Home
ಸುದ್ದಿಜಾಲ

ದೀಪಾವಳಿಗೆ ಜಿಯೋ ಬಂಪರ್‌..! ದಿನಕ್ಕೆ 2GB ಡೇಟಾ ಉಚಿತ..!

ಈ ದೀಪಾವಳಿ ಹಬ್ಬಕ್ಕೆ ಮುಖೇಶ್‌ ಅಂಬಾನಿ ಒಡೆತನದ ರಿಲಾಯನ್ಸ್‌ ಜಿಯೋ ತನ್ನ ಗ್ರಾಹಕರಿಗೆ ಜಿಯೋ ಸೆಲೆಬ್ರೆಷನ್‌ ಪ್ಯಾಕ್‌ ಪರಿಚಯಿಸಿದ್ದು, ದೀಪಗಳ ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದೆ. ಜಿಯೋ ಸಂಭ್ರಮದ ಆಫರ್‌ನಿಂದ ಗ್ರಾಹಕರು ದಿನಕ್ಕೆ ಹೆಚ್ಚುವರಿಯಾಗಿ 2GB 4G ಡೇಟಾವನ್ನು ಪಡೆಯಲಿದ್ದಾರೆ.

ದೀಪಾವಳಿಗೆ ಜಿಯೋ ಬಂಪರ್‌..! ದಿನಕ್ಕೆ 2GB ಡೇಟಾ ಉಚಿತ..!

ಹೌದು, ಹೀಗಾಗಲೇ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ತನ್ನದೇ ಆದ ಕ್ರಾಂತಿಯನ್ನು ಎಬ್ಬಿಸಿರುವ ಜಿಯೋ ಇತರೆ ಟೆಲಿಕಾಂ ಆಪರೇಟರ್‌ಗಳ ನಿದ್ದೆಗೆಡಿಸಿರುವುದಂತು ನಿಜ. ಈಗ ಸೆಲೆಬ್ರೆಷನ್‌ ಪ್ಯಾಕ್‌ ಹೆಸರಿನಲ್ಲಿ ದಿನಕ್ಕೆ ಹೆಚ್ಚುವರಿ 2GB ಡೇಟಾ ನೀಡುತ್ತಿರುವುದು ಏರ್‌ಟೆಲ್‌, ವೊಡಾಫೋನ್‌ ಐಡಿಯಾ ಲಿಮಿಟೆಡ್‌ ಸೇರಿದಂತೆ ಬಿಎಸ್‌ಎನ್‌ಎಲ್‌ಗೂ ಕೂಡ ನುಂಗಲಾರದ ತುತ್ತಾಗಿದೆ. ಆಗಿದ್ರೇ ಸೆಲೆಬ್ರೆಷನ್‌ ಪ್ಯಾಕ್‌ನಲ್ಲಿ ಏನೇಲ್ಲಾ ಇದೆ..? ಆಫರ್‌ ಯಾರಿಗೆ ಲಭ್ಯ..? ಎಂಬುದನ್ನು ಮುಂದೆ ನೋಡಿ.

ಪ್ರತಿದಿನ 2GB ಡೇಟಾ

ಪ್ರತಿದಿನ 2GB ಡೇಟಾ

ಜಿಯೋ ಸೆಲೆಬ್ರೆಷನ್‌ ಪ್ಯಾಕ್‌ನಡಿಯಲ್ಲಿ ಗ್ರಾಹಕರು ಹೆಚ್ಚುವರಿಯಾಗಿ 2GB 4G ಡೇಟಾವನ್ನು ಪಡೆಯಲಿದ್ದು, 5 ದಿನ ಹೆಚ್ಚುವರಿಯಾಗಿ 2GBಯಂತೆ 10GB ಡೇಟಾ ಬಳಸಲು ಆಯ್ಕೆಯನ್ನು ಈ ಆಫರ್‌ ನೀಡಲಿದೆ. ಕೆಲವು ವರದಿಗಳ ಪ್ರಕಾರ ಈ ಆಫರ್‌ 4 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಒಟ್ಟು 8GB ಡೇಟಾವನ್ನು ಪಡೆಯಲಿದ್ದಾರೆ.

ಎರಡನೇ ವಾರ್ಷಿಕೋತ್ಸವಕ್ಕೂ ಜಿಯೋ ಆಫರ್‌

ಎರಡನೇ ವಾರ್ಷಿಕೋತ್ಸವಕ್ಕೂ ಜಿಯೋ ಆಫರ್‌

ಸೆಲೆಬ್ರೆಷನ್‌ ಪ್ಯಾಕ್‌ನ್ನು ಮುಖೇಶ್‌ ಅಂಬಾನಿ ಒಡೆತನದ ರಿಲಾಯನ್ಸ್‌ ಜಿಯೋದ ಯಶಸ್ವಿ ಎರಡನೇ ವಾರ್ಷಿಕೋತ್ಸವಕ್ಕೆ ಗ್ರಾಹಕರಿಗೆ ಉಡುಗೊರೆಯಾಗಿ ನೀಡಿತ್ತು. ಈಗ ಮತ್ತೆ ದೀಪಾವಳಿ ಸಂಭ್ರಮ ಹೆಚ್ಚಿಸಲು ಜಿಯೋ ಈ ಆಫರ್‌ನ್ನು ತನ್ನ ಗ್ರಾಹಕರಿಗೆ ನೀಡಿದೆ.

ಯಾರಿಗೆ ಲಭ್ಯ..?

ಯಾರಿಗೆ ಲಭ್ಯ..?

ಜಿಯೋ ಸೆಲೆಬ್ರೆಷನ್‌ ಪ್ಯಾಕ್‌ ಸದ್ಯಕ್ಕೆ ಎಲ್ಲಾ ಗ್ರಾಹಕರಿಗೆ ಲಭ್ಯವಿಲ್ಲ. ಜಿಯೋ ಆಯ್ದ ಕೆಲವು ಗ್ರಾಹಕರಿಗೆ ಮಾತ್ರ ಈ ಆಫರ್‌ ನೀಡುತ್ತಿದ್ದು, ಆಫರ್‌ಗೆ ನಿಮಗೆ ಲಭ್ಯವಿದ್ದರೆ ಹೀಗಾಗಲೇ ಸಂದೇಶದ ಮೂಲಕ ಜಿಯೋ ತಿಳಿಸಿರುತ್ತದೆ. ಇಲ್ಲದಿದ್ದರೆ, ಜಿಯೋ ಆಪ್‌ ಮೂಲಕ ನೀವು ಸೆಲೆಬ್ರೆಷನ್‌ ಪ್ಯಾಕ್‌ ಪಡೆಯಲು ಅರ್ಹರಾಗಿದೆವೋ ಇಲ್ಲವೋ ಎಂಬುದನ್ನು ಪರಿಶೀಲಿಸಿಕೊಳ್ಳಬಹುದು.

ಮೈ ಜಿಯೋ ಆಪ್‌ನಲ್ಲಿ ಹೇಗೆ ಪರಿಶೀಲಿಸುವುದು..?

ಮೈ ಜಿಯೋ ಆಪ್‌ನಲ್ಲಿ ಹೇಗೆ ಪರಿಶೀಲಿಸುವುದು..?

1. ಮೊದಲಿಗೆ ಪ್ಲೇ ಸ್ಟೋರ್‌ನಿಂದ ಮೈ ಜಿಯೋ ಆಪ್‌ ಡೌನ್‌ಲೋಡ್‌ ಮಾಡಿರಿ.
2. ನಂತರ ಜಿಯೋ ನಂಬರ್‌ ಬಳಸಿ ಆಪ್‌ಗೆ ಲಾಗಿನ್‌ ಆಗಿ.
3. ಎಡಗಡೆಯಲ್ಲಿರುವ ಮೂರು ಸಣ್ಣ ಗೆರೆಗಳುಳ್ಳ ಆಯ್ಕೆಯನ್ನು ಕ್ಲಿಕ್‌ ಮಾಡಿ.
4. ಅಲ್ಲಿಂದ ಮೈ ಪ್ಲಾನ್ಸ್‌ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
5. ಜಿಯೋ ಸೆಲೆಬ್ರೆಷನ್‌ ಪ್ಯಾಕ್‌ ನೋಡಿ. ನೀವು ಈ ಪ್ಯಾಕ್‌ಗೆ ಅರ್ಹರಾಗಿದ್ದರೆ, ಕರೆಂಟ್‌ ಪ್ಲಾನ್‌ ಕೆಳಗಡೆ ಸೆಲೆಬ್ರೇಷನ್‌ ಪ್ಯಾಕ್‌ ಕಾಣುತ್ತದೆ.

ಕಾಲ್‌ ಮಾಡಿ ತಿಳಿದುಕೊಳ್ಳಿ..!

ಕಾಲ್‌ ಮಾಡಿ ತಿಳಿದುಕೊಳ್ಳಿ..!

ಆಪ್‌ ಮೂಲಕ ಅಲ್ಲದೇ ಕಾಲ್‌ ಮಾಡುವ ಮೂಲಕವು ಜಿಯೋ ಸೆಲಬ್ರೇಷನ್‌ ನಿಮಗೆ ಬಂದಿದಿಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು. 1299ಗೆ ಕರೆ ಮಾಡುವ ಮೂಲಕ ಜಿಯೋ ಸೆಲೆಬ್ರೇಷನ್‌ ಡೇಟಾ ಆಡ್‌ ಆನ್‌ ಪ್ಯಾಕ್‌ ಲಭ್ಯವಿದೆಯೋ ಇಲ್ಲವೆನ್ನುವುದು ಗಮನಿಸಬಹುದಾಗಿದ್ದು, ಎಸ್‌ಎಂಎಸ್‌ ಮೂಲಕ ಪ್ಯಾಕ್‌ನ್ನು ಖಚಿತ ಪಡಿಸಿಕೊಳ್ಳಬಹುದು.

ದೀಪಾವಳಿ ಶೇ.100 ಕ್ಯಾಶ್‌ಬ್ಯಾಕ್‌

ದೀಪಾವಳಿ ಶೇ.100 ಕ್ಯಾಶ್‌ಬ್ಯಾಕ್‌

ಜಿಯೋ ಇತ್ತೇಚೆಗೆ ತಾನೇ ದೀಪಾವಳಿ ಬಂಪರ್ ಶೇ.100ರಷ್ಟು ಕ್ಯಾಶ್‌ಬ್ಯಾಕ್‌ ಆಫರ್‌ನ್ನು ಘೋಷಿಸಿತ್ತು. ಈ ಆಫರ್‌ ಅಕ್ಟೋಬರ್‌ 18ರಿಂದ ನವೆಂಬರ್‌ 30ರವರೆಗೆ ಲಭ್ಯವಾಗಲಿದ್ದು, ಸುಮಾರು 45ದಿನಗಳ ಕಾಲ ಆಫರ್‌ ಗ್ರಾಹಕರಿಗೆ ಲಭ್ಯವಾಗಲಿದೆ. ಜಿಯೋ ಗ್ರಾಹಕರು ರಿಚಾರ್ಜ್‌ ಮಾಡಿಸಿ ಆಫರ್ ಪಡೆಯಬಹುದು.

ಯಾವ್ಯಾವ ಪ್ಲಾನ್‌ಗಳಿಗೆ ಅನ್ವಯ..?

ಯಾವ್ಯಾವ ಪ್ಲಾನ್‌ಗಳಿಗೆ ಅನ್ವಯ..?

ದೀಪಾವಳಿಯ ಶೇ.100ರಷ್ಟು ಕ್ಯಾಶ್‌ಬ್ಯಾಕ್‌ ಆಫರ್‌ ರೂ. 149, ರೂ. 198, ರೂ. 299, ರೂ. 349, ರೂ. 398, ರೂ. 399, ರೂ. 448, ರೂ. 449, ರೂ. 498, ರೂ. 509, ರೂ. 799, ರೂ. 999, ರೂ. 1,999, ರೂ. 4,999 , ರೂ. 9,999 ರಿಚಾರ್ಜ್‌ ಪ್ಲಾನ್‌ಗಳ ಮೇಲೆ ಲಭ್ಯವಿದ್ದು, ಗ್ರಾಹಕರು ಪಡೆಯಬಹುದಾಗಿದೆ.

ಹೇಗೆ ಕ್ಯಾಶ್‌ಬ್ಯಾಕ್‌..?

ಹೇಗೆ ಕ್ಯಾಶ್‌ಬ್ಯಾಕ್‌..?

ಜಿಯೋ ತನ್ನ ಗ್ರಾಹಕರಿಗೆ ನೀಡುವ ಕ್ಯಾಶ್‌ಬ್ಯಾಕ್‌ ಕೂಪನ್‌ ರೂಪದಲ್ಲಿದ್ದು, ರಿಚಾರ್ಜ್‌ ಪ್ಲಾನ್‌ಗಳನ್ವಯ ಕೂಪನ್‌ಗಳ ಸಂಖ್ಯೆಯು ಬದಲಾಗಲಿದೆ. ಈ ಕೂಪನ್‌ಗಳನ್ನು ಯಾವುದೇ ರಿಲಾಯನ್ಸ್‌ ಡಿಜಿಟಲ್‌ ಅಥವಾ ರಿಲಾಯನ್ಸ್‌ ಡಿಜಿಟಲ್‌ ಎಕ್ಸ್‌ಪ್ರೆಸ್‌ ಮಿನಿ ಸ್ಟೋರ್‌ಗಳಲ್ಲಿ ಬಳಸಬಹುದು. ಆದರೆ, ಕನಿಷ್ಠ ರೂ. 5,000 ಮೌಲ್ಯದ ವಸ್ತುಗಳನ್ನು ಖರೀದಿಗೆ ಮಾತ್ರ ಕೂಪನ್‌ಗಳನ್ನು ಬಳಸಬಹುದು ಎಂದು ಜಿಯೋ ತಿಳಿಸಿದೆ. ಈ ಕೂಪನ್‌ಗಳನ್ನು ಡಿಸೆಂಬರ್‌ 31, 2018ರೊಳಗೆ ಬಳಸಬೇಕಾಗಿದೆ.

Best Mobiles in India

English summary
Reliance Jio Celebration Pack offers 2GB additional data per day: Here's how to check if you are eligible. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+