Home
ಸುದ್ದಿಜಾಲ

ಸ್ವಾತಂತ್ರ್ಯ ದಿನಾಚರಣೆಗೆ ಅಂಬಾನಿ ಗಿಫ್ಟ್: ಜಿಯೋ ಡಿಜಿಟಲ್ ಪ್ಯಾಕ್ ನಿತ್ಯ 2GB ಡೇಟಾ ಫ್ರೀ..!

By Srinidhi

ದೇಶಿಯ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದ ಬದಲಾವಣೆಗೆ ಕಾರಣವಾಗಿದ್ದ ರಿಲಯನ್ಸ ಮಾಲೀಕತ್ವದ ಜಿಯೋ, ತನ್ನ ಬಳಕೆದಾರರಿಗೆ ನಿತ್ಯ 2 GB ಡೇಟಾವನ್ನು ಉಚಿತವಾಗಿ ನೀಡುವ ಪ್ಲಾನ್ ವೊಂದನ್ನು ನೀಡಲಿದೆ. ಇದು ಅಡಿಷನಲ್ ಪ್ಲಾನ್ ಆಗಿದ್ದು, ಯಾವುದೇ ದರಗಳನ್ನು ಈ ಪ್ಲಾನ್‌ಗೆ ವಿಧಿಸುತ್ತಿಲ್ಲ. ಬದಲಿಗೆ ಎಂದು ಈ ಆಪರ್ ಕೊನೆಯಾಗುವುದೋ ತಿಳಿದಿಲ್ಲ. ಈ ಹಿನ್ನಲೆಯುಲ್ಲಿ ಜಿಯೋ ಡಿಜಿಟಲ್ ಪ್ಯಾಕ್ ಲಾಭ ಪಡೆದುಕೊಳ್ಳುವುದು ಹೇಗೆ ಎಂಬುದನ್ನು ತಿಳೀಸುವ ಪ್ರಯತ್ನವು ಇದಾಗಿದೆ.

ಅಂಬಾನಿ ಗಿಫ್ಟ್: ಜಿಯೋ ಡಿಜಿಟಲ್ ಪ್ಯಾಕ್ ನಿತ್ಯ 2GB ಡೇಟಾ ಫ್ರೀ..!

ಈಗಾಗಲೇ ತನ್ನ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡುತ್ತಿರುವ ಜಿಯೋ, ತನ್ನ ರಾಯಲ್ ಬಳಕೆದಾರರಿಗೆ ನಿತ್ಯ 2GB ಡೇಟಾವನ್ನು ಉಚಿತವಾಗಿ ನೀಡುವ ಯೋಜನೆಯನ್ನು ಈ ಹಿಂದೆಯೇ ಆರಂಭಿಸಿದೆ. ಈಗಾಗಲೇ ಹಲವು ಮಂದಿ ಇದರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ನೀವು ಸಹ ಹೇಗೆ ಜಿಯೋ ಉಚಿತವಾಗಿ ನೀಡುವ 2 GB ಡೇಟಾವನ್ನು ಪಡೆಯುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನವು ಇದಾಗಿದೆ.

ಟಾಪ್ ಅಪ್ ಮಾದರಿ:

ಟಾಪ್ ಅಪ್ ಮಾದರಿ:

ಜಿಯೋ ಈಗಾಗಲೇ ನೀಡುರುವ ಡಿಜಿಟಲ್ ಪ್ಯಾಕ್‌ನಲ್ಲಿ ಬಳಕೆದಾರರಿಗೆ ಡೇಟಾವನ್ನು ಟಾಪ್ ಅಪ್ ಮಾದರಿಯಲ್ಲಿ ನೀಡಲಿದೆ. ಈಗಾಗಲೇ ನೀವು ರಿಚಾರ್ಜ್ ಮಾಡಿಸಿಕೊಂಡಿರುವ ಪ್ಲಾನ್‌ನೊಂದಿಗೆ ಡೇಟಾ ಬೂಸ್ಟರ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದ್ದು, ನಿತ್ಯ ಬಳಕೆದಾರರಿಗೆ ಸಾಕಷ್ಟು ಪ್ರಮಾಣದ ಡೇಟಾವನ್ನು ನೀಡಲಿದೆ.

ಕೆಲವು ಬಳಕೆದಾರರಿಗೆ ಮಾತ್ರ:

ಕೆಲವು ಬಳಕೆದಾರರಿಗೆ ಮಾತ್ರ:

ಜಿಯೋ ನೀಡುತ್ತಿರುವ ಡಿಜಿಟಲ್ ಪ್ಯಾಕ್ ಕೇಲವ ಆಯ್ದ ಕೆಲವು ಬಳಕೆದಾರರಿಗೆ ಮಾತ್ರವೇ ನೀಡುತ್ತಿದೆ ಎನ್ನಲಾಗಿದೆ. ಇದಕ್ಕಾಗಿ ನೀವು ಮೈ ಜಿಯೋ ಆಪ್‌ನಲ್ಲಿ ನೋಡಬಹುದಾಗಿದೆ. ಇದರಲ್ಲಿ ಲಭ್ಯವಿದ್ದರೇ ಮಾತ್ರವೇ ನಿತ್ಯ ನಿಮಗೆ 2GB ಡೇಟಾ ಬಳಕೆಗೆ ಲಭ್ಯವಿರಲಿದೆ.

ಹುಡುಕುವುದು ಹೇಗೆ..?

ಹುಡುಕುವುದು ಹೇಗೆ..?

ನೀವು ಸಹ ಈ ಪ್ಲಾನ್ ಅನ್ನು ಬಳಕೆ ಮಾಡಿಕೊಳ್ಳಬಹುದೇ ಎಂಬುದನ್ನು ನೋಡುವ ಸಲುವಾಗಿ ನಿಮ್ಮ ಜಿಯೋ ಆಪ್‌ ಅನ್ನು ಓಪನ್ ಮಾಡಬೇಕಾಗಿದೆ. ಜಿಯೋ ಆಪ್ ಅನ್ನು ಓಪನ್ ಮಾಡಿದ ನಂತರದಲ್ಲಿ ಮೈ ಪ್ಲಾನ್ ಸೆಕ್ಷನ್‌ನಲ್ಲಿ ಟಾಪ್ ಅಪ್ ಪ್ಲಾನ್ ಅನ್ನು ಹುಡುಕಿದರೆ ನಿಮಗೆ ಅಲ್ಲಿ ದೊರೆಯಲಿದೆ.

ಬೇರೆ ಎಲ್ಲಿಯೂ ಇಲ್ಲ:

ಬೇರೆ ಎಲ್ಲಿಯೂ ಇಲ್ಲ:

ಇದೊಂದು ಮಾದರಿಯ ಸರ್ಪೈಸ್ ಆಫರ್ ಆಗಿದ್ದು, ಎಲ್ಲಾ ಟೆಲಿಕಾಂ ಕಂಪನಿಗಳು ಈ ಮಾದರಿಯ ಆಫರ್ ಅನ್ನು ಹೊಂದಿಲ್ಲ. ಕಾರಣ ಜಿಯೋ ಮಾತ್ರವೇ ಡೇಟಾವನ್ನು ಎಗ್ಗಿಲ್ಲದೆ ಬಳಕೆಗೆ ನೀಡುತ್ತಿದೆ. ಆದರೆ ಬೇರೆ ಟೆಲಿಕಾಂ ಕಂಪನಿಗಳು ಈ ಮಾದರಿಯಲ್ಲಿ ಡೇಟಾವನ್ನು ನೀಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

ಜಿಯೋ ಸಿಮ್ ಯೂಸ್‌ ಮಾಡುವವರಿಗೆ ಈ ವಿಷಯ ತಿಳಿದಿರಬೇಕು..!

ಜಿಯೋ ಸಿಮ್ ಯೂಸ್‌ ಮಾಡುವವರಿಗೆ ಈ ವಿಷಯ ತಿಳಿದಿರಬೇಕು..!

ದೇಶಿಯ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯಲ್ಲಿ ಚಿನ್ನದ ರೀತಿಯಲ್ಲಿ ಡೇಟಾ ಮಾರಾಟ ಮಾಡುತ್ತಾ ಅತೀ ಹೆಚ್ಚು ಆದಾಯವನ್ನುಗಳಿಸುತ್ತಾ, ಬಳೆದಾರರಿಂದ ಸಾಕಷ್ಟು ದುಡ್ಡು ಪೀಕುತ್ತಿದ್ದ ಟೆಲಿಕಾಂ ಕಂಪನಿಗಳಿಗೆ ಒಂದೇ ಹೊಡೆತದಲ್ಲಿ ಮೇಲೆ ಎಳಲಾಗದಂತೆ ಮಾಡಿದ ರಿಲಯನ್ಸ್ ಮಾಲೀಕತ್ವದ ಜಿಯೋ, ತಿಂಗಳಿಗೆ ಒಂದು GB ಬಳಕೆ ಮಾಡಲು ಹಿಂದೆ ಮುಂದೆ ನೋಡುತ್ತಿದ್ದವರಿಗೆ ದಿನಕ್ಕೆ ಅತೀ ವೇಗದಲ್ಲಿ 1 GB ಡೇಟಾವನ್ನು ಬಳಕೆ ಮಾಡಲು ಉಚಿತವಾಗಿ ನೀಡಿತ್ತು. ಇದೇ ಮಾದರಿಯಲ್ಲಿ ಇಂದಿಗೂ ತನ್ನ ಬಳಕೆದಾರರಿಗೆ ಅತೀ ಕಡಿಮೆ ಬೆಲೆಗೆ ನಿತ್ಯ 2 GB ಡೇಟಾವನ್ನು ನೀಡುತ್ತಾ ಬಂದಿದೆ.

ಈ ಹಿನ್ನಲೆಯಲ್ಲಿ ಜಿಯೋ ಬಳಕೆದಾರರೂ ಈ ತ್ರೈಮಾಸಿಕದಲ್ಲಿ ಬರೋಬ್ಬರಿ 642 ಕೋಟಿ GB ಡೇಟಾವನ್ನು ಬಳಕೆ ಮಾಡಿದ್ದಾರೆ ಎನ್ನಲಾಗಿದೆ. ಇದನ್ನು ಲೆಕ್ಕ ಹಾಕಿದರೆ ಎಷ್ಟೊ ದೇಶಗಳಲ್ಲಿ ಇಷ್ಟು ಪ್ರಮಾಣದ ಡೇಟಾವನ್ನು ಒಂದು ವರ್ಷದಲ್ಲಿಯೂ ಬಳಕೆ ಮಾಡುತ್ತಿಲ್ಲ ಎನ್ನಲಾಗಿದೆ. ವಿಶ್ವದಲ್ಲಿಯೇ ಅತೀ ಹೆಚ್ಚು ಮೊಬೈಲ್ ಡೇಟಾವನ್ನು ಬಳಕೆ ಮಾಡುತ್ತಿರುವ ದೇಶ ಎಂದರೆ ಭಾರತವೇ, ಆದರೆ ವೇಗದ ವಿಚಾರದಲ್ಲಿ ಕೊಂಚ ಪ್ರಮಾಣದಲ್ಲಿ ಹಿನ್ನಡೆಯನ್ನು ಅನುಭವಿಸಿದರೂ ಸಹ ವಿಶ್ವದಲ್ಲಿ ಅತೀ ಹೆಚ್ಚು ಡೇಟಾವನ್ನು ಬಳಕೆ ಮಾಡಿಕೊಳ್ಳುತ್ತಿದೆವೆ.

ಪ್ರತಿಯೊಬ್ಬ ತಿಂಗಳಿಗೆ 10.6 GB ಡೇಟಾ:

ಪ್ರತಿಯೊಬ್ಬ ತಿಂಗಳಿಗೆ 10.6 GB ಡೇಟಾ:

ಜಿಯೋ ಮಾರುಕಟ್ಟೆಯಲ್ಲಿ ತನ್ನ ಬಳಕೆದಾರರ ಸಂಖ್ಯೆಯನ್ನು ಅತೀ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯನ್ನು ಮಾಡಿಕೊಳ್ಳುತ್ತಿದೆ. ಸದ್ಯ ಲಭ್ಯವಾಗಿರುವ ಅಂಕಿ ಅಂಶಗಳ ಪ್ರಕಾರದಲ್ಲಿ ಪ್ರತಿ ಜಿಯೋ ಬಳಕೆದಾರರು ಪ್ರತಿ ತಿಂಗಳು 10.6 GBವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ನಿಮಗೆ ಕೇವಲ 10 GB ಎನ್ನಿಸಬಹುದು ಆದರೆ ಮಾರುಕಟ್ಟೆಯಲ್ಲಿ ಇದು ಅತೀ ದೊಡ್ಡ ಪ್ರಮಾಣದಾಗಿದೆ.

44,871 ಕೋಟಿ ನಿಮಿಷಗಳ ಮಾತುಕತೆ:

44,871 ಕೋಟಿ ನಿಮಿಷಗಳ ಮಾತುಕತೆ:

ಜಿಯೋ ಬಳಕೆದಾರರು ಕೇವಲ ಡೇಟಾ ಬಳಕೆಯನ್ನು ಮಾತ್ರವೇ ಮುಂದಿಲ್ಲ, ಪ್ರತಿ ತಿಂಗಳು 44,871 ಕೋಟಿ ನಿಮಿಷಗಳ ಮಾತುಕತೆ ನಡೆಸುತ್ತಿದ್ದಾರೆ. ಇದಕ್ಕೆ ಕಾರಣ ಜಿಯೋ ದಲ್ಲಿ ಔಟ್ ಗೋಯಿಂಗ್ ಮತ್ತು ರೋಮಿಂಗ್ ಫುಲ್ ಪ್ರೀ ಇರುವುದು. ಇದರಲ್ಲಿ ಪ್ರತಿಯೊಬ್ಬ ಬಳಕೆದಾರು ಪ್ರತಿ ತಿಂಗಳು 744 ನಿಮಿಷಗಳಷ್ಟು ಸಮಯ ಜಿಯೋದಲ್ಲಿ ಔಟ್ ಗೋಯಿಂಗ್ ಮಾಡಿರುತ್ತಾರೆ ಎನ್ನಲಾಗಿದೆ.

ವಿಡಿಯೋ ನೋಡುವ ಸಂಖ್ಯೆ:

ವಿಡಿಯೋ ನೋಡುವ ಸಂಖ್ಯೆ:

ಇದಲ್ಲದೇ ಜಿಯೋ ವೇಗದ 4G ನೀಡುತ್ತಿರುವ ಹಿನ್ನಲೆಯಲ್ಲಿ ಬಳಕೆದಾರರು ವಿಡಿಯೋ ನೋಡುವ ಸಂಖ್ಯೆಯೂ ಉತ್ತಮವಾಗಿದೆ. ಪ್ರತಿ ತಿಂಗಳು ಜಿಯೋ ಬಳಕೆದಾರರು 340 ಕೋಟಿ ನಿಮಿಷಗಳ ವಿಡಿಯೋವನ್ನು ನೋಡುತ್ತಿದ್ದಾರೆ ಎನ್ನಲಾಗಿದೆ. ಇದನ್ನು ಲೆಕ್ಕ ಹಾಕಿದರೆ ಪ್ರತಿಯೊಬ್ಬರು ತಿಂಗಳಿನಲ್ಲಿ 15.4 ಗಂಟೆಗಳ ಕಾಲ ವಿಡಿಯೋವನ್ನು ನೋಡುತ್ತಿದ್ದಾರೆ.

215 ಮಿಲಿಯನ್ ಬಳಕೆದಾರರು:

215 ಮಿಲಿಯನ್ ಬಳಕೆದಾರರು:

ಜಿಯೋ ಸೇವೆಯನ್ನು ಆರಂಭಿಸಿದ 22 ತಿಂಗಳ ನಂತರದಲ್ಲಿ 215 ಮಿಲಿಯನ್ ಬಳಕೆದಾರರನ್ನು ತನ್ನ ಕುಟುಂಬಕ್ಕೆ ಸೇರಿಸಿಕೊಂಡಿದೆ ಎನ್ನಲಾಗಿದೆ. ಅಲ್ಲದೇ ಈ ಸಂಖ್ಯೆಯೂ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಜಿಯೋ ಸೇವೆಯ ಲಾಭವು ಬಳಕೆದಾರರಿಗೆ ದೊಡ್ಡ ಪ್ರಮಾಣದಲ್ಲಿ ದೊರೆಯುತ್ತಿರುವುದೇ ಇದಕ್ಕೆ ಕಾರಣವಾಗಿದೆ.

ಇಳಿಕೆ ಹಾದಿಯಲ್ಲಿ ಏರ್‌ಟೆಲ್:

ಇಳಿಕೆ ಹಾದಿಯಲ್ಲಿ ಏರ್‌ಟೆಲ್:

ಜಿಯೋ ಆರಂಭದ ನಂತರದಲ್ಲಿ ಬಳಕೆದಾರರ ಸಂಖ್ಯೆಯಲ್ಲಿ ಏರ್‌ಟೆಲ್ ಇಳಿಕೆ ಹಾದಿಯಲ್ಲಿ ಸಾಗಿದೆ. ಇಂದು ಏರ್‌ಟೆಲ್ 344 ಮಿಲಿಯನ್ ಬಳಕೆದಾರರನ್ನು ಮಾತ್ರವೇ ಹೊಂದಿದೆ. ಆದರೆ ಶಾರ್ಟ್ ಟೈಮಿನಲ್ಲಿ ಬಳಕೆದಾರರ ಸಂಖ್ಯೆಯೂ ಏರಿಕೆಯಾಗುವ ಬದಲು ಇಳಿಕೆಯಾಗುತ್ತಿರುವುದು ಏರ್‌ಟೆಲ್‌ಗೆ ತಲೆನೋವು ತಂದಿದೆ.

ಪೋಸ್ಟ್‌ಪೇಯ್ಡ್ ನಲ್ಲಿಯೂ:

ಪೋಸ್ಟ್‌ಪೇಯ್ಡ್ ನಲ್ಲಿಯೂ:

ಇದೇ ಮಾದರಿಯಲ್ಲಿ ಪೋಸ್ಟ್ ಪೇಯ್ಡ್ ಮಾರುಕಟ್ಟೆಯಲ್ಲಿ ಏರ್‌ಟೆಲ್‌ 940.4 ಕೋಟಿ ನಷ್ಟವನ್ನು ಅನುಭವಿಸಿದೆ ಎನ್ನಲಾಗಿದೆ. ಇದ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಜಿಯೋ ರೂ.612 ಕೋಟಿ ಲಾಭವನ್ನು ಮಾಡಿಕೊಂಡಿದೆ. ಇದರಿಂದಾಗಿ ಬಳಕೆದಾರರಿಗೆ ಜಿಯೋನೆ ಬೆಸ್ಟ್‌..!

Best Mobiles in India

English summary
Reliance Jio extends validity of digital pack offering 2GB data per day for free. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+