Just In
Don't Miss
- Lifestyle
ದಿನ ಭವಿಷ್ಯ: ಗುರುವಾರದ ರಾಶಿಫಲ ಹೇಗಿದೆ ನೋಡಿ
- Education
Vijayapura District Court Recruitment 2021: ವಿಜಯಪುರ ಜಿಲ್ಲಾ ನ್ಯಾಯಾಲಯದಲ್ಲಿ 2 ಬೆರಳಚ್ಚು-ನಕಲುಗಾರ ಹುದ್ದೆಗಳ ನೇಮಕಾತಿ
- News
ಪೆಟ್ರೋಲ್ ಪಂಪ್ಗಳಿಂದ ಪ್ರಧಾನಿ ಮೋದಿ ಫೋಟೊ ತೆರವಿಗೆ ಚುನಾವಣಾ ಆಯೋಗ ಸೂಚನೆ
- Movies
ಬಿಗ್ಬಾಸ್: ಕೊಡಲಿ ಬಳಸಿ ನಾಮಿನೇಷನ್ ಕತ್ತಿಯಿಂದ ಬಚಾವಾದ ಗೀತಾ ಭಟ್
- Automobiles
31 ಟನ್ ಸರಕು ಸಾಗಾಣಿಕೆ ಸಾಮರ್ಥ್ಯದ ಟಾಟಾ ಹೊಸ ಸಿಗ್ನಾ 3118.ಟಿ ಟ್ರಕ್ ಬಿಡುಗಡೆ
- Finance
ಚಿನ್ನದ ಬೆಲೆ ಕೊಂಚ ಇಳಿಕೆ: ಮಾರ್ಚ್ 03ರ ಬೆಲೆ ಎಷ್ಟಿದೆ?
- Sports
'ಭಾರತ-ಇಂಗ್ಲೆಂಡ್ 4ನೇ ಟೆಸ್ಟ್ನಲ್ಲಿ ನಾನು ಇಂಗ್ಲೆಂಡ್ಗೆ ಚಿಯರ್ ಮಾಡ್ತೇನೆ'
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನೆಟ್‌ಫ್ಲಿಕ್ಸ್ ಪರೀಕ್ಷೆಯಲ್ಲಿ ಜಿಯೋ ಫೈಬರ್ ಫಸ್ಟ್..! ಭಾರತದ ಅತಿ ವೇಗದ ಬ್ರಾಡ್‌ಬ್ಯಾಂಡ್..!
ದೇಶದಲ್ಲಿ ಅತಿ ವೇಗದ ಬ್ರಾಡ್‌ಬ್ಯಾಂಡ್ ಸೇವೆ ನೀಡುವ ವಿಭಾಗದಲ್ಲಿ ಪ್ರಬಲ ಹೆಸರಾಗಿ ರಿಲಾಯನ್ಸ್ ಜಿಯೋಫೈಬರ್ ಬೆಳೆದಿದೆ. ಹೌದು, ನೆಟ್‌ಫ್ಲಿಕ್ಸ್‌ನ ಐಎಸ್‌ಪಿ ವೇಗ ಸೂಚ್ಯಂಕದಲ್ಲಿ ಜಿಯೋಫೈಬರ್ ಉನ್ನತ ವೇಗ ಕಾಯ್ದುಕೊಂಡಿದೆ. ಜಿಯೋಫೈಬರ್ ನೆಟ್‌ಫ್ಲಿಕ್ಸ್ ವಿಷಯವನ್ನು ಸ್ಟ್ರೀಮ್ ಮಾಡುವ ಭಾರತದ ಅತ್ಯಂತ ವೇಗದ ಬ್ರಾಡ್‌ಬ್ಯಾಂಡ್ ಸೇವೆಯಾಗಿ ಗುರುತಿಸಿಕೊಂಡಿದೆ.

ಜನವರಿ ತಿಂಗಳ ದತ್ತಾಂಶದ ಪ್ರಕಾರ ಜಿಯೋಫೈಬರ್ ನೆಟ್‌ಫ್ಲಿಕ್ಸ್‌ನ ಐಎಸ್‌ಪಿ ವೇಗ ಸೂಚ್ಯಂಕದಲ್ಲಿ ಮೊದಲನೇ ಸ್ಥಾನ ಪಡದುಕೊಂಡಿದೆ, ಪ್ರತಿಸ್ಪರ್ಧಿಗಳಾದ ಏರ್‌ಟೆಲ್, ಸ್ಪೆಕ್ಟ್ರಾ ಮತ್ತು 7 ಸ್ಟಾರ್ ಡಿಜಿಟಲ್‌ಗಳನ್ನು ಜಿಯೋಫೈಬರ್ ಮೀರಿಸಿದೆ. ನೆಟ್‌ಫ್ಲಿಕ್ಸ್ ಪರೀಕ್ಷೆಯಲ್ಲಿ, ಜಿಯೋಫೈಬರ್ ಸರಾಸರಿ 3.63Mbps ವೇಗ ಒದಗಿಸಿದರೆ, ಸ್ಪೆಕ್ಟ್ರಾ 3.50Mbps ವೇಗ ನೀಡಿದೆ. ಇನ್ನು, ಏರ್‌ಟೆಲ್ 3.48Mbps ವೇಗದಲ್ಲಿ ಕಾರ್ಯನಿರ್ವಹಿಸಿದೆ. ಜಿಯೋಫೈಬರ್‌ನ ಅತಿ ಹತ್ತಿರದ ಪ್ರತಿಸ್ಪರ್ಧಿ 7 ಸ್ಟಾರ್ ಡಿಜಿಟಲ್ 3.62Mbps ವೇಗ ಹೊಂದಿದೆ. ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ 7 ಸ್ಟಾರ್ ಡಿಜಿಟಲ್ ಮೊದಲ ಸ್ಥಾನದಲ್ಲಿತ್ತು.

ನೆಟ್‌ಫ್ಲಿಕ್ಸ್ ಈ ವೇಗವನ್ನು ಹೇಗೆ ಅಳೆಯುತ್ತದೆ..?
ಹಲವಾರು ಐಎಸ್‌ಪಿಗಳಲ್ಲಿ ಪ್ರೈಮ್-ಟೈಮ್ ನೆಟ್‌ಫ್ಲಿಕ್ಸ್ ಕಾರ್ಯಕ್ಷಮತೆ ನೋಡುವ ಮೂಲಕ ನೆಟ್‌ಫ್ಲಿಕ್ಸ್ ಈ ಸಂಖ್ಯೆಗಳನ್ನು ಪಡೆಯುತ್ತದೆ. ಇದು ದಿನದ ಬಿಡುವಿಲ್ಲದ ಗಂಟೆಗಳಲ್ಲಿ ಐಎಸ್‌ಪಿಗಳ ನೈಜ-ಪ್ರಪಂಚದ ಕಾರ್ಯಕ್ಷಮತೆಯ ಸಂಖ್ಯೆಯನ್ನು ಕಂಪನಿಗೆ ನೀಡುತ್ತದೆ. ಜಿಯೋಫೈಬರ್, ಏರ್‌ಟೆಲ್, 7 ಸ್ಟಾರ್ ಡಿಜಿಟಲ್ ಜೊತೆ ಯು ಬ್ರಾಡ್‌ಬ್ಯಾಂಡ್, ಎಟಿಆರ್ಐಎ ಕನ್ವರ್ಜೆನ್ಸ್ ಟೆಕ್ನಾಲಜೀಸ್, ಸಿಸ್ಕಾನ್ ಇನ್ಫೋವೇ, ಡಿ-ವಾಯ್ಸ್, ಒನ್ ಬ್ರಾಡ್‌ಬ್ಯಾಂಡ್ ಮತ್ತು ಹ್ಯಾಥ್‌ವೇಗಳ ಐಎಸ್‌ಪಿಯನ್ನು ಕೂಡ ನೆಟ್‌ಫ್ಲಿಕ್ಸ್ ಅಳೆಯಲಿದೆ.

ಯು ಬ್ರಾಡ್‌ಬ್ಯಾಂಡ್ 3.41Mbps ಮತ್ತು ACT 3.40Mbps ವೇಗ ಹೊಂದಿದ್ದು, ಸಿಸ್ಕಾನ್ ಬ್ರಾಡ್‌ಬ್ಯಾಂಡ್ 3.22Mbps, ಡಿ-ವಾಯ್ಸ್ 3.18Mbps, ಒನ್ ಬ್ರಾಡ್‌ಬ್ಯಾಂಡ್ 3.15Mbps ಮತ್ತು ಹ್ಯಾಥ್‌ವೇ 3.14Mbps ವೇಗದಲ್ಲಿ ಕಾರ್ಯನಿರ್ವಹಿಸುತ್ತಿವೆ.

ಏರ್‌ಟೆಲ್‌ಗೆ ಜಿಯೋ ಗುದ್ದು
ಟೆಲಿಕಾಂಟಾಕ್ ಪ್ರಕಾರ, ರಿಲಯನ್ಸ್ ಜಿಯೋ ಫೈಬರ್ ಈ ಕ್ಷೇತ್ರವನ್ನು ಪ್ರವೇಶಿಸುವವರೆಗೆ ಏರ್‌ಟೆಲ್ ಬ್ರಾಡ್‌ಬ್ಯಾಂಡ್ ದೇಶದಲ್ಲಿ ದೊಡ್ಡದಾಗಿತ್ತು. ಜಿಯೋನಂತೆಯೇ, ಏರ್‌ಟೆಲ್ ಸಹ 100Mbps ಬೇಸ್ ವೇಗವನ್ನು ತರಲು ಯೋಜಿಸುತ್ತಿದ್ದು, ತನ್ನ ವ್ಯಾಪ್ತಿಯನ್ನು ಹೆಚ್ಚಿನ ನಗರಗಳಿಗೆ ವಿಸ್ತರಿಸಲು ಪ್ರಯತ್ನಿಸುತ್ತಿದೆ. ಆದರೆ, ಇದಕ್ಕೆ ತದ್ವಿರುದ್ಧ ಎನ್ನುವಂತೆ ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್ 100Mbps ಯೋಜನೆಯನ್ನು ಒದಗಿಸಿದ ನಂತರವೂ ನೆಟ್‌ಫ್ಲಿಕ್ಸ್ ISP ವೇಗದ ಸೂಚ್ಯಂಕದಲ್ಲಿ ಟಾಪ್ -10 ಪಟ್ಟಿಯನ್ನು ಪ್ರವೇಶಿಸುವಲ್ಲಿ ವಿಫಲವಾಗಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190