Home
ಸುದ್ದಿಜಾಲ

ಜಿಯೋ ದೀಪಾವಳಿ ಬಂಪರ್‌..! ಶೇ.100ಕ್ಕೆ ನೂರು ಕ್ಯಾಶ್‌ಬ್ಯಾಕ್‌..!

ಮುಖೇಶ್‌ ಅಂಬಾನಿ ನೇತೃತ್ವದ ರಿಲಾಯನ್ಸ್‌ ಜಿಯೋ ಮುಂಬರುವ ದೀಪಾವಳಿಗಾಗಿ ವಿಶೇಷ ಆಫರ್‌ ಘೋಷಿಸಿದ್ದು, ಶೇ.100 ರಷ್ಟು ಕ್ಯಾಶ್‌ಬ್ಯಾಕ್‌ ಆಫರ್‌ ನೀಡಿದೆ. ಈ ಆಫರ್‌ ಗ್ರಾಹಕರನ್ನು ಆಕರ್ಷಿಸುತ್ತಿದ್ದು, ಈ ದೀಪಾವಳಿಯನ್ನು ತನ್ನೊಂದಿಗೆ ವಿಶೇಷವಾಗಿ ಆಚರಿಸುವ ಆಯ್ಕೆಯನ್ನು ರಿಲಾಯನ್ಸ್‌ ಜಿಯೋ ನೀಡಿದೆ.

ಜಿಯೋ ದೀಪಾವಳಿ ಬಂಪರ್‌..! ಶೇ.100ಕ್ಕೆ ನೂರು ಕ್ಯಾಶ್‌ಬ್ಯಾಕ್‌..!

ಭಾರತದಲ್ಲಿ ಹಬ್ಬದ ಸೀಸನ್‌ ಶುರುವಾಗಿ ಹೀಗಾಗಲೇ ದಸರಾ ಸಂಭ್ರಮ ಮುಗಿಯುವ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ದೀಪಾವಳಿ ಅಬ್ಬರ ಎಲ್ಲೆಡೆ ಕಾಣಲಿದೆ. ಹೀಗಾಗಲೇ ಇ-ಕಾಮರ್ಸ್‌ ಮತ್ತು ಸ್ಮಾರ್ಟ್‌ಫೋನ್‌ ಕಂಪನಿಗಳು ಒಂದು ಸುತ್ತಿನ ಹಬ್ಬದ ಉಡುಗೊರೆಗಳನ್ನು ಗ್ರಾಹಕರಿಗೆ ನೀಡಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿವೆ. ಈಗ ಟೆಲಿಕಾಂ ಆಪರೇಟರ್‌ಗಳ ಸರದಿಯಾಗಿದ್ದು, ಜಿಯೋ ಅದಕ್ಕೆ ಮುನ್ನುಡಿಯನ್ನು ಬರೆದಿದೆ.

ಎಲ್ಲಿಂದ ಎಲ್ಲಿಯವರೆಗೆ..?

ಎಲ್ಲಿಂದ ಎಲ್ಲಿಯವರೆಗೆ..?

ಜಿಯೋ ಘೋಷಿಸಿರುವ ದೀಪಾವಳಿ ಬಂಪರ್ ಶೇ.100ರಷ್ಟು ಕ್ಯಾಶ್‌ಬ್ಯಾಕ್‌ ಆಫರ್‌ ಗ್ರಾಹಕರಿಗೆ ಇಂದಿನಿಂದ ಅಂದರೆ, ಅಕ್ಟೋಬರ್‌ 18ರಿಂದ ನವೆಂಬರ್‌ 30ರವರೆಗೆ ಲಭ್ಯವಾಗಲಿದ್ದು, ಸುಮಾರು 45ದಿನಗಳ ಕಾಲ ಆಫರ್‌ ಗ್ರಾಹಕರಿಗೆ ಲಭ್ಯವಾಗಲಿದೆ. ಜಿಯೋ ಗ್ರಾಹಕರು ರಿಚಾರ್ಜ್‌ ಮಾಡಿಸಿ ಆಫರ್ ಪಡೆಯಬಹುದು.

ಯಾವ್ಯಾವ ಪ್ಲಾನ್‌ಗಳಿಗೆ ಅನ್ವಯ..?

ಯಾವ್ಯಾವ ಪ್ಲಾನ್‌ಗಳಿಗೆ ಅನ್ವಯ..?

ದೀಪಾವಳಿಯ ಶೇ.100ರಷ್ಟು ಕ್ಯಾಶ್‌ಬ್ಯಾಕ್‌ ಆಫರ್‌ ರೂ. 149, ರೂ. 198, ರೂ. 299, ರೂ. 349, ರೂ. 398, ರೂ. 399, ರೂ. 448, ರೂ. 449, ರೂ. 498, ರೂ. 509, ರೂ. 799, ರೂ. 999, ರೂ. 1,999, ರೂ. 4,999 , ರೂ. 9,999 ರಿಚಾರ್ಜ್‌ ಪ್ಲಾನ್‌ಗಳ ಮೇಲೆ ಲಭ್ಯವಿದ್ದು, ಗ್ರಾಹಕರು ಪಡೆಯಬಹುದಾಗಿದೆ.

ಹೇಗೆ ಕ್ಯಾಶ್‌ಬ್ಯಾಕ್‌..?

ಹೇಗೆ ಕ್ಯಾಶ್‌ಬ್ಯಾಕ್‌..?

ಜಿಯೋ ತನ್ನ ಗ್ರಾಹಕರಿಗೆ ನೀಡುವ ಕ್ಯಾಶ್‌ಬ್ಯಾಕ್‌ ಕೂಪನ್‌ ರೂಪದಲ್ಲಿದ್ದು, ರಿಚಾರ್ಜ್‌ ಪ್ಲಾನ್‌ಗಳನ್ವಯ ಕೂಪನ್‌ಗಳ ಸಂಖ್ಯೆಯು ಬದಲಾಗಲಿದೆ. ಈ ಕೂಪನ್‌ಗಳನ್ನು ಯಾವುದೇ ರಿಲಾಯನ್ಸ್‌ ಡಿಜಿಟಲ್‌ ಅಥವಾ ರಿಲಾಯನ್ಸ್‌ ಡಿಜಿಟಲ್‌ ಎಕ್ಸ್‌ಪ್ರೆಸ್‌ ಮಿನಿ ಸ್ಟೋರ್‌ಗಳಲ್ಲಿ ಬಳಸಬಹುದು. ಆದರೆ, ಕನಿಷ್ಠ ರೂ. 5,000 ಮೌಲ್ಯದ ವಸ್ತುಗಳನ್ನು ಖರೀದಿಗೆ ಮಾತ್ರ ಕೂಪನ್‌ಗಳನ್ನು ಬಳಸಬಹುದು ಎಂದು ಜಿಯೋ ತಿಳಿಸಿದೆ. ಈ ಕೂಪನ್‌ಗಳನ್ನು ಡಿಸೆಂಬರ್‌ 31, 2018ರೊಳಗೆ ಬಳಸಬೇಕಾಗಿದೆ.

ಹೊಸ ಪ್ಲಾನ್‌ ಪರಿಚಯ

ಹೊಸ ಪ್ಲಾನ್‌ ಪರಿಚಯ

ದೀಪಾವಳಿಯ ಶೇ.100ರ ಕ್ಯಾಶ್‌ಬ್ಯಾಕ್‌ನಲ್ಲಿ ಜಿಯೋ ಮತ್ತೊಂದು ಪ್ಲಾನ್‌ ಘೋಷಿಸಿದ್ದು ದೀರ್ಘಾವದಿಯ ಪ್ಲಾನ್‌ ಇದಾಗಿದೆ. ರೂ. 1,699 ಮೌಲ್ಯದ ಈ ಪ್ಲಾನ್‌ ಒಂದು ವರ್ಷದ ವ್ಯಾಲಿಡಿಟಿ ಹೊಂದಿದ್ದು, ಅನಿಯಮಿತ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳನ್ನು ಮತ್ತು ಪ್ರತಿದಿನ 100 ಉಚಿತ ಎಸ್‌ಎಂಎಸ್‌ಗಳನ್ನು ಪಡೆಯಲಿದ್ದಾರೆ.

ಏನೀದೆ ಹೊಸ ಪ್ಲಾನ್‌ನಲ್ಲಿ..?

ಏನೀದೆ ಹೊಸ ಪ್ಲಾನ್‌ನಲ್ಲಿ..?

ರೂ. 1,699 ಮೌಲ್ಯದ 365 ದಿನಗಳ ವ್ಯಾಲಿಡಿಟಿ ಹೊಂದಿರುವ ಹೊಸ ಪ್ಲಾನ್‌ನಲ್ಲಿ ಗ್ರಾಹಕರು ಒಟ್ಟು 547.5GB ಡೇಟಾವನ್ನು ಪಡೆಯಲಿದ್ದು, ಪ್ರತಿದಿನ 1.5GB ಡೇಟಾ ಪಡೆಯಲಿದ್ದಾರೆ. ಗ್ರಾಹಕರು ದಿನದ ಡೇಟಾವನ್ನು ಮುಗಿಸಿದರೆ ನಂತರ 64kbps ವೇಗದಲ್ಲಿ ಡೇಟಾ ಬಳಸುವ ಆಯ್ಕೆಯನ್ನು ನೀಡಿದೆ. ಅದಲ್ಲದೇ ಎಲ್ಲಾ ಜಿಯೋ ಸ್ಯುಟ್‌ ಆಪ್‌ಗಳಿಗೆ ಪ್ರವೇಶವನ್ನು ಪಡೆಯಲಿದ್ದಾರೆ. ಇಲ್ಲಿ ಗ್ರಾಹಕರು ಕ್ಯಾಶ್‌ಬ್ಯಾಕ್‌ನ್ನು ರೂ. 500 ಮೌಲ್ಯದ 3 ವೋಚರ್ ಮತ್ತು ರೂ. 200 ಮೌಲ್ಯದ ಒಂದು ವೋಚರ್‌ ಪಡೆಯಲಿದ್ದಾರೆ.

ಆಫರ್‌ನಿಂದ ಈ ಉತ್ಪನ್ನಗಳು ಹೊರಕ್ಕೆ..!

ಆಫರ್‌ನಿಂದ ಈ ಉತ್ಪನ್ನಗಳು ಹೊರಕ್ಕೆ..!

ರಿಲಾಯನ್ಸ್‌ ಜಿಯೋ ಸ್ಪಷ್ಟವಾಗಿ ಹೇಳಿದ್ದು, ಈ ಕೆಳಗಿನ ಉತ್ಪನ್ನಗಳು ಆಫರ್‌ನಡಿಯಲ್ಲಿ ಖರೀದಿಸಲಾಗುವುದಿಲ್ಲ ಎಂದಿದೆ. ಶಿಯೋಮಿ, ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ಗಳು, ಸ್ಯಾಮ್‌ಸಂಗ್‌ ಟ್ಯಾಬ್ಲೆಟ್ಸ್‌, ಸೀಗೆಟ್‌, WD, ಸೋನಿ, ಲೆನೊವೋ ಕಂಪನಿಗಳ ಬಾಹ್ಯ ಹಾರ್ಡ್‌ಡ್ರೈವ್‌ಗಳು ಆಫರ್‌ನಿಂದ ಹೊರ ಇವೆ.

Best Mobiles in India

English summary
Reliance Jio announces Diwali offer: To give 100% cashback to users. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+