Subscribe to Gizbot

ರಿಲಾಯನ್ಸ್ ಕಂಮ್ಯೂನಿಕೇಷನ್‌ನ 'ಆಪ್‌ ಟು ಆಪ್‌' ಕರೆ ಆಫರ್: ದರ ರೂ.1

Written By:

ರಿಲಾಯನ್ಸ್ ಕಂಮ್ಯೂನಿಕೇಷನ್ ಜಿಯೋ ಸಿಮ್‌ ಪರಿಚಯಿಸಿ, ಅನ್‌ಲಿಮಿಟೆಡ್‌ ಡಾಟಾ ಆಫರ್‌ ನೀಡಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಅಂದಹಾಗೆ ಇನ್ನೂ ಸಹ ಹಲವು ಪ್ರದೇಶಗಳಲ್ಲಿ ಸಿಮ್‌ ಖರೀದಿಗಾಗಿ ಸಾಲಿನಲ್ಲಿ ನಿಲ್ಲುವುದು ಮಾತ್ರ ತಪ್ಪಿಲ್ಲ. ಅನ್‌ಲಿಮಿಟೆಡ್‌ ಡಾಟಾ ಆಫರ್‌ ಪಡೆದು ಬಳಸುವ ಮುನ್ನವೇ ರಿಲಾಯನ್ಸ್ ಕಂಮ್ಯೂನಿಕೇಷನ್ ಇನ್ನೊಂದು ಅತ್ಯುಪಯುಕ್ತ ಆಫರ್‌ ಅನ್ನು ಪರಿಚಯಿಸಿದೆ.

ರಿಲಾಯನ್ಸ್ ಕಂಮ್ಯೂನಿಕೇಷನ್‌ 4G ಸ್ಮಾರ್ಟ್‌ಫೋನ್‌ ಬಳಸುವವರ ತನ್ನ ಗ್ರಾಹಕರಿಗೆ ಆಪ್‌ನಿಂದ ಆಪ್‌ಗೆ ಕರೆ ಮಾಡುವ ಹೊಸ ಸೇವೆಯನ್ನು ಪರಿಚಯಿಸಿದೆ. ಈ ಬಗ್ಗೆ ಪ್ರಮುಖ ಮಾಹಿತಿಗಳನ್ನು ಲೇಖನದ ಸ್ಲೈಡರ್‌ ಓದಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏನಿದು ಆಪ್‌ನಿಂದ ಆಪ್‌ಗೆ ಕರೆ ಸೇವೆ?

ಏನಿದು ಆಪ್‌ನಿಂದ ಆಪ್‌ಗೆ ಕರೆ ಸೇವೆ?

ಅಧಿಕೃತ ವರದಿಗಳ ಪ್ರಕಾರ ರಿಲಾಯನ್ಸ್ ಕಂಮ್ಯೂನಿಕೇಷನ್ ಆಫರ್‌ ಅನ್ನು 'ಕಾಲ್‌ ಡ್ರಾಪ್ಸ್ ಸೆ ಛುಟ್‌ಕಾರ (freedom from call drops) ಎಂದು ಕರೆಯಲಾಗುತ್ತದೆ. ಈ ಸೇವೆಯಿಂದ 1 ರೂಪಾಯಿಗೆ 300 ನಿಮಿಷಗಳ ಟಾಕ್‌ ಟೈಮ್‌ 30 ದಿನಗಳ ವ್ಯಾಲಿಡಿಟಿಯೊಂದಿಗೆ ಸಿಗುತ್ತದೆ.

ಸೆಪ್ಟೆಂಬರ್‌ ತಿಂಗಳಿಗೆ ಮಾತ್ರ !

ಸೆಪ್ಟೆಂಬರ್‌ ತಿಂಗಳಿಗೆ ಮಾತ್ರ !

ಅಂದಹಾಗೆ ರೂ.1 ಕ್ಕೆ ದೊರೆಯುವ ಆಪ್‌ ಟು ಆಪ್‌ ಕರೆ ಆಫರ್‌ ಸೆಪ್ಟೆಂಬರ್‌ ತಿಂಗಳಿಗೆ ಮಾತ್ರ ಲಭ್ಯ. ನಂತರ ಗ್ರಾಹಕರು ರೂ. 39 ಕ್ಕೆ ಡಾಟಾ ಪ್ಯಾಕ್‌ ಖರೀದಿಸಬಹುದು. ಇದು 200 MB ಡಾಟಾ ನೀಡುತ್ತದೆ. ಈ ಡಾಟಾದಿಂದ 300 ನಿಮಿಷಗಳು ಕರೆ ಮಾಡಬಹುದು.

4G LTE ಗ್ರಾಹಕರು

4G LTE ಗ್ರಾಹಕರು

ರಿಲಾಯನ್ಸ್ ಕಂಮ್ಯೂನಿಕೇಷನ್‌ ನೀಡುತ್ತಿರುವ ಆಪ್‌ ಟು ಆಪ್‌ ಕರೆ ಆಫರ್‌ನಿಮದ‌ 4G LTE ಗ್ರಾಹಕರು ಪ್ರಪಂಚದಾದ್ಯಂತ ವಾಟ್ಸಾಪ್, ಫೇಸ್‌ಬುಕ್ ಮೆಸೇಂಜರ್‌, ಸ್ಕೈಪ್, ಗೂಗಲ್‌ ಹ್ಯಾಂಗೌಟ್ಸ್, ಇಮೊ ಮತ್ತು ವೈಬರ್‌ ಮೂಲಕ ಕರೆ ಮಾಡಬಹುದು ಎಂದು ರಿಲಾಯನ್ಸ್ ಕಂಮ್ಯೂನಿಕೇಷನ್‌ ಗ್ರಾಹಕ ವ್ಯವಹಾರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ 'ಗುರ್ದೀಪ್‌ ಸಿಂಗ್‌' ಅಭಿಪ್ರಾಯ ಪಟ್ಟಿದ್ದಾರೆ. 10 ಸ್ಮಾರ್ಟ್‌ಫೋನ್‌ ಬಳಕೆದಾರರಲ್ಲಿ 9 ಬಳಕೆದಾರರು ಆಪ್‌ಗಳನ್ನು ಹೊಂದಿರುತ್ತಾರೆ ಎಂದು ಸಹ ಅಭಿಪ್ರಾಯಪಟ್ಟಿದ್ದಾರೆ.

ರಿಲಾಯನ್ಸ್ ಕಂಮ್ಯೂನಿಕೇಷನ್‌

ರಿಲಾಯನ್ಸ್ ಕಂಮ್ಯೂನಿಕೇಷನ್‌

ಭಾರತದ ವಿಶಾಲ ಸ್ಪೆಕ್ಟ್ರಮ್‌ ಹರಾಜಿನ ಪ್ರಕಾರ 700 Mhz ಬ್ಯಾಂಡ್ ಬ್ಲಾಕ್‌ ಲೀಸ್ಟ್‌ಗೆ ಸೇರಲಿದೆ. ಅಲ್ಲದೇ ಪಾನ್-ಇಂಡಿಯಾ 850 Mhz ಬ್ಯಾಂಡ್‌ ಸಹ ಇದ್ದು, ಇನ್ನೂ ಸಹ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ತೊಡಗಿರುವುದಾಗಿ ಗುರ್ದೀಪ್‌ ಸಿಂಗ್‌ ಹೇಳಿದ್ದಾರೆ.

ಆಪ್‌ ಟು ಆಪ್‌ ಕರೆ ಆಫರ್ ಎಲ್ಲಿ ಲಭ್ಯ

ಆಪ್‌ ಟು ಆಪ್‌ ಕರೆ ಆಫರ್ ಎಲ್ಲಿ ಲಭ್ಯ

ಪ್ರಸ್ತುತದಲ್ಲಿ ದೆಹಲಿಗೆ ಡಾಟಾ ಆಧಾರಿತದಲ್ಲಿ ಮಾತನಾಡುವ ಆಫರ್‌ ನೀಡುತ್ತಿದೆ. ಸರ್ಕಾರ ಒಟ್ಟಾರೆ 2,354,55 Mhz ಮೊಬೈಲ್‌ ಫ್ರಿಕ್ವೆನ್ಸಿಯನ್ನು ಎಲ್ಲಾ ಬ್ಯಾಂಡ್‌ಗಳಲ್ಲೂ ಹರಾಜಿಗೆ ಇಡುತ್ತಿದ್ದು, -700 Mhz, 800 Mhz, 900 Mhz, 1800 Mhz, 2100 Mhz ಮತ್ತು 2300 Mhz ಬ್ಯಾಂಡ್‌ಗಳು ಇರಲಿವೆ.ಅಲ್ಲದೇ ಸರ್ಕಾರ 64,000 ಕೋಟಿಯನ್ನು ಸ್ಪೆಕ್ಟ್ರಮ್‌ ಹರಾಜಿನಿಂದ ನಿರೀಕ್ಷಿಸುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Reliance Communications’ app to app calling offer starts at Re 1. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot