ಎಚ್ಚರ ಗ್ರಾಹಕರೇ ಎಚ್ಚರ: ಜಿಯೋ ಉಚಿತ ಸೇವೆ ಹೆಸರಿನಲ್ಲಿ ನಡೆಯುತ್ತಿದೆ ವಂಚನೆ..!!

Written By:

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಚಾಲ್ತಿಯಲ್ಲಿ ಇರುವ ಹೆಸರು ಎಂದರೆ ರಿಲಯನ್ಸ್ ಮಾಲೀಕತ್ವದ ಜಿಯೋ. ಟೆಲಿಕಾಂ ವಲಯದಲ್ಲಿ ಜಿಯೋ ಮಾಡಿದ ಕ್ರಾಂತಿಕಾರಕ ಬದಲಾವಣೆಗಳು ಮತ್ತು ಗ್ರಾಹಕರ ನಂಬಿಕೆಯನ್ನು ಉಳಿಸಿಕೊಳ್ಳಲು ಮಾಡಿದ ಪಯತ್ನಗಳು ಜಿಯೋ ಖ್ಯಾತಿಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದೆ.

ಎಚ್ಚರ ಗ್ರಾಹಕರೇ ಎಚ್ಚರ: ಜಿಯೋ ಹೆಸರಿನಲ್ಲಿ ನಡೆಯುತ್ತಿದೆ ವಂಚನೆ..!!

ಆದರೆ ಜಿಯೋ ಹೆಸರನ್ನು ಬಳಸಿಕೊಂಡು ಗ್ರಾಹಕರನ್ನು ವಂಚಿಸುವ ಜಾಲಗಳು ದಿನೇ ದಿನೇ ಹೆಚ್ಚಾಗುತ್ತಿವೆ, ಜಿಯೋ ಮೇಲೆ ಗ್ರಾಹಕರು ಉಳಿಸಿಕೊಂಡಿರುವ ನಂಬಿಕೆಯ ದುರುಪಯೋಗ ಪಡೆದುಕೊಂಡು ಗ್ರಾಹಕರನ್ನು ತಮ್ಮ ವಂಚನೆಯ ಜಾಲಕ್ಕೆ ಬಿಳಿಸಿಕೊಳ್ಳುತ್ತಿವೆ. ಹೀಗಾಗಿ ಗ್ರಾಹಕರು ಎಚ್ಚರಗೊಳ್ಳಬೇಕಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಜಿಯೋ ಡಿಟಿಹೆಚ್ ಹೆಸರಿನಲ್ಲಿ ಮೋಸ:

ಜಿಯೋ ಡಿಟಿಹೆಚ್ ಹೆಸರಿನಲ್ಲಿ ಮೋಸ:

ಸದ್ಯ ಜಿಯೋ 4G ಸೇವೆಯಿಂದ ಸಂತೋಷಗೊಂಡಿರುವ ಗ್ರಾಹಕರು ಜಿಯೋ ಡಿಟಿಹೆಚ್ ಸೇವೆಯನ್ನು ಎದುರು ನೋಡುತ್ತಿದ್ದಾರೆ. ಇದೇ ವಿಷಯವನ್ನು ಬಂಡವಾಳ ಮಾಡಿಕೊಂಡಿರುವ ವಂಚಕರು ಜನರನ್ನು ಮೋಸ ಮಾಡುತ್ತಿದ್ದಾರ. ಜಿಯೋ ಡಿಟಿಹೆಚ್‌ಗೆ ರಿಜಿಸ್ಟ್ರೆಷನ್ ಮಾಡಿಸಿಕೊಳ್ಳಿ ಎಂದು ಮೇಸೆಜ್ ಕಳುಹಿಸುತ್ತಿದ್ದಾರೆ. ಆದರೆ ಇದು ವಂಚನೆಯ ಜಾಲವಾಗಿದೆ.

ನಿಮ್ಮ ವೈಯಕ್ತಿಕ ಮಾಹಿತಿ ನೀಡಬೇಡಿ:

ನಿಮ್ಮ ವೈಯಕ್ತಿಕ ಮಾಹಿತಿ ನೀಡಬೇಡಿ:

ಜಿಯೋ ಹೆಸರಿನಲ್ಲಿ ಯಾವುದೇ ಮೂಲದಲ್ಲಿ ನಿಮ್ಮ ಮಾಹಿತಿಗಳನ್ನು ಬೇಡಿದರೆ ನೀವು ಯಾವುದೇ ಕಾರಣಕ್ಕೂ ಮಾಹಿತಿಗಳನ್ನು ನೀಡಬೇಡಿ. ಕಾರಣ ನೀವು ನೀಡುವ ಮಾಹಿತಿಗಳು ಹ್ಯಾಕರ್ಸ್‌ಗಳ ಪಾಲಗಾಲಿದ್ದು, ನೀವು ಕಷ್ಟಕ್ಕೆ ನಷ್ಟಕ್ಕೆ ಸಿಲುಕುವ ಸಾಧ್ಯತೆ ಇದೇ.

ವಾಟ್ಸ್‌ಆಪ್ ನಲ್ಲಿ ಹರಿದಾಡುತ್ತಿದೆ ನಕಲಿ ಮೇಸೆಜ್:

ವಾಟ್ಸ್‌ಆಪ್ ನಲ್ಲಿ ಹರಿದಾಡುತ್ತಿದೆ ನಕಲಿ ಮೇಸೆಜ್:

ಹ್ಯಾಕರ್ಸ್‌ಗಳು ಒಂದಲ್ಲ ಒಂದು ವಿಧದಲ್ಲಿ ನಿಮ್ಮ ಮಾಹಿತಿಗಳನ್ನು ಕದಿಯಲು ಯತ್ನಿಸುತ್ತಿರುತ್ತಾರೆ. ಸದ್ಯ ಅವರಿಗೆ ಜಿಯೋ ಒಂದು ದಾರಿಯಾಗಿದ್ದು, ಜಿಯೋ ಡಿಟಿಹೆಚ್ ಉಚಿತ ಎಂದು ಮೇಸಜ್ ಕಳುಹಿಸಿ ನಿಮ್ಮನು ವಂಚಿಸುತ್ತಾರೆ ಎಚ್ಚರ.

ಜಿಯೋ ಡಿಟಿಹೆಚ್ ಉಚಿತವಲ್ಲ:

ಜಿಯೋ ಡಿಟಿಹೆಚ್ ಉಚಿತವಲ್ಲ:

ಸದ್ಯ ವಾಟ್ಸ್ ಆಪ್ ನಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಮೊದಲೇ ರಿಜಿಷ್ಟರ್ ಆದವರಿಗೆ ಜಿಯೋ ಡಿಟಿಹೆಚ್ ಸೇವೆಯೂ ಉಚಿತವಾಗಿ ದೊರೆಯಲಿದೆ ಎಂದು. ಆದರೆ ಜಿಯೋ ಮೊದಲ ಮೂರು ತಿಂಗಳು ಉಚಿತವಾಗಲಿದೆ ಆದರೆ ಸೆಟಪ್ ಬಾಕ್ಸ್ ಎಂದಿಗೂ ಉಚಿತವಾಗಿ ನೀಡುವುದಿಲ್ಲ.

ಮೋಸದ ಜಾಲಕ್ಕೆ ಸಿಲುಕದಿರಿ:

ಮೋಸದ ಜಾಲಕ್ಕೆ ಸಿಲುಕದಿರಿ:

ಜಿಯೋ ಹೆಸರು ಹೇಳಿಕೊಂಡು ಫೇಸ್‌ಬುಕ್-ವಾಟ್ಸ್‌ಆಪ್‌ನಲ್ಲಿ ಬರುವ ಆಫರ್‌ಗಳ ಬಗ್ಗೆ ಹೆಚ್ಚು ತಲೆಕಡಿಸಿಕೊಳ್ಳಬೇಡಿ. ಇವುಗಳು ನಿಮ್ಮನ್ನು ವಂಚಿಸಲೇಂದೆ ಬಂದಿರುವವು. ಹಾಗಾಗಿ ಉಚಿತ ಸೇವೆಯ ಆಸೆಗೆ ಬಿದ್ದು ಮೋಸ ಹೋಗದಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
DTH segment sometime soon. But as expected, there are quite a lot of rumors regarding this announcement and registration. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot