Home
ಸುದ್ದಿಜಾಲ

ಜಿಯೋ, ಏರ್‌ಟೆಲ್‌ ಮತ್ತು ವೊಡಾಪೋನ್ ಐಡಿಯಾ ಪರಸ್ಪರ ಕಾಲೆಳೆದುಕೊಂಡಿದ್ದು ಹೀಗೆ!

ಇತರೆ ನೆಟ್‌ವರ್ಕ್‌ಗಳಿಗೆ ಮಾಡುವ ಕರೆಗಳಿಗೆ ತನ್ನ ಗ್ರಾಹಕರು ಹಣಪಾವತಿಸಬೇಕು ಎಂದು ಜಿಯೋ ಹೇಳಿದ ನಂತರ, ಜಿಯೋ, ಏರ್‌ಟೆಲ್‌ ಮತ್ತು ವೊಡಾಪೋನ್ ಐಡಿಯಾ ಟೆಲಿಕಾಂ ಸಂಸ್ಥೆಗಳು ಪರಸ್ಪರ ಟ್ರೋಲ್ ಮಾಡಿಕೊಳ್ಳುತ್ತಿವೆ. ಇದೇ ಅಕ್ಟೋಬರ್‌ 10 ಬಳಿಕ ಜಿಯೋ ರಿಚಾರ್ಚ್ ಯೋಜನೆ ಬದಲಾಗಿದ್ದು, ಜಿಯೋ ಗ್ರಾಹಕರು ಇನ್ಮುಂದೆ ಇತರೆ ನೆಟ್‌ ವರ್ಕ್‌ಗಳಿಗೆ ಮಾಡುವ ಕರೆಗಳಿಗೆ ಪಾವತಿ ಮಾಡಬೇಕಿದೆ. ಈ ವಿಷಯವನ್ನೇ ತೆಗೆದುಕೊಂಡು ಜಿಯೋವಿನ ಪ್ರತಿಸ್ಪರ್ಧಿ ಕಂಪೆನಿಗಳಾದ ಏರ್‌ಟೆಲ್‌ ಮತ್ತು ವೊಡಾಪೋನ್ ಐಡಿಯಾ ಕಿರುನಗೆ ಬೀರಿವೆ.

ನಂ.1 ಪಟ್ಟ

ಜಿಯೋವಿನಿಂದ ತನ್ನ ನಂ.1 ಪಟ್ಟವನ್ನು ಕಳೆದುಕೊಂಡಿರುವ ಏರ್‌ಟೆಲ್‌ ಜಿಯೋವಿನ ಈ ನೂತನ ಬದಲಾವಣೆಯನ್ನು ಪರೋಕ್ಷವಾಗಿ ಜಿಕಾಲೆಳೆದಿದೆ. 'ಕೆಲವರಿಗೆ ಅನಿಯಮಿತ ಎಂದರೆ ಬೇರೇನೋ ಅರ್ಥ ಇದ್ದಂತಿದೆ. ಆದರೆ ನಮಗೆ (ಏರ್‌ಟೆಲ್‌) 'ಅನ್‌ಲಿಮಿಟೆಡ್‌ ವಾಯ್ಸ ಕಾಲ್‌'ಎಂದರೆ ಗ್ರಾಹಕರು ಯಾವುದೇ ಸಂಖ್ಯೆಗೆ ಉಚಿತವಾಗಿ ಕರೆ ಮಾಡುವುದೇ ಆಗಿದೆ. ಏರ್‌ಟೆಲ್‌ಗೆ ಬದಲಾಯಿಸಿಕೊಳ್ಳಿ' ಎಂದು ಹೇಳಿದೆ. ಅಂದರೆ, ಜಿಯೋ ನಂಬಿಕೆಗೆ ಅರ್ಹವಲ್ಲ. ನೀವು ಏರ್‌ಟೆಲ್‌ ಅನ್ನು ನಂಬಬಹುದು ಎಂಬರ್ಥದಲ್ಲಿ ಹೇಳಿ ಜನರನ್ನು ತಮ್ಮತ್ತ ಸೆಳೆಯಲು ಮುಂದಾಗಿದೆ.

ಅನ್‌ ಲಿಮಿಡೆಟ್ ಕರೆ

ವೊಡಾಫೋನ್ ಕಂಪೆನಿ ಕೂಡ ಇದೇ ರೀತಿಯಲ್ಲಿ ಜಿಯೋವನ್ನು ಭರ್ಜರಿಯಾಗಿ ಟ್ರೋಲ್ ಮಾಡಿದೆ. 'ರಿಲ್ಯಾಕ್ಸ್, ನಮ್ಮ ಕಡೆಯಿಂದ ಅನ್‌ ಲಿಮಿಡೆಟ್ ಕರೆಗಳು ಯಾವುದೇ ಷರತ್ತಿಲ್ಲದೆ ಮುಂದುವರಿಯಲಿದೆ. ನಾವೂ ಈಗಾಗಲೇ ನೀಡಿದ ಭರವಸೆಯಂತೆ ಅದನ್ನು ಅನುಭವಿಸಿ' ಎಂದು ವೊಡಾಪೋನ್ ಮಾರ್ಮಿಕವಾಗಿ ಹೇಳಿದೆ. ಜಿಯೋದ ಈ ಹೊಸ ನಿಯಮ ಸದ್ಯ ಗ್ರಾಹಕರಿಗೆ ಕಿರಿಕಿರಿ ಉಂಟುಮಾಡುತ್ತಿದೆ. ನಾವು ನಮ್ಮ ಕಡೆಯಿಂದ ಅನ್‌ ಲಿಮಿಡೆಟ್ ಕರೆಗಳು ಯಾವುದೇ ಷರತ್ತನ್ನು ವಿಧಿಸುವುದಿಲ್ಲ ಎಂದು ಹೇಳುವ ಮೂಲಕ ಜಿಯೋವಿನ ನಂಬಿಕೆಯನ್ನು ಪ್ರಶ್ನಿಸಿದೆ.

ಜಿಯೋ ಉತ್ತರಿಸಿದೆ

ಇನ್ನು ಈ ಎರಡೂ ಕಂಪೆನಿಗಳ ಟ್ರೋಲ್‌ಗೆ ಜಿಯೋ ಉತ್ತರಿಸಿದೆ. ಜಿಯೋ ಸಂಖ್ಯೆ ಹೊರತುಪಡಿಸಿದ ಬೇರೆ ನೆಟ್‌ವರ್ಕ್‌ಗೆ ಕರೆ ಮಾಡಿದರೆ 6 ಪೈಸೆಯನ್ನು ಚಾರ್ಜ್‌ ಮಾಡಲಾಗುತ್ತದೆ. ತಾನು ಈಗಾಗಲೇ ಜಾರಿಗೊಳಿಸಿದ ಪರಿಷ್ಕೃತ ಯೋಜನೆಯನ್ನು ಜಿಯೋ ಸಮರ್ಥಿಸಿ ಟ್ವೀಟ್ ಮಾಡಿದೆ. ನಿಮಿಷಕ್ಕೆ 6 ಪೈಸೆಯನ್ನು 'ಏರ್‌ ಟೋಲ್' ಎಂದು ಅದು ಹೇಳಿದೆ. ಬೇರೆ ನೆಟ್‌ ವರ್ಕ್‌ಗಳಿಗೆ ಮಾಡುವ ಕರೆಗೆ ಟ್ರಾಯ್‌ ನಿಯಮದಂತೆ ಇಂಟರ್ ಕನೆಕ್ಟ್ ಯೂಸೇಜ್ ಚಾರ್ಜ್‌(ಐಯುಸಿ) ವಿಧಿಸಬಹುದಾಗಿದೆ ಎಂದು ಹೇಳಿ ಗ್ರಾಹಕರ ನಂಬಿಕೆ ಉಳಿಸಿಕೊಳ್ಳಲು ಮುಂದಾಗಿದೆ.

ತ್ಯಂತ ಕಡಿಮೆ ದರದಲ್ಲಿ

ದೂರಸಂಪರ್ಕ ಕ್ಷೇತ್ರಕ್ಕೆ ಜಿಯೋ ಬಂದಾಗಿನಿಂದ ಡೇಟಾ ಮತ್ತು ಕರೆಗಳ ಬೆಲೆಗಳು ಪಾತಾಳಕ್ಕೆ ಇಳಿದಿವೆ. ಜಿಯೋ ಪೈಪೋಟಿಯಿಂದಾಗಿ ಮೊಬೈಲ್‌ ಕಂಪೆನಿಗಳು ಡಾಟಾಗಳನ್ನು ಗ್ರಾಹಕರಿಗೆ ಅತ್ಯಂತ ಕಡಿಮೆ ದರದಲ್ಲಿ ನೀಡುತ್ತಾ ಬಂದಿವೆ. ಆದರೆ, ಅವುಗಳು ಯಾವುದೇ ಯೋಜನೆಯನ್ನು ಜಾರಿಗೆ ತಂದರೂ ಗ್ರಾಹಕರು ಮಾತ್ರ ಜಿಯೋ ಬಿಟ್ಟಿರಲಿಲ್ಲ. ಇದರಿಂದ ಉಳಿದ ಮೊಬೈಲ್‌ ನೆಟ್‌ ವರ್ಕ್‌ ಪೂರೈಕೆದಾರರು ನಷ್ಟದ ಹಾದಿ ಹಿಡಿದಿದ್ದರು. ಇಂತಹ ಸಮಯದಲ್ಲಿ ಜನರಿಗೆ ಜಿಯೋ ಉಲ್ಟಾ ಹೊಡೆದಿರುವುದು ಇತರೆ ಕಂಪೆನಿಗಳಿಗೆ ಭರ್ಜರಿ ಸಿಹಿಸುದ್ದಿಯಾದಂತೆ ಕಂಡಿದೆ.

Best Mobiles in India

English summary
Reliance Jio has drawn sharp reaction from its subscribers as well as rival operators after it announced charging users 6 paise per minute for voice calls. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+