ರಿಲಯನ್ಸ್ ಡಿಜಿಟಲ್ ದೀಪಾವಳಿ ಸೇಲ್ ನಲ್ಲಿ ಆಪಲ್ ಫೋನ್ ಗಳಿಗೆ 50% ರಿಯಾಯಿತಿ
ರಿಲಯನ್ಸ್ ಡಿಜಿಟಲ್ ಕೂಡ ದೀಪಾವಳಿ ಸೇಲ್ ನ್ನು ಪ್ರಾರಂಭಿಸಿದೆ. ಈ ಸೇಲ್ ನಲ್ಲಿ ಆಪಲ್ ಐಫೋನ್ ಗಳಿಗೆ ಭರ್ಜರಿ ರಿಯಾಯಿತಿ ನೀಡಲಾಗುತ್ತಿದ್ದು 50% ಕಡಿಮೆ ಬೆಲೆಯಲ್ಲಿ ಆಫಲ್ ಫೋನ್ ಗಳನ್ನು ಖರೀದಿಸುವ ಅವಕಾಶ ಗ್ರಾಹಕರಿಗೆ ಲಭ್ಯವಿದೆ. ಕೆಲವು ಫೋನ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ. ಹೊಸದಾಗಿ ಬಿಡುಗಡೆಗೊಂಡಿರುವ ಐಫೋನ್ 11 ಸರಣಿಯ ಫೋನ್ ಗಳಿಗೆ ಪೋರ್ಟಲ್ ನಲ್ಲಿ ಯಾವುದೇ ರಿಯಾಯಿತಿ ಬೆಲೆಯನ್ನು ಆಪರ್ ಮಾಡಿರುವ ಬಗ್ಗೆ ಮಾಹಿತಿ ನೀಡಲಾಗಿಲ್ಲ. ಮುಂದಿನ ದಿನಗಳಲ್ಲಿ ಖಂಡಿತ ದೊಡ್ಡ ರಿಯಾಯಿತಿಯನ್ನು ನೀವು ಹೊಸದಾಗಿ ಬಿಡುಗಡೆಗೊಂಡಿರುವ ಐಫೋನ್ ಗಳಿಗೂ ಕೂಡ ನಿರೀಕ್ಷೆ ಮಾಡಬಹುದು.

ಇಎಂಐ ಪ್ಲಾನ್ ನಲ್ಲಿಯೂ ಕೂಡ ಬಳಕೆದಾರರು ಐಫೋನ್ ಗಳನ್ನು ಖರೀದಿಸುವ ಅವಕಾಶವಿದೆ. ವಾರೆಂಟಿ ಸೇವೆಗಳು ಕೂಡ ಈ ಫೋನ್ ಗಳಿಗೆ ಲಭ್ಯವಾಗುತ್ತದೆ. ಈ ಫೋನ್ ಗಳ ಪ್ರಮುಖ ಫೀಚರ್ ಎಂದರೆ iOS 12, A12 ಬಯೋನಿಕ್ ಚಿಪ್ ಸೆಟ್, ಫೇಸ್ ಐಡಿ, ಲಿಕ್ವಿಡ್ ರೆಟಿನಾ ಹೆಚ್ ಡಿ ಡಿಸ್ಪ್ಲೇ ಮತ್ತು ಇತ್ಯಾದಿ ಹಲವು ವೈಶಿಷ್ಟ್ಯತೆಗಳಿರುವ ಫೋನ್ ಗಳು ಇವಾಗಿವೆ.

ಆಪಲ್ ಐಫೋನ್ 7 ಗೆ 29,900 ರುಪಾಯಿಗಳು
ಈ ಡಿವೈಸ್ 32GB ROM ಹೊಂದಿದೆ ಮತ್ತು ಕಪ್ಪು, ಚಿನ್ನದ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಸದ್ಯ ಈ ಸೇಲ್ ನಲ್ಲಿ ಕೇವಲ 29,900 ರುಪಾಯಿ ಬೆಲೆಗೆ ಖರೀದಿಸುವ ಅವಕಾಶವಿದೆ.

ಆಪಲ್ ಐಫೋನ್ 8 ಪ್ಲಸ್ ಗೆ 49,900 ರುಪಾಯಿಗಳು
ಈ ಫೋನಿನ ಆರಂಭಿಕ ಬೆಲೆ 49, 900 ರುಪಾಯಿಗಳು. ಈ ಬೆಲೆಯಲ್ಲಿ ಖರೀದಿಸುವುದರಿಂದಾಗಿ ನೀವು 20,000 ರುಪಾಯಿ ಉಳಿಸಿದಂತಾಗುತ್ತದೆ.

ಆಪಲ್ ಐಫೋನ್ ಎಕ್ಸ್ ಆರ್ ಗೆ 54,900 ರುಪಾಯಿಗಳು
128ಜಿಬಿ ಸ್ಟೋರೇಜ್ ವೇರಿಯಂಟ್ ಇರುವ ಹ್ಯಾಂಡ್ ಸೆಟ್ ನ ಬೆಲೆ 54,900 ರುಪಾಯಿಗಳು. ಇದನ್ನು ಖರೀದಿಸುವ ಮೂಲಕ ನೀವು 33% ಉಳಿತಾಯ ಮಾಡಿದಂತಾಗುತ್ತದೆ.

ಆಪಲ್ ಐಫೋನ್ ಎಕ್ಸ್ಎಸ್ ಮ್ಯಾಕ್ಸ್ ಗೆ 99,900 ರುಪಾಯಿಗಳು
99,900 ರುಪಾಯಿಗೆ ಈ ಫೋನ್ ಖರೀದಿಸುವ ಮೂಲಕ ನೀವು 9% ಅಂದರೆ 9,000 ರುಪಾಯಿ ಉಳಿತಾಯ ಮಾಡಿದಂತಾಗುತ್ತದೆ.

ಆಪಲ್ ಐಫೋನ್ 6ಎಸ್ ಗೆ 24,999 ರುಪಾಯಿಗಳು
ಈ ಹ್ಯಾಂಡ್ ಸೆಟ್ ಚಿನ್ನದ ಬಣ್ಣದ ಆವೃತ್ತಿಯಲ್ಲಿ ನಿಮಗೆ ಲಭ್ಯವಾಗುತ್ತದೆ. 24,999 ರುಪಾಯಿಗೆ ಖರೀದಿಸುವ ಮೂಲಕ ನೀವು 38% ಹಣವನ್ನು ಉಳಿತಾಯ ಮಾಡಿದಂತಾಗುತ್ತದೆ.

ಆಪಲ್ ಐಫೋನ್ ಎಕ್ಸ್ಎಸ್ ಗೆ 1,03,900 ರುಪಾಯಿಗಳು
256ಜಿಬಿ ಸ್ಟೋರೇಜ್ ವೇರಿಯಂಟ್ ನ ನ ಬೆಲೆ 1,03,900 ರುಪಾಯಿಗಳು. ಇದನ್ನು ಖರೀದಿಸುವ ಮೂಲಕ ನೀವು 10% ಹಣವನ್ನು ಉಳಿತಾಯ ಮಾಡಿದಂತಾಗುತ್ತದೆ.


Click it and Unblock the Notifications








