Home
ಸುದ್ದಿಜಾಲ

ದಸರಾ ಸಂಭ್ರಮ ಹೆಚ್ಚಿಸಲು ರಿಲಾಯನ್ಸ್‌ ಡಿಜಿಟಲ್‌ನಿಂದ ಬಂಪರ್‌ ಆಫರ್‌..!

By Gizbot Bureau

ಭಾರತದಲ್ಲಿ ತನ್ನದೇ ಆದ ಡಿಜಿಟಲ್‌ ಕ್ರಾಂತಿ ಸೃಷ್ಟಿಸಿರುವ ರಿಲಾಯನ್ಸ್‌ ಡಿಜಿಟಲ್‌ ಹಬ್ಬಗಳ ಉಡುಗೊರೆಯಾಗಿ ಗ್ರಾಹಕರಿಗೆ 'ಫೆಸ್ಟಿವಲ್‌ ಆಫ್‌ ಎಲೆಕ್ಟ್ರಾನಿಕ್ಸ್‌' ಪ್ರಾರಂಭಿಸಿದೆ. ದೇಶಾದ್ಯಂತ 6700 ನಗರಗಳಲ್ಲಿ ವಿಸ್ತರಣೆಗೊಂಡಿರುವ ರಿಲಾಯನ್ಸ್‌ ಡಿಜಿಟಲ್‌ 370ಕ್ಕೂ ಹೆಚ್ಚು ದೊಡ್ಡ ಶೋರೂಂ, 2000ಕ್ಕೂ ಹೆಚ್ಚು ಮೈಜಿಯೋ ಸ್ಟೋರ್‌ಗಳನ್ನೊಳಗೊಂಡು 7700ಕ್ಕೂ ಹೆಚ್ಚು ಜಿಯೋ ಸ್ಟೋರ್‌ಗಳಲ್ಲಿ ವಿಶೇಷ ವ್ಯವಹಾರ ಮತ್ತು ಆಕರ್ಷಕ ಕೊಡುಗೆಗಳೊಂದಿಗೆ 'ಫೆಸ್ಟಿವಲ್ ಆಫ್ ಎಲೆಕ್ಟ್ರಾನಿಕ್ಸ್’ ಅನ್ನು ಗ್ರಾಹಕರಿಗಾಗಿ ನೀಡುತ್ತಿದೆ. ರಿಲಾಯನ್ಸ್‌ ಡಿಜಿಟಲ್‌ ತನ್ನ ಗ್ರಾಹಕರಿಗಾಗಿ ಏನೆಲ್ಲಾ ಆಫರ್‌ ನೀಡುತ್ತಿದೆ ಎಂಬುದನ್ನು ಮುಂದೆ ನೋಡಿ.

ಶೇ.15 ಕ್ಯಾಶ್‌ಬ್ಯಾಕ್‌

ಶೇ.15 ಕ್ಯಾಶ್‌ಬ್ಯಾಕ್‌

ಈ ದಸರಾ ಸಂಭ್ರಮದಲ್ಲಿ ರಿಲಾಯನ್ಸ್ ಡಿಜಿಟಲ್ ಮತ್ತು ಮೈ ಜಿಯೋ ಸ್ಟೋರ್‌ಗಳು ಶೇ.15 ಕ್ಯಾಶ್-ಬ್ಯಾಕ್ ನೀಡುತ್ತಿದ್ದು, ಅಕ್ಸೆಸರಿಸ್‌ ಮೇಲೆ ಶೇ.10ರಷ್ಟು ಹೆಚ್ಚುವರಿ ರಿಯಾಯಿತಿಯೊಂದಿಗೆ ಸಂಪೂರ್ಣ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಗ್ರಾಹಕರಿಗಾಗಿ ನೀಡುತ್ತಿದೆ. ಇದರ ಜೊತೆ ಆರು ತಿಂಗಳ ಅವಧಿಯ AJIO ವೋಚರ್‌ ಮತ್ತು ಜಿಯೋ ಸಾವನ್‌ ಪ್ರೋ ಚಂದಾದಾರಿಕೆಯನ್ನು ರಿಲಾಯನ್ಸ್‌ ಡಿಜಿಟಲ್‌ ನೀಡುತ್ತಿದೆ.

ಅದೃಷ್ಟವಂತರಿಗೆ 1 ಕೆಜಿ ಚಿನ್ನ

ಅದೃಷ್ಟವಂತರಿಗೆ 1 ಕೆಜಿ ಚಿನ್ನ

ಫೆಸ್ಟಿವಲ್ ಆಫ್ ಎಲೆಕ್ಟ್ರಾನಿಕ್ಸ್‌ನಲ್ಲಿ ಕೆಲವು ಅದೃಷ್ಟವಂತ ಗ್ರಾಹಕರು 1 ಕೆಜಿ ಚಿನ್ನ, ಐಷಾರಾಮಿ ಕಾರುಗಳು, ಮೋಟಾರ್‌ ಬೈಕ್‌ಗಳು, ಎಲ್‌ಇಡಿ ಟಿವಿಗಳು, ಲ್ಯಾಪ್‌ಟಾಪ್‌ಗಳು ಅಥವಾ ಐಫೋನ್‌ಗಳನ್ನು ಗೆಲ್ಲುವ ಅವಕಾಶ ಹೊಂದಿದ್ದಾರೆ. ಸುಲಭ ಮತ್ತು ಆಕರ್ಷಕ ಹಣಕಾಸು ಆಯ್ಕೆಗಳು ಸಹ ಶಾಪಿಂಗ್ ಅನುಭವವನ್ನು ಸುಗಮವಾಗಿಸುವ ಭರವಸೆ ನೀಡಿದೆ.

ಅ.5 ರಿಂದ ಅ.8 ರವರೆಗೆ ಆಫರ್‌

ಅ.5 ರಿಂದ ಅ.8 ರವರೆಗೆ ಆಫರ್‌

ಫೆಸ್ಟಿವಲ್ ಆಫ್ ಎಲೆಕ್ಟ್ರಾನಿಕ್ಸ್‌ ಅಕ್ಟೋಬರ್ 5 ರಿಂದ ಪ್ರಾರಂಭವಾಗಿ ಅಕ್ಟೋಬರ್ 8 ರವರೆಗೆ ಆಯೋಜನೆಗೊಂಡಿದೆ. ಭಾರತದಾದ್ಯಂತದ ಎಲ್ಲಾ ರಿಲಯನ್ಸ್ ಡಿಜಿಟಲ್ ಮತ್ತು ಮೈ ಜಿಯೋ ಮಳಿಗೆಗಳಲ್ಲಿ ಟೆಲಿವಿಷನ್, ಗೃಹೋಪಯೋಗಿ ವಸ್ತುಗಳು, ಮೊಬೈಲ್ ಫೋನ್, ಲ್ಯಾಪ್‌ಟಾಪ್ ಮತ್ತು ಪರಿಕರಗಳಾದ್ಯಂತ ಮೇಲಿನ ಕೊಡುಗೆಗಳು ಲಭ್ಯವಿರುತ್ತವೆ.

ಗ್ರಾಹಕರಿಗೆ ಡಿಜಿಟಲ್‌ ಅನುಭವ

ಗ್ರಾಹಕರಿಗೆ ಡಿಜಿಟಲ್‌ ಅನುಭವ

ರಿಲಯನ್ಸ್ ಡಿಜಿಟಲ್‌ನಲ್ಲಿ ಪ್ರತಿ ಗ್ರಾಹಕರ ವ್ಯಾಪಾರಕ್ಕೆ ಸಹಾಯ ಮಾಡಲು ಉತ್ಪನ್ನಗಳ ವ್ಯಾಪಕ ಆಯ್ಕೆಯೊಂದಿಗೆ ವೈಯಕ್ತಿಕಗೊಳಿಸಿದ ತಂತ್ರಜ್ಞಾನದ ಅನುಭವವನ್ನು ಆನಂದಿಸುವಂತೆ ಮಾಡುತ್ತದೆ. ನೀಡಿರುವ ಕೊಡುಗೆಗಳು, ಕಡಿಮೆ ಬೆಲೆ ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳ ವ್ಯಾಪಕ ಆಯ್ಕೆಯೊಂದಿಗೆ ರಿಲಾಯನ್ಸ್ ಡಿಜಿಟಲ್ ಹಬ್ಬದ ಉಡುಗೊರೆಗಳನ್ನು ಖರೀದಿಸುವ ಅಂತಿಮ ತಾಣವಾಗಿದೆ ಎಂದು ರಿಲಾಯನ್ಸ್‌ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Best Mobiles in India

English summary
Reliance Digital Festival Electronics Offer In 6700 Cities
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+