ಜಿಯೋ ಗಿಗಾ ಫೈಬರ್ ಬೆಲೆ ಲೀಕ್..! ರೂ.4500 ಅಲ್ಲ, ಕೇವಲ ರೂ.500 ಮಾತ್ರ..!
ಈಗಾಗಲೇ ಬ್ರಾಡ್ ಬ್ಯಾಂಡ್ ಮಾರುಕಟ್ಟೆಯನ್ನು ಪ್ರವೇಶಿಸಲು ತುದಿಗಾಲಿನಲ್ಲಿ ನಿಂತಿರುವ ಜಿಯೋ, ಗಿಗಾ ಫೈಬರ್ ಬ್ರಾಡ್ ಬ್ಯಾಂಡ್ ಸೇವೆಯ ಮೂಲಕ ಹೊಸದೊಂದು ಅಧ್ಯಾಯವನ್ನು ಹುಟ್ಟುಹಾಕಲು ಮುಂದಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯಲ್ಲಿ ಲಭ್ಯವಿರುವ ಬ್ರಾಡ್ ಬ್ಯಾಂಡ್ ಸೇವೆಯನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಲಿದೆ ಎನ್ನಲಾಗಿದ್ದು, ಆಗಸ್ಟ್ 15ಕ್ಕೆ ಲಾಂಚ್ ಆಗಲಿರುವ ಈ ಸೇವೆಯ ಕುರಿತು ಮಾಹಿತಿಯೂ ಲೀಕ್ ಆಗಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಗಿಗಾ ಫೈಬರ್ ಅನ್ನು ಬಳಕೆ ಮಾಡಿಕೊಳ್ಳಲು ಬಳಕೆದಾರರು ರೂ.4500 ಪಾವತಿ ಮಾಡಬೇಕಾಗಿದೆ ಎನ್ನುವ ಮಾಹಿತಿಯೂ ಲೀಕ್ ಆಗಿತ್ತು. ಆದರೆ ಈ ಬಾರಿ ಮಾಹಿತಿಯೊಂದು ಲೀಕ್ ಆಗಿದ್ದು, ರೂ.500ಕ್ಕೆ ಜಿಯೋ ಗಿಗಾ ಫೈಬರ್ ಸೇವೆಯೂ ಮಾರಾಟವಾಗಲಿದೆ ಎನ್ನಲಾಗಿದೆ. ಇದಲ್ಲದೇ ಗಿಗಾ ಟಿವಿ ಪ್ಲಾನ್‌ಗಳ ಕುರಿತ ಮಾಹಿತಿಯೂ ಲೀಕ್ ಆಗಿದೆ.

ಮೂರು ತಿಂಗಳು ಉಚಿತ ಸಾಧ್ಯತೆ:
ಇದಲ್ಲದೇ ಗಿಗಾ ಫೈಬರ್ ಸೇವೆಗೆ ಹೆಚ್ಚಿನ ಬಳಕೆದಾರರನ್ನು ಸೆಳೆಯುವ ಸಲುವಾಗಿ ಮೊದಲ ಮೂರು ತಿಂಗಳು ಉಚಿತ ಸೇವೆಯನ್ನು ನೀಡಲಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಹೆಚ್ಚಿನ ಬಳಕೆದಾರರನ್ನು ಸೆಳೆಯುವ ಪ್ರಯತ್ನವನ್ನು ಮಾಡಲಿದೆ ಎನ್ನಲಾಗಿದೆ.

ಬೆಸಿಕ್ ಪ್ಲಾನ್:
ಜಿಯೋ ಗಿಗಾ ಟಿವಿ ಪ್ಲಾನ್‌ನಲ್ಲಿ ಬಳಕೆದಾರರಿಗೆ ಬೆಸಿಕ್ ಪ್ಲಾನ್‌ನಲ್ಲಿ 100 GB ಡೇಟಾವನ್ನು 100MBPS ವೇಗದಲ್ಲಿ ನೀಡಲಿದ್ದು, ಇದಕ್ಕೆ ರೂ.700 ರಿಂದ 900 ದರವನ್ನು ವಿಧಿಸಲಿದೆ ಎನ್ನಲಾಗಿದೆ. ಇದರೊಂದಿಗೆ ದೊರೆಯುವ ಗಿಗಾ TV ಸೇವೆಯನ್ನು ಪಡೆಯಲು ಹೆಚ್ಚುವರಿ ರೂ.200-250 ಪಾವತಿ ಮಾಡಬೇಕಾಗುತ್ತಿದೆ.

ಮಾರುಕಟ್ಟೆಗಿಂತಲೂ ಕಡಿಮೆ ಬೆಲೆ:
ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಸೇವೆಗಿಂತಲೂ ಅರ್ಧ ಬೆಲೆಯಲ್ಲಿ ಬ್ರಾಡ್ ಬ್ಯಾಂಡ್ ಸೇವೆಯನ್ನು ನೀಡಲಿದೆ. ದೇಶಿಯ ಡೇಟಾ ಮಾರುಕಟ್ಟೆಯಲ್ಲಿ ತನ್ನ ಪಾರುಪತ್ಯವನ್ನು ಸಾಧಿಸುವ ಸಲುವಾಗಿ ಜಿಯೋ ಎಲ್ಲಾ ಮಾದರಿಯಲ್ಲಿಯೂ ಪ್ರಯತ್ನಿಸುತ್ತಿದೆ ಎನ್ನಲಾಗಿದೆ.

ರಿಜಿಸ್ಟರ್ ಮಾಡಿಕೊಳ್ಳಿ:
ನೀವು ಜಿಯೋ ಗಿಗಾ ಫೈಬರ್ ಸೇವೆಯನ್ನು ಪಡೆದುಕೊಂಡರೆ ಸಾಕು. ಇದರ ಜೊತೆಯಲ್ಲಿಯೇ ಜಿಯೋ ಗಿಗಾ TV ಸೇವೆಯೂ ಉಚಿತವಾಗಿ ದೊರೆಯಲಿದೆ. ಇದಕ್ಕಾಗಿ ಮೊದಲು ನೀವು ಜಿಯೋ ಆಪ್ ಇಲ್ಲವೇ ಜಿಯೋ ವೆಬ್ ಸೈಟಿನಲ್ಲಿ ರಿಜಿಸ್ಟರ್ ಮಾಡಿಕೊಳ್ಳಬಹುದಾಗಿದೆ. ಇಲ್ಲಿ ಮಾಡಿಕೊಂಡರೆ ಮಾತ್ರವೇ ಲಾಭ ದೊರೆಯಲಿದೆ.

ಟಿವಿ ಸೇವೆ:
ಮಾರುಕಟ್ಟೆಯಲ್ಲಿ ಜಿಯೋ ಗಿಗಾ ಫೈಬರ್ ಬುಕ್ ಮಾಡಿದ ಸಂದರ್ಭದಲ್ಲಿ ಇಂಟರ್ನೆಟ್ ಮಾಡೊಮ್ ನೊಂದಿಗೆ ನಿಮಗೆ ಜಿಯೋ ಗಿಗಾ TV ಬಾಕ್ಸ್ ಸಹ ದೊರೆಯಲಿದೆ ಎನ್ನಲಾಗಿದೆ. ಈ ಕುರಿತು ಜಿಯೋ ಹೆಚ್ಚಿನ ಮಾಹಿತಿಯನ್ನು ಬಿಟ್ಟು ಕೊಟ್ಟಿಲ್ಲ. ನೀವು ಈ ಬಾಕ್ಸ್ ಮೂಲಕ ಟಿವಿ ಸೇವೆಯನ್ನು ಪಡೆಯಬಹುದಾಗಿದೆ.


Click it and Unblock the Notifications