Subscribe to Gizbot

ಜಿಯೋ ಜಿಂಗಾಲಾಲ!..ಹೊಸ ವರ್ಷಕ್ಕೆ ಮತ್ತೊಂದು ಸರ್‌ಪ್ರೈಸ್ ಆಫರ್!!

Written By:

ಮೊನ್ನೆಯಷ್ಟೆ 199ರೂ.ಮತ್ತು 299ರೂಪಾಯಿಗಳ ಭರ್ಜರಿ ಆಫರ್ ಘೋಷಿಸಿದ್ದ ಜಿಯೋ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಮತ್ತೆ ಹೊಸ ಹೊಸ ಆಫರ್‌ಗಳನ್ನು ಘೋಷಿಸುತ್ತಲೇ ಇದೆ.! ಹೊಸ ವರ್ಷ ಪ್ರಾರಂಭವಾಗಲು ಇನ್ನು ನಾಲ್ಕು ದಿನಗಳಿರುವಂತೆ ಜಿಯೋ ಮತ್ತೊಂದು ಬಿಗ್ ಸರ್‌ಪ್ರೈಸ್ ಕ್ಯಾಶ್‌ಬ್ಯಾಕ್ ಆಫರ್ ಅನ್ನು ನೀಡಿದೆ.!!

ಜಿಯೋವಿನ ಗ್ರಾಹಕರು ಹೊಸ ವರ್ಷದ ಕೊಡುಗೆಯಾಗಿ ಭರ್ಜರಿ 3,300 ರೂ. ಕ್ಯಾಶ್‌ಬ್ಯಾಕ್ ಪಡೆಯಬಹುದು ಎಂದು ಜಿಯೋ ಪ್ರಕಟಿಸಿದೆ. ಈ ಮೊದಲು ಜಿಯೋ ನೀಡಿದ್ದ ಟ್ರಿಪಲ್ ಕ್ಯಾಶ್‌ಬ್ಯಾಕ್ ಆಫರ್‌ಗೆ ಮತ್ತೆ ಹೆಚ್ಚು ಕೊಡುಗೆ ನೀಡಿ ಈ ಹೊಸ ಆಫರ್ ಅನ್ನು ನೀಡಲಾಗಿದೆ.!! ಹಾಗಾದರೆ, ಜಿಯೋವಿನ ಹೊಸ ಕ್ಯಾಶ್‌ಬ್ಯಾಕ್ ಆಫರ್ ಬಗ್ಗೆ ಪೂರ್ಣ ಮಾಹಿತಿಯನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
3,300 ರೂ. ಕ್ಯಾಶ್‌ಬ್ಯಾಕ್ ಆಫರ್!!

3,300 ರೂ. ಕ್ಯಾಶ್‌ಬ್ಯಾಕ್ ಆಫರ್!!

ಜಿಯೋ ತನ್ನ ಗ್ರಾಹಕರಿಗೆ ಈ ಹಿಂದೆ ನೀಡಿದ್ದ 2599 ರೂ. ಕ್ಯಾಶ್‌ಬ್ಯಾಕ್ ಆಫರ್‌ನಂತೆಯೇ ಹೊಸವರ್ಷದ ಆಫರ್ ಆಗಿ 3,300 ರೂ. ಕ್ಯಾಶ್‌ಬ್ಯಾಕ್ ಆಫರ್ ನೀಡಿದೆ.!! ಜಿಯೋವಿಗೆ 399 ರೂಪಾಯಿಗಳಿಗಿಂತ ಹೆಚ್ಚು ರೀಚಾರ್ಜ್ ಮಾಡಿಸುವವರಿಗಾಗಿ ಈ 3,300 ರೂ.ವರೆಗೂ ಕ್ಯಾಶ್‌ಬ್ಯಾಕ್ ಆಫರ್ ಅನ್ನು ಜನವರಿ 15 ನೇ ತಾರೀಖಿನವರೆಗೂ ಜಿಯೋ ಪ್ರಕಟಿಸಿದೆ.!!

400 ರೂ. ವೋಚರ್ ಕ್ಯಾಶ್‌ಬ್ಯಾಕ್!!

400 ರೂ. ವೋಚರ್ ಕ್ಯಾಶ್‌ಬ್ಯಾಕ್!!

3,300 ರೂ.ಕ್ಯಾಶ್‌ಬ್ಯಾಕ್‌ನಲ್ಲಿ 400 ರೂಪಾಯಿವರೆಗೂ ಜಿಯೋ ವೋಚರ್ ಕ್ಯಾಶ್‌ಬ್ಯಾಕ್‌ ನೀಡಿದೆ.! ಈ ವೋಚರ್ ಕ್ಯಾಶ್‌ಬ್ಯಾಕ್ ಕೊಡುಗೆಯು 8 ವೋಚರ್‌ಗಳ ರೂಪದಲ್ಲಿದ್ದು, ಜಿಯೋವಿಗೆ ಪ್ರತಿಸಾರಿ ರೀಚಾರ್ಜ್ ಮಾಡಿಸುವಾಗಲೂ 50 ರೂಪಾಯಿಗಳಂತೆ 400 ರೂಪಾಯಿ ಲಾಭ ಗ್ರಾಹಕರಿಗೆ ದೊರೆಯಲಿದೆ!!

ಹೊಸ ವರ್ಷಕ್ಕೆ ಮತ್ತೊಂದು Jio Surprise Cashback ಆಫರ್!!
ಪೂರ್ತಿ ಕ್ಯಾಶ್‌ಬ್ಯಾಕ್ ಪಡೆದುಕೊಳ್ಳುವುದು ಹೇಗೆ?

ಪೂರ್ತಿ ಕ್ಯಾಶ್‌ಬ್ಯಾಕ್ ಪಡೆದುಕೊಳ್ಳುವುದು ಹೇಗೆ?

ಬಹುತೇಕ ಆನ್‌ಲೈನ್ ಆಧಾರಿತ ಕಂಪೆನಿಗಳ ಜೊತೆ ಜಿಯೋ ಕೈಜೋಡಿಸಿ ಗ್ರಾಹಕರಿಗೆ ಈ ಕ್ಯಾಶ್‌ಬ್ಯಾಕ್ ನೀಡಿದೆ.! ಹಾಗಾಗಿ, ಜಿಯೋವಿಗೆ 399 ರೂ.ಗಿಂತ ಹೆಚ್ಚು ರಿಚಾರ್ಜ್ ಮಾಡಿಸಿದರೆ ಹಲವು ಆನ್‌ಲೈನ್ ಶಾಪಿಂಗ್ ಮತ್ತು ವಾಲೆಟ್ ಸೇವಾ ತಾಣಗಳ 2900 ರೂಪಾಯಿಗಳ ಕೂಪನ್ ಜಿಯೋ ಗ್ರಾಹಕರಿಗೆ ದೊರೆಯಲಿದೆ.!!

ಜಿಯೋವಿನ ಆಫರ್ ಪಾಲುದಾರರು?

ಜಿಯೋವಿನ ಆಫರ್ ಪಾಲುದಾರರು?

3,300 ರೂ. ಕ್ಯಾಶ್‌ಬ್ಯಾಕ್ ಆಫರ್ ‌ನಲ್ಲಿ ಯಾತ್ರಾ.ಕಾಮ್ ಮತ್ತು ರಿಲಯನ್ಸ್ ಟ್ರೆಂಡ್ , ಆಕ್ಸಿಸ್ ಪೇ, ಮೊಬಿಕ್ವಿಕ್, ಪೇಟಿಎಂ, ಪೋನ್‌ ಪೇ, ಅಮೆಜಾನ್ ಪೇ ಸೇರಿದಂತೆ 10 ಕ್ಕೂ ಹೆಚ್ಚು ಕಂಪೆನಿಗಳು ಪಾಲುದಾರರಾಗಿವೆ. ಜಿಯೋವಿಗೆ ರೀಚಾರ್ಜ್ ಮಾಡಿಸಿದರೆ ಸಿಗುವ ಕೂಪನ್‌ಗಳ ಮೂಲಕ ಇವುಗಳಲ್ಲಿ ಡಿಸ್ಕೌಂಟ್ಸ್ ಪಡೆಯಬಹುದಾಗಿದೆ.!!

ಜಿಯೋ ಆಪ್‌ನಲ್ಲಿ ತಿಳಿಯಬಹುದು!!

ಜಿಯೋ ಆಪ್‌ನಲ್ಲಿ ತಿಳಿಯಬಹುದು!!

ಜಿಯೋವಿನ ಪ್ರತಿಯೋರ್ವ ಗ್ರಾಹಕನಿಗೂ ಈ 3,300 ರೂ. ಕ್ಯಾಶ್‌ಬ್ಯಾಕ್ ಆಫರ್ ಲಭ್ಯವಿದ್ದು, 399 ರೂಪಾಯಿಗಳಿಗಿಂತ ಹೆಚ್ಚು ರೀಚಾರ್ಜ್ ಮಾಡಿಸಿದರೆ ಈ ಆಫರ್‌ಗೆ ಗ್ರಾಹಕರು ಅರ್ಹರಾಗಿರುತ್ತಾರೆ. ಜಿಯೋ ಆಪ್‌ನಲ್ಲಿ ಕೂಪನ್ ಮತ್ತು ವೋಚರ್‌ಗಳ ಮಾಹಿತಿಗಳು ಲಭ್ಯವಿರುತ್ತವೆ.!!

ಓದಿರಿ:ನೀವಿನ್ನು ‘ಟೈಪ್ ಸಿ' ಸ್ಮಾರ್ಟ್‌ ಚಾರ್ಜಿಂಗ್ ಪೋರ್ಟ್‌ ಖರೀದಿಸಿಲ್ವಾ?..ಹಾಗಿದ್ರೆ, ಈಗಲೇ ಖರೀದಿಸಿ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Jio Surprise Cashback Offer of Up to Rs 3,300 on the Recharge of Rs 399 and Above. to know more visit to kannada.gixbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot