಿಗಳನ್ನು 5 ವರ್ಷಗಳವರೆಗೆ ಹಾಗೂ ಶುಲ್ಕ ಸಹಿತ ವಾಹಿನಿಗಳನ್ನು ಒಂದು ವರ್ಷಗಳ ಕಾಲದವರೆಗೂ ದೇಶಾದ್ಯಂತ ಗ್ರಾಹಕರಿಗೆ ಉಚಿತವಾಗಿ ನೀಡುವುದಾಗಿ ಹೇಳಿದೆ. ಬಿಗ್ ಟಿವಿಯ ನಿರ್ದೇಶಕರಾದ ಮಿ. ವಿಜೇಯೆಂದ್ರ ಸಿಂಗ್‌ ತಮ್ಮ ನೂತನ ಯೋಜನೆಯನ್ನು ಪ್ರಕಟಿಸಿದ್ದಾರೆ.

  ಮಾರ್ಚ್ 1ರಿಂದ ಜಾರಿಗೆ!!

  ರಿಲಯನ್ಸ್ ಬಿಗ್ ಟಿವಿಯ ಉಚಿತ ಮನೋರಂಜನೆಯ ನೂತನ ಕೊಡುಗೆ ಮಾರ್ಚ್ 1ರಿಂದ ಜಾರಿಗೆ ಬರಲಿದೆ ಎಂದು ಬಿಗ್ ಟಿವಿಯ ನಿರ್ದೇಶಕರಾದ ಮಿ. ವಿಜೇಯೆಂದ್ರ ಸಿಂಗ್‌ ತಿಳಿಸಿದ್ದಾರೆ. ಮನರಂಜನೆ, ಕಾರ್ಟೂನ್, ಚಲನಚಿತ್ರಗಳು, ಕ್ರೀಡೆಗಳು, ಸುದ್ದಿ, ಮಾಹಿತಿ ಮನೋರಂಜನೆ, ಶಿಕ್ಷಣ ಹೀಗೆ ನಾನಾ ಚಾನಲ್‌ಗಳು ಉಚಿತವಾಗಿರುವುದಾಗಿ ತಿಳಿಸಿದ್ದಾರೆ.!!

  ಮುಂಗಡ ಪಾವತಿ ಮಾಡಬೇಕು!!

  ಇಂದಿನಿಂದ ಆರಂಭವಾಗುತ್ತಿರುವ ಬಿಗ್ ಟಿವಿಯ ಕೊಡುಗೆಯಲ್ಲಿ ಗ್ರಾಹಕರ 499 ರೂ.ಗಳನ್ನು ಪಾವತಿಸಿ ಸೆಟ್‌ ಟಾಪ್ ಬಾಕ್ಸ್‌ ಬುಕ್ ಮಾಡಬೇಕು. ನಂತರ ಸೆಟ್‌ಟಾಪ್ ಬಾಕ್ಸ್‌ ಮತ್ತು ಔಟ್‌ ಡೋರ್ ಯೂನಿಟ್‌ ಅನ್ನು ಸ್ವೀಕರಿಸಿದ ನಂತರ ಉಳಿದ 1500 ರೂ.ಗಳನ್ನು ಪಾವತಿಸಿ ಟಿವಿ ಕನೆಕ್ಷನ್ ಪಡೆದುಕೊಳ್ಳಬಹುದು.!!

  ಸೆಟ್‌ಟಾಪ್‌ ಬಾಕ್ಸ್ ಬುಕ್ಕಿಂಗ್ ಹೇಗೆ?

  ಬಿಗ್‌ಟಿವಿ ಅಫಿಷಿಯಲ್ ವೆಬ್‌ಸೈಟ್‌ www.reliancedigitaltv.com ಲಾಗಿ ಇನ್ಆಗಿ ಬಿಗ್‌ಟಿವಿ ಸೆಟ್‌ಟಾಪ್‌ ಬಾಕ್ಸ್ ಬುಕ್ಕಿಂಗ್ ಮಾಡಬಹುದಾಗಿದೆ. ಬುಕಿಂಗ್ ಮೊತ್ತವಾದ 499 ರೂ. ಸಲ್ಲಿಸಿ ಸೆಟ್‌ಟಾಪ್ ಬಾಕ್ಸ್‌ ಮತ್ತು ಔಟ್‌ ಡೋರ್ ಯೂನಿಟ್‌ ಬುಕಿಂಗ್ ಪಡೆದ ಡೆಲಿವರಿ ಪಡೆದ ನಂತರ ಉಳಿದ ಹಣವನ್ನು ಪಾವತಿಸಬೇಕಾಗುತ್ತದೆ.!!

  ಹಣ ವಾಪಸ್ ಆಗುತ್ತದೆ.!!

  ಒಟ್ಟು 1999 ರೂಪಾಯಿ ಹಣವನ್ನು ಪಾವತಿಸಿ ರಿಲಯನ್ಸ್ ಬಿಗ್‌ ಟಿವಿಯ ಚಂದಾದಾರಿಕೆಯನ್ನು ಪಡೆದರೆ ಆ ಹಣವನ್ನು ಎರಡು ವರ್ಷಗಳ ಕಾಲದಲ್ಲಿ ಲಾಯಲ್ಟಿ ರೂಪದಲ್ಲಿ ಮರುಪಾವತಿ ಮಾಡುವುದಾಗಿ ಬಿಗ್‌ಟಿವಿ ತಿಳಿಸಿದೆ. 1999 ರೂ. ಹಣವನ್ನು ರೀಚಾರ್ಜ್ ಆಫರ್‌ಗಳಾಗಿ ನೀಡುವುದಾಗಿ ಹೇಳಿಕೊಂಡಿದೆ.!

  ಮಾಸಿಕ 300 ರೂ.!!

  ಒಂದು ವರ್ಷದ ವರೆಗೂ ಉಚಿತ ಆಫರ್ ಅನ್ನು ಪ್ರಕಟಿಸಿರುವ ಬಿಗ್ ಟಿವಿ ಟೆಲಿಕಾಂ ಕಂಪೆನಿಗಳು ನೀಡುವಂತಹ ಭರ್ಜರಿ ಆಫರ್ ಅನ್ನು ಘೋಷಿಸಿದೆ. ಒಂದು ವರ್ಷದ ನಂತರ 300 ರೂಪಾಯಿಗಳನ್ನು ಪಾವತಿಸಿ ಶುಲ್ಕಸಹಿತ ಚಾನೆಲ್‌ಗಳನ್ನು ವೀಕ್ಷಿಸಬಹುದಾಗಿದೆ ಎಂದು ಕಂಪೆನಿ ತಿಳಿಸಿದೆ.!!

  How To Link Aadhaar With EPF Account Without Login (KANNADA)
  ಸೀಮಿತ ಅವಧಿಯವರೆಗೆ ಮಾತ್ರ!!

  ಸೀಮಿತ ಅವಧಿಯವರೆಗೆ ಮಾತ್ರ!!

  ಶುಲ್ಕಸಹಿತ ವಾಹಿನಿಗಳನ್ನು ಒಂದು ವರ್ಷದ ಕಾಲ ಸಂಪೂರ್ಣ ಉಚಿತವಾಗಿ ನೀಡಲಿರುವ ಹಾಗೂ ಉಚಿತ ವಾಹಿನಿಗಳನ್ನು ಐದು ವರ್ಷಗಳ ಕಾಲ ಶುಲ್ಕರಹಿತವಾಗಿ ನೀಡಲಿರುವ ಈ ಸೇವಯ ಆಫರ್ ಸೀಮಿತ ಅವಧಿಯವರೆಗೆ ಮಾತ್ರ ಇರುತ್ತದೆ ಎಂದು ಬಿಗ್ಟಿವಿ ತಿಳಿಸಿದೆ. ಈ ಕೊಡುಗೆ ಮಾರ್ಚ್ 1, 2018ರಂದು 10 ಗಂಟೆಯಿಂದ ಆರಂಭವಾಗಿದೆ.!!

  ಓದಿರಿ:ನಿಮಗೆ ಗೊತ್ತೇ ಇಲ್ಲದ ಬೆಸ್ಟ್ 'ವಾಟ್ಸ್ಆಪ್' ಹ್ಯಾಕಿಂಗ್ ಟ್ರಿಕ್ಸ್ ಇಲ್ಲಿವೆ!!

  ಜಿಯೋ ಮಾಸ್ಟರ್ ಪ್ಲಾನ್: ಹೆಚ್ಚಿದ ಜಿಯೋ ಫೋನ್ ಬೇಡಿಕೆ: ಅಮೆಜಾನ್‌ನಲ್ಲೂ ಮಾರಾಟ..!

  ರಿಲಯನ್ಸ್ ಜಿಯೋ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿ ಹಾಕಿರುವುದು ನಿಮಗೆಲ್ಲ ತಿಳಿದಿದೆ. ಈಗಾಗಲೇ 50 ಕೋಟಿಗೂ ಅಧಿಕ ಸಂಖ್ಯೆಯ ಜಿಯೋ ಫೋನ್‌ಗಳು ಮಾರಾಟವಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಗ್ರಾಮೀಣ ಭಾಗದ ಜನರನ್ನು ಗಮನದಲ್ಲಿಟ್ಟುಕೊಂಡು ಈ ಫೋನ್ ಅನ್ನು ಜಿಯೋ ಇದುವರೆಗೂ ಮಾರಾಟ ಮಾಡಿತ್ತು. ಮೊದಲ ಸೇಲ್‌ ನಲ್ಲಿ ಪ್ರೀ ಬುಕ್ ಮಾಡಿದವರಿಗೆ ಮಾತ್ರವೇ ಫೋನ್‌ ಗಳನ್ನು ಮಾರಾಟ ಮಾಡಿತ್ತು.

  ಇದಾದ ನಂತರದಲ್ಲಿ ಎರಡನೇ ಸೇಲ್‌ನಲ್ಲಿ ಎಲ್ಲರಿಗೂ ಜಿಯೋ ಫೋನ್ ನೀಡುವಂತೆ ಮಾಡಿದ್ದ ಜಿಯೋ, ತದ ನಂತರದಲ್ಲಿ ಮೊಬಿಕ್ಚಿಕ್ ನಲ್ಲಿಯೂ ಜಿಯೋ ಫೋನ್‌ಗಳನ್ನು ಮಾರಾಟ ಮಾಡಲು ಮುಂದಾಗಿತ್ತು. ಸದ್ಯ ಜಿಯೋ ಪೋನ್ ಅಮೆಜಾನ್‌ನಲ್ಲಿಯೂ ಮಾರಾಟಕ್ಕಿದ್ದು, ಜಿಯೋ ತಾನೇ ಮಾರಾಟ ಮಾಡುತ್ತಿದೆ.

  ಓದಿರಿ: ಬಂದೆ ಬಿಡ್ತು ಗೋ ಆಪ್: ಗೂಗಲ್ ಪ್ರಯತ್ನಕ್ಕೆ ಭಾರತವೇ ಮೂಲ..!

  ಜಿಯೋ ನಿಂದಲೇ ಮಾರಾಟ:

  ಅಮೆಜಾನ್‌ನಲ್ಲಿ ಜಿಯೋ ಫೋನ್ ಅನ್ನು ಜಿಯೋ ಡಿಜಿಟಲ್ ಮಾರಾಟ ಮಾಡುತ್ತಿದ್ದು, ಓರ್ಜಿನಲ್ ಫೋನ್ ನಿಮ್ಮ ಕೈ ಸೇರಲಿದೆ ಎನ್ನಲಾಗಿದೆ. ಅಲ್ಲದೆ ಬೆಲೆಯಲ್ಲಿಯೂ ಯಾವುದೇ ವ್ಯತ್ಯಾಸವನ್ನು ಕಾಣುವ ಸಾಧ್ಯತೆ ಇಲ್ಲ. ರೂ.1500ಕ್ಕೆ ಈ ಸ್ಮಾರ್ಟ್‌ಫೋನ್ ಮಾರಾಟವಾಗುತ್ತಿದೆ.

  ಈ ಹಿಂದೆಯೂ ಇತ್ತು:

  ಜಿಯೋ ಫೋನ್ ಅನ್ನು ಅಮೆಜಾನ್ ನಲ್ಲಿ ಈ ಹಿಂದೆಯೇ ಮಾರಾಟ ಮಾಡಲಾಗುತ್ತಿತ್ತು. ಆದರೆ ಅದು ಅನಧಿಕೃತ ಮಾರಾಟಗಾರರಿಂದ ಮಾರಾಟ ವಾಗುತ್ತಿತ್ತು ಮತ್ತು ಬೆಲೆಯೂ ಅತೀ ಹೆಚ್ಚಾಗಿತ್ತು ಎನ್ನಲಾಗಿದೆ.

  ಇದಲ್ಲದೇ ಮೊಬಿಕ್ಚೀಕ್ ನಲ್ಲೂ:

  ಮೊಬಿಕ್ವೀಕ್ ಆಪ್ ನಲ್ಲಿಯೂ ಸಹ ಜಿಯೋ ಫೋನ್ ಮಾರಾಟವಾಗುತ್ತಿದ್ದು, ಈ ಕುರಿತು ಜಿಯೋ ದೊಂದಿಗೆ ಮೊಬಿಕ್ಬೀಕ್ ಒಪ್ಪಂದವನ್ನು ಮಾಡಿಕೊಂಡಿದೆ. ಜಿಯೋ ಬಿಟ್ಟರೆ ಅಧಿಕೃತವಾಗಿ ಜಿಯೋ ಫೋನ್ ಮೊಬಿಕ್ವೀಕ್ ನಲ್ಲಿ ಮಾತ್ರವೇ ದೊರೆಯಲಿದೆ.

  ಮೂರು ಕಡೆಗಳಲ್ಲಿ ಲಭ್ಯ:

  ಜಿಯೋ ಫೋನ್ ಅನ್ನು ಮನೆಯಲ್ಲಿ ಕುಳಿತು ಖರೀದಿಸಲು ಬಯಸುವವರಿಗೆ ಮೂರು ಕಡೆಗಳಲ್ಲಿ ಜಿಯೋ ಫೋನ್ ಲಭ್ಯವಿರಲಿದೆ. ಒಂದು ಅಮೆಜಾನ್, ಮೊಬಿಕ್ವೀಕ್ ಮತ್ತು ಜಿಯೋ ಡಾಟ್ ಕಾಮ್ ನಲ್ಲಿಯೂ ದೊರೆಯಲಿದೆ. ಎಲ್ಲಾ ಕಡೆಗಳಲ್ಲಿಯೂ ಒಂದೇ ಬೆಲೆಗೆ ದೊರೆಯುತ್ತಿದೆ.

  ಫೇಸ್ ಬುಕ್ ಬಳಕೆ ಮಾಡಿಕೊಳ್ಳಬಹುದು:

  ಭಾರತದ ಸ್ಮಾರ್ಟ್ ಫೀಚರ್ ಫೋನ್ ಎಂದೇ ಖ್ಯಾತಿಯನ್ನು ಪಡೆದಿರುವ ಜಿಯೋ ಫೋನಿನಲ್ಲಿ ಖ್ಯಾತ ಸೋಶಿಯಲ್ ಮೀಡಿಯಾ ಫೇಸ್‌ಬುಕ್ ಆಪ್ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಿಂದಾಗಿ ಜಿಯೋ ಫೋನ್ ಬಳಕೆದಾರರು ಫೇಸ್‌ ಬುಕ್ ಬಳಕೆಯನ್ನು ಆಪ್ ನಲ್ಲಿಯೇ ಮಾಡಿಕೊಳ್ಳಬಹುದಾಗಿದೆ.

  ಶೀಘ್ರವೇ ವಾಟ್ಸ್‌ಆಪ್:

  ಇದಲ್ಲದೇ ಮೂಲಗಳ ಪ್ರಕಾರ ಜಿಯೋ ಫೋನಿನಲ್ಲಿ ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲು ಜಿಯೋ ಮುಂದಾಗಿದ್ದು, ಶೀಘ್ರವೇ ವಾಟ್ಸ್‌ಆಪ್ ಜಿಯೋ ಪೋನಿನಲ್ಲಿ ಬಳಕೆಗೆ ದೊರೆತರು ಆಶ್ಚರ್ಯ ಪಡುವಂತಿಲ್ಲ ಎನ್ನಲಾಗಿದೆ.

  ಮತ್ತೊಂದು ದಾಖಲೆ ನಿರ್ಮಿಸಿದ ಅಂಬಾನಿ: ಜಿಯೋ ಫೋನ್ ದೇಶದ ನಂ.1..!

  ದೇಶಿಯ ಟೆಲಿಕಾಂ ಮಾರುಕಟ್ಟೆಯ ಚಹರೆಯನ್ನು ಬದಲಾಯಿಸಿದ ರಿಲಯನ್ಸ್ ಮಾಲೀಕ ಅಂಬಾನಿ, ಹೊಸ ಸಾಧ್ಯತೆಗಳನ್ನು ಮಾರುಕಟ್ಟೆಯಲ್ಲಿ ತೋರಿಸಿಕೊಟ್ಟರು. ಟೆಲಿಕಾಂ ಲೋಕದಲ್ಲಿ ಅಸಾಧ್ಯವಾದ ಸಾಧನೆಗಳನ್ನು ಮಾಡುವುದರೊಂದಿಗೆ ಅನೇಕ ಯಶಸ್ವಿ ಪ್ರಯತ್ನಗಳನ್ನು ಮಾಡಿ ಗೆಲುವು ಸಾಧಿಸಿದವರು. ಇವರ ಗೆಲುವಿಗೆ ಸಾಕ್ಷಿಯಾಗಿದ್ದೇ ಜಿಯೋ ಫೋನ್.

  ಯೋ ಫೋನ್ ದೇಶದ ನಂ.1..!

  ಹೌದು ಇಡೀ ದೇಶವೇ ಸ್ಮಾರ್ಟ್‌ಫೋನ್‌ಗಳ ಹಿಂದೆ ಬಿದ್ದಿರುವ ಸಂದರ್ಭದಲ್ಲಿ ಸಾಮಾನ್ಯ ಜನರು 4G ಫೀಚರ್ ಫೋನ್ ಬಳಸಲಿ ಎಂದು ಬಿಡುಗಡೆ ಮಾಡಿದ್ದ ಜಿಯೋ ಫೋನ್, ಇಂದು ಭಾರತೀಯ ಮಾರುಕಟ್ಟೆಯಲ್ಲಿ ನಂಬರ್ ಓನ್ ಪಟ್ಟವನ್ನು ಅಲಂಕರಿಸಿದೆ. ಜಿಯೋ ಫೋನ್ ಮೂಲಕ ತನ್ನ ಜಿಯೋ ಕುಟುಂಬವನ್ನು ವಿಸ್ತರಿಸಿಕೊಂಡ ಅಂಬಾನಿ ಈ ಮೂಲಕ ಮತ್ತೊಂದು ಹೊಸ ದಾಖಲೆಗೆ ಸಾಕ್ಷಿಯಾಗಿದ್ದಾರೆ. ಯಾರು ಕೆಡವಲಾಗದ ಸಾಮ್ರಾಜ್ಯವನ್ನು ಗಟ್ಟಿಯಾಗಿಯೇ ಕಟ್ಟುತ್ತಿದ್ದಾರೆ.

  ಮಾರುಕಟ್ಟೆಯಲ್ಲಿ ಶೇ.27 ರಷ್ಟು ಪಾಲು:

  ರೂ.1500ರ ಹಿಂತಿರುಗಿಸುವ ಠೇವಣಿಯನ್ನು ಪಡೆದು ಉಚಿತವಾಗಿ ನೀಡುತ್ತರುವ ಜಿಯೋ ಫೋನ್ ಮಾರುಕಟ್ಟೆಯಲ್ಲಿ ಬಳಕೆದಾರರಿಗೆ ಹೆಚ್ಚಿನ ಸನಿಹಕ್ಕೆ ಬಂದಿದೆ. ಮಾರುಕಟ್ಟೆಯಲ್ಲಿ ಶೇ.27% ಮಂದಿ ಜಿಯೋ ಫೋನ್ ಕೊಂಡು ಕೊಂಡಿದ್ದಾರೆ ಎನ್ನಲಾಗಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಜಿಯೋ ಫೋನ್ ನಂಬರ್ 1 ಸ್ಥಾನ ಅಲಂಕರಿಸಿದೆ.

  ದಾಖಲೆಯ ಪ್ರೀ ಆರ್ಡರ್:

  ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಯಾವ ಫೋನಿಗೂ ಇಷ್ಟು ದೊಡ್ಡ ಮಟ್ಟದ ಪ್ರೀ ಆರ್ಡರ್ ದೊರೆತಿರಲಿಲ್ಲ ಎನ್ನಲಾಗಿದೆ. ಸುಮಾರು ಆರು ಮಿಲಿಯನ್ ಫೋನ್‌ಗಳು ಬಿಡುಗಡೆಗೂ ಮುನ್ನವೇ ಬುಕ್ಕಿಂಗ್ ಆಗಿತ್ತು ಎನ್ನಲಾಗಿದೆ. ಇದು ಎಲ್ಲಾ ಸ್ಮಾರ್ಟ್‌ಫೋನ್‌ಗಳ ದಾಖಲೆಯನ್ನು ಮುರಿದಿತ್ತು.

  ಜಿಯೋ ಫೋನ್ ವಿಶೇಷತೆ:

  ಜಿಯೋ ಫೋನಿನಲ್ಲಿ 2.4 ಇಂಚಿನ QVGA ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದರಲ್ಲಿ 512MB RAM ಜೊತೆಗೆ 4GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಅಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 128GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ. ಫೋನ್ ಹಿಂಭಾಗದಲ್ಲಿ 2MP ಕ್ಯಾಮೆರಾ ಮುಂಭಾಗದಲ್ಲಿ VGA ಕ್ಯಾಮೆರಾವನ್ನು ಸಹ ಅಳವಡಿಸಲಾಗಿದೆ.

  ಗೂಗಲ್ ಅಸಿಸ್ಟೆಂಟ್:

  ಈ ಮೂಲಕ ಕೃತಕ ಬುದ್ದಿ ಮತ್ತೆಯ ಸಹಾಯದಿಂದ ಕಾರ್ಯನಿರ್ವಹಿಸುವ ಗೂಗಲ್ ವಾಯ್ಸ್ ಅಸಿಸ್ಟೆಂಟ್ ಹೊಂದಿರುವ ಮೊದಲ ಫೀಚರ್ ಫೋನ್ ಎಂಬ ಖ್ಯಾತಿಗೆ ಜಿಯೋ ಫೋನ್ ಪಾತ್ರವಾಗಿದೆ. ಈಗಾಗಲೇ ಜಿಯೋ ಫೋನಿನಲ್ಲಿ ವಾಯ್ಡ್ ಅಸಿಸ್ಟೆಂಟ್ ಅನ್ನು ಕಾಣಬಹುದಾಗಿದ್ದು, ಆ ಸ್ಥಾನಕ್ಕೆ ಗೂಗಲ್ ಅಸಿಸ್ಟೆಂಟ್ ಬರಲಿದೆ.

  ಗೂಗಲ್ ಅಸಿಸ್ಟೆಂಟ್:

  ಈ ಮೂಲಕ ಕೃತಕ ಬುದ್ದಿ ಮತ್ತೆಯ ಸಹಾಯದಿಂದ ಕಾರ್ಯನಿರ್ವಹಿಸುವ ಗೂಗಲ್ ವಾಯ್ಸ್ ಅಸಿಸ್ಟೆಂಟ್ ಹೊಂದಿರುವ ಮೊದಲ ಫೀಚರ್ ಫೋನ್ ಎಂಬ ಖ್ಯಾತಿಗೆ ಜಿಯೋ ಫೋನ್ ಪಾತ್ರವಾಗಿದೆ. ಈಗಾಗಲೇ ಜಿಯೋ ಫೋನಿನಲ್ಲಿ ವಾಯ್ಡ್ ಅಸಿಸ್ಟೆಂಟ್ ಅನ್ನು ಕಾಣಬಹುದಾಗಿದ್ದು, ಆ ಸ್ಥಾನಕ್ಕೆ ಗೂಗಲ್ ಅಸಿಸ್ಟೆಂಟ್ ಬರಲಿದೆ.

  ಬೊಂಬಾಟ್ ಆಫರ್‌

  ಈಗಾಗಲೇ ಜಿಯೋ ಹಲವಾರು ಬೊಂಬಾಟ್ ಆಫರ್‌ಗಳನ್ನು ಲಾಂಚ್ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ತನ್ನದೇ ಹವಾ ಹುಟ್ಟಿಹಾಕಿದೆ. ಈಗಾಗಲೇ ಜಿಯೋಯಿಂದಾಗಿ ಹಲವಾರು ಟೆಲಿಕಾಂ ಕಂಪನಿಗಳು ಮುಚ್ಚುವ ಹಂತವನ್ನು ತಲುಪಿದೆ. ಇದೇ ಮಾದರಿಯಲ್ಲಿ ಕಳೆದ 5 ತ್ರೈಮಾಸಿಕಗಳಿಂದ ನಷ್ಟದಲ್ಲಿ ಸಿಲುಕಿಕೊಂಡಿರುವ ಐಡಿಯಾ ಆಸ್ತಿತ್ವಕ್ಕಾಗಿ ಪರದಾಡುತ್ತಿರುವ ಸಂದರ್ಭದಲ್ಲಿಯೇ ಜಿಯೋ ಟೆಲಿಕಾಂ ಮಾರುಕಟ್ಟೆಯೇ ಬಿದ್ದು ಹೋಗುವ ಆಫರ್ ವೊಂದನ್ನು ನೀಡಲು ಮುಂದಾಗಿದೆ. ಈ ಮತ್ತಷ್ಟು ಮಂದಿಯಲ್ಲಿ ಜಿಯೋ ಕುಟುಂಬಕ್ಕೆ ಸೇರಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದೆ.

  ಕೇಲವ ರೂ.49ಕ್ಕೆ

  ಕಳೆದ ವರ್ಷದಲ್ಲಿ ಅತೀ ಹೆಚ್ಚು ಮಾರಾಟವಾಗಿರುವ ಫೀಚರ್ ಫೋನ್ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಜಿಯೋ ಪೋನ್ ಮಾರಾಟವನ್ನು ಈ ವರ್ಷದಲ್ಲಿ ಮತ್ತಷ್ಟು ಹೆಚ್ಚು ಮಾಡುವ ಯೋಜನೆಯನ್ನು ರೂಪಿಸಿರುವ ರಿಲಯನ್ಸ್, ಕೇಲವ ರೂ.49ಕ್ಕೆ 28 ದಿನಗಳ ವ್ಯಾಲಿಡಿಟಿಯ ಆಫರ್ ಅನ್ನು ಜಿಯೋ ಫೋನ್‌ ಬಳಕೆದಾರರಿಗೆ ನೀಡಿದೆ. ಈ ಮೂಲಕ ತನ್ನ ಜಿಯೋ ಕುಟುಂಬದ ಗಾತ್ರವವನ್ನು ಮತ್ತಷ್ಟು ದೊಡ್ಡದು ಮಾಡಿಕೊಳ್ಳಲಿದೆ ಎನ್ನಲಾಗಿದೆ.

  ರೂ.49 ಪ್ಲಾನ್:

  ಜಿಯೋ ನೀಡಿರುವ ರೂ.49ರ ಪ್ಲಾನ್‌ನಲ್ಲಿ ಬಳಕೆದಾರರಿಗೆ 1GB 4G ಡೇಟಾವನ್ನು 28 ದಿನಗಳ ವ್ಯಾಲಿಡಿಟಿಯನ್ನು ನೀಡಲಿದೆ ಎನ್ನಲಾಗಿದೆ. ಇದರಲ್ಲಿ ಬಳಕೆದಾರರು ಅನ್‌ಲಿಮೆಟೆಡ್ ಕರೆ ಮಾಡುವ ಅವಕಾಶವನ್ನು ನೀಡಲಿದೆ ಎನ್ನಲಾಗಿದೆ. ಇದು ಜಿಯೋ ಫೋನ್‌ ಬಳಕೆದಾರರ ಸಂಖ್ಯೆಯನ್ನು ಹೆಚ್ಚು ಮಾಡಲಿದೆ.

  ಜಿಯೋ ಫೀಚರ್ ಫೋನ್‌:

  ಜಿಯೋ ಫೋನಿನಲ್ಲಿ 2.4 ಇಂಚಿನ QVGA ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದರಲ್ಲಿ 512MB RAM ಜೊತೆಗೆ 4GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಅಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 128GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ. ಫೋನ್ ಹಿಂಭಾಗದಲ್ಲಿ 2MP ಕ್ಯಾಮೆರಾ ಮುಂಭಾಗದಲ್ಲಿ VGA ಕ್ಯಾಮೆರಾವನ್ನು ಸಹ ಅಳವಡಿಸಲಾಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Reliance Big TV is making its pay channels free for a year while also providing up to 500 free-to-air channels for five years without charge. to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more