Subscribe to Gizbot

ರಿಲಾಯನ್ಸ್ ಜಿಯೋ ಎಫೆಕ್ಟ್‌: ಬಿಎಸ್‌ಎನ್‌ಎಲ್‌ನಿಂದ ಡಬಲ್ ಡಾಟಾ ಬೆನಿಫಿಟ್‌ನ 4 ಟ್ಯಾರಿಫ್‌ ಪ್ಲಾನ್

Written By:

ಭಾರತದಲ್ಲಿ ಟೆಲಿಕಾಂಗಳ ಸ್ಪರ್ಧೆ ದಿನದಿಂದ ದಿನಕ್ಕೆ ಕ್ರೂರ ರೂಪ ಪಡೆಯುತ್ತಿದೆ. ಒಂದು ಟೆಲಿಕಾಂ ಉತ್ತಮ ಟ್ಯಾರಿಫ್ ಸೇವೆ ನೀಡುತ್ತಿದ್ದಂತೆ, ಅದರ ಹಿಂದೆಯೇ ಇನ್ನೊಂದು ಟೆಲಿಕಾಂ ಹೊಸ ಟ್ಯಾರಿಫ್‌ ಸೇವೆ ನೀಡಲು ಆರಂಭಿಸುತ್ತಿರುತ್ತದೆ.

ರಾಜ್ಯ ಮಾಲೀಕತ್ವದ ಬಿಎಸ್‌ಎನ್‌ಎಲ್‌ ಈಗ ಗ್ರಾಹಕರಿಗೆ ಪ್ರೊಮೊಶನಲ್‌ ಆಫರ್‌ ಅನ್ನು ನೆನ್ನೆ ತಾನೆ ಲಾಂಚ್ ಮಾಡಿದೆ. ಈ ಹೊಸ ಆಫರ್‌ನಲ್ಲಿ ಬಿಎಸ್‌ಎನ್‌ಎಲ್‌ ತನ್ನ ಪ್ರೀಪೇಡ್‌ ಗ್ರಾಹಕರಿಗೆ ಡಬಲ್‌ ಡಾಟಾ ಬೆನಿಫಿಟ್‌ ಅನ್ನು ಹಿಂದಿನ ಬೆಲೆಯಲ್ಲಿ ನೀಡುತ್ತಿದೆ. 4 ಹೊಸ ಟ್ಯಾರಿಫ್ ವೋಚರ್‌ಗಳನ್ನು ಫೆಸ್ಟೀವ್ ಸೀಸನ್ ಪ್ರಯುಕ್ತ ಬಿಎಸ್‌ಎನ್‌ಎಲ್‌ 365 ದಿನಗಳ ವ್ಯಾಲಿಡಿಟಿಯೊಂದಿಗೆ ಡಬಲ್‌ ಡಾಟಾ ಆಫರ್‌ ಅನ್ನು ನೀಡುತ್ತಿದೆ. ಅಂದಹಾಗೆ ಈ ಆಫರ್‌ಗಳನ್ನು ಬಿಎಸ್‌ಎನ್‌ಎಲ್‌ ಪ್ರೀಪೇಡ್‌ ಗ್ರಾಹಕರು ಅಕ್ಟೋಬರ್‌ 31 ರವರೆಗೆ ಪಡೆಯಬಹುದು ಎಂದು ಹೇಳಿದೆ. ಪ್ಲಾನ್‌ಗಳ ಬಗ್ಗೆ ತಿಳಿಯಲು ಕೆಳಗಿನ ಸ್ಲೈಡರ್‌ಗಳನ್ನು ಓದಿ ಮಾಹಿತಿ ತಿಳಿಯಿರಿ.

ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್‌ನಲ್ಲಿ ಡೇಟಾ ಬಳಕೆ ಪರಿಶೀಲನೆ ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 1,498 ರೂಗೆ 9GB ಬದಲು 18GB ಡಾಟಾ ಪಡೆಯಿರಿ

1,498 ರೂಗೆ 9GB ಬದಲು 18GB ಡಾಟಾ ಪಡೆಯಿರಿ

ಈ ಹಿಂದೆ ಬಿಎಸ್‌ಎನ್‌ಎಲ್‌ 1,498 ರೂಗೆ 9GB ಡಾಟಾ ಆಫರ್ ಮಾಡುತ್ತಿತ್ತು. ಆದರೆ ಈಗ ಪ್ರೊಮೋಶನಲ್‌ ಆಫರ್‌ನೊಂದಿಗೆ ಅದೇ ಬೆಲೆಗೆ 18GB ಡಾಟಾ ನೀಡುತ್ತಿದೆ.

2,798 ರೂಗೆ 36GB ಡಾಟಾ ಪ್ಲಾನ್‌

2,798 ರೂಗೆ 36GB ಡಾಟಾ ಪ್ಲಾನ್‌

18GB ಡಾಟಾ ಆಫರ್‌ ಜೊತೆಗೆ, ಬಿಎಸ್ಎನ್‌ಎಲ್‌ ಗ್ರಾಹಕರು 2,798 ರೂಗೆ 36GB ಡಾಟಾ ಪ್ಲಾನ್ ಅನ್ನು ಸಹ ಪಡೆಯಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರೂ.3,998 ಕ್ಕೆ 60GB ಡಾಟಾ

ರೂ.3,998 ಕ್ಕೆ 60GB ಡಾಟಾ

ವಿಶೇಷ ಪ್ರೊಮೋಶನಲ್ ಆಫರ್‌ನೊಂದಿಗೆ ರೂ.3,998 ಕ್ಕೆ 60GB ಡಾಟಾವನ್ನು 30GB ಬದಲು ಪಡೆಯಬಹುದು.

40GB ಡಾಟಾ ಬದಲು 80GB ಡಾಟಾ 4,498 ರೂಗೆ

40GB ಡಾಟಾ ಬದಲು 80GB ಡಾಟಾ 4,498 ರೂಗೆ

ಸಾಮಾನ್ಯವಾಗಿ 4,498 ರೂಗೆ 40GB ಡಾಟಾ ಪಡೆಯುತ್ತೀರಿ. ಆದರೆ ಪ್ರೊಮೋಶನಲ್ ಆಫರ್‌ನೊಂದಿಗೆ 4,498 ರೂಗೆ 80GB ಡಾಟಾವನ್ನು ಪಡೆಯಬಹುದು. 365 ದಿನಗಳ ವ್ಯಾಲಿಡಿಟಿಯೊಂದಿಗೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇತರೆ ಟೆಲಿಕಾಂಗಳಿಗೆ ಈ ಆಫರ್‌ಗಳನ್ನು ಹೋಲಿಸಿದಾಗ!

ಇತರೆ ಟೆಲಿಕಾಂಗಳಿಗೆ ಈ ಆಫರ್‌ಗಳನ್ನು ಹೋಲಿಸಿದಾಗ!

ಏರ್‌ಟೆಲ್ ಪ್ರಾಥಮಿಕವಾಗಿ ರೂ.1,498 ಕ್ಕೆ ಕೇವಲ 5GB 4G ಡಾಟಾವನ್ನು ನೀಡುತ್ತಿದೆ. ರಿಲಾಯನ್ಸ್ ಇದೇ ಬೆಲೆಗೆ 20GB ಡಾಟಾ ಸೇವೆ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಬಿಎಸ್‌ಎನ್‌ಎಲ್ ಏರ್‌ಟೆಲ್‌ಗಿಂತ ಹೆಚ್ಚಿನ ಆಫರ್‌ ನೀಡುತ್ತಿದ್ದರೂ, ರಿಲಾಯನ್ಸ್‌ಗಿಂತ ಕಡಿಮೆಯೇ ಆಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Reliance Jio Effect: BSNL Introduces 4 New Tariff Plans With Double Data Benefits. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot