ರಿಲಯೆನ್ಸ್ ಜಿಯೋ ರೂ 398 ಅಥವಾ ಅಧಿಕ ರೀಚಾರ್ಜ್ ಮೇಲೆ ನೀಡಲಿದೆ ರೂ 700 ವರೆಗೆ ಕ್ಯಾಶ್ಬ್ಯಾಕ್!
ಕ್ಯಾಶ್ಬ್ಯಾಕ್ ಆಫರ್ಗಳು, ವಾಯ್ಸ್ ಕರೆಗಳು,SMS ಮತ್ತು ಜಿಯೋ ಆಪ್ ಸ್ಯೂಟ್ ಗೆ ಆಕ್ಸೆಸ್ ಜೊತೆಗೆ ಲಭಿಸುವ ಅಗ್ಗದ 4ಜಿ ಪ್ಲ್ಯಾನ್ಗಳು - ಇವೆಲ್ಲವೂ ರಿಲಯೆನ್ಸ್ ಜಿಯೋ ಅನ್ನು ಮನೆಮಾತಾಗಿಸಿದೆ. ಈ ತಿಂಗಳ ಆರಂಭದಲ್ಲಿ ತನ್ನ ಟ್ಯಾರಿಫ್ಗಳ ಬೆಲೆಯಲ್ಲಿ ಇಳಿಕೆ ಮಾಡಿ ತನ್ನ ಲಕ್ಷಾಂತರ ಗ್ರಾಹಕರನ್ನು ನಿಬ್ಬೆರಗಾಗಿಸಿದ ಜಿಯೋ ಈಗ ತನ್ನ ಪ್ರೈಮ್ ಗ್ರಾಹಕರಿಗೆ ಹೊಸ ಆಫರ್ ಒಂದನ್ನು ನೀಡಲಿದೆ. ಈ ಆಫರ್ ನಲ್ಲಿ ಜಿಯೋ ಪ್ರೈಮ್ ಸದಸ್ಯರು ರೂ 398 ಅಥವಾ ಅಧಿಕ ರೀಚಾರ್ಜ್ ಮಾಡಿದರೆ ರೂ 700 ರಷ್ಟು ಕ್ಯಾಶ್ಬ್ಯಾಕ್ ಪಡೆಯಲು ಅರ್ಹರಾಗುತ್ತಾರೆ.

ಜಿಯೋ ಕ್ಯಾಶ್ಬ್ಯಾಕ್ ಎರಡು ವರ್ಗದಲ್ಲಿ ಬರುತ್ತದೆ- ಒಂದು ರೂ 400 ಮೌಲ್ಯದ ಕ್ಯಾಶ್ಬ್ಯಾಕ್ ವೌಚರ್ ಆದರೆ ಮತ್ತೊಂದು ಆಯ್ದ ಡಿಜಿಟಲ್ ವ್ಯಾಲೆಟ್ಗಳಲ್ಲಿ ರೂ 300ರಷ್ಟು ಕ್ಯಾಶ್ಬ್ಯಾಕ್. ಇವುಗಳಲ್ಲಿ ಮೊದಲನೆಯದು ಗ್ರಾಹಕರ ಖಾತೆಗೆ ಕೂಡಲೆ ಜಮೆಯಾಗುತ್ತದೆ. ಪ್ರೈಮ್ ಸದಸ್ಯರಿಗೆ 100%ಗೂ ಅಧಿಕ ಕ್ಯಾಶ್ಬ್ಯಾಕ್ ನೀಡುವ ಈ ಜಿಯೋ ಆಫರ್ ಜನವರಿ 31,2018 ರ ತನಕ ಲಭ್ಯವಿದೆ.

ರೂ 50ರ 8 ವೌಚರ್ ಗಳು
ರೂ 400 ಮೌಲ್ಯದ ವೌಚರ್ ಗಳ ಕುರಿತು ಹೇಳುವುದಾದರೆ, ಜಿಯೋ ರೂ 50 ರ ಎಂಟು ವೌಚರ್ಗಳನ್ನು ನೀಡಲಿದ್ದು ಇದು ನೇರವಾಗಿ ಗ್ರಾಹಕರ ಖಾತೆಗೆ ಜಮೆಯಾಗುತ್ತದೆ. ಪ್ರತೀ ಬಾರಿ ರೂ 300 ಅಥವಾ ಆಧಿಕ ಮೊತ್ತದ ರೀಚಾರ್ಜ್ ಮಾಡಿಸುವಾಗ ಗ್ರಾಹಕರು ಈ ವೌಚರ್ಗಳನ್ನು ಪ್ರತೀ ಬಾರಿ ಒಂದರಂತೆ ಬಳಸಬಹುದು. ಅಲ್ಲದೆ ಗ್ರಾಹಕರು ಈ ವೌಚರ್ಗಳನ್ನು ರೂ 91 ಅಥವಾ ಅಧಿಕ ಮೊತ್ತದ ಹೆಚ್ಚುವರಿ ಆಡ-ಆನ್ ಪ್ಯಾಕ್ ಗಳಿಗೂ ಬಳಸಬಹುದು. ಈ ಆಫರ್ ಹೆಚ್ಚೆಂದರೆ 5 ರೀಚಾರ್ಜ್ಗಳಿಗೆ ಮಾನ್ಯವಾಗಿದ್ದು ಈ ಆಫರ್ ಮುಗಿಯುವವರೆಗೆ ಒಂದು ಜಿಯೋ ನಂಬರ್ ಮೇಲೆ ಹೆಚ್ಚೆಂದರೆ 5 ವೌಚರ್ಗಳ ಖರೀದಿ ನಡೆಸಬಹುದಾಗಿದೆ.

ಡಿಜಿಟಲ್ ವ್ಯಾಲೆಟ್ ಆಫರ್
ರಿಲಯೆನ್ಸ್ ಜಿಯೋ ಅಮೇಜಾನ್ ಪೇ, ಪೇಟಿಯಂ ಮೊದಲಾದ ಡಿಜಿಟಲ್ ವ್ಯಾಲೆಟ್ಗಳೊಂದಿಗೆ ಕೈಜೋಡಿಸಿದ್ದು, ರೂ 300 ರ ಇನ್ಸ್ಟೆಂಟ್ ಕ್ಯಾಶ್ಬ್ಯಾಕ್ ನೀಡುತ್ತದೆ. ಜಿಯೋ ನ ಪ್ರೈಮ್ ಸದಸ್ಯರು ತಮ್ಮ ಸಂಖ್ಯೆಗೆ ಅಮೇಜಾನ್ ಪೇ ಮೂಲಕ ರೂ 398 ಅಥವಾ ಅದಕ್ಕಿಂತ ಅಧಿಕ ಮೊತ್ತದ ರೀಚಾರ್ಜ್ ಮಾಡಿಸಿದಾಗ ರೂ 50 ರ ಕ್ಯಾಶ್ಬ್ಯಾಕ್ ಪಡೆಯಬಹುದು.
ಮೊಬಿಕ್ವಿಕ್ ಗ್ರಾಹಕರಿಗೆ ಈ ರೂ300 ಕ್ಯಾಶ್ಬ್ಯಾಕ್ ನ ಜೊತೆಗೆ ರೂ2500 ರಷ್ಟು 100% ಸೂಪರ್ಕ್ಯಾಶ್ ಮೊಬಿಕ್ವಿಕ್ ಹೋಟೆಲ್ ವೌಚರ್ ಕೂಡ ದೊರಕುತ್ತದೆ. ಪೇಟಿಯಂ ತನ್ನ ಹೊಸ ಗ್ರಾಹಕರಿಗೆ ರೂ 50 ರ ಕ್ಯಾಶ್ಬ್ಯಾಕ್ ಮತ್ತು ಹಳೆಯ ಗ್ರಾಹಕರಿಗೆ ರೂ 30 ರ ಕ್ಯಾಶ್ಬ್ಯಾಕ್ ನೀಡುತ್ತದೆ.
ಫ್ರೀಚಾರ್ಜ್ ಮತ್ತು ಫೋನ್ಪೇ ತಮ್ಮ ಗ್ರಾಹಕರಿಗೆ ಕ್ರಮವಾಗಿ ರೂ 30 ಮತ್ತು ರೂ 75 ಕ್ಯಾಶ್ಬ್ಯಾಕ್ ನೀಡುತ್ತದೆ. ಭೀಮ್ ಆಪ್ ಬಳಸಿದರೆ ಹೊಸ ಗ್ರಾಹಕರಿಗೆ ರೂ 100 ಮತ್ತು ಹಳೆಯ ಗ್ರಾಹಕರಿಗೆ ರೂ 30 ರ ಕ್ಯಾಶ್ಬ್ಯಾಕ್ ಸಿಗುತ್ತದೆ.

ಸತತ ಮೂರನೇ ಕ್ಯಾಶ್ಬ್ಯಾಕ್
ಜಿಯೋ ಪ್ರೈಮ್ ಗ್ರಾಹಕರಿಗೆ ಸಿಗುವ ಈ ಹೊಸ ಕ್ಯಾಶ್ಬ್ಯಾಕ್ ಆಫರ್ ಜಿಯೋ ತನ್ನ ಗ್ರಾಹಕರಿಗೆ ನೀಡುತ್ತಿರುವ ಸತತ ಮೂರನೇ ಆಫರ್ ಆಗಿದೆ. ಜಿಯೋ 1GB ಪ್ರತಿ ದಿನದ ಪ್ರೀಪೇಯ್ಡ್ ಪ್ಲ್ಯಾನ್ ನ ಬೆಲೆ ಕಡಿತ ಗೊಳಿಸಿ, 1.5GB ಪ್ರತಿದಿನ ನೀಡುವ ಪ್ಯಾಕ್ಗಳನ್ನು ಘೋಷಿಸಿದ ಬೆನ್ನಲ್ಲೇ ಈ ಆಫರ್ ಅನ್ನು ಘೋಷಿಸಿದೆ.


Click it and Unblock the Notifications








