ಜಿಯೋ 'ಡಬಲ್ ಧಮಾಕಾ' ಆಫರ್‌ನಿಂದ ವಿಶ್ವ ದಾಖಲೆ ಸೃಷ್ಟಿ!..ಈಗಿನ 1 ಜಿಬಿ ಡೇಟಾ ಬೆಲೆಗೆ ಶಾಕ್ ಆಗ್ತೀರಾ!!
ಡಬಲ್ ಧಮಾಕಾ ಆಫರ್ ಅನ್ನು ಪರಿಚಯಿಸಿರುವ ರಿಲಾಯನ್ಸ್ ಜಿಯೋ ಕಂಪೆನಿ ಇಡೀ ವಿಶ್ವದಲ್ಲಿಯೇ ಅತ್ಯಂತ ಕಡಿಮೆ ಬೆಲೆಗೆ ಹೆಚ್ಚು ಡೇಟಾ ಒದಗಿಸುತ್ತಿರುವ ಏಕೈಕ ಕಂಪೆನಿ ಎಂಬ ದಾಖಲೆ ಸೃಷ್ಟಿಸಿದೆ. ಇಲ್ಲಿಯವರೆಗೆ ಟೆಲಿಕಾಂ ಉದ್ಯಮದಲ್ಲಿಯೇ ಅತ್ಯಂತ ಕಡಿಮೆ ಬೆಲೆ ಅಂದರೆ, ಕೇವಲ 1.77 ರೂಪಾಯಿಗಳಿಗೆ ಒಂದು ಜಿಬಿ ಡೇಟಾವನ್ನು ಜಿಯೋ ಒದಗಿಸುತ್ತಿದೆ.
ಜೂನ್ 12 ರಂದು ಪ್ರಾರಂಭವಾಗಿರುವ ರಿಲಾಯನ್ಸ್ ಜಿಯೋವಿನ ಹೊಸ ಆಫರ್ ಡಬಲ್ ಧಮಾಕಾ ಸೀಮಿತ ಅವಧಿಗೆ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಆದರೂ ಕೂಡ, ಜಿಯೋ ಬಿಡುಗಡೆ ಮಾಡಿರುವ ಈ ಆಫರ್ ವಿಶ್ವದಲ್ಲಿಯೇ ಅತ್ಯಂತ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಡೇಟಾ ಒದಗಿಸುವ ಆಫರ್ ಆಗಿದೆ ಎಂದು ಟೆಲಿಕಾಂ ತಜ್ಞರು ಸಿದ್ದಪಡಿಸಿರುವ ವರದಿಯೊಂದರಲ್ಲಿ ಹೇಳಲಾಗಿದೆ.

1.77 ರೂಪಾಯಿಗಳಿಗೆ ಒಂದು ಜಿಬಿ ಡೇಟಾ ಲಭ್ಯವಾಗುವುದರ ಜೊತೆಗೆ ಜಿಯೋ ಪ್ರಕಟಿಸಿರುವ ಇತರ ಆಫರ್‌ಗಳಿಂದ ಈ ಡೇಟಾ ಬೆಲೆ ಇನ್ನಷ್ಟು ಕಡಿಮೆಯಾಗುವುದನ್ನು ಈ ವರದಿಯಲ್ಲಿ ಸೇರಿಸಿಲ್ಲ. ಹಾಗಾದರೆ, ಜಿಯೋವಿನ ಡಬಲ್ ಧಮಾಕಾ ಆಫರ್ ಹೇಗಿದೆ? ಇತರ ಆಫರ್‌ಗಳಿಂದ ಜಿಯೋವಿನ ನಿಖರ ಡೇಟಾ ಬೆಲೆ ಎಷ್ಟಾಗಲಿದೆ ಎಂಬುದನ್ನು ಮುಂದೆ ತಿಳಿಯಿರಿ.

ಟೆಲಿಕಾಂ ಮಾರುಕಟ್ಟೆ ಅಲ್ಲೋಲ-ಕಲ್ಲೋಲ
ರಿಲಾಯನ್ಸ್ ಜಿಯೋ ಘೋಷಿಸಿರುವ ಡಬಲ್ ಧಮಾಕಾ ಆಫರ್ ಭಾರತೀಯ ಟೆಲಿಕಾಂ ಮಾರುಕಟ್ಟೆಯನ್ನು ಅಲುಗಾಡಿಸಿದೆ. ತನ್ನ ಆಯ್ದ ರಿಚಾರ್ಜ್ ಪ್ಯಾಕ್ ಗಳ ಮೇಲೆ ದಿನಕ್ಕೆ 1.5 GB ಡೇಟಾವನ್ನು ಹೆಚ್ಚುವರಿಯಾಗಿ ನೀಡುತ್ತೇವೆ ಎಂದಿರುವುದು ಇತರೆ ಟೆಲಿಕಾಂ ಆಪರೇಟರ್ ಗಳಿಗೆ ನುಂಗಲಾರದ ತುತ್ತಾಗಿದೆ.

ಧಮಾಕಾದಿಂದ ದಿನಕ್ಕೆ 3GB ಡೇಟಾ
ಜಿಯೋ ಘೋಷಿಸಿರುವ ಹೊಸ ಪ್ಲಾನ್‌ಗಳಲ್ಲಿ ದಿನಕ್ಕೆ ಹೆಚ್ಚುವರಿಯಾಗಿ 1.5GB ಡೇಟಾವನ್ನು ಗ್ರಾಹಕರು ಉಚಿತವಾಗಿ ಪಡೆಯಲಿದ್ದಾರೆ. ಜಿಯೋ ಘೋಷಿಸಿರುವ ಡಬಲ್ ಧಮಾಕಾ ಆಫರ್ ಎಲ್ಲ ಟೆಲಿಕಾಂ ವಲಯಗಳಿಗೂ ಲಭ್ಯವಿದ್ದು, ಎಲ್ಲಾ ಗ್ರಾಹಕರು ಬಳಸಬಹುದಾಗಿದೆ. ಆದರೆ, ಈ ಡಬಲ್ ಆಫರ್ ಮೇಲೆ ತಿಳಿಸಿದ ಆಯ್ದ ರೀಚಾರ್ಜ್ ಪ್ಯಾಕ್ ಗಳಿಗೆ ಮಾತ್ರ ಅನ್ವಯಿಸುತ್ತದೆ.

ಸೀಮಿತ ಅವಧಿಗೆ ಮಾತ್ರ!
ಜಿಯೋ ಘೋಷಿಸಿರುವ ಡಬಲ್ ಧಮಾಕಾ ಆಫರ್ ಜಿಯೋವಿನ ಕೆಲ ಆಯ್ದ ರೀಚಾರ್ಜ್ ಪ್ಯಾಕ್ ಗಳಿಗೆ ಮಾತ್ರ ಅನ್ವಯಿಸುತ್ತದೆ. ಈ ಆಫರ್‌ಗಳಿಗೆ ಜೂನ್ 12 ರಿಂದ ಜೂನ್ 30ರವರೆಗೆ ಮಾತ್ರ ರೀಚಾರ್ಜ್ ಮಾಡಿಸಿಬಹುದಾಗಿದ್ದು, ಈ ದಿನಾಂಕದ ಒಳಗೆ ಈ ಕೆಳಗಿನ ಜಿಯೋ ಡೇಟಾ ಪ್ಲಾನ್‌ಗಳಿಗೆ ರೀಚಾರ್ಜ್ ಮಾಡಿಸಿದವರಿಗೆ ಡಬಲ್ ಧಮಾಕಾ ಸಿಗಲಿದೆ.

ಜಿಯೋ 149 ರೂ. ಆಫರ್
ಜಿಯೋ ಡಬಲ್ ಧಮಾಕಾ ಆಫರ್ ನೊಂದಿಗೆ ಹೊಸ ಜಿಯೋ 149 ರೂ. ರೀಚಾರ್ಜ್ ಪ್ಲಾನ್ ಈಗ ಡಬಲ್ ಡೇಟಾವನ್ನು ಹೊಂದಿದೆ. ಅಂದರೆ, 28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಆಫರ್ ದಿನಕ್ಕೆ 3.5GB ಡೇಟಾದಂತೆ ಒಟ್ಟು 84GB ಡೇಟಾವನ್ನು ಗ್ರಾಹಕರಿಗೆ ನೀಡಲಿದೆ.

ಇತರೆ ಏನೆಲ್ಲಾ ಫೀಚರ್ಸ್? 499 ರೂ. ಹೊಸ ಆಫರ್
ಜಿಯೋ ಡಬಲ್ ಧಮಾಕಾ ಆಫರ್ ನೊಂದಿಗೆ ಹೊಸ 499 ರೂ. ರಿಚಾರ್ಜ್ ಪ್ಲಾನ್ ಘೋಷಣೆಯಾಗಿದೆ. 91 ದಿನಗಳ ವ್ಯಾಲಿಡಿಟಿ ಹೊಂದಿರಲಿರುವ ಈ ಆಫರ್ ದಿನಕ್ಕೆ 3.5GB ಡೇಟಾದಂತೆ 318GB ಡೇಟಾವನ್ನು ಗ್ರಾಹಕರಿಗೆ ನೀಡಲಿದೆ. ಕಳೆದ ವರ್ಷದ ಕೊನೆಯಲ್ಲಿ ಈ 499 ರೂ. ಪ್ಲಾನ್ ಅನ್ನು ಜಿಯೋ 449 ರೂಪಾಯಿಗಳಿಗೆ ಇಳಿಸಿತ್ತು .

ಜಿಯೋ 349 ರೂ. ಆಫರ್
ಜಿಯೋ ಡಬಲ್ ಧಮಾಕಾ ಆಫರ್ ನೊಂದಿಗೆ ಹೊಸ 349 ರೂ. ರೀಚಾರ್ಜ್ ಪ್ಲಾನ್ ಈಗ ಡಬಲ್ ಡೇಟಾವನ್ನು ಹೊಂದಿದೆ. ಅಂದರೆ, 70 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಆಫರ್ ದಿನಕ್ಕೆ 3.5GB ಡೇಟಾದಂತೆ ಒಟ್ಟು 245GB ಡೇಟಾವನ್ನು ಗ್ರಾಹಕರಿಗೆ ನೀಡಲಿದೆ.

ಜಿಯೋ 399ರೂ. ಆಫರ್
ಜಿಯೋ ಡಬಲ್ ಧಮಾಕಾ ಆಫರ್ ನೊಂದಿಗೆ ಹೊಸ 399 ರೂ. ರೀಚಾರ್ಜ್ ಪ್ಲಾನ್ ಈಗ ಡಬಲ್ ಡೇಟಾವನ್ನು ಹೊಂದಿದೆ. ಅಂದರೆ, 84 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಆಫರ್ ದಿನಕ್ಕೆ 3.5GB ಡೇಟಾದಂತೆ ಒಟ್ಟು 294GB ಡೇಟಾವನ್ನು ಗ್ರಾಹಕರಿಗೆ ನೀಡಲಿದೆ.

ಜಿಯೋ 299 ರೂ. ಆಫರ್
ಜಿಯೋ ಡಬಲ್ ಧಮಾಕಾ ಆಫರ್ ನೊಂದಿಗೆ ಹೊಸ 299 ರೂ. ರೀಚಾರ್ಜ್ ಪ್ಲಾನ್ ಈಗ ಡಬಲ್ ಡೇಟಾವನ್ನು ಹೊಂದಿದೆ. ಅಂದರೆ, 28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಆಫರ್ ದಿನಕ್ಕೆ 4.5GB ಡೇಟಾದಂತೆ ಒಟ್ಟು 126GB ಡೇಟಾವನ್ನು ಗ್ರಾಹಕರಿಗೆ ನೀಡಲಿದೆ.

ಜಿಯೋ 509 ರೂ. ಆಫರ್
ಜಿಯೋ ಡಬಲ್ ಧಮಾಕಾ ಆಫರ್ ನೊಂದಿಗೆ ಹೊಸ 509ರೂ. ರೀಚಾರ್ಜ್ ಪ್ಲಾನ್ ಈಗ ಡಬಲ್ ಡೇಟಾವನ್ನು ಹೊಂದಿದೆ. ಅಂದರೆ, 28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಆಫರ್ ದಿನಕ್ಕೆ 5.5GB ಡೇಟಾದಂತೆ ಒಟ್ಟು 154GB ಡೇಟಾವನ್ನು ಗ್ರಾಹಕರಿಗೆ ನೀಡಲಿದೆ.

ಜಿಯೋ 799 ರೂ. ಆಫರ್
ಜಿಯೋ ಡಬಲ್ ಧಮಾಕಾ ಆಫರ್ ನೊಂದಿಗೆ ಹೊಸ 799ರೂ. ರೀಚಾರ್ಜ್ ಪ್ಲಾನ್ ಈಗ ಡಬಲ್ ಡೇಟಾವನ್ನು ಹೊಂದಿದೆ. ಅಂದರೆ, 28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಆಫರ್ ದಿನಕ್ಕೆ 6.5GB ಡೇಟಾದಂತೆ ಒಟ್ಟು 182GB ಡೇಟಾವನ್ನು ಗ್ರಾಹಕರಿಗೆ ನೀಡಲಿದೆ.

300 ರೂ.ಗೆ 100 ರೂ. ಡಿಸ್ಕೌಂಟ್.!
ಜಿಯೋ ಡಬಲ್ ಧಮಾಕಾ ಆಫರ್ ನಲ್ಲಿ ಅನಿಯಮಿತ ಕರೆ, ದಿನಕ್ಕೆ 100 ಉಚಿತ SMS ಮತ್ತು ಡೇಟಾ ಇರಲಿದ್ದು, ಡೇಟಾ ಬ್ಯಾಲೆನ್ಸ್ ಮುಗಿದ ನಂತರ 64KBps ವೇಗದಲ್ಲಿ ಡೇಟಾ ಸಿಗಲಿದೆ.100 ರೂ. ರಿಯಾಯಿತಿ ಜಿಯೋ ಘೋಷಿಸಿರುವ ಡಬಲ್ ಧಮಾಕಾ ಆಫರ್ ನಲ್ಲಿ 300 ರೂ. ಮತ್ತು ಅದಕ್ಕಿಂತ ಹೆಚ್ಚು ರಿಚಾರ್ಜ್ ಮಾಡಿಕೊಂಡರೆ 100 ರೂ. ಡಿಸ್ಕೌಂಟ್ ಸಿಗಲಿದೆ.

120 ರೂಪಾಯಿಗೆ 80GB ಡೇಟಾ!
ಜಿಯೋ 149 ರೂ. ಆಫರ್ ಅನ್ನು ಮೈ ಜಿಯೋ ಆಪ್ ಮೂಲಕ ರೀಚಾರ್ಜ್ ಮಾಡಿಸಿದರೆ, 28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಆಫರ್ ದಿನಕ್ಕೆ 3.5GB ಡೇಟಾದಂತೆ ಒಟ್ಟು 84GB ಡೇಟಾವನ್ನು ಗ್ರಾಹಕರಿಗೆ ನೀಡಲಿದೆ. ಈ ಆಫರ್‌ನಿಂದಾಗಿ ಜಿಯೋವಿನ ಒಂದು ಜಿಬಿ ಡೇಟಾ ಬೆಲೆ ಕೇವಲ 1.5 ರೂಪಾಯಿಗಳಾಗಿವೆ.


Click it and Unblock the Notifications








