Home
ಸುದ್ದಿಜಾಲ

ಟ್ರಾಯ್ ನಿಂದ ಜಿಯೋ ಬಳಕೆದಾರರಿಗೆ ಸಂತಸದ ಸುದ್ದಿ, ಇತರರಿಗೆ ಬೇಸರದ ಸುದ್ದಿ...!

By Srinidhi

ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋ ದೊಡ್ಡ ಪ್ರಮಾಣದಲ್ಲಿ ಬೆಳವಣಿಗೆಯನ್ನು ಸಾಧಿಸುತ್ತಿದೆ. ವೇಗದ ಇಂಟರ್ನೆಟ್ ಸೇವೆಯನ್ನು ನೀಡುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಟ್ರಾಯ್ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಮೇ ತಿಂಗಳಿನಲ್ಲಿ ಜಿಯೋ ಮಾರುಕಟ್ಟೆಯಲ್ಲಿಯೇ ಅತೀ ಹೆಚ್ಚಿನ ವೇಗದ ಡೇಟಾವನ್ನು ಬಳಕೆಗೆ ನೀಡುತ್ತಿದೆ ಎನ್ನಲಾಗಿದೆ. ಅತೀ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ಏರ್‌ಟೆಲ್ ಜಿಯೋ ಅರ್ಧದಷ್ಟು ವೇಗದಲ್ಲಿಯೂ ಸೇವೆಯನ್ನು ನೀಡುತ್ತಿಲ್ಲ ಎನ್ನುವ ಸಂಗತಿ ಬಹಿರಂಗಗೊಂಡಿದೆ.

ಟ್ರಾಯ್ ನಿಂದ ಜಿಯೋ ಬಳಕೆದಾರರಿಗೆ ಸಂತಸದ ಸುದ್ದಿ, ಇತರರಿಗೆ ಬೇಸರದ ಸುದ್ದಿ...!

ಜಿಯೋದೊಂದಿಗೆ ಸ್ಪರ್ಧೆಗೆ ಇಳಿದಿರುವ ಎಲ್ಲಾ ಟೆಲಿಕಾಂ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಡೇಟಾ ಪ್ಲಾನ್ ಗಳನ್ನು ಘೋಷಣೆ ಮಾಡಿದರು ಸಹ ಉತ್ತಮ ವೇಗದಲ್ಲಿ ಸೇವೆಯನ್ನು ನೀಡಲು ಶಕ್ತವಾಗಿಲ್ಲ. ಈ ಹಿನ್ನಲೆಯಲ್ಲಿ ಯಾವ ಟೆಲಿಕಾಂ ಕಂಪನಿಗಳು ಎಷ್ಟು ವೇಗದಲ್ಲಿ ಸೇವೆಯನ್ನು ನೀಡುತ್ತಿವೆ ಎನ್ನುವುದನ್ನ ತಿಳಿಸುವ ಪ್ರಯತ್ನವನ್ನು ಮಾಡಲಾಗಿದೆ.

ಟ್ರಾಯ್ ಮೈ ಸ್ಪೀಡ್ ಡೇಟಾ:

ಟ್ರಾಯ್ ಮೈ ಸ್ಪೀಡ್ ಡೇಟಾ:

ಟೆಲಿಕಾಂ ಮಾರುಕಟ್ಟೆ ನಿಯಂತ್ರಣ ಪ್ರಾಧಿಕಾರ ಟ್ರಾಯ್, ಟೆಲಿಕಾಂ ಕಂಪನಿಗಳ ಡೇಟಾ ವೇಗವನ್ನು ಅಳೆಯುವ ಸಲುವಾಗಿ ಮೈ ಸ್ಟೀಡ್ ಡೇಟಾವನ್ನು ಬಳಕೆ ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ. ಇದರಲ್ಲಿ ಜಿಯೋ ಹೆಚ್ಚಿನ ವೇಗದ ಸೇವೆಯನ್ನು ನೀಡುತ್ತಿದೆ.

ಜಿಯೋನೇ ನಂಬರ್ ಓನ್:

ಜಿಯೋನೇ ನಂಬರ್ ಓನ್:

ಮಾರುಕಟ್ಟೆಯಲ್ಲಿ ಆರಂಭದಿಂದಲೂ ತನ್ನ ಪಾರಮ್ಯವನ್ನು ಸಾಧಿಸಿರುವ ಜಿಯೋ, ಟ್ರಾಯ್ ಬಿಡುಗಡೆ ಮಾಡಿರುವ ಮೇ ತಿಂಗಳ ವರದಿಯಲ್ಲಿ ಜಿಯೋ ಒಟ್ಟು 22.3 Mbps ವೇಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬಳಕೆದಾರರಿಗ ಅತ್ಯಂತ ವೇಗದ ಸೇವೆಯನ್ನು ನೀಡುತ್ತಿದೆ. ಇದಾದ ನಂತರದಲ್ಲ ಕಾಣಿಸಿಕೊಂಡಿರುವ ಟೆಲಿಕಾಂ ಕಂಪನಿಗಳು ಇದರ ಅರ್ಧದಷ್ಟು ವೇಗದಲ್ಲಿ ಸೇವೆಯನ್ನು ನೀಡಲು ಶಕ್ತವಾಗಿಲ್ಲ.

ಏರ್‌ಟೆಲ್ ಎರಡನೇ ಸ್ಥಾನ:

ಏರ್‌ಟೆಲ್ ಎರಡನೇ ಸ್ಥಾನ:

ಜಿಯೋ ನಂತರದಲ್ಲಿ ಕಾಣಿಸಿಕೊಂಡಿರುವುದು ಏರ್‌ಟೆಲ್, ಮಾರುಕಟ್ಟೆಯಲ್ಲಿ ಜಿಯೋಗೆ ಸ್ಪರ್ಧೆಯನ್ನು ನೀಡುತ್ತಿರುವ ಮಾದರಿಯಲ್ಲಿಯೂ ಇಲ್ಲಿಯೂ ಕೊಂಚ ಮಟ್ಟದ ಪ್ರತಿರೋಧವನ್ನು ತೋರಿಸಿದೆ. ಏರ್‌ಟೆಲ್ 9.7Mbps ವೇಗದಲ್ಲಿ ಸೇವೆಯನ್ನು ನೀಡುತ್ತಿದೆ. ಮಾರುಕಟ್ಟೆಯಲ್ಲಿ ಬೇರೆ ಕಂಪನಿಗಳಿಗೆ ಹೋಲಿಕೆ ಮಾಡಿದರೆ ಇದೇ ಬೆಸ್ಟ್ ಎನ್ನಬಹುದಾಗಿದೆ.

ಮೂರನೇ ಸ್ಥಾನ:

ಮೂರನೇ ಸ್ಥಾನ:

ಮೂರನೇ ಸ್ಥಾನಕ್ಕೆ ವೊಡಾಫೋನ್ ತೃಪ್ತಿಪಟ್ಟುಕೊಂಡಿದ್ದು, 6.7Mbps ವೇಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದೇ ಮಾದರಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಐಡಿಯಾ 6.1 Mbpsವೇಗದಲ್ಲಿ ಸೇವೆಯನ್ನು ನೀಡುತ್ತಿದೆ. ಈ ಮೂರು ಕಂಪನಿಗಳು ಸೇರಿದರೂ ಸಹ ಜಿಯೋ ವೇಗವನ್ನು ಸರಿಗಟ್ಟಲು ಸಾಧ್ಯವಾಗುತ್ತಿಲ್ಲ.

ಜಿಯೋ ನಂಬಿಕೆ:

ಜಿಯೋ ನಂಬಿಕೆ:

ಇತರೆ ಟೆಲಿಕಾಂ ಕಂಪನಿಗಳಿಗೆ ಹೋಲಿಕೆ ಮಾಡಿಕೊಂಡರೆ ಜಿಯೋ ಬಳಕೆದಾರರಲ್ಲಿ ನಂಬಿಕೆಯನ್ನು ಉಳಿಸಿಕೊಂಡಿದೆ. ಏರ್‌ಟೆಲ್ - ವೊಡಾಫೋನ್ ಇನ್ನು ಸಾಮಾನ್ಯರಿಗೆ ಹಲವು ರೀತಿಯಲ್ಲಿ ವಂಚಿಸುವ ಪ್ಲಾನ್ ಅನ್ನೇ ನೀಡುತ್ತಿವೆ, ಇದಕ್ಕಾಗಿ ಹಲವು ಮಂದಿ ಜಿಯೋ ಕಡೆಗೆ ಮುಖ ಮಾಡಿರುವುದನ್ನು ನಾವು ಕಾಣಬಹುದಾಗಿದೆ.

Best Mobiles in India

English summary
Reliance Jio beats incumbent telcos: TRAI MySpeed Data. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+