ಜಿಯೋ ಏಟಿಗೆ ಏರ್‌ಟೆಲ್ ಸುಸ್ತು!..ದಾಖಲೆ ಸೃಷ್ಟಿಸಿದ ದೇಶದ ಮೊಬೈಲ್ ಮಾರುಕಟ್ಟೆ!!

|

ವಿಶ್ವದಲ್ಲೇ ಅತಿವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಮೊಬೈಲ್ ಮಾರುಕಟ್ಟೆಯಾಗಿರುವ ಭಾರತದ ಮೊಬೈಲ್ ಮಾರುಕಟ್ಟೆ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಿದೆ. ದೇಶದ ಟೆಲಿಕಾಂ ನಾಗಾಲೋಟದಲ್ಲಿ ಬೆಳವಣಿಗೆ ಕಾಣುತ್ತಿದ್ದು, ದೇಶದಲ್ಲಿ ಮೊಬೈಲ್‌ ಚಂದಾದಾರರ ಸಂಖ್ಯೆ ಕಳೆದ ಫೆಬ್ರವರಿಯ ವೇಳೆಗೆ 118.36 ಕೋಟಿಗೆ ಏರಿಕೆಯಾಗಿದೆ ಎಂದು ವರದಿಯೊಂದು ತಿಳಿಸಿದೆ.

ಹೌದು, ದೇಶದಲ್ಲಿ ದಾಖಲೆ ಪ್ರಮಾಣದ ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದ್ದು, ಭಾರತದಲ್ಲಿ ಒಟ್ಟು ಟೆಲಿಕಾಂ ಚಂದಾದಾರರ ಸಂಖ್ಯೆಯು ಫೆಬ್ರವರಿ ಅಂತ್ಯದ ವೇಳೆಗೆ 120.54 ಕೋಟಿಗೆ ವೃದ್ಧಿಸಿದೆ ಎಂದು ಟ್ರಾಯ್‌ ವರದಿ ತಿಳಿಸಿದೆ. ಟೆಲಿಕಾಂನಲ್ಲಿ ಆಗುತ್ತಿರುವ ಭಾರೀ ಬದಲಾವಣೆಗಳಿಂದಾಗಿ ದೇಶದಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗಲು ಕಾರಣ ಎಂದು ಹೇಳಲಾಗಿದೆ.

ಜಿಯೋ ಏಟಿಗೆ ಏರ್‌ಟೆಲ್ ಸುಸ್ತು!..ದಾಖಲೆ ಸೃಷ್ಟಿಸಿದ ದೇಶದ ಮೊಬೈಲ್ ಮಾರುಕಟ್ಟೆ!!

ಜಿಯೋ ಒಂದೇ ಒಟ್ಟು 30 ಕೋಟಿ ಗ್ರಾಹಕರನ್ನು ಹೊಂದಿದ್ದರೆ, ಬಿಎಸ್ಸೆನ್ನೆಲ್ 9 ಲಕ್ಷ ಹೊಸ ಮೊಬೈಲ್‌ ಗ್ರಾಹಕರನ್ನು ಸೇರಿಸಿದೆ. ಏರ್‌ಟೆಲ್ ಅಲ್ಪ ಪ್ರಮಾಣದಲ್ಲಿ ಗ್ರಾಹಕರನ್ನು ಸೆಳೆದಿದ್ದರೆ, ವೊಡಾಫೋನ್ ಫೆಬ್ರವರಿಯಲ್ಲಿ 57 ಲಕ್ಷ ಮೊಬೈಲ್‌ ಗ್ರಾಹಕರನ್ನು ಕಳೆದುಕೊಂಡಿದೆ. ಹಾಗಾದರೆ, ಪ್ರಸ್ತುತ ಭಾರತದ ಟೆಲಿಕಾಂ ಹೇಗಿದೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ದೇಶದ ಒಟ್ಟು ಫೋನ್ ಚಂದಾದಾರರು?

ದೇಶದ ಒಟ್ಟು ಫೋನ್ ಚಂದಾದಾರರು?

2018 ನವೆಂಬರ್ ತಿಂಗಳ ಅಂತ್ಯದ ವೇಳೆಗೆ ಭಾರತದಲ್ಲಿ ಒಟ್ಟು 118.36ಕೋಟಿ ಮೊಬೈಲ್ ಫೋನ್ ಚಂದಾದಾರರು ಇದ್ದಾರೆ ಎಂದು ಟ್ರಾಯ್ ರಿಪೋರ್ಟ್ ತಿಳಿಸಿದೆ. ಇದರಲ್ಲಿ 17.39 ಲಕ್ಷ ಹೊಸ ಗ್ರಾಹಕರ ಸೇರ್ಪಡೆಯಾಗಿದೆ. ಇನ್ನು ಖಾಸಗಿ ಟೆಲಿಕಾಂ ಕಂಪೆನಿಗಳು ಶೇಕಡ 89.99 ಮಾರುಕಟ್ಟೆ ಪಾಲನ್ನು ಹೊಂದಿದ್ದರೆ, ಸರ್ಕಾರಿ ಕಂಪೆನಿಗಳ ಪಾಲು ಶೇಕಡಾ 10.01 ರಷ್ಟು ಮಾತ್ರ.

 ಜಿಯೋ ನಾಗಾಲೋಟ!

ಜಿಯೋ ನಾಗಾಲೋಟ!

ಭಾರತದ 4G ಆಟಗಾರ ಟೆಲಿಕಾಂ ಕಂಪೆನಿ ರಿಲಯನ್ಸ್ ಜಿಯೋ ಕಳೆದ ವರ್ಷವೂ ತನ್ನ ನಾಗಾಲೋಟವನ್ನು ಮುಂದುವರೆಸಿದೆ. ಕಳೆದ ವರ್ಷದ ಚಂದಾದಾರಿಕೆ ರೇಸ್‌ನಲ್ಲಿ ನೇತೃತ್ವ ವಹಿಸಿರುವ ಜಿಯೋ ದೇಶದಾದ್ಯಂತ ಸುಮಾರು 88.01 ಲಕ್ಷ ಹೊಸ ಗ್ರಾಹಕರನ್ನು ಸೇರಿಸಿಕೊಂಡಿದೆ, ಫೆಬ್ರವರಿ ಅತಂತ್ಯದ ವೇಳೆಗೆ ಜಿಯೊ ಚಂದಾದಾರರ ಸಂಖ್ಯೆ 30 ಕೋಟಿ ದಾಟಿದೆ.

ಎರಡನೇ ಸ್ಥಾನ BSNLಗೆ!

ಎರಡನೇ ಸ್ಥಾನ BSNLಗೆ!

ಇತ್ತೀಚಿಗಷ್ಟೇ ಜಿಯೋಗಿಂತಲೂ ಮೂರು ಪಟ್ಟು ಡೇಟಾ ನೀಡಿ ಆಶ್ಚರ್ಯ ಮೂಡಿಸಿದ್ದ ಸರಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಸಂಸ್ಥೆ ಚಂದಾರರನ್ನು ಸೆಳೆಯುವಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಫೆಬ್ರವರಿ ವೇಳೆಗೆ ಬಿಎಸ್‌ಎನ್‌ಎಲ್ ಸಂಸ್ಥೆ 9 ಲಕ್ಷ ಚಂದಾದಾರರನ್ನು ಸೇರಿಸಿ ಟೆಲಿಕಾಂನಲ್ಲಿ ಎರಡನೇ ಸ್ಥಾನ ಪಡೆದಿದೆ.

ಕನಿಷ್ಠಕ್ಕೆ ಇಳಿದ ಏರ್‌ಟೆಲ್!

ಕನಿಷ್ಠಕ್ಕೆ ಇಳಿದ ಏರ್‌ಟೆಲ್!

ಭಾರತ ಟೆಲಿಕಾಂನಲ್ಲಿ ಹಲವು ವರ್ಷಗಳ ಕಾಲ ರಾಜನಂತೆ ಮೆರೆದಿದ್ದ ಏರ್‌ಟೆಲ್ ನವೆಂಬರ್ ತಿಂಗಳಿನಲ್ಲಿ ಮಣ್ಣುಮುಕ್ಕಿದೆ. ನವೆಂಬರ್ 30ರ ವೇಳೆಗೆ ಏರ್‌ಟೆಲ್ ಕೇವಲ 1.02 ಲಕ್ಷ ಹೊಸ ಗ್ರಾಹಕರನ್ನು ಸೇರಿಸಿಕೊಂಡಿತ್ತು. ಫೆಬ್ರವರಿಯಲ್ಲೂ ಸ್ವಲ್ಪ ಗ್ರಾಹಕರನ್ನು ಸೆಳೆದಿರುವ ಏರ್‌ಟೆಲ್‌ನ ಚಂದಾದಾರರು 35 ಕೋಟಿಯಷ್ಟು ಇದ್ದಾರೆ ಎಂದು ಟ್ರಾಯ್ ರಿಪೋರ್ಟ್ ತಿಳಿಸಿದೆ.

ವೊಡಾಫೋನ್ ಐಡಿಯಾಗೆ ಸಂಕಷ್ಟ!

ವೊಡಾಫೋನ್ ಐಡಿಯಾಗೆ ಸಂಕಷ್ಟ!

ದೇಶದ ಅತಿ ದೊಡ್ಡ ಟೆಲಿಕಾಂ ಆಗಿ ಹೊರಹೊಮ್ಮಿರುವ ವೊಡಾಫೋನ್ ಐಡಿಯಾಗೆ ಸಂಕಷ್ಟವನ್ನು ತಂದುಕೊಂಡಿದೆ. ಪ್ರಸ್ತುತ ಅತಿದೊಡ್ಡ ಟೆಲಿಕಾಂಸೇವಾ ಪೂರೈಕೆದಾರ ವೊಡಾಫೋನ್ ಐಡಿಯಾ ನವೆಂಬರ್‌ನಲ್ಲಿ 65.26 ಲಕ್ಷ ಮತ್ತು ಫೆಬ್ರವರಿಯಲ್ಲಿ 57 ಲಕ್ಷ ಚಂದಾದಾರರನ್ನು ಕಳೆದುಕೊಂಡಿದೆ. ಪ್ರಸ್ತುತ ವೊಡಾಫೋನ್ ಐಡಿಯಾ ಚಂದಾದಾರಿಕೆ 42 ಕೋಟಿ ಗಳಷ್ಟಿದೆ.

Best Mobiles in India

English summary
Reliance Jio, BSNL drive wireless users up to 118 crore in February . Reliance Jio, BSNL drive wireless users up to 118 crore in February ... Jio and BSNL together accounted for 8.69 million additional. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X