Home
ಸುದ್ದಿಜಾಲ

ಇನ್ನು ಮುಂದೆ ಅಂಚೆ ಕಛೇರಿಗಳಲ್ಲೇ ಪಡೆಯಿರಿ ಸೆಟ್-ಅಪ್-ಬಾಕ್ಸ್ ಗಳು..!

By Gizbot Bureau

ಹೊಸ ಟಿವಿ ತೆಗೆದುಕೊಂಡಿದ್ದೀವಿ ಅಥವಾ ಸೆಟ್ ಅಪ್ ಬಾಕ್ಸ್ ಬದಲಾಯಿಸಬೇಕು ಎಂದುಕೊಂಡಿದ್ದರೆ, ಅಥವಾ ಹೊಸ ಸೆಟ್ ಅಪ್ ಬಾಕ್ಸ್ ಅಳವಡಿಸಿಕೊಳ್ಳಬೇಕು ಎಂದುಕೊಂಡಿದ್ದರೆ ಇನ್ನು ಮುಂದೆ ಎಲ್ಲೆಲ್ಲೊ ಅಲೆದಾಡಬೇಕಾಗಿಲ್ಲ. ಸುಲಭದಲ್ಲೇ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾದ ಅವಕಾಶ ಗ್ರಾಹಕರ ಮುಂದಿದೆ. ಹೌದು, ಹೇಗೆ ಅಂತ ಕೇಳುತ್ತಿದ್ದೀರಾ.. ಮುಂದೆ ಓದಿ.

ಇನ್ನು ಮುಂದೆ ಅಂಚೆ ಕಛೇರಿಗಳಲ್ಲೇ ಪಡೆಯಿರಿ ಸೆಟ್-ಅಪ್-ಬಾಕ್ಸ್ ಗಳು..!

ರಿಲಯನ್ಸ್ ಬಿಗ್ ಟಿವಿಯು 50 ಸಾವಿರ ಅಂಚೆ ಕಛೇರಿಗಳ ಜೊತೆ ಪಾಲುದಾರಿಕೆಗೆ ಮುಂದಾಗಿರುವ ಬಗ್ಗೆ ಪ್ರಕಟಿಸಿದೆ. HD HEVC ಸೆಟ್- ಅಪ್- ಬಾಕ್ಸ್ ಗಳನ್ನು ಗ್ರಾಹಕರು ಸುಲಭದಲ್ಲಿ ಬುಕ್ ಮಾಡಿ ಖರೀದಿಸಲು ಈ ಪಾಲುದಾರಿಕೆ ಸಾಕಷ್ಟು ನೆರವು ನೀಡಲಿದೆ. ಫ್ರೀ-ಸೆಟ್ ಅಪ್ ಬಾಕ್ಸ್ ಗಳನ್ನು ಬುಕ್ಕಿಂಗ್ ಮಾಡಲು ಕೇವಲ 500 ರುಪಾಯಿಯನ್ನು ಫೋಸ್ಟ್ ಆಫೀಸಿನಲ್ಲಿ ಪಾವತಿಸಿದರೆ ಸಾಕಾಗುತ್ತೆ.

ರಾಜಸ್ತಾನ, ಪಂಜಾಬ್, ಉತ್ತರಖಂಡ, ಆಂಧ್ರ ಪ್ರದೇಶ, ಕರ್ನಾಟಕ, ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ ನಲ್ಲಿ ಈ ಅವಕಾಶ ದೊರೆಯಲಿದೆ. ಜೂನ್ 20 ನೇ ತಾರೀಕಿನಿಂದ ಅಂಚೆ ಕಛೇರಿಗಳಿಂದಲೇ ಗ್ರಾಹಕರು ಸೆಟ್-ಅಪ್- ಬಾಕ್ಸ್ ಗಳನ್ನು ಅಳವಡಿಸಿಕೊಳ್ಳಬಹುದು.

ಕಂಪೆನಿಯು ಇನ್ಸ್ಟಾಲೇಷನ್ ಕಾರ್ಯಕ್ರಮವನ್ನು ಶೀಘ್ರದಲ್ಲೇ ಪ್ರಾರಂಭಿಸಲಿದೆ. ಯಾವೆಲ್ಲ ಗ್ರಾಹಕರು ಪ್ರೀ ಬುಕ್ಕಿಂಗ್ ಮಾಡುತ್ತಾರೋ ಅಂತಹ ಗ್ರಾಹಕರ ಮನೆಗಳಲ್ಲಿ ಜುಲೈ 30 ನೇ ತಾರೀಕಿನ ಒಳಗೆ ಸೆಟ್-ಅಪ್-ಬಾಕ್ಸ್ ಗಳು ಇನ್ಸ್ಟಾಲ್ ಆಗಲಿವೆ ಎಂದು ಕಂಪೆನಿ ತಿಳಿಸಿದೆ. ಸೆಟ್-ಅಪ್-ಬಾಕ್ಸ್ ಗಳ ಡೆಲಿವರಿ ಕಾರ್ಯಕ್ರಮವು ಜೂನ್ 15 ನೇ ತಾರೀಕಿನಿಂದಲೇ ಪ್ರಾರಂಭಗೊಳ್ಳಲಿದೆ.

ರಿಲಯನ್ಸ್ ಬಿಗ್ ಟಿವಿಯ HD HEVC ಸೆಟ್-ಅಪ್-ಬಾಕ್ಸ್ ಗಳಲ್ಲಿ ಹಲವು ವೈಶಿಷ್ಟ್ಯಗಳಿದ್ದು ರೆಕಾರ್ಡಿಂಗ್ ಮಾಡುವ ಸಮಯವನ್ನು ನಿಗದಿ ಪಡಿಸುವುದು, ಯುಎಸ್ ಬಿ ಪೋರ್ಟ್, HDMI ಪೋರ್ಟ್ ಗಳು ಇದರಲ್ಲಿ ಲಭ್ಯವಾಗಲಿದೆ. ಹಲವು ಆಫರ್ ಗಳೂ ಇದರಲ್ಲಿದ್ದು. ಒಂದು ವರ್ಷದ ವರೆಗೆ ಪಾವತಿ ಮಾಡಿರುವ ಚಾನಲ್ ಗಳ HD ಚಾನಲ್ ಗಳು ಬರಲಿವೆ. ಇನ್ನು 500 FTA ಚಾನಲ್ ಗಳು 5 ವರ್ಷ ಫ್ರೀ ಆಗಿ ಬರಲಿವೆ.

ರಿಲಯನ್ಸ್ ಬಿಗ್ ಟಿವಿಯ ಲೇಟೇಸ್ಟ್ ಆಫರ್ ಗಳ ಬಗ್ಗೆ ವೆಬ್ ಸೈಟ್ ನಲ್ಲಿ ಮಾಹಿತಿ ಇದ್ದು, ಬುಕ್ಕಿಂಗ್ ಬೆಲೆ 500 ರುಪಾಯಿಯನ್ನು ಪೋಸ್ಟ್ ಆಫೀಸಿನಲ್ಲಿ ಪಾವತಿಸಬಹುದು. ಫ್ರೀ ಚಾನಲ್ ಗಳು ಸಿಗಬೇಕೆಂದರೆ ಸೆಟ್ ಅಪ್ ಬಾಕ್ಸ್ ಪಡೆದ ಗ್ರಾಹಕರು 1500 ರುಪಾಯಿ ಪಾವತಿಸಬೇಕು. ಲಾಯಲ್ಟಿ ಬೋನಸ್ ಪಡೆಯಲು ಇಚ್ಛಿಸುವ ಗ್ರಾಹಕರು ತಿಂಗಳಿಗೆ 300 ರುಪಾಯಿಯಂತೆ ಎರಡು ವರ್ಷದ ನಂತರ ಪಾವತಿ ಮಾಡಬೇಕಾಗುತ್ತದೆ.

ಚಂದಾದಾರಿಕೆ ಮುಗಿದ ನಂತರ ಪಾವತಿಸಿದ ಚಾನಲ್ ಗಳು ಮುಂದಿನ ಎರಡು ವರ್ಷಗಳ ಕಾಲ ರಿಲಯನ್ಸ್ ಬಿಗ್ ಟಿವಿಯಲ್ಲಿ ಲಭ್ಯವಾಗಲಿದೆ. ನಂತರ ಚಂದಾದಾರಿಗೆ 2000 ರುಪಾಯಿಯ ಲಾಯಲ್ಟಿ ಬೋನಸ್( ಬುಕ್ಕಿಂಗ್ ನ ಸಮಯದಲ್ಲಿ ಪಾವತಿಸಿರುವ ಹಣ) ಸಿಗಲಿದ್ದು ಇದು ಪುನಃ ಎರಡು ವರ್ಷಗಳಿಗೆ ರಿಚಾರ್ಜ್ ಮಾಡಿದಂತಾಗಿರುತ್ತದೆಯೇ ಹೊರತು ನಿಮ್ಮ ಕೈಗೆ ನೀಡುವ ಹಣವಲ್ಲ. ಬುಕ್ಕಿಂಗ್ ಮಾಡಿದ 30 ರಿಂದ 45 ದಿನಗಳ ಒಳಗೆ ಸೆಟ್ – ಅಪ್ ಬಾಕ್ಸ್ ನಿಮ್ಮನ್ನು ತಲುಪಲಿದೆ. ಪ್ರೀ ಬುಕ್ಕಿಂಗ್ ಈಗಾಗಲೇ ಮಹಾರಾಷ್ಟ್ರ, ರಾಜಸ್ಥಾನ, ಪಂಜಾಬ್, ಉತ್ತರಾಖಂಡ, ಆಂದ್ರ ಪ್ರದೇಶ, ಕರ್ನಾಟಕ, ಗೋವಾದಲ್ಲಿ ಮಾಡಲಾಗಿದೆ.

Best Mobiles in India

English summary
Reliance Big TV partners with 50,000 post offices for booking of ‘free’ set-top-boxes
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+