ವಿಶ್ವದಲ್ಲಿಯೇ ಯಾರೂ ಮಾಡದ ದಾಖಲೆ ಮಾಡಿದ ಜಿಯೋ!

ವಿಶ್ವದಲ್ಲಿಯೇ ಯಾರೂ ಮಾಡದ ಸಾಧನೆಯನ್ನು ಜಿಯೋ ಇದೀಗ ಮಾಡುತ್ತಿದ್ದು ಪ್ರತಿ ಸೆಕೆಂಡ್‌ಗೆ ಜಿಯೋ ಬಳಸುತ್ತಿರುವವರು 7 ಜನರಾಗಿದ್ದು ಹೀಗೆಯೇ ಬಳಕೆದಾರರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ.

By Shwetha Ps
|

ಮುಕೇಶ್ ಅಂಬಾನಿ ಮಾಲೀಕತ್ವದ ರಿಲಾಯನ್ಸ್ ಜಿಯೋ ಪ್ರತೀ ದಿನ ಪ್ರತೀ ಸೆಕೆಂಡ್‌ಗೆ 7 ಗ್ರಾಹಕರನ್ನು ಸೇರಿಸಿಕೊಳ್ಳುತ್ತಿದ್ದು, ಈ ದಾಖಲೆಯು ಜಿಯೋ ಆರಂಭವಾದ ಕಳೆದ ವರ್ಷದ ಸಪ್ಟೆಂಬರ್ 5 ರಿಂದ ನಡೆಯುತ್ತಿದೆ.

ವಿಶ್ವದಲ್ಲಿಯೇ ಯಾರೂ ಮಾಡದ ದಾಖಲೆ ಮಾಡಿದ ಜಿಯೋ!

ಯಾವುದೇ ತಂತ್ರಜ್ಞಾನ ಸೇವೆಯಲ್ಲಿ ಇದೊಂದು ಸಾಧನೆಯ ಮೈಲಿಗಲ್ಲಾಗಿದ್ದು, ಫೇಸ್‌ಬುಕ್, ವಾಟ್ಸಾಪ್ ಮತ್ತು ಸ್ಕೈಪ್‌ಗಿಂತಲೂ ವಿಶ್ವದಲ್ಲಿಯೇ ನಾವು ಮುಂದಿದ್ದೇವೆ ಎಂಬುದು ಮುಕೇಶ್ ಅಂಬಾನಿ ಹರ್ಷದ ಮಾತಾಗಿದೆ.

ಜಿಯೋ ಲಾಂಚ್ ಆಗುವುದಕ್ಕಿಂತ ಮುನ್ನ ಪ್ರತಿಯೊಬ್ಬರೂ ಎಲ್‌ಟಿಇ ತಂತ್ರಜ್ಞಾನವು ಅನುಮೋದನೆಯನ್ನು ಪಡೆದುಕೊಂಡಿರದ ತಂತ್ರಜ್ಞಾನವೆಂದು ಟೀಕಿಸಿದ್ದರು, ಆದರೆ ನಾವು ಅದನ್ನು ಸುಳ್ಳೆಂದು ಸಾಧಿಸಿದ್ದೇವೆ. ಇಂದು ಜಿಯೋ 125 ಮಿಲಿಯನ್ ಗ್ರಾಹಕರನ್ನು ಹೊಂದಿದೆ ಎಂಬುದು ಅಂಬಾನಿ ಮನದಾಳದ ಮಾತಾಗಿದೆ.

Jio Free Phones !! ಜಿಯೋ ಫೋನ್ ಫುಲ್ ಪ್ರೀ: ಇಲ್ಲಿದೆ ಕಂಪ್ಲೀಟ್ ಮಾಹಿತಿ !!

ವಿಶ್ವದಲ್ಲಿಯೇ ಯಾರೂ ಮಾಡದ ದಾಖಲೆ ಮಾಡಿದ ಜಿಯೋ!

ಜಿಯೋ ಲಾಂಚ್‌ ಆದ ಆರು ತಿಂಗಳಲ್ಲಿ ಭಾರತದಲ್ಲಿ ಡೇಟಾ ಬಳಕೆಯು 20 ಕೋಟಿ ಜಿಬಿಯಿಂದ 120 ಕೋಟಿ ಜಿಬಿಯನ್ನು ತಲುಪಿದೆ ಅದೂ ಪ್ರತೀ ತಿಂಗಳ ಲೆಕ್ಕವಾಗಿದೆ. ಇದು ಇನ್ನಷ್ಟು ದ್ವಿಗುಣಗೊಳ್ಳುತ್ತಲೇ ಇದೆ.

ಇಂದು ಜಿಯೋ ಬಳಕೆದಾರರು ಮಾತ್ರವೇ ತಿಂಗಳಿಗೆ 125 ಕೋಟಿ ಜಿಬಿಯನ್ನು ಬಳಸಿಕೊಳ್ಳುತ್ತಿದ್ದು, ಇದರಲ್ಲಿ ಪ್ರತೀ ತಿಂಗಳು 165 ಗಂಟೆಗಳ ಕಾಲ ಹೆಚ್ಚು ವೇಗದ ವೀಡಿಯೊ ನೋಡುವವರೂ ಸೇರಿದ್ದಾರೆ. ಇದೆಲ್ಲಾ ಅಂಶಗಳು ಜಿಯೋವನ್ನು ಅತಿ ದೊಡ್ಡ ಮೊಬೈಲ್ ವೀಡಿಯೊ ನೆಟ್‌ವರ್ಕ್ ಎಂಬುದಾಗಿ ಖ್ಯಾತಿಗೊಳಿಸಿದ್ದು ಯುಎಸ್‌ಎ ಮತ್ತು ಚೀನಾದ ಮೊಬೈಲ್ ಡೇಟಾ ಬಳಕೆಯನ್ನು ಮೀರಿದೆ.

ಜಿಯೋ ಲಾಂಚ್ ಆಗುವುದಕ್ಕಿಂತ ಮುನ್ನ ಭಾರತವು ಮೊಬೈಲ್ ಬ್ರಾಡ್‌ಬ್ಯಾಂಡ್ ಕ್ಷೇತ್ರದಲ್ಲಿ 155 ನೆಯ ಸ್ಥಾನದಲ್ಲಿತ್ತು ಆದರೀಗ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಜಿಯೋ 14 ಮಿಲಿಯನ್ ಅನ್ನು ಇನ್ನಷ್ಟು ಸೇರಿಸಿಕೊಂಡಿದೆ. ಕಂಪೆನಿಯು ಫೀಚರ್ ಫೋನ್ ಆದ ಜಿಯೋ ಫೋನ್ ಅನ್ನು ಲಾಂಚ್ ಮಾಡಲಿದೆ.

ಈ ಹೊಸ ಫೋನ್ ದೇಶದಲ್ಲಿರುವ 50 ಕೋಟಿ ಫೀಚರ್ ಫೋನ್ ಬಳಕೆದಾರರನ್ನು ಗುರಿಯಾಗಿರಿಸಿದ್ದು ಇದು ಉಚಿತ ವಾಯ್ಸ್ ಕಾಲ್ ಮತ್ತು ಎಸ್‌ಎಂಎಸ್ ಅನ್ನು ಗ್ರಾಹಕರಿಗೆ ನೀಡಲಿದೆ. ಈ ಫೋನ್ ಬೆಲೆ ಸೊನ್ನೆಯಾಗಿದೆ. ಅಂತೆಯೇ ಬಳಕೆದಾರರು ಭದ್ರತಾ ಡೆಪೋಸಿಟ್ ಆಗಿ ರೂ 1,500 ಅನ್ನು ಮೂರು ವರ್ಷಗಳಿಗಾಗಿ ನೀಡಬೇಕಾಗುತ್ತದೆ.

Best Mobiles in India

Read more about:
English summary
The company has also launched its feature phone i.e JioPhone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X