Subscribe to Gizbot

ರಿಲಾಯನ್ಸ್ ಜಿಯೋ ಡಿಟಿಎಚ್ VS ಏರ್‌ಟೆಲ್ ಡಿಟಿಎಚ್: ಯಾವುದು ಉತ್ತಮ?

Written By:

ರಿಲಾಯನ್ಸ್ ಜಿಯೋ ಬ್ರಾಡ್‌ಬ್ಯಾಂಡ್ ಮತ್ತು ಸ್ಮಾರ್ಟ್‌ಫೋನ್‌ ಕ್ಷೇತ್ರಕ್ಕೂ ಕಾಲಿರಿಸಿದೆ. ರಿಲಾಯನ್ಸ್ ಡಿಟಿಎಚ್ ಸೇವೆ ದೇಶದಲ್ಲಿ ಲಾಂಚ್‌ ಆಗುವುದೊಂದೆ ಬಾಕಿ. ಆದರೆ ಕಂಪನಿ ಅಧಿಕೃತವಾಗಿ ಡಿಟಿಎಚ್ ಸೇವೆ ಲಾಂಚ್‌ ಯಾವಾಗ ಎಂಬುದರ ಬಗ್ಗೆ ಮಾಹಿತಿ ನೀಡಿಲ್ಲ. ಡಿಟಿಎಚ್‌ ಸೇವೆ ಪಡೆಯಲು ನಿರೀಕ್ಷಿಸುತ್ತಿರುವ ಗ್ರಾಹಕರು ಮಾತ್ರ ಡಿಸೆಂಬರ್ ಅಂತ್ಯದಲ್ಲಿ ಲಾಂಚ್‌ ಆಗಬಹುದು ಎಂದು ಭಾವಿಸಿದ್ದಾರೆ.

ರಿಲಾಯನ್ಸ್ ಜಿಯೋ ದೇಶದಾದ್ಯಂತ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದೆ. ಈಗ ಅದೇ ರೀತಿಯಲ್ಲಿ ಡಿಟಿಎಚ್‌ ಸೇವೆಯಲ್ಲಿ ಇತರೆ ಕಂಪನಿಗಳಿಗೆ ಸ್ಪರ್ಧೆ ನೀಡಲು ಸಜ್ಜಾಗಿದೆ.

ರಿಲಾಯನ್ಸ್ ಜಿಯೋದಿಂದ 2017 ರಲ್ಲಿ 4G ಸ್ಮಾರ್ಟ್‌ಫೋನ್‌ ಲಾಂಚ್‌: ಬೆಲೆ ರೂ.1,000

ರಿಲಾಯನ್ಸ್ ಜಿಯೋಗೆ ಡಿಟಿಎಚ್‌ ಕ್ಷೇತ್ರದಲ್ಲೂ ದೊಡ್ಡ ಪ್ರಮಾಣದಲ್ಲಿ ಪ್ರತಿಸ್ಪರ್ಧಿ ಎಂದರೆ ಭಾರತಿ ಏರ್‌ಟೆಲ್‌. ಏರ್‌ಟೆಲ್‌, ಗ್ರಾಹಕರನ್ನು ಸೆಳೆಯಲು ಯಾವ ರೀತಿಯ ಆಫರ್‌ಗಳನ್ನು ನೀಡುತ್ತದೆ ಎಂಬುದು ಈಗಾಗಲೇ ತಿಳಿದಿರುವ ವಿಷಯ. ರಿಲಾಯನ್ಸ್ ಜಿಯೋ ಟೆಲಿಕಾಂ ಕ್ಷೇತ್ರಕ್ಕೆ ಕಾಲಿರಿಸಿದಾಗಲೇ ಗ್ರಾಹಕರನ್ನು ಆಕರ್ಷಿಸಲು ಹಲವಾರು ಆಫರ್‌ಗಳನ್ನು ಪರಿಚಯಿಸಿತ್ತು. ಆದರೆ ಈಗ ರಿಲಾಯನ್ಸ್ ಜಿಯೋ ಡಿಟಿಎಚ್‌ ಸೇವೆ ಆಗಮನದಿಂದಾಗಿ, ಏರ್‌ಟೆಲ್‌ ಡಿಟಿಎಚ್‌ ಸೇವೆಗೆ ಹಾಗೂ ಅದರ ಗ್ರಾಹಕರಿಗೆ ಕೆಲವು ಅಡೆತಡೆ ಮತ್ತು ಅಡ್ಡಿ ಉಂಟಾಗಬಹುದು. ಜಿಯೊ ಡಿಟಿಎಚ್‌(Jio DTH) ಮತ್ತು ಏರ್‌ಟೆಲ್ ಡಿಟಿಎಚ್(Airtel DTH) ಸೇವೆಗಳ ನಡುವಿನ ವ್ಯತ್ಯಾಸ ಏನು ಎಂದು ಲೇಖನದಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಊಬರ್ ಅಗ್ಗದ ಪ್ಲಾನ್

ಊಬರ್ ಅಗ್ಗದ ಪ್ಲಾನ್

ಈಗಾಗಲೇ ದೊರೆತಿರುವ ಮಾಹಿತಿ ಪ್ರಕಾರ ರಿಲಾಯನ್ಸ್ ಜಿಯೋ ಡಿಟಿಎಚ್ ಸೇವೆ 185 ರೂ ಆರಂಭಿಕ ಬೆಲೆ ಹೊಂದಿದೆ. ಏರ್‌ಟೆಲ್‌ಗೆ ಡಿಟಿಎಚ್‌ಗೆ ಹೋಲಿಸಿದಲ್ಲಿ, ಏರ್‌ಟೆಲ್‌ನ ಸಾಮಾನ್ಯ ಪ್ಲಾನ್‌ ಬೆಲೆ ರೂ.300. ಅಲ್ಲದೇ ಭಾರತದಲ್ಲಿ ಏರ್‌ಟೆಲ್‌ ಡಿಟಿಎಚ್‌ ಸೇವೆ ಹೆಚ್ಚು ದುಬಾರಿ ಆಗಿದೆ.

ಅತೀ ಕಿಡಿಮೆ ಬೆಲೆಯ ಡಿಟಿಎಚ್ ಸೇವೆ?

ಅತೀ ಕಿಡಿಮೆ ಬೆಲೆಯ ಡಿಟಿಎಚ್ ಸೇವೆ?

ಗಾಳಿಸುದ್ದಿ ಪ್ರಕಾರ, ಭಾರತದಲ್ಲಿ ರಿಲಾಯನ್ಸ್ ಜಿಯೋ ಡಿಟಿಎಚ್ ಸೇವೆ ಅತೀ ಕಡಿಮೆ ಬೆಲೆಗೆ ಸಿಗಲಿದೆ. ಆದರೆ ಏರ್‌ಟೆಲ್ ಮತ್ತು ಜಿಯೋ ಮತ್ತೊಮ್ಮೆ ಪ್ರತಿಸ್ಪರ್ಧಿಗಳಾಗಿ ಡಿಟಿಎಚ್‌ ಸೇವೆಯಲ್ಲೂ ಮುಂದುವರೆಯಲಿವೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಿಲಾಯನ್ಸ್ ಜಿಯೋ, ಡಿಟಿಎಚ್ ಸೇವೆಯಲ್ಲಿ ಕಠಿಣ ಶ್ರಮ ಪಡಬೇಕು!

ರಿಲಾಯನ್ಸ್ ಜಿಯೋ, ಡಿಟಿಎಚ್ ಸೇವೆಯಲ್ಲಿ ಕಠಿಣ ಶ್ರಮ ಪಡಬೇಕು!

ಏರ್‌ಟೆಲ್‌ ಡಿಟಿಎಚ್ ಸೇವೆಗೆ ಸೆಡ್ಡು ಹೊಡೆಯಲು, ರಿಲಾಯನ್ಸ್ ಜಿಯೋ ಸಾರ್ವಜನಿಕವಾಗಿ ಡಿಟಿಎಚ್‌ ಸೇವೆ ಆರಂಭಿಸುವ ಮುನ್ನ ಕಠಿಣ ಶ್ರಮ ಪಡಬೇಕಿದೆ. ಜಿಯೋದ ಉಚಿತ ಆಫರ್‌ ಹೊರತುಪಡಿಸಿ, 4G ಸೇವೆ ಬಗ್ಗೆ ಈಗಾಗಲೇ ಗ್ರಾಹಕರು ನಂಬಿಕೆ ಕಳೆದುಕೊಂಡಿದ್ದಾರೆ. ಅಲ್ಲದೇ ಕಡಿಮೆ ಡಾಟಾ ಆಕ್ಸೆಸ್ ವೇಗ ಮತ್ತು ವಾಯ್ಸ್ ಕರೆ ಸ್ಥಗಿತ ಸಮಸ್ಯೆಗಳು ಹೆಚ್ಚಾಗಿವೆ.

ಡಿಟಿಎಚ್ ಸೇವೆಗೂ ವೆಲ್ಕಮ್ ಆಫರ್

ಡಿಟಿಎಚ್ ಸೇವೆಗೂ ವೆಲ್ಕಮ್ ಆಫರ್

ಜಿಯೋ 4G ಸೇವೆಯಂತೆ, ಡಿಟಿಎಚ್‌ ಸೇವೆಯಲ್ಲೂ ರಿಲಾಯನ್ಸ್ ಜಿಯೋ ವೆಲ್ಕಮ್‌ ಆಫರ್ ನೀಡುತ್ತಿದೆ. ಡಿಟಿಎಚ್‌ ಗ್ರಾಹಕರು ಉಚಿತವಾಗಿ 3 ತಿಂಗಳು ಡಾಟಾ ಆಕ್ಸೆಸ್ ಪಡೆಯಬಹುದು.

ಮುಂದಿನ ದಿನಗಳಲ್ಲಿ ಡಿಟಿಎಚ್ ಸೇವೆ

ಮುಂದಿನ ದಿನಗಳಲ್ಲಿ ಡಿಟಿಎಚ್ ಸೇವೆ

ಬಲ್ಲ ಮೂಲಗಳ ಮಾಹಿತಿ ಪ್ರಕಾರ, ರಿಲಾಯನ್ಸ್ ಜಿಯೋ, ಮುಂಬರುವ ತಿಂಗಳುಗಳಲ್ಲಿ ಡಿಟಿಎಚ್ ಸೇವೆ ಆಫರ್ ಲಾಂಚ್ ಮಾಡಲಿದೆ. ಏರ್‌ಟೆಲ್ ಈಗಾಗಲೇ ಬೃಹತ್‌ ಪ್ರಮಾಣದ ಗ್ರಾಹಕರನ್ನು ಹೊಂದಿದ್ದು, ಉತ್ತಮ ನೆಟ್‌ವರ್ಕ್‌ ಸೇವೆಯಿಂದ ಉತ್ತಮ ಸೇವೆ ಎಂದು ಪ್ರಖ್ಯಾತಗೊಂಡಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Reliance Jio DTH vs Airtel DTH: Will the New Entrant Give Tough Competition? To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot