ಅಂಬಾನಿಗೆ ಜಿಯೋ ಗಳಿಸಿ ಕೊಟ್ಟಿದ್ದು ಎಷ್ಟು..? ಇಲ್ಲಿದೆ ಪಿನ್‌ ಟು ಪಿನ್ ಮಾಹಿತಿ..!

|
Get 1GB free Jio 4G data with Cadbury Dairy Milk - KANNADA

ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಡು ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುತ್ತಿರುವ ಜಿಯೋ ಸಾಧನೆಯ ರಿಸಲ್ಟ್ ಆಚೆ ಬಂದಿದೆ. ಕಳೆದ ಬಾರಿಗೆ ಹೋಲಿಕೆ ಮಾಡಿಕೊಂಡರೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಲಾಭವನ್ನು ಮಾಡಿಕೊಂಡಿದೆ ಎನ್ನಲಾಗಿದೆ. ರಿಲಾಯನ್ಸ್ ಇಂಡಸ್ಟ್ರೀಸ್ (ಆರ್​ಐಎಲ್) ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಲಾಭದ ಪ್ರಮಾಣ ಶೇ. 03ರಷ್ಟು ಏರಿಕೆ ಮಾಡಿಕೊಂಡಿದೆ. ಇದರಲ್ಲಿ ದೊಡ್ಡ ಪ್ರಮಾಣದ ಆದಾಯ ಜಿಯೋ ದಿಂದಲೇ ಬಂದಿದೆ.

ಅಂಬಾನಿಗೆ ಜಿಯೋ ಗಳಿಸಿ ಕೊಟ್ಟಿದ್ದು ಎಷ್ಟು..? ಇಲ್ಲಿದೆ ಪಿನ್‌ ಟು ಪಿನ್ ಮಾಹಿತಿ..

ಕಳೆದ ಬಾರಿಗೆ ಹೋಲಿಕೆ ಮಾಡಿಕೊಂಡರೆ ಈ ಬಾರಿ ದೊಡ್ಡ ಪ್ರಮಾಣದಲ್ಲಿ ಲಾಭವನ್ನು ಮಾಡಿಕೊಂಡಲ್ಲವಾದರೂ ಸಹ ಅಲ್ಪ ಪ್ರಮಾಣದಲ್ಲಿ ಲಾಭವನ್ನು ಮಾಡಿಕೊಂಡಿದೆ. ಇದಲ್ಲದೇ ದೇಶಿಯ ಮಾರುಕಟ್ಟೆಯಲ್ಲಿ ಬೇರೆ ಟೆಲಿಕಾಂ ಕಂಪನಿಗಳಿಗೆ ಹೋಲಿಕೆ ಮಾಡಿಕೊಂಡರೆ ಭಾರೀ ಪ್ರಮಾಣದಲ್ಲಿ ಲಾಭವನ್ನು ಮಾಡಿಕೊಂಡಿದೆ. ಇತರೆ ಕಂಪನಿಗಳು ಇಷ್ಟು ಪ್ರಮಾಣದ ಲಾಭವನ್ನು ಮಾಡಿಕೊಳ್ಳಲು ಪರದಾಡುತ್ತಿವೆ.

9,485 ಕೋಟಿ ರೂ ನಿವ್ವಳ ಲಾಭ:

9,485 ಕೋಟಿ ರೂ ನಿವ್ವಳ ಲಾಭ:

ಕಳೆದ ಬಾರಿಯ ರಿಲಯನ್ಸ್ ಇಂಡಸ್ಟ್ರೀಸ್ ತ್ರೈಮಾಸಿಕದಲ್ಲಿ 9,435 ಕೋಟಿ ನಿವ್ವಳ ಲಾಭ ತೋರಿಸಿತ್ತು. ಈ ಬಾರಿ ಅದರಲ್ಲಿ ಏರಿಕೆಯಾಗಿದ್ದು, ಈ ಬಾರಿಯ ಮೊದಲ ತ್ರೈಮಾಸಿಕ ಅವಧಿಯಲ್ಲಿ 9,485 ಕೋಟಿ ರೂ ನಿವ್ವಳ ಲಾಭ ಮಾಡಿಕೊಂಡಿದೆ ಎನ್ನಲಾಗಿದೆ. ಇದು ಮಾರುಕಟ್ಟೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಬೇಡಿಕೆಯನ್ನು ತೋರಿಸಲಿದೆ.

ಜಿಯೋ ಲಾಭ ಕೂಡ ಅಧಿಕ:

ಜಿಯೋ ಲಾಭ ಕೂಡ ಅಧಿಕ:

ರಿಲಯನ್ಸ್ ಇಂಡಸ್ಟ್ರೀಸ್ ನ ಒಂದು ಭಾಗವಾಗಿರುವ ಜಿಯೋ ಕೂಡ ಹೆಚ್ಚಿನ ಪ್ರಮಾಣದಲ್ಲಿ ಲಾಭವನ್ನು ಮಾಡಿಕೊಂಡಿದೆ ಎನ್ನಲಾಗಿದೆ. ಏಪ್ರಿಲ್-ಮೇ-ಜೂನ್ ತಿಂಗಳಿನಲ್ಲಿ ಜಿಯೋ 612 ಕೋಟಿ ರೂ ಲಾಭ ಗಳಿಸಿದೆ. ಹಿಂದಿನ ಅವಧಿಯಲ್ಲಿ 510 ಕೋಟಿ ಲಾಭ ಪಡೆದುಕೊಂಡಿತ್ತು.

ಶೇ. 20ರಷ್ಟು ಹೆಚ್ಚಳ:

ಶೇ. 20ರಷ್ಟು ಹೆಚ್ಚಳ:

ಕಳೆದ ಮೂರು ತಿಂಗಳ ಅವಧಿಯಲ್ಲಿ 510 ಕೋಟಿ ಲಾಭ ಮಾಡಿಕೊಂಡಿದ್ದ ಜಿಯೋ ಈ ಬಾರಿ ಶೇ. 20ರಷ್ಟು ಆದಾಯವನ್ನು ಹೆಚ್ಚಳ ಮಾಡಿಕೊಂಡಿದೆ. ಇದು ಮಾರುಕಟ್ಟೆಯಲ್ಲಿ ಜಿಯೋ ಬೇಡಿಕೆಯನ್ನು ಹೊಂದಿದೆ ಎನ್ನಲಾಗಿದೆ. ಇದರಿಂದಾಗಿ ಜಿಯೋ ಆದಾಯವೂ ಅಧಿಕವಾಗಿದೆ. ಬೇರೆ ಟೆಲಿಕಾಂ ಕಂಪನಿಗಳು ಈ ಪ್ರಮಾಣಷ್ಟು ಆದಾಯವನ್ನು ಪಡೆದುಕೊಂಡಿಲ್ಲ ಎನ್ನಲಾಗಿದೆ.

ಬಳಕೆದಾರರ ಸಂಖ್ಯೆಯೂ ಅಧಿಕ:

ಬಳಕೆದಾರರ ಸಂಖ್ಯೆಯೂ ಅಧಿಕ:

ಇದಲ್ಲದೇ ಜಿಯೋ ಬಳಕೆದಾರರ ಸಂಖ್ಯೆಯೂ ಅಧಿಕವಾಗುತ್ತಿದೆ. ಜಿಯೋ ಸೇವೆಯನ್ನು ಆರಂಭಿಸಿದ 22 ತಿಂಗಳ ನಂತರದಲ್ಲಿ 215 ಮಿಲಿಯನ್ ಬಳಕೆದಾರರನ್ನು ಹೊಂದಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಇಷ್ಟು ಸಣ್ಣ ಪ್ರಮಾಣದಲ್ಲಿ ಯಾವ ಕಂಪನಿಗಳು ಲಾಭವನ್ನು ಮಾಡಿಕೊಂಡಿಲ್ಲ.

Best Mobiles in India

English summary
Reliance Industries' Q1 net profit rises to Rs 9,459 crore, beats industry estimates. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X